»   » 'ಬಿಗ್ ಬಾಸ್' ಸ್ಪರ್ಧಿಗಳ 'ಮುಖವಾಡ' ಕಳಚಿದ ವೀಕ್ಷಕ ಮಹಾಪ್ರಭುಗಳು.!

'ಬಿಗ್ ಬಾಸ್' ಸ್ಪರ್ಧಿಗಳ 'ಮುಖವಾಡ' ಕಳಚಿದ ವೀಕ್ಷಕ ಮಹಾಪ್ರಭುಗಳು.!

Posted By:
Subscribe to Filmibeat Kannada

''ನಾವು ಕಷ್ಟ ಪಡುವುದು ವೀಕ್ಷಕರಿಗೆ ರೀಚ್ ಆಗುವುದಿಲ್ಲ'' ಅಂತ 'ಬಿಗ್ ಬಾಸ್' ಸ್ಪರ್ಧಿಗಳು ಬೊಬ್ಬೆ ಹೊಡೆದುಕೊಳ್ಳಬಹುದು. ಆದ್ರೆ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮವನ್ನ ತಪ್ಪದೇ ನೋಡುತ್ತಿರುವ ವೀಕ್ಷಕರು ಮಾತ್ರ ಸ್ಪರ್ಧಿಗಳ ಪ್ರತಿ ನಡೆಯನ್ನು ಗಮನಿಸುತ್ತಿದ್ದಾರೆ.

ಕಳೆದ ವಾರ 'ಬಿಗ್ ಬಾಸ್' ಮನೆಗೆ ವಿಶೇಷ ಅತಿಥಿಗಳು ಹಾಗು ಪತ್ರಕರ್ತರು ಹೋಗಿ ಬಂದ್ಮೇಲೆ, 'ದೊಡ್ಮನೆ'ಯಲ್ಲಿ ಅನೇಕ ಬದಲಾವಣೆಗಳಾಗಿವೆ. ಅದನ್ನೆಲ್ಲ ಗುರುತಿಸಿರುವ ಸಂತೋಷ್ ಎಂಬುವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದು ಹೀಗೆ....

ಮೋಹನ್ ಹೇಳಿಕೆ ಸರಿಯೇ.?

''ಬಿಗ್ ಬಾಸ್' ಸಂಚಿಕೆಯಲ್ಲಿ ಸದಸ್ಯರೆಲ್ಲ ಪ್ರಥಮ್ ಜೊತೆ ಮಾತನಾಡಲು ಆರಂಭಿಸಿದ್ದಾರೆ. ಅತಿಥಿಗಳಾಗಿ ಬಂದವರು ಪ್ರಥಮ್ ನನ್ನು ಮಾನಸಿಕವಾಗಿ ಕುಗ್ಗಿಸಲು ಬಂದಂತಿತ್ತು. ಅಡುಗೆ ಕೋಣೆಯಲ್ಲಿ ಮೋಹನ್ ಹೇಳ್ತಾರೆ,"ವೀಕ್ಷಕರ ಪ್ರಕಾರ ನಾವೆಲ್ಲ ಅವನನ್ನು ಮೂಲೆಗುಂಪು ಮಾಡಿದೀವಿ ಅನಿಸಿದೆ" ರೇಖಾಗೆ ಹೇಳಿದ್ದು," ನೀವೆನ್ರಿ ಅವನು ಶೋ ಗೆಲ್ತಾನೆ ಅಂತ ದೊಡ್ಡ statement ಕೊಡ್ತಿರಿ ಅದೆಲ್ಲ ಸರಿಯಲ್ಲ!" ಅಂದರೆ, ಅದೆಷ್ಟು ಹೊಟ್ಟೆಕಿಚ್ಚಿದೆ ಈ ಮೋಹನ್ ಅವರಿಗೆ'' - ಸಂತೋಷ್

ಭಗತ್ ಸಿಂಗ್ ಹೆಸರು ಯಾಕೆ?

ಕೀರ್ತಿ ಹೇಳ್ತಾರೆ, "ಭಗತ್ ಸಿಂಗ್ ಎಲ್ಲರಿಗೂ ಇಷ್ಟ ಆದರೆ ನಮ್ಮ ಮನೆಯಲ್ಲಿ ಹುಟ್ಟಬಾರದು ಎಂದು ಪ್ರಥಮ್ ಗೆ ಪರೋಕ್ಷವಾಗಿ ಹೇಳಿದರು!"
ರೇಖಾ ಹೇಳಿದ್ದು," ಅತಿಥಿಗಳ ಬಾಯಲ್ಲಿ ಪ್ರಥಮ್ ಹೆಸರೇ ಇರೋದ್ರಿಂದ ಅವನು ಗೆಲ್ತಾನೆ ಅಂತ ಹೇಳಿದ್ದು!"
ಕೀರ್ತಿ: ''ಸರ್, ಇದೇ ಕಾರಣಕ್ಕೆ ಅವನು ಒಬ್ಬೊಬ್ನೆ ಇರ್ತಾನೆ''. (ಅಸಲಿಗೆ ಸದಸ್ಯರು ಅವನ ಜೊತೆ ಮಾತಾನಾಡೋ ಪ್ರಯತ್ನ ಮಾಡಿಲ್ಲ. ವೈಯಕ್ತಿಕ ಬದುಕಿನ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ)
ಶಾಲಿನಿ: ಅವನು popular ಆಗಿದಾನೆ ಅಂತ ಒಪ್ಪಿಕೊಳ್ಳೊದಿಲ್ಲ.

ಪ್ರಥಮ್ ಪಾಪ್ಯುಲಾರಿಟಿ ಅರಿವಾಗಿದೆ

''ಇದಾದ ಮರುದಿನ ಎಲ್ಲ ಸದಸ್ಯರು ಪ್ರಥಮ್ ಜೊತೆ ಮಾತಾನಾಡುತ್ತಿದ್ದಾರೆ. ಕಾರಣವಿಷ್ಟೇ, ಅವನ popularity ಅರಿವಾಗಿದೆ. ಮಾಳವಿಕ, ಕೀರ್ತಿ, ಶಾಲಿನಿ ಎಲ್ಲರೂ ಅವನ ಒಳ್ಳೆಯ ಗುಣವನ್ನು ಹೊಗಳಿ ಒಳ್ಳೆಯವರಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಫಿನಾಲೆ ಹತ್ತಿರ ಬಂದಿರುವುದರಿಂದ ಸದಸ್ಯರು ಮಾಡುತ್ತಿರುವ ನಾಟಕವೆಂಬಂತೆ ತೋರುತಿದೆ'' - ಸಂತೋಷ್ [ಡ್ಯಾಮೇಜ್ ಕಂಟ್ರೋಲ್ ಶುರು: ಪ್ರಥಮ್ ಗಾಗಿ ಮಾಳವಿಕಾ 'ಸ್ಪೆಷಲ್ ಕ್ಲಾಸ್']

ಕ್ಷಮೆ ಕೇಳಿದ ಕೀರ್ತಿ

ಕೀರ್ತಿ ಹೇಳ್ತಾರೆ, "ಪ್ರಥಮ್ ನನ್ನಿಂದ ಏನಾದರೂ ತಪ್ಪಾಗಿದ್ರೆ ಕ್ಷಮಿಸಿ. ನಿಮ್ಮನ್ನು ತುಂಬಾ ಇಷ್ಟಪಡ್ತಿನಿ. ನಿಮ್ಮ ಬಗ್ಗೆ ಸಾಕಷ್ಟು ಅಸಮಾಧಾನಗಳಿತ್ತು. ಆದರೆ ಇವಾಗಿಲ್ಲ.!"
ರೇಖಾ: ಪ್ರಥಮ್ ನೀನು ಸ್ಕರ್ಟ್ ಹಾಕಿಕೊಂಡಾಗ ಮತಿಹೀನ ಅಂತ ಅನಿಸಿದ್ದು ನಿಜ.. ಆದರೆ, ನೀನು ಹಾಗಲ್ಲ ಅಂತ ಗೊತ್ತಾಗಿದೆ. ಕುಗ್ಗಿ ಹೋಗಬೇಡ ಅಂತ ಹೇಳಿದರು. [ಪ್ರಥಮ್ ಬಳಿ 'ಕ್ಷಮೆ' ಕೇಳಿದ ಕೀರ್ತಿ: ಡ್ಯಾಮೇಜ್ ಕಂಟ್ರೋಲ್ ಪಾರ್ಟ್-2!]

ಎಲ್ಲರೂ ನಾಟಕ ಮಾಡ್ತಿದ್ದಾರೆ.!

ದೊಡ್ಡ ಗಣೇಶ್ ಬಂದು ಮಾಟ-ಮಂತ್ರ ಅಂತೆಲ್ಲ ಮಾತಾಡಿ ಪ್ರಥಮ್ ನನ್ನು ಕುಗ್ಗಿಸೋ ಪ್ರಯತ್ನ ಮಾಡಿದರು. ಸಂಜನಾ, ಮಸ್ತಾನ್ ಕೂಡ ಅಷ್ಟಾಗಿ ಪ್ರಥಮ್ ಮಾತಿಗೆ ಸ್ಪಂದಿಸಲಿಲ್ಲ.
ಒಟ್ಟಿನಲ್ಲಿ ಎಲ್ಲರೂ ತಮ್ಮ ತಪ್ಪಿನ ಅರಿವಾಗಿ ಪ್ರಥಮ್ ಬಗ್ಗೆ ಕಾಳಜಿ ವಹಿಸಿದಂತೆ ನಡೆದುಕೊಳ್ಳುತ್ತಿದ್ದಾರೆ. ಇದು ನಾಟಕೀಯ ವರ್ತನೆಯಂತೆ ತೋರುತಿದೆ. ತುಂಬಾ ವಿಳಂಬವಾಗಿರುವುದರಿಂದ ಪ್ರಥಮ್ ಎಂಬ ಪ್ರತಿಭೆಯನ್ನು ವೀಕ್ಷಕರ ಮನಸ್ಸಿನಿಂದ ದೂರ ಮಾಡುವುದು ಅಸಾಧ್ಯವಾಗಿದೆ.

ಇದು ನಾನು ಕಂಡ 'ಬಿಗ್ ಬಾಸ್'

''ಮೊದಲನೇ ವಾರ ಪ್ರಥಮ್ ಮನೆಗೆ ಬಂದಾಗ, ಸದಸ್ಯರೆಲ್ಲ ಇವನ ಮಾತಿಗೆ ಗೇಲಿ ಮಾಡುತ್ತಿದ್ದರು. ಆದರೆ, ಈಗ ಸೆಲೆಬ್ರಿಟಿ ಗಳೆನಿಸಿಕೊಂಡವರು ಪ್ರಥಮ್ ಬಗ್ಗೆ ಮಾತಾನಾಡುತ್ತಿದ್ದಾರೆ. ಅವನ ಬಗ್ಗೆ ಹೊಗಳುತ್ತಿದ್ದಾರೆ.
ಇದೆಲ್ಲ ಗಮನಿಸಿದರೆ, ಉಪೇಂದ್ರ ಅವರ ಹಾಡು ನೆನಪಾಗ್ತಿತ್ತು.. ಎಲ್ರ ಕಾಲೆಳಿತದೆ ಕಾಲ....
ಇದು ನಾನು ಕಂಡ ಬಿಗ್ ಬಾಸ್..!'' ಅಂತ ಫೇಸ್ ಬುಕ್ ನಲ್ಲಿ ಸಂತೋಷ್ ಎಂಬುವರು ಬರೆದುಕೊಂಡಿದ್ದಾರೆ.

English summary
Bigg Boss Kannada 4 Viewers have taken their Facebook Account express their view on Contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada