»   » ಕೀರ್ತಿಗೆ 'ಕಾಲರ್ ಆಫ್ ದಿ ಡೇ' ಮಹಿಳೆ ಕೇಳಿದ 2 ಪ್ರಶ್ನೆ?

ಕೀರ್ತಿಗೆ 'ಕಾಲರ್ ಆಫ್ ದಿ ಡೇ' ಮಹಿಳೆ ಕೇಳಿದ 2 ಪ್ರಶ್ನೆ?

Written By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ಕಾರ್ಯಕ್ರಮದ 103ನೇ ದಿನ ಸುಶ್ಮಿತಾ ಎಂಬ ಮಹಿಳೆಯೊಬ್ಬರು 'ಕಾಲರ್ ಆಫ್ ದಿ ಡೇ' ಪ್ರಕ್ರಿಯೆಯಲ್ಲಿ ಮಾತನಾಡಿದರು.

ಸುಶ್ಮಿತಾ ಅವರ ಪ್ರಶ್ನೆ ಕೀರ್ತಿ ಅವರಿಗೆ ಇತ್ತು. ಕಾಲರ್ ಆಗಿದ್ದ ಸುಶ್ಮಿತಾ ಅವರು ಕೀರ್ತಿ ಅವರಿಗೆ ಎರಡು ಪ್ರಶ್ನೆಗಳನ್ನ ಕೇಳಿದರು. ಈ ಎರಡು ಪ್ರಶ್ನೆಗಳಿಗೆ ಕೀರ್ತಿ ಕೊಟ್ಟ ಉತ್ತರ ಇಲ್ಲಿದೆ.

Bigg Boss Kannada 4: Keerthi Answers for Caller Question

ಕಾಲರ್ ಕೇಳಿದ ಪ್ರಶ್ನೆ
''ಬಿಗ್ ಬಾಸ್'' ಮನೆಯಲ್ಲಿ ನಿರ್ದೇಶಕರು ಎಂದೇ ನೀವು ಖ್ಯಾತಿ. ಸುದೀಪ್ ಅವರು ಅದನ್ನೇ ಹೇಳ್ತಿರ್ತಾರೆ. ಯಾಕೆ, 'ಬಿಗ್ ಬಾಸ್' ಆದೇಶ ಬಂದಾಗ, ಕ್ಯಾಮೆರಾ ಮೂವ್ ಆದಾಗ, ಹೀಗೆ ಆಗುತ್ತೆ, ಹಾಗೆ ಆಗುತ್ತೆ ಎಂಬ ಊಹೆ ಮಾಡ್ತೀರಾ?

ಕೀರ್ತಿ ಕೊಟ್ಟ ಉತ್ತರ!
''24/7 ಮನೆಯಲ್ಲಿ ಇರ್ತಿವಿ. ಹೀಗಾಗಿ ಊಹೆ ಮಾಡ್ತೀನಿ. ಅದರ ಉದ್ದೇಶ, ಫನ್ ಹಾಳು ಮಾಡ್ಬೇಕು ಅಥವಾ ಸರ್ಪ್ರೈಸ್ ಹಾಳು ಮಾಡ್ಬೇಕು ಅನ್ನೊದು ಅಲ್ಲ. ನಾವು ಗೆಸ್ ಮಾಡಿದ್ದು ನಿಜಾ ಆಗ್ತಿದೆ ಅಂದ್ರೆ ಅದೊಂಥರ ಖುಷಿ ಆಗುತ್ತೆ ಅದಕ್ಕೆ ಊಹೆ ಮಾಡ್ತಿನಿ''.

ಕಾಲರ್ ಮತ್ತೆ ಕೇಳಿದ ಪ್ರಶ್ನೆ
ಮನೆಯಲ್ಲಿ ಪ್ರಥಮ್ ಬಿಟ್ಟು ಬೇರೆಯವರ ಬಗ್ಗೆ ಯಾಕೆ ಮಾತನಾಡಲ್ಲ, ಎಲ್ಲಿ ಇದ್ರೂ ಪ್ರಥಮ್ ಬಗ್ಗೆ ಮಾತನಾಡುವುದು ಯಾಕೆ ?

ಕೀರ್ತಿ ಅವರ ಎರಡನೇ ಉತ್ತರ
''ಪ್ರಥಮ್ ಹಾಟ್ ಟಾಪಿಕ್ ಒಪ್ಪಿಕೊಳ್ಳುತ್ತೇನೆ. ಆರು ಜನರ ಬಗ್ಗೆ ಮಾತನಾಡಬೇಕು ಅಂದ್ರೆ, ವಿಷ್ಯಗಳು ಏನೂ ಸಿಗಲ್ಲ. ಆದ್ರೆ, ಪ್ರಥಮ್ ಬಗ್ಗೆ ಹೆಚ್ಚು ಟಾಪಿಕ್ ಸಿಗುತ್ತೆ, ಹಾಗಾಗಿ ಮಾತಿಗೆ ಸಿಕ್ತಾರೆ. ಅದನ್ನ ಬಿಟ್ಟು, ಯಾವುದೇ ರೀತಿಯ ಕೆಟ್ಟ ಉದ್ದೇಶ, ಅಥವಾ ಪ್ರಥಮ್ ಕೆಟ್ಟವನು ಅಂತ ಇಲ್ಲ ಎಂದು ಉತ್ತರಿಸಿದರು.

English summary
Bigg Boss Kannada 4: Week 15, Kirik Keerthi gives reply to who called And Asked Question in 'Caller of the Day'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada