»   » ನಿರಂಜನ್ ಪ್ರಕಾರ 'ಬಿಗ್ ಬಾಸ್' ಮನೆಯ ವಿಲನ್ ಯಾರು ಗೊತ್ತಾ?

ನಿರಂಜನ್ ಪ್ರಕಾರ 'ಬಿಗ್ ಬಾಸ್' ಮನೆಯ ವಿಲನ್ ಯಾರು ಗೊತ್ತಾ?

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ವಿಲನ್ ಯಾರು?

- ಈ ಪ್ರಶ್ನೆ ಕೇಳಿದ ಕೂಡಲೆ ತಲೆಗೊಂದು ಉತ್ತರ ಸಿಗಬಹುದು. ಆದ್ರೆ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಔಟ್ ಆದ ನಿರಂಜನ್ ದೇಶಪಾಂಡೆ ಪ್ರಕಾರ, 'ಕಿರಿಕ್' ಕೀರ್ತಿ 'ಬಿಗ್ ಬಾಸ್' ಮನೆಯ ವಿಲನ್.!

ಹಾಗ್ನೋಡಿದ್ರೆ, 'ಕಿರಿಕ್' ಕೀರ್ತಿ ಹಾಗೂ ನಿರಂಜನ್ ದೇಶಪಾಂಡೆ ಬೆಸ್ಟ್ ಫ್ರೆಂಡ್ಸ್. ಆದರೂ, 'ದೊಡ್ಮನೆ'ಯಲ್ಲಿ ಕೀರ್ತಿ ನಡವಳಿಕೆ ನಿರಂಜನ್ ಗೆ ಇಷ್ಟವಾಗ್ಲಿಲ್ಲ. ಹೀಗಾಗಿ, ಕೀರ್ತಿಗೆ ವಿಲನ್ ಪಟ್ಟ ಕೊಟ್ಟಿದ್ದಾರೆ.

ಹಾಗಾದ್ರೆ, ನಿರಂಜನ್ ಪ್ರಕಾರ 'ಬಿಗ್ ಬಾಸ್' ಮನೆಯ ಹೀರೋ, ಹೀರೋಯಿನ್ ಯಾರು?

- ಉತ್ತರ ತಿಳಿಯಲು ಈ ವರದಿ ನೋಡಿ....

ಸೂಪರ್ ಸಂಡೆ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ನಿರಂಜನ್ ಬಿಚ್ಚುಮಾತು.!

'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋದಿಂದ ಔಟ್ ಆದ್ಮೇಲೆ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿರಂಜನ್ 'ಬಿಗ್ ಬಾಸ್' ಸ್ಪರ್ಧಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. [ಎರಡನೇ ಬಾರಿ 'ಕಿರಿಕ್' ಕೀರ್ತಿಗೆ ಕ್ಯಾಪ್ಟನ್ ಪಟ್ಟ.!]

ಸುದೀಪ್ ಪ್ರಶ್ನೆಗೆ ನಿರಂಜನ್ ಉತ್ತರ

''ನಿಮ್ಮ ಪ್ರಕಾರ 'ಬಿಗ್ ಬಾಸ್' ಮನೆಯ ಹೀರೋ ಯಾರು?'' ಎಂದು ಸುದೀಪ್ ಕೇಳಿದ ಪ್ರಶ್ನೆಗೆ, ''ಪ್ರಥಮ್... ಯಾಕಂದ್ರೆ ಬೇರೆಯವರೆಲ್ಲ ಯೋಚನೆ ಮಾಡಿ, ಕದ್ದು ಮುಚ್ಚಿ ಮಾಡುತ್ತಾರೆ. ಆದ್ರೆ ಪ್ರಥಮ್ ಹಾಗಲ್ಲ. ಏನೇ ಮಾಡಿದ್ರೂ, ಹೇಳಿ ಮಾಡುತ್ತಾನೆ. ಅವನು ಕಂಪ್ಲೀಟ್ ಎಂಟರ್ ಟೇನರ್'' ಅಂತ ನಿರಂಜನ್ ಉತ್ತರಿಸಿದರು. ['ಕಿರಿಕ್' ಕೀರ್ತಿ ಗೇಮ್ ಪ್ಲಾನ್ ಬಟಾಬಯಲು ಮಾಡಿದ ನಟ ಮೋಹನ್]

ಹೀರೋಯಿನ್ ಯಾರು?

ನಿರಂಜನ್ ದೇಶಪಾಂಡೆ ಪ್ರಕಾರ ಸಂಜನಾ ಹೀರೋಯಿನ್. ಯಾಕಂದ್ರೆ ''ಅವಳು ಏನೂ ಮಾಡಲ್ಲ. ಇಷ್ಟು ಮಾಡಿದರೂ, ಅಷ್ಟು ಅಂತ ಎಲ್ಲರೂ ಅವಳ ಪರ ಇರುತ್ತಾರೆ'' ಅಂತ ನಿರಂಜನ್ ಸ್ಪಷ್ಟನೆ ನೀಡಿದರು. ['ದಂಡನಾಯಕ' ಪ್ರಥಮ್ ವಿರುದ್ಧ ದಂಗೆ ಎದ್ದ ಕೀರ್ತಿ-ಮೋಹನ್ ಗ್ಯಾಂಗ್.!]

ಕಾಮಿಡಿಯನ್ ಯಾರು?

''ಕಾನ್ಫಿಡೆನ್ಟ್ ಆಗಿ ನಾನೇ. ನನ್ನನ್ನ ಬಿಟ್ಟರೆ 'ಬಿಗ್ ಬಾಸ್' ಮನೆಯಲ್ಲಿ ಶಾಲಿನಿ ಕಾಮಿಡಿಯನ್'' ಅಂತ ನಿರಂಜನ್ ಹೇಳಿದರು.

ವಿಲನ್ ಯಾರು?

''ಕೀರ್ತಿ ಕುಮಾರ್. ನನ್ನ ಫ್ರೆಂಡ್ ಆಗಿದ್ದರೂ, ಎಲ್ಲೋ ಒಂದು ಕಡೆ ಅವನೇ ವಿಲನ್. ಕೀರ್ತಿ ಕುಮಾರ್ ಆಗಿ ಬಂದಿದ್ದೇನೆ. ಕಿರಿಕ್ ಕೀರ್ತಿ ಆಗಿ ಬಂದಿಲ್ಲ ಅಂತ ಹೇಳ್ತಾನೆ. ಆದ್ರೆ, ಪ್ರತಿ ಬಾರಿ 'ಕಿರಿಕ್' ಮಾಡುತ್ತಲೇ ಇರುತ್ತಾನೆ. ಸೆಕೆಂಡ್ ವಿಲನ್ ಮೋಹನ್. ಯಾಕಂದ್ರೆ ಅವರದ್ದು ಸಖತ್ ಸ್ಟ್ರಾಟೆಜಿ'' - ನಿರಂಜನ್ ದೇಶಪಾಂಡೆ

'ಕಿರಾತಕ' ಕೀರ್ತಿ

''ಕೀರ್ತಿ ಕಿರಾತಕ. ಒಳಗೆ ಮಾಡುತ್ತಿರುವುದು ಬರೀ ಕಿರಿಕ್. ಫ್ರೆಂಡ್ ಆಗಿ ರಿಜೆಕ್ಟ್ ಮಾಡುವುದಿಲ್ಲ. ಆದ್ರೆ ಕನ್ಟೆಸ್ಟೆಂಟ್ ಆಗಿ ನಾನು ಅವನನ್ನ ರಿಜೆಕ್ಟ್ ಮಾಡ್ತೇನೆ'' ಅಂತ ಕೀರ್ತಿಗೆ ಪಂಚ್ ಕೂಡ ಕೊಟ್ಟರು ನಿರಂಜನ್.

ಪ್ರಥಮ್ ವಾಸಿ.!

''ಬೇರೆಯವರಿಗಿಂತ ಪ್ರಥಮ್ ವಾಸಿ ಅಂತ ಅನಿಸಿಬಿಡ್ತು'' ಅಂತ ಪ್ರಥಮ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು ನಿರಂಜನ್ ದೇಶಪಾಂಡೆ.

English summary
Bigg Boss Kannada 4: RJ Niranjan Deshpande spoke about 'Kirik' Keerthi during 'Super Sunday with Sudeep' show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada