For Quick Alerts
  ALLOW NOTIFICATIONS  
  For Daily Alerts

  ಮುಲಾಜಿಲ್ಲ, ಈ ವಾರ 'ಬಿಗ್ ಬಾಸ್' ಸ್ಪರ್ಧಿಗಳೆಲ್ಲಾ ನಾಮಿನೇಟೆಡ್.!

  By Harshitha
  |

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ನಟಿ ಸುಕೃತಾ ವಾಗ್ಲೆ ಔಟ್ ಆದ್ಮೇಲೆ, 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರು ನೇರವಾಗಿ ನಾಮಿನೇಟ್ ಆಗಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ, ಮನೆಯ ಒಬ್ಬೊಬ್ಬ ಸದಸ್ಯರು ಕನ್ಫೆಶನ್ ರೂಮ್ ಒಳಗೆ ಹೋಗಿ ತಮಗೆ ಆಗದ ಇಬ್ಬರು ಸದಸ್ಯರನ್ನ ನಾಮಿನೇಟ್ ಮಾಡಬೇಕಿತ್ತು. ಆದ್ರೆ ಈ ವಾರ ಹಾಗೆ ನಡೆಯಲಿಲ್ಲ.

  ಸ್ಪರ್ಧಿಗಳಿಗೆ ಶಾಕ್ ನೀಡಿದ 'ಬಿಗ್ ಬಾಸ್'

  ಸ್ಪರ್ಧಿಗಳಿಗೆ ಶಾಕ್ ನೀಡಿದ 'ಬಿಗ್ ಬಾಸ್'

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಕೇವಲ ನಾಲ್ಕು ವಾರಗಳು ಬಾಕಿ ಇರುವಾಗಲೇ, ಎಲ್ಲಾ ಸದಸ್ಯರನ್ನ ಡೇಂಜರ್ ಝೋನ್ ಗೆ ತಳ್ಳಿ 'ಬಿಗ್ ಬಾಸ್' ಬಿಗ್ ಶಾಕ್ ನೀಡಿದ್ದಾರೆ. ['ಬಿಗ್ ಬಾಸ್': ಈ ವಾರ ನಿರೀಕ್ಷೆ ಮಾಡದೇ ಇರೋದನ್ನ ನಿರೀಕ್ಷಿಸಿ.!]

  'ಬಿಗ್ ಬಾಸ್' ನೀಡಿದ ಕಾರಣ ಏನು.?

  'ಬಿಗ್ ಬಾಸ್' ನೀಡಿದ ಕಾರಣ ಏನು.?

  ಎಲ್ಲರ ಬಗ್ಗೆ ವೀಕ್ಷಕರ ಅಭಿಪ್ರಾಯ ತಿಳಿಯಲು 'ಬಿಗ್ ಬಾಸ್' ಈ ಕ್ರಮ ಕೈಗೊಂಡಿದ್ದಾರೆ. ['ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಮತ್ತೊಮ್ಮೆ ಅವಕಾಶ ವಂಚಿತ.!]

  ಈ ವಾರ ಕ್ಯಾಪ್ಟನ್ ಇಲ್ಲ.!

  ಈ ವಾರ ಕ್ಯಾಪ್ಟನ್ ಇಲ್ಲ.!

  ಈ ವಾರ 'ದೊಡ್ಮನೆ'ಯ ಎಲ್ಲ ಸದಸ್ಯರು ನಾಮಿನೇಟ್ ಆಗಿರುವುದರಿಂದ, ಯಾರಿಗೂ ಕ್ಯಾಪ್ಟನ್ ಆಗುವ ಅವಕಾಶ ಇಲ್ಲ.

  ಮೋಹನ್ ನೀಡಿದ ಪ್ರತಿಕ್ರಿಯೆ ಇದು

  ಮೋಹನ್ ನೀಡಿದ ಪ್ರತಿಕ್ರಿಯೆ ಇದು

  ''ಜನಕ್ಕೆ ಇಷ್ಟ ಆಗುತ್ತಿರುವ ಕ್ಯಾಂಡಿಡೇಟ್ ಗಳು ಮುಂದೆ ಹೋಗಲಿ ಅಂತ ಹೀಗೆ ಮಾಡಿರಬಹುದು'' ಅಂತ ಮೋಹನ್ ಹೇಳ್ತಿದ್ರು.

  'ಡೈರೆಕ್ಟರ್' ಕೀರ್ತಿ ತಲೆಯಲ್ಲಿ ಏನು ಓಡುತ್ತಿದೆ.?

  'ಡೈರೆಕ್ಟರ್' ಕೀರ್ತಿ ತಲೆಯಲ್ಲಿ ಏನು ಓಡುತ್ತಿದೆ.?

  ''ಸಿಗುವ ಆರು ಜನರಲ್ಲಿ ಬೆಸ್ಟ್ ಯಾರು ಅಂತ ನೋಡುವ ಬದಲು, ಇಷ್ಟು ಜನರಲ್ಲಿ ಬೆಸ್ಟ್ ಯಾರು ಅಂತ ತಿಳಿಯುವ ಪ್ರಯತ್ನ ಇದು'' ಅಂತಿದ್ದರು ಕೀರ್ತಿ.

  ಸುದೀಪ್ ಹೇಳಿದ್ದು ಇದನ್ನೇ.!

  ಸುದೀಪ್ ಹೇಳಿದ್ದು ಇದನ್ನೇ.!

  ''ಇದೇ ಎಕ್ಸ್ ಪೆಕ್ಟ್ ದಿ ಅನ್ ಎಕ್ಸ್ ಪೆಕ್ಟೆಡ್'' ಅಂತ ಸುದೀಪ್ ಹೇಳಿದ ಮಾತನ್ನ 'ಕಿರಿಕ್' ಕೀರ್ತಿ ನೆನಪು ಮಾಡಿಕೊಂಡರು.

  ಹತ್ತು ಸ್ಪರ್ಧಿಗಳು ನಾಮಿನೇಟೆಡ್

  ಹತ್ತು ಸ್ಪರ್ಧಿಗಳು ನಾಮಿನೇಟೆಡ್

  'ಬಿಗ್ ಬಾಸ್' ಆದೇಶದ ಪ್ರಕಾರ ಈ ವಾರ ಪ್ರಥಮ್, ಕೀರ್ತಿ, ಕಾರುಣ್ಯ ರಾಮ್, ಮೋಹನ್, ಶೀತಲ್ ಶೆಟ್ಟಿ, ಮಾಳವಿಕಾ, ಸಂಜನಾ, ರೇಖಾ, ಶಾಲಿನಿ ಮತ್ತು ಭುವನ್ ನಾಮಿನೇಟ್ ಆಗಿದ್ದಾರೆ.

  ಹತ್ತು ಜನರ ಪೈಕಿ ನಿಮ್ಮ ಮತ ಯಾರಿಗೆ.?

  ಹತ್ತು ಜನರ ಪೈಕಿ ನಿಮ್ಮ ಮತ ಯಾರಿಗೆ.?

  ಪ್ರಥಮ್, ಕೀರ್ತಿ, ಕಾರುಣ್ಯ ರಾಮ್, ಮೋಹನ್, ಶೀತಲ್ ಶೆಟ್ಟಿ, ಮಾಳವಿಕಾ, ಸಂಜನಾ, ರೇಖಾ, ಶಾಲಿನಿ ಮತ್ತು ಭುವನ್... ಹತ್ತು ಮಂದಿ ಪೈಕಿ 'ಬಿಗ್ ಬಾಸ್' ಮನೆಯಲ್ಲಿ ಯಾರು ಉಳಿಯಬೇಕು? ಯಾರು ಔಟ್ ಆಗಬೇಕು ಎಂಬ ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

  English summary
  Bigg Boss Kannada 4, Week 11 : Small Screen Actress Sanjana, Shalini, Karunya Ram, Keerthi, Malavika, Pratham, Mohan, Sheetal Shetty, Rekha and Bhuvan are nominated for this week's elimination.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X