»   » 'ಬಿಗ್ ಬಾಸ್' ಫೈನಲ್ ಪ್ರವೇಶಿಸಿದ ನಟ ಮೋಹನ್

'ಬಿಗ್ ಬಾಸ್' ಫೈನಲ್ ಪ್ರವೇಶಿಸಿದ ನಟ ಮೋಹನ್

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ಅಂತಿಮ ಘಟ್ಟ ತಲುಪಿದ್ದು, ಗ್ರ್ಯಾಂಡ್ ಫಿನಾಲೆಗೆ ಇನ್ನೆರೆಡು ವಾರಗಳು ಮಾತ್ರ ಬಾಕಿಯಿದೆ. ಅಷ್ಟರಲ್ಲಾಗಲೇ 'ಬಿಗ್ ಬಾಸ್' ಮನೆಯಿಂದ ನಟ ಮೋಹನ್ ಫಿನಾಲೆಗೆ ನೇರ ಆಯ್ಕೆ ಆಗಿದ್ದಾರೆ.

14 ನೇ ವಾರ 'ಬಿಗ್' ಮನೆಯಿಂದ ನಟ ಭುವನ್ ಪೊನ್ನಣ್ಣ ಹೊರ ಹೋದರು. ಆದ್ರೆ, ಮತ್ತೊಂದೆಡೆ ನಟ ಮೋಹನ್ ಫಿನಾಲೆ ಹಂತಕ್ಕೆ ಕಾಲಿಟ್ಟರು.['ಬಿಗ್ ಬಾಸ್' ಮನೆಯಿಂದ ಭುವನ್ ಔಟ್, 99 ದಿನಗಳ ಆಟ ಅಂತ್ಯ]

ಅಷ್ಟಕ್ಕೂ, ಎರಡು ವಾರಗಳ ಮುಂಚೆಯೇ ಮೋಹನ್ ಫೈನಲ್ ಗೆ ಲಗ್ಗೆಯಿಟ್ಟಿದ್ದು ಹೇಗೆ? ಮೋಹನ್ ಅವರಿಗೆ ಒಲಿದ ಅದೃಷ್ಟವೇನು ಅಂತ ಮುಂದೆ ಓದಿ....

'ಬಿಗ್ ಬಾಸ್' ಫೈನಲ್ ಗೆ ಮೋಹನ್ ಎಂಟ್ರಿ

'ಬಿಗ್ ಬಾಸ್ ಕನ್ನಡ 4' ಕೊನೆಯ ಹಂತಕ್ಕೆ ತಲುಪಿದ್ದು, ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಫಿನಾಲೆಗೆ ಕೇವಲ 2 ವಾರಗಳು ಮಾತ್ರ ಬಾಕಿಯಿದ್ದು, ನಟ ಮೋಹನ್ ಅವರು 12 ನೇ ವಾರವೇ 'ಬಿಗ್ ಬಾಸ್' ಫೈನಲ್ ತಲುಪಿದ್ದಾರೆ.[ ಮತ್ತೆ ಬಂದ ಮಾಳವಿಕಾ; ಮೋಹನ್ ಮೂಕ ಪ್ರೇಕ್ಷಕ, ಶಾಲಿನಿ ಸ್ತಬ್ಧ.!]

'ಸೀಸನ್-4' ರ ಮೊದಲ ಫೈನಲ್ ಅಭ್ಯರ್ಥಿ

ಈ ಆವೃತ್ತಿಯ ಫಿನಾಲೆಗೆ ಇನ್ನು ಎರಡು ವಾರ ಬಾಕಿಯಿದ್ದು, ಮೋಹನ್ ಅವರು ಫಿನಾಲೆ ಗೆ ಕಾಲಿಟ್ಟಿದ್ದಾರೆ. ಈ ಮೂಲಕ ಈ ಆವೃತ್ತಿಯಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟ ಮೊದಲ ಸದಸ್ಯ ಮೋಹನ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೋಹನ್ ಅವರನ್ನ ಆಯ್ಕೆ ಮಾಡಿದ ಭುವನ್

ನಟ ಮೋಹನ್ ಅವರು 2 ವಾರ ಮುಂಚೆ ಫೈನಲ್ ಗೆ ಹೋಗಲು ಕಾರಣವಾಗಿದ್ದು ಭುವನ್ ಪೊನ್ನಣ್ಣ. 'ಬಿಗ್ ಬಾಸ್' ನೀಡಿದ ವಿಶೇಷ ಅಧಿಕಾರದ ಅನ್ವಯ, ಒಬ್ಬ ಅಭ್ಯರ್ಥಿಯನ್ನ ಫಿನಾಲೆಗೆ ಆಯ್ಕೆ ಮಾಡುವ ಅಧಿಕಾರ ಭುವನ್ ಗೆ ನೀಡಲಾಗಿತ್ತು. ಹೀಗಾಗಿ, ಭುವನ್ ಅವರು, ಮೋಹನ್ ಅವರನ್ನ ಹೆಸರನ್ನ ಸೂಚಿಸಿದರು.

'ಬಿಗ್ ಬಾಸ್' ಮನೆಯಿಂದ ಭುವನ್ ಔಟ್!

ಅಂದ್ಹಾಗೆ, ಭುವನ್ ಪೊನ್ನಣ್ಣ ಈ ವಾರ 'ಬಿಗ್' ಮನೆಯಿಂದ ಹೊರ ಹೋಗಿದ್ದಾರೆ. ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ಭುವನ್ 14 ನೇ ವಾರ ಎಲಿಮಿನೇಟ್ ಆಗಿದ್ದಾರೆ.

ಭಾವುಕರಾದ ಮೋಹನ್!

ನಟ ಮೋಹನ್ ಫಿನಾಲೆಗೆ ಎಂಟ್ರಿ ಪಡೆಯುತ್ತಿದ್ದಾಗೆ ಭಾವುಕಾರದರು. ಭುವನ್ ಅವರು, ತಮ್ಮ ಹೆಸರು ಸೂಚಿಸಿತ್ತಿದ್ದಂತೆ ಕಣ್ಣಲ್ಲಿ ನೀರು ಸುರಿಸಿದರು.

ಉಳಿದವರಲ್ಲಿ ಫಿನಾಲೆಗೆ ಯಾರು?

ಭುವನ್ ಮನೆಯಿಂದ ಹೊರ ಹೋಗಿದ್ದಾಯಿತು. ಮೋಹನ್ ಅವರು ಫಿನಾಲೆಗೆ ಎಂಟ್ರಿ ಪಡೆದರು. ಇನ್ನೂ ಮನೆಯಲ್ಲಿ ಉಳಿದವರು ರೇಖಾ, ಪ್ರಥಮ್, ಕೀರ್ತಿ, ಮಾಳವಿಕಾ, ಹಾಗೂ ಶಾಲಿನಿ. ಸೋ ಈ ಐದು ಜನರಲ್ಲಿ ಮುಂದಿನ ವಾರ ಎಲಿಮಿನೇಟ್ ಆಗೋದು ಯಾರು? 16ನೇ ವಾರಕ್ಕೆ ಟಿಕೆಟ್ ಪಡೆಯುವುದು ಯಾರು ಎಂಬುದು ಕುತೂಹಲ ಕೆರಳಿಸಿದೆ.[ಇವರೆಲ್ಲ ಫಿನಾಲೆ ವಾರಕ್ಕೆ ಹೋಗಬೇಕಂತೆ.! ಯಾಕಂತೆ.?]

English summary
Bigg Boss Kannada 4: Bhuvan was Given the Special Power to Suggest one Name, who would Directly enter the last stage of the Game and he took Mohan's name. With this, Mohan has Become the first Contestant to Make it to the finale in Bigg Boss 4 Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada