»   » 'ಒಳ್ಳೆ ಹುಡುಗ' ಪ್ರಥಮ್ ಬಗ್ಗೆ ದೊಡ್ಡ ಗಣೇಶ್ ಮಾಡಿದ ಕಾಮೆಂಟ್ ಏನು.?

'ಒಳ್ಳೆ ಹುಡುಗ' ಪ್ರಥಮ್ ಬಗ್ಗೆ ದೊಡ್ಡ ಗಣೇಶ್ ಮಾಡಿದ ಕಾಮೆಂಟ್ ಏನು.?

Posted By:
Subscribe to Filmibeat Kannada

''ಆರುವರೆ ಕೋಟಿ ಜನರಲ್ಲಿ ಇವನನ್ನ (ಪ್ರಥಮ್) ಎಲ್ಲಿಂದ ಹಿಡ್ಕೊಂಡ್ ಬಂದ್ರೋ, ಗೊತ್ತಿಲ್ಲ'' - ಹೀಗಂತ, ಹೇಳಿದವರು ಮತ್ಯಾರೂ ಅಲ್ಲ, ಕ್ರಿಕೆಟರ್ ದೊಡ್ಡ ಗಣೇಶ್.

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ತಕ್ಷಣ ದೊಡ್ಡ ಗಣೇಶ್ ಕಣ್ಣಿಗೆ 'ಕಳ್ಳ'ನಾಗಿ ಕಾಣಿಸಿಕೊಂಡಿದ್ದಾರೆ 'ಒಳ್ಳೆ ಹುಡುಗ' ಪ್ರಥಮ್. ಇದೇ ಕಾರಣಕ್ಕೆ, ಪ್ರಥಮ್ ಕೊಟ್ಟ ರೆಡ್ ಬ್ಯಾಂಡ್ ನ ದೊಡ್ಡ ಗಣೇಶ್ ಸ್ವೀಕರಿಸಲಿಲ್ಲವಂತೆ. ['ಬಿಗ್ ಬಾಸ್ ಕನ್ನಡ-4' ಕುರಿತ ಎಲ್ಲಾ ಅಪ್ ಡೇಟ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ]

ಪ್ರಥಮ ನೋಟಕ್ಕೆ ಪ್ರಥಮ್ ಹೇಗೆ ಕಂಡರು ಅಂತ ದೊಡ್ಡ ಗಣೇಶ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟರು. ಓವರ್ ಟು ದೊಡ್ಡ ಗಣೇಶ್.....

ಎಲ್ಲಿಂದ ಹಿಡ್ಕೊಂಡ್ ಬಂದ್ರು?

''ಆರುವರೆ ಕೋಟಿ ಜನರಲ್ಲಿ ಪ್ರಥಮ್ ರನ್ನ 'ಬಿಗ್ ಬಾಸ್' ಎಲ್ಲಿಂದ ಎಳೆದುಕೊಂಡು ಬಂದರು ಅಂತ ಗೊತ್ತಿಲ್ಲ. 'ಬಿಗ್ ಬಾಸ್' ಮನೆಗೆ ಕಾಲಿಟ್ಟ ತಕ್ಷಣ ಎಲ್ಲವನ್ನ ತೋರಿಸಿ, ಕೈಗೆ ಬ್ಯಾಂಡ್ ಕೊಟ್ಟರು. ಈ ಬ್ಯಾಂಡ್ ನ 'ಬಿಗ್ ಬಾಸ್' ಕೊಟ್ಟಿದ್ದಾರೆ ಅಂತ ಖಂಡಿತ ನನಗೆ ಗೊತ್ತಿರ್ಲಿಲ್ಲ. ಗೊತ್ತಿದ್ರೆ, ಖಂಡಿತವಾಗ್ಲೂ ಹಾಕೊಳ್ಳುತ್ತಿದ್ದೆ'' - ದೊಡ್ಡ ಗಣೇಶ್ [ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಅವರಿಂದ ಮಂಗಾಟ]

ಕಳ್ಳತನ ಮಾಡಿಕೊಂಡು ಬಂದಿದ್ರೆ.?

''ಯಾರೋ ಕಳ್ಳತನ ಮಾಡಿಕೊಂಡು ಬಂದ್ಬಿಟ್ಟಿರ್ತಾರೆ. ಅದನ್ನ ನಾವು ಹಾಕೊಂಡ್ರೆ ಹೇಗೆ? ಪ್ರಥಮ್ ಗೊತ್ತಿಲ್ಲದ ಹಾಗೆ ಸೂಟ್ ಕೇಸ್ ನಲ್ಲಿ ಇಟ್ಕೊಂಡು ಬಂದು ಎಲ್ಲರಿಗೂ ಕೊಡ್ತಿದ್ದಾನೆ ಅನಿಸ್ತು ಮೊದಲು'' - ದೊಡ್ಡ ಗಣೇಶ್

ಹಾಕೊಳ್ಬೇಕಾ? ಬೇಡ್ವಾ?

''ಕಳ್ಳನ ಜೊತೆ ಹೋಗಿ ಕದ್ದರೆ ನಾವೂ ಕಳ್ಳರೇ. ಇದೇ ಕಾರಣಕ್ಕೆ, ಇದನ್ನ ಹಾಕೊಳ್ಳೋದಾ, ಬೇಡವಾ? ಅಂತ ಅನಿಸಿತ್ತು ಮೊದಲು'' - ದೊಡ್ಡ ಗಣೇಶ್

ಪ್ರಥಮ್ ರನ್ನ ನೋಡಿದ್ರೆ ಡೌಟ್ ಆಯ್ತು!

''ರೂಲ್ಸ್ ಬುಕ್ ನಲ್ಲೂ ಚೆಕ್ ಮಾಡಿದೆ. ಬ್ಯಾಂಡ್ ಬಗ್ಗೆ ಏನೂ ಇರ್ಲಿಲ್ಲ. ಪ್ರಥಮ್ ರನ್ನ ನೋಡಿದಾಗ ಸ್ವಲ್ಪ ಡೌಟ್ ಆಯ್ತು. ಅದಕ್ಕೋಸ್ಕರ ನಾನು ತೆಗೆದುಕೊಳ್ಳಲಿಲ್ಲ'' - ದೊಡ್ಡ ಗಣೇಶ್

English summary
Bigg Boss Kannada 4, Week 1 : Former Indian Fast Bowler Dodda Ganesh spoke about Pratham during 'Varada Kathe Kicchana Jothe'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada