»   » 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ ಪಾರ್ಟ್-2

'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ ಪಾರ್ಟ್-2

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆಯ ಮೊದಲ ದಿನ ವರ್ಣರಂಜಿತವಾಗಿತ್ತು. ಎರಡು ಎಲಿಮಿನೇಷನ್ ಜೊತೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಎರಡನೇ ದಿನ ಮತ್ತೊಂದು ಶಾಕ್ ಕೊಟ್ಟರು.

ಇನ್ನೂ ಮೊದಲ ದಿನದ ಹಾಗೆ, ಎರಡನೇ ದಿನವೂ ಕಲರ್ ಫುಲ್ ಡ್ಯಾನ್ಸ್, ಸಾಂಗ್ ಅಂತಹ ಫರ್ಫಾಮೆನ್ಸ್ ಗಳು ಬಿಗ್ ವೇದಿಕೆಯಲ್ಲಿ ಧೂಳೇಬ್ಬಿಸಿದವು.['ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ - ಪಾರ್ಟ್ 1]

ಹಾಗಾದ್ರೆ, 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ ನ ಪಾರ್ಟ್-2 ಭಾಗ ಹೇಗಿತ್ತು ಅಂತ ಇಲ್ಲಿದೆ ನೋಡಿ....

ಚೈತ್ರ ಸಿಂಗಿಂಗ್

ಕಿಚ್ಚ ಸುದೀಪ್ ಅಭಿನಯದ ಚಿತ್ರಗಳ ಸೂಪರ್ ಹಿಟ್ ಹಾಡುಗಳನ್ನ ಹಾಡುವುದರ ಮೂಲಕ ಸ್ಟೇಜ್ ಗೆ ಎಂಟ್ರಿ ಕೊಟ್ಟ ಗಾಯಕಿ ಚೈತ್ರಾ ಎರಡನೇ ದಿನವನ್ನ ಭರ್ಜರಿಯಾಗಿ ಆರಂಭಿಸಿದರು.

'ಪುಟ್ಟಗೌರಿ ಮದುವೆ' ಮಹೇಶ್ ಡ್ಯಾನ್ಸ್

ಕೀರ್ತಿ ಅವರಿಗಾಗಿ ಪುಟ್ಟಗೌರಿ ಮದುವೆ ಖ್ಯಾತಿಯ ಮಹೇಶ್ 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ರು.

ಶರ್ಮಿಳಾ ಮಾಂಡ್ರೆ ಡ್ಯಾನ್ಸ್

ನಟಿ ಶರ್ಮಿಳಾ ಮಾಂಡ್ರೆ 'ಬಿಗ್ ಬಾಸ್' ಫಿನಾಲೆಗೆ ಮತ್ತಷ್ಟು ಮೆರಗು ನೀಡಿದ್ರು. ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಕಾಸ್ಟ್ಯೂಮ್ ನಲ್ಲಿ 'ಗೋಧಿಬಣ್ಣ ಸಾಧರಣ ಮೈಕಟ್ಟು' ಚಿತ್ರದ ಹಾಡಿಗೆ ಸೂಪರ್ ಫರ್ಫಾಮೆನ್ಸ್ ಕೊಟ್ಟರು.

'ಚೋಟಾ ಬಾಸ್' ಅವಾರ್ಡ್ಸ್

ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ನಿದ್ದೆ ಮಾಡುತ್ತಿದ್ದವರಿಗೆ, ಸದಾ ಜಗಳ ಮಾಡುತ್ತಿದ್ದವರಿಗೆ, ನಿರಂತವಾಗಿ ಕನ್ನಡಿ ನೋಡುತ್ತಿದ್ದವರಿಗೆ, ಅತ್ಯದ್ಭುತವಾಗಿ ಡ್ಯಾನ್ಸ್ ಮಾಡಿದವರಿಗೆ ಕಿಚ್ಚ ಸುದೀಪ್ 'ಚೋಟಾ ಬಾಸ್' ಅವಾರ್ಡ್ಸ್ ನೀಡಿದ್ರು.['ಬಿಗ್ ಬಾಸ್' ತರ್ಲೆಗಳಿಗೆ 'ಸುದೀಪ್' ಕೊಟ್ರು 'ಛೋಟಾ ಬಾಸ್' ಪ್ರಶಸ್ತಿ!]

ಕೃತಿಕಾ ಡ್ಯಾನ್ಸ್

ರೇಖಾ ಅವರಿಗೋಸ್ಕರ ನಟಿ ಕೃತಿಕಾ ಸ್ಪೆಷಲ್ ಡ್ಯಾನ್ಸ್ ಫರ್ಫಾಮೆನ್ಸ್ ನೀಡಿದ್ರು. ಕೃತಿಕಾ ಕಳೆದ ವರ್ಷದ ಬಿಗ್ ಬಾಸ್ ಸ್ವರ್ಧಿ ಕೂಡ ಹೌದು.

ರೇಖಾ ಔಟ್

ಪ್ರಥಮ್, ರೇಖಾ, ಕೀರ್ತಿ ಮೂವರಲ್ಲಿ ರೇಖಾ ಬಿಗ್ ಬಾಸ್ ಮನೆಯಿಂದ ಹೊರಬಂದರು. ಎರಡನೇ ಸುತ್ತಿನ ಎಲಿಮಿನೇಷನ್ ನಲ್ಲಿ ರೇಖಾ ಔಟ್ ಆದರು.

ಕಾರುಣ್ಯ ರಾಮ್ ಡ್ಯಾನ್ಸ್

'ಆಡೂ ಆಟ ಆಡೂ' ರಿಮಿಕ್ಸ್ ಹಾಡಿಗೆ ನಟಿ ಕಾರುಣ್ಯ ರಾಮ್ ಹೆಜ್ಜೆ ಹಾಕಿದ್ರು.

ಸುಕೃತಾ ಡ್ಯಾನ್ಸ್

ನಟಿ ಸುಕೃತಾ ವಾಗ್ಲೆ ಜಾಲಿಡೇಸ್ ಚಿತ್ರದ ಹಾಡಿಗೆ ಕಲರ್ ಫುಲ್ ಆದ ಫರ್ಫಾಮೆನ್ಸ್ ನೀಡಿದ್ರು.

'ಬಿಗ್ ಮನೆ'ಗೆ ಸುದೀಪ್ ಎಂಟ್ರಿ

ಫಿನಾಲೆಗೆ ತಲುಪಿದ್ದ ಪ್ರಥಮ್ ಹಾಗೂ ಕೀರ್ತಿ ಅವರನ್ನ 'ಬಿಗ್ ಬಾಸ್' ವೇದಿಕೆಗೆ ಕರೆತರಲು ಕಿಚ್ಚ ಸುದೀಪ್ ಅವರು 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟರು.

ದೇವರಿಗೆ ದೀಪ ಹಚ್ಚಿ ಮನೆಗೆ ವಿದಾಯ

ಬಿಗ್ ಬಾಸ್ ಮನೆಯಲ್ಲಿ ದೇವರಿಗೆ ದೀಪ ಹಚ್ಚುವುದರ ಮೂಲಕ ಈ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ವಿದಾಯ ಹೇಳಿದ್ರು.

ವೇದಿಕೆಗೆ ಬಂದ ಪ್ರಥಮ್-ಕೀರ್ತಿ

114 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಪ್ರಥಮ್ ಹಾಗೂ ಕೀರ್ತಿ ಅವರು ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಮೇಲೆ ಎಂಟ್ರಿ ಕೊಟ್ಟರು.

ವಿನ್ನರ್ ಅನೌನ್ಸ್ ಮಾಡಿದ ಕಿಚ್ಚ

'ಬಿಗ್ ಬಾಸ್ ಕನ್ನಡ 4'ನೇ ಆವೃತ್ತಿಯ ವಿನ್ನರ್ ಯಾರು ಎಂದು ಸುದೀಪ್ ಅವರು ಅನೌನ್ಸ್ ಮಾಡಿದ್ರು. ಈ ಸೀಸನ್ ನ ವಿನ್ನರ್ ಪ್ರಥಮ್ ಎಂದು ಕಿಚ್ಚ ಘೋಷಿಸಿದರು.

ಶರ್ಟ್ ತೆಗೆದು ಸಂಭ್ರಮಿಸಿದ ಪ್ರಥಮ್

'ಬಿಗ್ ಬಾಸ್ ಕನ್ನಡ 4'ನೇ ಆವೃತ್ತಿಯ ವಿನ್ನರ್ ಪ್ರಥಮ್ ಎಂದು ಸುದೀಪ್ ಅವರು ಘೋಷಿಸಿದ ತಕ್ಷಣ, ಪ್ರಥಮ್ ಅವರು ಹಾಡಿ, ಕುಣಿದು ಶರ್ಟ್ ತೆಗೆದು ಸಂಭ್ರಮಿಸಿದರು.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ರನ್ನರ್ ಟ್ರೋಪಿ ಪಡೆದ ಕೀರ್ತಿ

ಬಿಗ್ ಬಾಸ್ ಫಿನಾಲೆಯಲ್ಲಿ ಎರಡನೇ ಸ್ಥಾನವನ್ನ ಪಡೆದ ಕೀರ್ತಿ ಅವರಿಗೆ, ಕಿಚ್ಚ ಸುದೀಪ್ ಎರಡನೇ ಸ್ಥಾನದ ಟ್ರೋಫಿ ನೀಡಿದ್ರು.['ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!]

ವಿನ್ನರ್ ಟ್ರೋಫಿ ಪಡೆದ ಪ್ರಥಮ್

ಇನ್ನೂ ಈ ಸೀಸನ್ ನ ವಿನ್ನರ್ ಆದ ಪ್ರಥಮ್ ಅವರಿಗೆ ಟ್ರೋಫಿ ಮತ್ತು 50 ಲಕ್ಷ ಬಹುಮಾನವನ್ನ ಸುದೀಪ್ ನೀಡಿದ್ರು.

'ಬಿಗ್ ಬಾಸ್'ಗೆ ಅದ್ಧೂರಿ ತೆರೆ

ಈ ಮೂಲಕ 114 ದಿನಗಳ ಯಶಸ್ವಿ 'ಬಿಗ್ ಬಾಸ್ ಕನ್ನಡ 4'ಗೆ ಅದ್ಧೂರಿಯಾಗಿ ತೆರೆ ಎಳೆಯಲಾಯಿತು.

English summary
Bigg Boss Kannada 4: In pics-Grand Finale highlights part-2

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada