»   » ಯಾವ ನಾಯಕ ನಟಿ ಮೇಲೆ ಕಿಚ್ಚ ಸುದೀಪ್ ಗೆ ಮನಸ್ಸಿದೆ ಗೊತ್ತಾ.?

ಯಾವ ನಾಯಕ ನಟಿ ಮೇಲೆ ಕಿಚ್ಚ ಸುದೀಪ್ ಗೆ ಮನಸ್ಸಿದೆ ಗೊತ್ತಾ.?

Posted By:
Subscribe to Filmibeat Kannada

ಶೀರ್ಷಿಕೆ ಓದಿ ತಲೆಗೆ ಹೆಬ್ಬಾವು ಬಿಟ್ಟುಕೊಳ್ಳುವ ಮುನ್ನ ಪೂರ ಮ್ಯಾಟರ್ ತಪ್ಪದೇ ಓದಿ....

ಕಿಚ್ಚ ಸುದೀಪ್ ಗೆ ಕಾಜೋಲ್ ಅಂದ್ರೆ ಪಂಚ ಪ್ರಾಣ. 'ಈಗಲೂ ಕಾಜೋಲ್ ಪತಿ ಅಜಯ್ ದೇವ್ಗನ್ ಸಣ್ಣ ಮಿಸ್ಟೇಕ್ ಮಾಡಿದರೆ, ಮುಂಬೈನಲ್ಲಿ ಇರ್ತೀನಿ' ಅಂತ ಸ್ವತಃ ಕಿಚ್ಚ ಸುದೀಪ್ ಹೇಳಿದ್ದಾರೆ.

ಅಷ್ಟಕ್ಕೂ ಸುದೀಪ್ ಹೀಗೆ ಹೇಳಿದ್ದು 'ಬಿಗ್ ಬಾಸ್ ಕನ್ನಡ-4' ವೇದಿಕೆಯ 'ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್ ಜೊತೆ' ಕಾರ್ಯಕ್ರಮದಲ್ಲಿ....

'ಬಿಗ್ ಬಾಸ್' ಸ್ಪರ್ಧಿಗಳು ಪ್ರಶ್ನೆ ಕೇಳಿದಾಗ...

ಪ್ರತಿ ವಾರದಂತೆ 'ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್ ಜೊತೆ' ಕಾರ್ಯಕ್ರಮದಲ್ಲಿ ಅತಿಥಿಗಳನ್ನ ಆಹ್ವಾನಿಸಿ, ಅವರ ಜೊತೆಗೆ ಹರಟುವ ಬದಲು, ಶಾಲಿನಿ ಹಾಗೂ ಶೀತಲ್ ಶೆಟ್ಟಿ ರವರನ್ನ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸಿದ ಸುದೀಪ್, 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಮನಬಿಚ್ಚಿ ಉತ್ತರ ಕೊಟ್ಟರು. [ಎಲ್ಲರೂ ಅಂದುಕೊಂಡ್ಹಾಗೆ ಆಗಿಲ್ಲ: ಡೌಟ್ ಕ್ಲಿಯರ್ ಮಾಡಿದ 'ಬಿಗ್ ಬಾಸ್'!]

ಪ್ರಶ್ನೆ ಕೇಳಲು ಶುರು ಮಾಡಿದ ನಟಿ ಶಾಲಿನಿ

''ಪ್ರತಿ ಬಾರಿ ನೀವೇ ಮಾತನಾಡುತ್ತೀರಿ. ಈ ವಾರ ನಾವು ಮಾತನಾಡುತ್ತೇವೆ. ನಾವು ಪ್ರಶ್ನೆ ಕೇಳುತ್ತೇವೆ. ಪ್ರಶ್ನೆ ಏನೇ ಆಗಿರಲಿ ನೇರವಾಗಿ ಉತ್ತರ ಕೊಡಬೇಕು'' ಅಂತ ಹೇಳುವ ಮೂಲಕ ಪ್ರಶ್ನೋತ್ತರ ಸೆಷನ್ ಗೆ ಶಾಲಿನಿ ಚಾಲನೆ ಕೊಟ್ಟರು. ['ಒಳ್ಳೆ ಹುಡುಗ' ಪ್ರಥಮ್ ಗೆ ಬೆಂಡೆತ್ತಿ ಬ್ರೇಕ್ ಹಾಕಿದ ಕಿಚ್ಚ ಸುದೀಪ್.!]

ಶಾಲಿನಿ ಕೇಳಿದ ಪ್ರಶ್ನೆ

ಶಾಲಿನಿ - ನಿಮ್ಮ ಫಸ್ಟ್ ಲವ್ ಯಾರು.?
ಸುದೀಪ್ - ಶೀ ವಾಸ್ ಎ ವೆರಿ ಪ್ರಿಟಿ ಗರ್ಲ್. ನಾವು ಮೂರನೇ ಕ್ಲಾಸ್ ನಲ್ಲಿ ಇದ್ವಿ. ಇಬ್ಬರು ಒಟ್ಟಿಗೆ ಕೈಹಿಡ್ಕೊಂಡು ಸ್ಕೂಲ್ ಗೆ ಹೋಗ್ತಿದ್ವಿ. ಒಟ್ಟಿಗೆ ಆಟ ಆಡ್ತಿದ್ವಿ.

ಪ್ರಥಮ್ ಕೇಳಿದ ಪ್ರಶ್ನೆ

ಪ್ರಥಮ್ - ಇತ್ತೀಚೆಗಷ್ಟೇ ನಿಮ್ಮ ತಂದೆ-ತಾಯಿ ರವರ 50ನೇ ಮದುವೆ ವಾರ್ಷಿಕೋತ್ಸವ ಆಯ್ತು. ನಿಮ್ಮ ಎಲ್ಲಾ ಯಶಸ್ಸಿನ ಕ್ರೆಡಿಟ್ ನ ನಿಮ್ಮ ತಂದೆ-ತಾಯಿಗೆ ಅರ್ಪಿಸುತ್ತೀರಾ.?
ಸುದೀಪ್ - ನನಗೆ ಗೊತ್ತಿರುವ ಹಾಗೆ, ನಿಷ್ಕಲ್ಮಷವಾಗಿ ಆಶೀರ್ವಾದ ಮಾಡುವ ನಾಲ್ಕು ಕೈಗಳು ಅವು. ನನ್ನನ್ನ ತಿದ್ದಿದ್ದು ಅವರೇ, ಬೆಳೆಸಿದ್ದು ಅವರೇ. ಎಲ್ಲೋ ಒಂದು ಕಡೆ ವ್ಯಾಲ್ಯೂ ತಿಳಿಸಿಕೊಟ್ಟಿದ್ದೂ ನನ್ನ ತಂದೆಯವರೇ. ಇವತ್ತು ನಾನು ಏನೇ ಆಗಿದ್ದರೂ, ಅವರಿಂದಲೇ. ನನ್ನ ಪ್ರಪಂಚ ಕೂಡ ಅಲ್ಲೇ ಇದೆ.

ರೇಖಾ ಕೇಳಿದ ಪ್ರಶ್ನೆ

ರೇಖಾ - ನಿಮ್ಮ ಹಾಬೀಸ್ ಏನೇನು?
ಸುದೀಪ್ - ಕುಕ್ಕಿಂಗ್, ಮ್ಯೂಸಿಕ್ - ತುಂಬಾ ಕಂಪೋಸ್ ಮಾಡಿದ್ದೇನೆ.

ಮೋಹನ್ ಕೇಳಿದ ಪ್ರಶ್ನೆ

ಮೋಹನ್ - ತುಂಬಾ ಹಚ್ಕೊಂಡು ಮಾಡುವ ಸಿನಿಮಾ ಕೈಕೊಟ್ಟಾಗ, ಹೇಗೆ ರಿಸೀವ್ ಮಾಡುತ್ತೀರಿ.?
ಸುದೀಪ್ - ಮೊದಲು ತುಂಬಾ ಅಪ್ ಸೆಟ್ ಆಗ್ತಿತ್ತು. ತುಂಬಾ ಬೈಕೊಳ್ತಿದ್ವಿ. ಒಳ್ಳೆ ಸಿನಿಮಾ ಮಾಡಿದ್ವಿ, ಜನ ನೋಡ್ಲಿಲ್ಲ ಅಂತ. ಸ್ವಲ್ಪ ದಿನಗಳು ಕಳೆದ ನಂತರ ಗೊತ್ತಾಗ್ತಿತ್ತು, ಆ ಸಿನಿಮಾ ಯಾಕೆ ಓಡಲಿಲ್ಲ ಅಂತ. ಆ ಸಿನಿಮಾ ಹೋಗಿಲ್ಲದೇ ಇರುವುದರಿಂದ ನಾನು ಬೇರೆ ಹಾದಿ ಹಿಡಿದೆ.

ಕಾರುಣ್ಯ ರಾಮ್ ಕೇಳಿದ ಪ್ರಶ್ನೆ

ಕಾರುಣ್ಯ ರಾಮ್ - 'ಬಿಗ್ ಬಾಸ್ ಕನ್ನಡ-4' ನಲ್ಲಿ ಇರುವವರು ನಿಮ್ಮ ಜೊತೆ ಯಾರಾದರೂ ಆಕ್ಟ್ ಮಾಡುತ್ತಾರಾ, ಮಾಡಬಹುದಾ.?
ಸುದೀಪ್ - ನಮ್ಮ ಆಸೆ ಮೇಲೆ ಸಿನಿಮಾ ಮಾಡಬಾರದು. ಅದಕ್ಕಾಗಿ ಇನ್ನೊಬ್ಬರನ್ನ ಹಾಕಿಸಬಾರದು. ಪಾತ್ರಕ್ಕೆ ಸರಿ ಇರುವವರನ್ನ ನಿರ್ದೇಶಕರು ಡಿಸೈಡ್ ಮಾಡ್ತಾರೆ. ಅದರ ಪರವಾಗಿ ಹೋಗೋಣ. ನಾನು ಇದುವರೆಗೂ ತುಂಬಾ ರೆಕಮೆಂಡೇಷನ್ಸ್ ಯಾರಿಗೂ ಮಾಡೇ ಇಲ್ಲ.

ನಿರಂಜನ್ ಕೇಳಿದ ಪ್ರಶ್ನೆ

ನಿರಂಜನ್ - ತುಂಬಾ ಇಷ್ಟ ಪಟ್ಟ ವ್ಯಕ್ತಿ/ವಸ್ತು ಯಾವುದನ್ನಾದರೂ ಕಳ್ಕೊಂಡಿದ್ದೀರಾ?
ಸುದೀಪ್ - ತುಂಬಾ.

ಕಾರುಣ್ಯ ರಾಮ್ ಕೇಳಿದ ಎರಡನೇ ಪ್ರಶ್ನೆ

ಕಾರುಣ್ಯ ರಾಮ್ - ಫಸ್ಟ್ ಕ್ರಷ್ ಯಾರು?
ಸುದೀಪ್ - ಕಾಜೋಲ್. ಇವತ್ತಿಗೂ ಸ್ಟ್ರಾಂಗ್ ಆಗಿದೆ. ಅಜಯ್ ದೇವ್ಗನ್ ಒಂದು ಮಿಸ್ಟೇಕ್ ಮಾಡಿದರೂ, ಈಗಲೂ ಬಾಂಬೆಯಲ್ಲಿ ಇರ್ತೀವಿ.

English summary
Bigg Boss Kannada 4, Week 5 : Kannada Actor Kiccha Sudeep revealed his First Crush.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada