»   » ಕಿಚ್ಚ ಸುದೀಪ್ ಮುಂದೆ ಎರಡು ಬಾರಿ ಕ್ಷಮೆ ಕೇಳಿದ ದೊಡ್ಡ ಗಣೇಶ್.!

ಕಿಚ್ಚ ಸುದೀಪ್ ಮುಂದೆ ಎರಡು ಬಾರಿ ಕ್ಷಮೆ ಕೇಳಿದ ದೊಡ್ಡ ಗಣೇಶ್.!

Posted By:
Subscribe to Filmibeat Kannada

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು, ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹೆಮ್ಮೆಯ ಕನ್ನಡಿಗ ದೊಡ್ಡ ಗಣೇಶ್ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆ ಮನ ತಲುಪಿದ್ದಾಗಿದೆ.

ದೊಡ್ಡ ಗಣೇಶ್ ರವರ ನೇರ ನುಡಿ ಪ್ರೇಕ್ಷಕರಿಗೆ ಇಷ್ಟವಾಗಿರಬಹುದು. ಆದ್ರೆ, ಶೀತಲ್ ಶೆಟ್ಟಿ ಸೇರಿದಂತೆ 'ಬಿಗ್ ಬಾಸ್' ಮನೆಯ ಕೆಲ ಸದಸ್ಯರಿಗೆ ದೊಡ್ಡ ಗಣೇಶ್ ರವರ ಮಾತಿನ ಶೈಲಿ ಸುತರಾಂ ಹಿಡಿಸಿಲ್ಲ. ಪರಿಣಾಮ ದೊಡ್ಡ ಗಣೇಶ್ ಬೆನ್ನ ಹಿಂದೆ ಗುಸು-ಗುಸು, ಪಿಸು-ಪಿಸು ಶುರು ಮಾಡಿದ್ದಾರೆ. [ಕ್ರಿಕೆಟರ್ ದೊಡ್ಡ ಗಣೇಶ್ ಗೆ ಹೊಸ ಬಯಕೆ: ಏನು ಅಂತ ಒಸಿ ಕೇಳಿ..]

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮಿಸಿರುವ ಕಿಚ್ಚ ಸುದೀಪ್, ವಿನಾಕಾರಣ ದೊಡ್ಡ ಗಣೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ ಮತ್ತು ರೇಖಾ ರವರಿಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಪ್ರಶ್ನೆಗಳ ಬಾಣ ಸುರಿಸಿದರು.

ಆಗಲೂ, ಶೀತಲ್ ಶೆಟ್ಟಿ ಮತ್ತು ಕಾವ್ಯ ಶಾಸ್ತ್ರಿ ತಮ್ಮನ್ನ ತಾವು ಸಮರ್ಥಿಸಿಕೊಳ್ಳುವುದನ್ನು ಮರೆಯಲಿಲ್ಲ. ಅವರೊಂದಿಗೆ ವಾದ ಮಾಡಲು ಇಚ್ಛಿಸದ ದೊಡ್ಡ ಗಣೇಶ್, ಕಿಚ್ಚ ಸುದೀಪ್ ಮುಂದೆ ಎರಡು ಬಾರಿ ಕ್ಷಮೆ ಕೋರಿ ದೊಡ್ಡತನ ಮೆರೆದರು.!

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್, ದೊಡ್ಡ ಗಣೇಶ್, ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ, ರೇಖಾ ನಡುವಿನ ಸಂಭಾಷಣೆ ಇಲ್ಲಿದೆ. ಎಲ್ಲವನ್ನ ಅವರ ಮಾತುಗಳಲ್ಲೇ ಓದಿರಿ....

ಟಾಪಿಕ್ ಎತ್ತಿದ ಕಿಚ್ಚ ಸುದೀಪ್.!

''ಕಾವ್ಯ, ಶೀತಲ್, ರೇಖಾ...ಮೂರು ಜನ ಕೂತ್ಕೊಂಡು ಸಂಜನಾ ಮತ್ತು ದೊಡ್ಡ ಗಣೇಶ್ ಬಗ್ಗೆ ಕಾಮೆಂಟ್ ಮಾಡ್ತಿದ್ರಿ. ಅಲ್ಲಿ ಸಂಜನಾ ಹೇಳ್ತಾಯಿದ್ದದ್ದು, 'ಬೆಳಗ್ಬೆಳಗ್ಗೆ ಹಣ್ಣು ತಿಂದು ಅಭ್ಯಾಸ ಇಲ್ಲ. ಚಪಾತಿ ಬೇಕು' ಅಂತ ತಮ್ಮ ಬೇಸರವನ್ನ ದೊಡ್ಡ ಗಣೇಶ್ ಬಳಿ ವ್ಯಕ್ತ ಪಡಿಸುತ್ತಿದ್ದರು. ಆದ್ರೆ ನೀವು ಮೂರು ಜನ ಲವಿಂಗ್ ಏರಿಯಾದಲ್ಲಿ ಕೂತ್ಕೊಂಡು ಅರ್ಥ ಮಾಡಿಕೊಂಡಿದ್ದು, 'ದೊಡ್ಡ ಗಣೇಶ್ ಸಂಜನಾ ಬೆನ್ನು ಹಿಂದೆ ಬಿದ್ದಿದ್ದಾರೆ. ಅದನ್ನ ಸಹಿಸಿಕೊಳ್ಳುವುದಕ್ಕೆ ಸಂಜನಾ ಕೈಯಲ್ಲಿ ಆಗ್ತಿಲ್ಲ' ಅಂತ. ಅಲ್ಲಿ ಅವರಿಬ್ಬರು ಮಾತನಾಡುತ್ತಿದ್ದ ಕನ್ಸರ್ನ್ ಬೇರೆ. ಮೂರು ಜನ ಜಡ್ಜ್ ಮೆಂಟಲ್ ಆದ್ರಿ ಅಂತ ಅನಿಸ್ಲಿಲ್ವಾ?'' ಅಂತ ಸುದೀಪ್ ಪ್ರಶ್ನೆ ಮಾಡಿದರು.

'ಸ್ಪರ್ಶ' ರೇಖಾ ಕೊಟ್ಟ ಉತ್ತರ ಏನು?

''ನಾನು ಸಂಜನಾಗೆ ಅಡ್ವೈಸ್ ಮಾಡಿದ್ದೆ. ದೊಡ್ಡ ಗಣೇಶ್ ರವರು ಮಾತನಾಡುವ ಶೈಲಿ ಇಷ್ಟ ಆಗ್ತಿರ್ಲಿಲ್ಲ. ಎಲ್ಲೋ ಒಂದು ಕಡೆ ಒಪೀನಿಯನ್ ಫಾರ್ಮ್ ಆಗ್ತಾ ಹೋಯ್ತು. ಅದನ್ನ ನಾನು ಒಪ್ಪಿಕೊಳ್ಳುತ್ತೇನೆ'' ಅಂತ ನಟಿ ರೇಖಾ ಹೇಳಿದರು. [ಇಂಗ್ಲೆಂಡ್ ನಲ್ಲಿ 'ಕೂಲಿ' ಮಾಡಿದ ಸತ್ಯ ಬಾಯ್ಬಿಟ್ಟ ದೊಡ್ಡ ಗಣೇಶ್]

ಕಾವ್ಯ ಶಾಸ್ತ್ರಿ ಕೊಟ್ಟ ಸ್ಪಷ್ಟನೆ

''ಸಂಜನಾ ರಿಯಾಕ್ಷನ್ 'ತುಂಬಾ ಸಹಿಸಿಕೊಳ್ಳಲು ಆಗ್ತಿರ್ಲಿಲ್ಲ' ಅನ್ನೋ ತರಹ ಇತ್ತು. ಎಲ್ಲರೂ ಹಾಗೆ ಹೇಳಿದ್ದರಿಂದ ನನಗೆ ಹಾಗೆ ಅನಿಸ್ತೋ ಗೊತ್ತಿಲ್ಲ. ಆದ್ರೆ, ನಂತರ ನಾನು ಈ ವಿಚಾರದ ಬಗ್ಗೆ ದೊಡ್ಡ ಗಣೇಶ್ ಜೊತೆ ಮಾತನಾಡಿದ್ದೇನೆ. ಅವರಿಗೆ ಸ್ಪಷ್ಟನೆ ಕೊಟ್ಟಿದ್ದೇನೆ. ಅವರಿಂದ ನನಗೆ ವೈಯುಕ್ತಿಕವಾಗಿ ಯಾವುದೇ ತೊಂದರೆ ಆಗಿಲ್ಲ'' ಅಂತ ಕಾವ್ಯ ಶಾಸ್ತ್ರಿ ಹೇಳಿದರು.

ಸಮರ್ಥಿಸಿಕೊಂಡ ಶೀತಲ್ ಶೆಟ್ಟಿ

''ಒಂದು ಹೆಣ್ಮಗಳು ಮಾತನಾಡಬೇಕಾದ್ರೆ, ಒಂದು ಕಮ್ಫರ್ಟ್ ಝೋನ್ ಕ್ರಿಯೇಟ್ ಆಗಬೇಕು. ಇಲ್ಲಾಂದ್ರೆ, ಆ ಒಂದು ಟೈಮ್ ನಲ್ಲಿ ಇರಿಟೇಟ್ ಆಗುತ್ತೆ. ಸಿಟ್ಟು ಕೂಡ ಬರುತ್ತೆ. ದೊಡ್ಡ ಗಣೇಶ್ ಆಡುವ ಮಾತುಗಳಿಂದ ತುಂಬಾ ಹಿಂಸೆ ಆಗುತ್ತೆ. ಅದ್ರಲ್ಲೂ ಸಂಜನಾ ವಿಚಾರವಾಗಿ, ಪ್ರತಿಬಾರಿ ಸಂಜನಾ ಓಡಾಡುವಾಗ ದೊಡ್ಡ ಗಣೇಶ್ ರವರದ್ದೊಂದು ಕಾಮೆಂಟ್ ಇದ್ದೇ ಇರುತ್ತೆ. ಯಾರೊಟ್ಟಿಗೂ ಅಷ್ಟೊಂದು ಮಾತನಾಡದೇ ಇರುವ ದೊಡ್ಡ ಗಣೇಶ್, ಬರೀ ಸಂಜನಾ ಜೊತೆ ಮಾತ್ರ ಮಾತನಾಡಿದಾಗ ಅದು ಅವರಾಗಿ ಅವರೇ ನಮಗೆ ಕ್ರಿಯೇಟ್ ಮಾಡಿಕೊಟ್ಟ ಒಪೀನಿಯನ್ ಹೊರತು ನಾವು ಸೃಷ್ಟಿ ಮಾಡಿದ್ದು ಅಲ್ಲ'' ಅಂತ ಸಮರ್ಥಿಸಿಕೊಂಡರು ಶೀತಲ್ ಶೆಟ್ಟಿ.

ದೊಡ್ಡ ಗಣೇಶ್ ಹಾಗೆ ಅಲ್ಲ!

''ನಿನ್ನೆ ದೊಡ್ಡ ಗಣೇಶ್ ಜೊತೆ ಮಾತನಾಡಿದಾಗ ದೊಡ್ಡ ಗಣೇಶ್ ಹಾಗೆ ಅಲ್ಲ ಅಂತ ನನಗೆ ಅನಿಸಿದ್ದು ಸತ್ಯ'' ಅಂತ ಹೇಳಿದರು ನಟಿ ರೇಖಾ

ಸಂಜನಾ ಏನಂತಾರೆ?

''ಒಂದು ರೇಂಜಿಗೆ ಕ್ಲೋಸ್ ಆದ್ಮೇಲೆ ಅವರ ಮಾತಿನಿಂದ ಸ್ವಲ್ಪ ಮುಜುಗರ ಆಗ್ತಿತ್ತು. ನಾನು ಶಾರ್ಟ್ ಡ್ರೆಸ್ ಹಾಕೋದ್ರಿಂದ, ಅದರ ಬಗ್ಗೆ ಕಾಮೆಂಟ್ ಜಾಸ್ತಿ ಆಗಿತ್ತು. ನಾನು ಅದನ್ನ ಇಗ್ನೋರ್ ಮಾಡುತ್ತಲೇ ಬಂದೆ. ಅವರು ಆ ದೃಷ್ಟಿಯಲ್ಲಿ ನೋಡಿದ್ದಾರಾ, ಇಲ್ವಾ ಗೊತ್ತಿಲ್ಲ. ಆದ್ರೆ, ಆ ತರಹ ಅನಿಸಿದ್ದು ನಿಜ'' - ಸಂಜನಾ

ಕ್ಷಮೆ ಕೇಳಿದ ದೊಡ್ಡ ಗಣೇಶ್

''ನಾನು ಸ್ವಲ್ಪ ಫ್ರೆಂಡ್ಲಿ ಆಗಿ ಮೂವ್ ಮಾಡಿದೆ. ಕೆಟ್ಟ ದೃಷ್ಟಿಯಿಂದ ನಾನು ನೋಡಿಲ್ಲ. ನನ್ನಿಂದ ತೊಂದರೆ ಆಗಿದ್ರೆ ದಯವಿಟ್ಟು ಕ್ಷಮಿಸಿ. ಇನ್ಮುಂದೆ ಹಾಗೆ ನಡೆದುಕೊಳ್ಳುವುದಿಲ್ಲ. ನನಗೆ ಈಗ ಯಾರು ಏನು ಅಂತ ಗೊತ್ತಾಯ್ತು'' ಎಂದರು ಕ್ರಿಕೆಟರ್ ದೊಡ್ಡ ಗಣೇಶ್

ಒಳ್ಳೆ ಕುಟುಂಬದಿಂದ ಬಂದವರೇ.!

''ನಾವು ಒಳ್ಳೆ ಕುಟುಂಬದಿಂದಲೇ ಬಂದಿರುವುದು. ಇದುವರೆಗೂ ನಮ್ಮ ಮಕ್ಕಳನ್ನ ಒಂದು ದಿನ ಕೂಡ ಹೊಡೆದಿಲ್ಲ. ನಾನು ಅವರೆಲ್ಲರ ಬಗ್ಗೆ ಹೇಳುವುದಾದರೆ ಸಾವಿರ ಹೇಳ್ಬಹುದು. ಆದ್ರೆ, ಈಗ ಬೇಡ'' - ದೊಡ್ಡ ಗಣೇಶ್

ಕೈತುತ್ತು ವಿಚಾರವಾಗಿಯೂ ಕ್ಷಮೆ ಕೇಳಿದರು.!

ಕೈತುತ್ತು ವಿಚಾರದಲ್ಲೂ ದೊಡ್ಡ ಗಣೇಶ್ ಬೇಸರಗೊಂಡಿದ್ದರಿಂದ, ''ಕೈತುತ್ತಿಗೆ ಅದರದ್ದೇ ಆದ ಬೆಲೆ ಇದೆ. ನನಗೆ ನನ್ನ ಅಮ್ಮನ ಕೈತುತ್ತು ತಿಂದು ಅಭ್ಯಾಸ. ಹೀಗಾಗಿ ನೆನಪಾಯ್ತು. ಅದಕ್ಕೆ ಎಮೋಷನಲ್ ಆದೆ. ಅದರ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ'' ಎಂದರು.

English summary
Bigg Boss Kannada 4, Week 1 : Former Indian Fast Bowler Dodda Ganesh apologized in front of Sudeep during 'Varada Kathe Kicchana Jothe'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada