For Quick Alerts
  ALLOW NOTIFICATIONS  
  For Daily Alerts

  ಕ್ಯಾಪ್ಟನ್ ಆಗಿದ್ದ 'ಕಿರಿಕ್' ಕೀರ್ತಿ ಬಗ್ಗೆ 'ಬಿಗ್ ಬಾಸ್' ಸ್ಪರ್ಧಿಗಳ ಅಭಿಪ್ರಾಯವೇನು?

  By Harshitha
  |

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಮೊದಲ ವಾರ ಕ್ಯಾಪ್ಟನ್ ಆಗಿದ್ದ 'ಕಿರಿಕ್' ಕೀರ್ತಿ ಅಲಿಯಾಸ್ ಕೀರ್ತಿ ಕುಮಾರ್ ವಿರುದ್ಧ 'ಒಳ್ಳೆ ಹುಡುಗ' ಪ್ರಥಮ್ ಕ್ಯಾತೆ ತೆಗೆದಿದ್ದರು. ಕೀರ್ತಿ ನಾಯಕತ್ವವನ್ನ ಖಂಡಿಸಿದ್ದರು. ಹಣೆಗೆ ಕಪ್ಪು ಸ್ಟಿಕ್ಕರ್ ಅಂಟಿಸಿಕೊಂಡರು ಹೋರಾಟ ಮಾಡಿದ್ದರು.

  ಅಸಲಿಗೆ, ಪ್ರಥಮ್ ಗೆ ಮಾತ್ರ ಕೀರ್ತಿ ಕ್ಯಾಪ್ಟನ್ ಶಿಪ್ ಬಗ್ಗೆ ಕಂಪ್ಲೇಂಟ್ ಇತ್ತಾ.? ಅಥವಾ, 'ಬಿಗ್ ಬಾಸ್' ಮನೆಯ ಬಾಕಿ ಸದಸ್ಯರಿಗೂ ಕ್ಯಾಪ್ಟನ್ ಕೀರ್ತಿ ಬಗ್ಗೆ ಬೇಸರ ಆಗಿತ್ತಾ? ['ಬಿಗ್ ಬಾಸ್ ಕನ್ನಡ-4' ಕುರಿತ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ]

  ಈ ಡೌಟ್ ಮೇಲೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ, ಕೀರ್ತಿ ಕ್ಯಾಪ್ಟನ್ ಶಿಪ್ ಬಗ್ಗೆ ಕಿಚ್ಚ ಸುದೀಪ್ ಅಭಿಪ್ರಾಯ ಸಂಗ್ರಹಿಸಿದರು. ಆಗ ಎಲ್ಲರ ಬಾಯಿಂದ ಬಂದ ನುಡಿಮುತ್ತುಗಳು ಇಲ್ಲಿವೆ...

  'ಕ್ಯಾಪ್ಟನ್ ಶಿಪ್' ಬಗ್ಗೆ ಕೀರ್ತಿ ಏನಂದ್ರು?

  'ಕ್ಯಾಪ್ಟನ್ ಶಿಪ್' ಬಗ್ಗೆ ಕೀರ್ತಿ ಏನಂದ್ರು?

  ''ನನಗೆ ತುಂಬಾ ಕಷ್ಟ ಅನಿಸಿದ್ದು ಪ್ರಥಮ್ ರವರನ್ನ ಮೇನ್ಟೇನ್ ಮಾಡುವುದು. ಏನೇ ಮಾಡಿದ್ರೂ, ತಿರುಗಿ ಬೀಳ್ತಿದ್ರು. ಪದೇ ಪದೇ ಅನಾಗರಿಕ, ಅಯೋಗ್ಯ ಅಂತ ಪ್ರಥಮ್ ಹೇಳ್ತಿದ್ದಾಗ ಪಿತ್ತ ನೆತ್ತಿಗೇರ್ಬಿಡ್ತಿತ್ತು'' ಎಂದರು ಕೀರ್ತಿ ಕುಮಾರ್

  ಹೋರಾಟ 'ಕ್ಯಾಪ್ಟನ್' ಕೀರ್ತಿ ವಿರುದ್ಧ ಮಾತ್ರ!

  ಹೋರಾಟ 'ಕ್ಯಾಪ್ಟನ್' ಕೀರ್ತಿ ವಿರುದ್ಧ ಮಾತ್ರ!

  ''ನಾನು ಸ್ಪಷ್ಟವಾಗಿ ಹೇಳುತ್ತೇನೆ, ನನ್ನ ಹೋರಾಟ ಇದ್ದದ್ದು ಕಿರಿಕ್ ಕೀರ್ತಿ ವಿರುದ್ಧ ಅಲ್ಲ, ಅವರ ನಾಯಕತ್ವದ ವಿರುದ್ಧ ಮಾತ್ರ. ಅವರ ನಾಯಕತ್ವ ಮಾತ್ರ ನಾನು ಖಂಡಿಸಿದ್ದೇನೆ. ಅವರ ಮೇಲೆ ನನಗೆ ವೈಯುಕ್ತಿಕ ದ್ವೇಷ ಇಲ್ಲ'' ಅಂತ ಸ್ಪಷ್ಟಪಡಿಸಿದರು ಪ್ರಥಮ್

  ದೊಡ್ಡ ಗಣೇಶ್ ರವರ ದೊಡ್ಡ ಮಾತು

  ದೊಡ್ಡ ಗಣೇಶ್ ರವರ ದೊಡ್ಡ ಮಾತು

  ''ಕಿರಿಕ್ ಕೀರ್ತಿ ಅಂದ ತಕ್ಷಣ ಇವನು ಯಾರಪ್ಪಾ? ಬಹುಶಃ ಇವನು ಕೋಪಿಷ್ಟ ಇರಬೇಕು. ಅದಕ್ಕೆ ಇವನಿಗೆ 'ಬಿಗ್ ಬಾಸ್' ಕ್ಯಾಪ್ಟನ್ ಮಾಡಿದ್ದಾರೆ ಅಂದುಕೊಂಡಿದ್ದೆ. ಆದ್ರೆ, ಚೆನ್ನಾಗಿ ನಿಭಾಯಿಸಿದ್ದಾರೆ. 'ಬಿಗ್ ಬಾಸ್' ಮನೆಗೆ ಬಂದ ತಕ್ಷಣ 'ಆಯುಧ ಪೂಜೆ' ಹಬ್ಬ ಬಂತು. ನಾವು ಬಡ ಕುಟುಂಬದಿಂದ ಬಂದವರು. ಹಬ್ಬ-ಹೊಸ ಬಟ್ಟೆ ಅಂದ್ರೆ ಆಸೆ. ಅವತ್ತು ಇಡೀ ದಿನ ಕೀರ್ತಿ ನಮಗಾಗಿ 'ಬಿಗ್ ಬಾಸ್' ಹತ್ರ ಬಟ್ಟೆಗಳನ್ನ ಕೇಳ್ತಿದ್ರು. ಹಬ್ಬದ ಸಂದರ್ಭದಲ್ಲಿ ಒಳ್ಳೆ ವಾತಾವರಣ ಸೃಷ್ಟಿ ಮಾಡಿದರು ಕೀರ್ತಿ. ನನ್ನ ಪಾಲಿಗೆ ಅವರು ಸಚಿನ್ ಅಲ್ಲ, ಎಂ.ಎಸ್.ಧೋನಿ. ಯಾಕಂದ್ರೆ, 2007ರಲ್ಲಿ ವರ್ಲ್ಡ್ ಕಪ್ ಗೆಲ್ಲಬೇಕಾದರೆ, ಸೀನಿಯರ್ಸ್ ನ ಡ್ರಾಪ್ ಮಾಡಿದರು. ಅದಕ್ಕೆ ಕೀರ್ತಿ ಬಗ್ಗೆ ನನಗೆ ಗೌರವ ಇದೆ. ಹೀ ಈಸ್ ದಿ ರಿಯಲ್ ಚಾಂಪಿಯನ್ ಫಾರ್ ಮಿ'' - ದೊಡ್ಡ ಗಣೇಶ್

  'ಕ್ಯಾಪ್ಟನ್' ಕೀರ್ತಿ ಬಗ್ಗೆ ಚೈತ್ರ ಕಾಮೆಂಟ್

  'ಕ್ಯಾಪ್ಟನ್' ಕೀರ್ತಿ ಬಗ್ಗೆ ಚೈತ್ರ ಕಾಮೆಂಟ್

  ''ಅಷ್ಟೂ ಜನರನ್ನ ಸೇರಿಸುವುದು ಮೊದಲ ವಾರದಲ್ಲಿ ತುಂಬಾ ಕಷ್ಟ. ಅದನ್ನ ಕೀರ್ತಿ ತುಂಬಾ ಚೆನ್ನಾಗಿ ಮಾಡಿದರು. ಆದ್ರೆ, ಸಮರ್ಪಣೆ ಟಾಸ್ಕ್ ನಲ್ಲಿ ಸಂಜನಾ ರವರ ಸಮರ್ಪಣೆಯನ್ನ ಬೆಸ್ಟ್ ಅಂತ ಹೇಳಿದ್ದು ನನಗೆ ಸರಿ ಕಾಣಲಿಲ್ಲ. ಯಾಕಂದ್ರೆ, ಸಂಜನಾ ಕಡೆಯಿಂದ ಅದು ಆಗಿದ್ದು ಸಹಾಯ, ಸಮರ್ಪಣೆ ಅಲ್ಲ ಅನ್ನೋದು ನನ್ನ ಭಾವನೆ'' - ಚೈತ್ರ

  ನಿರಂಜನ್ ಏನು ಹೇಳುತ್ತಾರೆ?

  ನಿರಂಜನ್ ಏನು ಹೇಳುತ್ತಾರೆ?

  ''ಕ್ಯಾಪ್ಟನ್ ಆಗಿ ಕೀರ್ತಿ ಚೆನ್ನಾಗಿ ನಿಭಾಯಿಸಿದರು. ಕೆಲವು ಕಡೆ ಅವರ ನಿರ್ಧಾರಗಳು ತೀರಾ ಪರ್ಸನಲ್ ಆಗಿತ್ತು ಅಂತ ಅನಿಸ್ತು'' - ನಿರಂಜನ್ ದೇಶಪಾಂಡೆ

  ಶಾಲಿನಿ

  ಶಾಲಿನಿ

  ''ಸುಧಾರಿಸಿಕೊಳ್ಳಬಹುದಿತ್ತು. ನಾವೆಲ್ಲಾ ಮೊದಲೇ ಒದ್ದಾಡುತ್ತಿದ್ವಿ. ಅದರ ಮೇಲೆ ಶಿಕ್ಷೆ ಅಂತ ನಮ್ಮನ್ನೆಲ್ಲಾ ಹೊರಗೆ ಕೊರಿಸಿದ್ದು ಸರಿಯಲ್ಲ ಅನಿಸ್ತು'' - ಶಾಲಿನಿ

  ಮಾಳವಿಕಾ ಅವಿನಾಶ್

  ಮಾಳವಿಕಾ ಅವಿನಾಶ್

  ''ಒಬ್ಬ ಕ್ಯಾಪ್ಟನ್ ಆಗಿ ಏನೇನು ಮಾಡಬೇಕೋ, ಅದನ್ನೆಲ್ಲಾ ಸರಿಯಾಗಿ ಮಾಡಿದ್ದಾರೆ. ಆದ್ರೆ, ಪ್ರಥಮ್ ವಿಚಾರದಲ್ಲಿ ಎಲ್ಲವನ್ನೂ ವೈಯುಕ್ತಿಕವಾಗಿ ತೆಗೆದುಕೊಂಡರು. 'ಗೇಮ್ ಬಿಟ್ಟು ಹೋಗ್ತೀನಿ' ಅಂದಿದ್ದು ಒಬ್ಬ ಆಟಗಾರನ ಲಕ್ಷಣ ಅಲ್ಲ. ಇನ್ನೂ ಕ್ಯಾಪ್ಟನ್ ಆದವನು ಆ ಮಾತನ್ನ ಹೇಳುವ ಹಾಗೇ ಇಲ್ಲ'' - ಮಾಳವಿಕಾ ಅವಿನಾಶ್

  ಕಾರುಣ್ಯ ರಾಮ್

  ಕಾರುಣ್ಯ ರಾಮ್

  ''ಕ್ಯಾಪ್ಟನ್ ಆಗಿ ಹೀ ಈಸ್ ಫೈನ್'' - ಕಾರುಣ್ಯ ರಾಮ್

  ಭುವನ್ ಪೊನ್ನಣ್ಣ

  ಭುವನ್ ಪೊನ್ನಣ್ಣ

  ''ಹೀ ಡಿಡ್ ಎ ಪರ್ಫೆಕ್ಟ್ ಜಾಬ್. ಫ್ರೆಂಡ್ ಶಿಪ್ ನೋಡದೆ ಎಲ್ಲರನ್ನ ಒಂದೇ ರೀತಿ ನಡೆಸಿಕೊಂಡಿದ್ದಾರೆ. ಲೀಡರ್ ಆಗಿ ಎಲ್ಲರ ಕೈಯಲ್ಲೂ ಚೆನ್ನಾಗಿ ಕೆಲಸ ಮಾಡಿಸಿದ್ದಾರೆ'' - ಭುವನ್ ಪೊನ್ನಣ್ಣ

  ವಾಣಿಶ್ರೀ

  ವಾಣಿಶ್ರೀ

  ''ಗೊತ್ತಿಲ್ಲದೇ ಇರುವ ವ್ಯಕ್ತಿಗಳನ್ನ ಮೊದಲ ವಾರ ನಿಭಾಯಿಸುವುದು ತುಂಬಾ ಕಷ್ಟದ ಕೆಲಸ. ಅದರಲ್ಲಿ ಅವರು ಇಷ್ಟ ಆದರು. ಆದ್ರೆ, ಒಂದು ಗ್ರೂಪ್ ಗೆ ಮಾತ್ರ ಅವರು ಸಪೋರ್ಟ್ ಮಾಡ್ತಿದ್ರು. ಅದು ನನಗೆ ಇಷ್ಟ ಆಗ್ಲಿಲ್ಲ'' - ವಾಣಿಶ್ರೀ

  ಸಂಜನಾ

  ಸಂಜನಾ

  ''ಕರ್ತವ್ಯವನ್ನ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಟಾಸ್ಕ್ ಮಾಡುವಾಗ ಕೂಡ ಎನ್ಕರೇಜ್ ಮಾಡಿದ್ದಾರೆ. ಆದ್ರೆ ಅವರು ಗೊತ್ತಿಲ್ಲದೇ ಮಾತನಾಡುತ್ತಾರೆ. ಅದು ನನಗೆ ಇಷ್ಟ ಆಗಲಿಲ್ಲ'' - ಸಂಜನಾ

  ರೇಖಾ

  ರೇಖಾ

  ''ತುಂಬಾ ಸಾಫ್ಟ್ ಕ್ಯಾಪ್ಟನ್. ಕಿರುಚಾಡುವುದು, ರೇಗಾಡುವುದು ಮಾಡಲಿಲ್ಲ'' - ರೇಖಾ

  ಕಾವ್ಯ ಶಾಸ್ತ್ರಿ

  ಕಾವ್ಯ ಶಾಸ್ತ್ರಿ

  ''ನನಗೆ ಅವರ ಕ್ಯಾಪ್ಟನ್ಸಿ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ'' - ಕಾವ್ಯ ಶಾಸ್ತ್ರಿ

  ಶೀತಲ್ ಶೆಟ್ಟಿ

  ಶೀತಲ್ ಶೆಟ್ಟಿ

  ''ಟಾಸ್ಕ್ ಕಂಪ್ಲೀಟ್ ಮಾಡೋಕೆ ಕ್ಯಾಪ್ಟನ್ ಆಗಿ ಅವರು ಸಪೋರ್ಟ್ ಮಾಡಿದ ರೀತಿ ಇಷ್ಟ ಆಯ್ತು. ಪ್ರಥಮ್ ಬಗ್ಗೆ ಅಷ್ಟೊಂದು ರಿಯಾಕ್ಟ್ ಆಗುವ ಅವಶ್ಯಕತೆ ಇರ್ಲಿಲ್ಲ'' - ಶೀತಲ್ ಶೆಟ್ಟಿ

  ಮೋಹನ್

  ಮೋಹನ್

  ''ಇಷ್ಟು ಚಿಕ್ಕವಯಸ್ಸಿಗೆ ಅವರಿಗೆ ಮೆಚ್ಯೂರಿಟಿ ಇರುವುದಕ್ಕೆ ನಾನು ಅಭಿನಂದಿಸುತ್ತೇನೆ'' - ಮೋಹನ್

  English summary
  Bigg Boss Kannada 4, Week 1 : All Contestants of 'Bigg Boss Kannada 4' expressed theri opinion on Keerthi Kumar's Captainship during 'Varada Kathe Kicchana Jothe'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X