»   » ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಅವರಿಂದ ಮಂಗಾಟ

ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಅವರಿಂದ ಮಂಗಾಟ

Posted By:
Subscribe to Filmibeat Kannada

ಕಳೆದ ವರ್ಷ ಬಿಗ್ ಬಾಸ್ ಕನ್ನಡ 3 ಮನೆಯಲ್ಲಿದ್ದ ಸದಸ್ಯರನ್ನು ಗೋಳು ಹೊಯ್ಕೊಳೋಕೆ ಹುಚ್ಚ ವೆಂಕಟ್ ಇದ್ರು. ದಿನಾ ಒಂದೊಂದು ಬ್ರೇಕಿಂಗ್ ನ್ಯೂಸ್ ಮತ್ತು ಹೊಸ-ಹೊಸ ರಾದ್ಧಾಂತ-ರಂಪಾಟ ಅವರ ಕಡೆಯಿಂದ ಇದ್ದೇ ಇತ್ತು. ಅದರಂತೆ ಈ ಬಾರಿ ಬಿಗ್ ಬಾಸ್ ಕನ್ನಡ 4ರಲ್ಲಿ ಆ ಸಾಲಿಗೆ ಹೊಸ ಸೇರ್ಪಡೆ ನಿರ್ದೇಶಕ ಪ್ರಥಮ್.

ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ, ಎಂದು ಪ್ರಥಮ್ ಆಗಾಗ ಹೇಳುತ್ತಾ ಇದ್ರು. ಆದಾದ ನಂತರ ಮನೆಯ ಕ್ಯಾಪ್ಟನ್ ಆಗಿರೋ ಕೀರ್ತಿ ಕುಮಾರ್ ಅವರು ಬದಲಾಗಬೇಕು, ಅಂತ ಪ್ರಥಮ್ ಅವರು ಪಟ್ಟು ಹಿಡಿದು ಕುಳಿತಿದ್ದಾರೆ.[ಪ್ರಥಮ್ ಕಾಲಿಟ್ಟ ಕಡೆಯಲ್ಲೆಲ್ಲಾ ಬರೀ ಕಿರಿಕ್ಕೇ.! ಸಾಕ್ಷಿ ಬೇಕಾ?]

ಬರೀ ಪಟ್ಟು ಹಿಡಿದಿದ್ದು, ಮಾತ್ರವಲ್ಲದೇ ಅನ್ನ-ನೀರು ಹಣ್ಣು ಬಿಟ್ಟು ಉಪವಾಸ ಕೂತಿದ್ದಾರೆ. 'ನನ್ನ ಮೇಲೆ ಮಾನಸಿಕ ದೌರ್ಜನ್ಯ ನಡೆಯುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಪ್ರಥಮ್ ಹಣೆಗೆ ಕಪ್ಪು ಪಟ್ಟಿ ಧರಿಸಿ ಇಡೀ ಮನೆ ತುಂಬಾ ಓಡಾಡುತ್ತಿದ್ದಾರೆ. ನಾಲ್ಕನೇ ದಿನದ ಬೆಳವಣಿಗೆಗಳನ್ನು ನೋಡಲು ಮುಂದೆ ಓದಿ...

ಮೋಹನ್ ಜೊತೆ ಪ್ರಥಮ್ ವಾರ್

ಒಂದು ಹನಿ ನೀರು ಮುಟ್ಟದ ಪ್ರಥಮ್ ಗೆ, ಮೋಹನ್ ಅವರು ಹಣ್ಣು ತಿನ್ನಲು ಕೊಡುತ್ತಾರೆ. ಅವಾಗ ಪ್ರಥಮ್, ಮೋಹನ್ ಅವರ ಮೇಲೆ ಎರ್ರಾ-ಬಿರ್ರಿ ಹರಿ ಹಾಯುತ್ತಾರೆ. "ನಾಯಕನ ತಪ್ಪು ಮತ್ತು ಆತನ ಕೆಲವು ತಿಕ್ಕಲು ನಿರ್ಧಾರ ಬದಲಾಗಬೇಕು. ಹೌದು ಸ್ವಾಮಿ ನನಗೆ ನ್ಯಾಯ ಸಿಗೋವರೆಗೂ ನಾನು ಹೋರಾಟ ಮಾಡುತ್ತೇನೆ. ಅಲ್ಲಿಯವರೆಗೆ ಒಂದು ಹನಿ ನೀರು ಕೂಡ ಮುಟ್ಟಲ್ಲ. ಬಿಗ್ ಬಾಸ್ ಗೆ ತಮ್ಮ ತಪ್ಪಿನ ಅರಿವಾಗಬೇಕು. ನಾನು ನಾಯಕನನ್ನು ಖಂಡಿಸ್ತೀನಿ." ಅಂತ ಪ್ರಥಮ್ ಒಂದೇ ಸಮನೇ ಕಿರುಚಾಡುತ್ತಾರೆ.[ಇಂಗ್ಲೆಂಡ್ ನಲ್ಲಿ 'ಕೂಲಿ' ಮಾಡಿದ ಸತ್ಯ ಬಾಯ್ಬಿಟ್ಟ ದೊಡ್ಡ ಗಣೇಶ್]

ದೊಡ್ಡ ಗಣೇಶ್ ಸರದಿ

ಮೋಹನ್ ಅವರು ಎಷ್ಟೇ ಒತ್ತಾಯ ಮಾಡಿದರೂ ಪ್ರಥಮ್ ಅವರು ಒಂದು ಪೀಸ್ ಕೂಡ ಹಣ್ಣು ಮುಟ್ಟಲಿಲ್ಲ. ಒಬ್ಬೊಬ್ಬರಾಗಿ ಪ್ರಥಮ್ ಬಳಿ ಹೋಗಿ ಬ್ಯಾಟಿಂಗ್ ಮಾಡೋಕೆ ಶುರು ಮಾಡುತ್ತಾರೆ. ಮೋಹನ್ ಅವರ ಸರದಿ ಆದ ನಂತರ ದೊಡ್ಡ ಗಣೇಶ್ ಅವರು ಹೋಗುತ್ತಾರೆ.

'ಅತ್ಯಾಚಾರ ಆಗಿಲ್ಲ'-ಪ್ರಥಮ್

'ದೊಡ್ಡ ಗಣೇಶ್: "ನನ್ನ ಮಾತು ಕೇಳ್ತಿಯೋ ಇಲ್ವೋ, ನಾನೊಬ್ಬ ಅಣ್ಣನಾಗಿ ಹೇಳುತ್ತೇನೆ ಬ್ರೇಕ್ ಫಾಸ್ಟ್ ಮಾಡು.

ಪ್ರಥಮ್: 'ದ್ರೋಹ, ಮೋಸ, ಅನ್ಯಾಯ, ಕ್ರೌರ್ಯ, ದೌರ್ಜನ್ಯ, ಅತ್ಯಾಚಾರ ಒಂದು ಆಗಿಲ್ಲ, ಮಾನಸಿಕವಾಗಿ. ನಾನು ಏಟೂ ತಿನ್ನಲ್ಲ, ಊಟನೂ ತಿನ್ನಲ್ಲಾ. ಬಿಗ್ ಬಾಸ್ ರೂಲ್ಸ್ ಪ್ರಕಾರ ಮಾನಸಿಕ ದೌರ್ಜನ್ಯ ಮಾಡೋ ಹಾಗಿಲ್ಲ.

ದೊಡ್ಡ ಗಣೇಶ್: ನನ್ನ ಬಳಿ ಮಾತಾಡಬೇಡ, ನಾನು ಹೋಗ್ತೀನಿ ಅಂದಾಗ, ಪ್ರಥಮ್: ಎಲ್ಲರೂ ಹೋಗಿ ನಾನೋಬ್ಬನ್ನೇ ಇರ್ತಿನಿ. ಅದಕ್ಕೆ ನಾನು ಹೇಳಿದ್ದು ಮನೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ.

ಗಣೇಶ್: ಫಸ್ಟ್ ನೀನು ಇಲ್ಲಿ ಗೇಮ್ ಆಡು ಆಮೇಲೆ ಪ್ರತಿಭಟನೆ ಮಾಡು, ಇಲ್ಲಿ ಯಾರೂ ಕೂಡ ಗುಂಪುಗಾರಿಕೆ ಮಾಡ್ತಾ ಇಲ್ಲ.

ದೊಡ್ಡ ಗಣೇಶ್ ಮನವಿ

"ಬಿಗ್ ಬಾಸ್ ನೀವೇ ನೋಡಿದ್ರಲ್ಲಾ, ಪ್ರಥಮ್ ಅವರ ನಡವಳಿಕೆಯನ್ನು, ಇವರು ಇದೇ ರೀತಿ ಮನೆಯಲ್ಲಿ ಮಾಡ್ತಾ ಇದ್ರೆ ಬೇರೊಂದು ಘಟನೆಗಳು ನಡೆಯಬಹುದು. ಇವರ ಈ ನಡವಳಿಕೆ ಅಪ್ರಸ್ತುತ. ಆದಷ್ಟು ಬೇಗ ಮನೆಯಿಂದ ಹೊರಗಡೆ ಹಾಕಿ. ಇವರು ಹೀಗೆ ಮಾಡ್ತಾ ಇದ್ರೆ ಸರಿ ಇರಲ್ಲ, ದಯಮಾಡಿ ಇವರಿಗೆ ಬುದ್ಧಿವಾದ ಹೇಳಿ".-ದೊಡ್ಡ ಗಣೇಶ್

'ಖಂಡಿಸ್ತೀನಿ' ಅನ್ನೋದು ತಮಾಷೆ ಪದ ಆಯ್ತು

ಅತ್ತ ಪ್ರಥಮ್ ಅವರು ನ್ಯಾಯ ಬೇಕು, ನಾನು 'ಖಂಡಿಸ್ತೀನಿ...ಖಂಡಿಸ್ತೀನಿ' ಅಂತ ಹೇಳ್ತಾ ಬರ್ತಾ ಇದ್ರೆ. ಇತ್ತ ಮನೆಯ ಇನ್ನಿತರೇ ಸದಸ್ಯರೆಲ್ಲಾ ಸೇರ್ಕೊಂಡು 'ಆ' ಖಂಡಿಸ್ತೀನಿ ಅನ್ನೋ ಪದವನ್ನು ತಮಾಷೆ ಮಾಡುತ್ತಿದ್ದಾರೆ.

ಪ್ರಥಮ್ ಗೆ ಶಿಕ್ಷೆ

ಪ್ರತಿಭಟನೆ ಮಾಡುವ ಭರಾಟೆಯಲ್ಲಿ ಪ್ರಥಮ್ ಮನೆಯ ಗಾರ್ಡನ್ ನಲ್ಲಿ ಇಟ್ಟಿದ ಲೈಟ್ ಒಂದನ್ನು ಒಡೆದು ಹಾಕುತ್ತಾರೆ. ಅದಕ್ಕೆ ಮನೆಯ ನಾಯಕ ಕೀರ್ತಿ ಕುಮಾರ್ ಅವರು, ನೀವು ಈಗಲೇ ನಿಮ್ಮ ಪ್ರತಿಭಟನೆ ಮುರಿದು ಡೈನಿಂಗ್ ಟೇಬಲ್ ಮೇಲೆ ಇಟ್ಟಿರುವ ಹಣ್ಣುಗಳನ್ನು ತಿನ್ನಬೇಕು ಅಂತ ಶಿಕ್ಷೆ ಕೊಡುತ್ತಾರೆ.

ಲಕ್ಷುರಿ ಟಾಸ್ಕ್

ಮನೆಯ ಮೂವರು ಸದಸ್ಯರಾದ ಶೀತಲ್ ಶೆಟ್ಟಿ, ಮಾಳವಿಕಾ ಮತ್ತು ಕಾವ್ಯ ಶಾಸ್ತ್ರಿ ಅವರು ಮೂರನೇ ಲಕ್ಷುರಿ ಟಾಸ್ಕ್ ಅನ್ನು ಪೂರ್ತಿ ಮಾಡಿದ್ದಾರೆ. ಈಜುಕೊಳದ ದಂಡೆಗೆ ಟ್ಯೂಬ್ ಸ್ಪರ್ಶಿಸದಂತೆ ನೋಡಿಕೊಂಡು ಟಾಸ್ಕ್ ಪೂರ್ತಿ ಮಾಡಿದ್ದಾರೆ. ಅದನ್ನು ಬಿಗ್ ಬಾಸ್ ಗಮನಿಸಿ, ಮೂವರನ್ನು ಅಭಿನಂದಿಸಿದ್ದಾರೆ.

ಮನೆಯಲ್ಲಿ ಮಂಗಾಟ

ಪ್ರಥಮ್ ನನ್ನು ಹೇಗಾದ್ರೂ ಊಟ ಮಾಡಿಸಲೇಬೇಕು ಎಂಬ ಹಟ ತೊಟ್ಟ ಮಾಳವಿಕಾ ಮತ್ತು ನಾಯಕ ಕಿರಿಕ್ ಕೀರ್ತಿ ಅವರು, ಪ್ರಥಮ್ ಹಿಂದೆ ಓಡುತ್ತಾರೆ. ಮಾಳವಿಕಾ ತಮ್ಮ ಎಲ್ಲಾ ಬುದ್ದಿ ಉಪಯೋಗಿಸಿ ಮಾತನಾಡಿದರೂ ಪ್ರಥಮ್ ತಾವು ಹಿಡಿದ ಹಟ ಬಿಡಲಿಲ್ಲ. ಬರೀ ಖಂಡಿಸುತ್ತೇನೆ, ನ್ಯಾಯಕ್ಕಾಗಿ ಹೋರಾಟ. ನೀವ್ಯಾರೂ ನನ್ನ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಬೇಡಿ', ಅಂತ ಮನೆಯ ಗಾರ್ಡನ್ ತುಂಬಾ ಸಣ್ಣ ಮಕ್ಕಳಂತೆ ಓಡಾಡಿದರು.

ದೊಡ್ಡ ಗಣೇಶ್ ಜೊತೆ ಸಂಜನಾಗೆ ಸರಿ ಬರ್ತಿಲ್ಲ

ಸಂಜನಾ ಚಿದಾನಂದ್ ಜೊತೆ ದೊಡ್ಡ ಗಣೇಶ್ ಅವರು ನಡ್ಕೊಳ್ಳೋ ವರಸೆ ಸರಿ ಇಲ್ಲ ಅಂತ ಇತರೇ ಹೆಣ್ಣು ಮಕ್ಕಳು, ನಡು ರಾತ್ರಿ ಎಲ್ಲರೂ ಮಲಗಿದ ನಂತರ ಗುಂಪು ಕಟ್ಟಿ ಮಾತಾಡುತ್ತಾರೆ. ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ, ಶಾಲಿನಿ ಸೇರಿಕೊಂಡು, ಚಿಕ್ಕ ಹುಡುಗಿ ಸಂಜನಾ ಅವರಿಗೆ ಧೈರ್ಯ ತುಂಬುತ್ತಾರೆ. "ಸಂಜನಾ ನಿನಗೆ ಅವರ ವರ್ತನೆ ಸರಿ ಅನ್ಸಿಲ್ಲಾ ಅಂದ್ರೆ, ನೇರವಾಗಿ ಹೇಳಿಬಿಡು. ನೀವು ನನ್ನ ಜೊತೆ ನಡ್ಕೊಳ್ಳೋ ರೀತಿ ಸರಿ ಇಲ್ಲ ಅಂತ ಹೇಳು. ವಯಸ್ಸಿನ ಅಂತರ ಅವರಿಗೆ ತಿಳಿಯಬೇಕಲ್ವಾ?, ಅಂತ ಶಾಲಿನಿ ಸಂಜನಾಗೆ ಧೈರ್ಯ ತುಂಬುತ್ತಾರೆ.

English summary
Pratham wants to replace Keerthi as the Captain of the house. He has a black patch on his forehead, as a symbol of protest against the groupism of others. Dodda Ganesh asks Bigg Boss to remove Pratham from the House.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada