»   » 'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ನಟಿ ಸಂಜನಾ!

'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ನಟಿ ಸಂಜನಾ!

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ 'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಿಂದ ಸಂಜನಾ ಹೊರಬಿದ್ದಿದ್ದಾರೆ. ಆರಂಭದಲ್ಲಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ಸಂಜನಾ, 11 ವಾರಗಳ ನಂತರ ಎಲಿಮಿನೇಟ್ ಆಗಿದ್ದಾರೆ.

ಡೇಂಜರ್ ಝೋನ್ ನಲ್ಲಿದ್ದ ಇತರೆ ಆರು ಸ್ಪರ್ಧಿಗಳಿಗಿಂತ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ಸಂಜನಾ ಗೇಟ್ ಪಾಸ್ ಪಡೆದಿದ್ದಾರೆ.[ಮಧ್ಯರಾತ್ರಿ 'ಬಿಗ್ ಬಾಸ್' ಮನೆಯಿಂದ ಕಾರುಣ್ಯ ಔಟ್: ನೆಕ್ಸ್ಟ್ ಯಾರು ಗೊತ್ತಾ? ]

ಈ ವಾರ ಮನೆಯಿಂದ ಹೊರನಡೆದ ಸಂಜನಾ, ಮನೆಯ ಇಬ್ಬರು ಸದಸ್ಯರಿಗೆ ಅಚ್ಚರಿಯ ಶಿಕ್ಷೆಯನ್ನ ಕೊಟ್ಟು ಹೋದರು.

11ನೇ ವಾರ ಎಲಿಮಿನೇಟ್ ಆದ ಸಂಜನಾ

ಕಳೆದ ಹನ್ನೊಂದು ವಾರಗಳಿಂದ 'ಬಿಗ್ ಬಾಸ್' ಮನೆಯಲ್ಲಿದ್ದ ಸಂಜನಾ, ತಮ್ಮ ಬುದ್ದಿವಂತಿಕೆಯ ಆಟದಿಂದ ಎಲ್ಲರ ಗಮನ ಸೆಳೆದಿದ್ದರು. ಆದ್ರೆ, ಈ ವಾರ ಟಾಸ್ಕ್ ಗಳಲ್ಲಿ ಕಳಪೆ ಫರ್ಫಾಮೆನ್ಸ್ ಹಾಗೂ ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ 'ಬಿಗ್ ಮನೆ'ಯಿಂದ ಹೊರಬಿದ್ದಿದ್ದಾರೆ.

ಈ ವಾರ ಡಬಲ್ ನಾಮಿನೇಷನ್, ಡಬಲ್ ಎಲಿಮಿನೇಷನ್!

ಕಳೆದ ವಾರದ ಟಾಸ್ಕ್ ವಿಚಾರದಲ್ಲಿ ಕಳಪೆ ಫರ್ಫಾಮೆನ್ಸ್ ನೀಡಿದ ಹಿನ್ನಲೆ ಮನೆಯ ಎಲ್ಲ ಸದಸ್ಯರನ್ನ 'ಬಿಗ್ ಬಾಸ್' ನೇರವಾಗಿ ನಾಮಿನೇಟ್ ಮಾಡಿದ್ದರು. ಇದರ ಅನುಸಾರ ಗುರುವಾರ (ಡಿಸೆಂಬರ್ 22) ಮಧ್ಯರಾತ್ರಿ ಕಾರುಣ್ಯ ರಾಮ್ ಹೊರಹೋದರು. ಮತ್ತೆ ಎರಡನೇ ಬಾರಿ ನಾಮಿನೇಷನ್ ಪ್ರಕ್ರಿಯೆ ನಡೆದಾಗ, ಆರು ಜನರ ಮತ್ತೆ ನಾಮಿನೇಟ್ ಆಗಿದ್ದರು.[ಮುಲಾಜಿಲ್ಲ, ಈ ವಾರ 'ಬಿಗ್ ಬಾಸ್' ಸ್ಪರ್ಧಿಗಳೆಲ್ಲಾ ನಾಮಿನೇಟೆಡ್.!]

ಎಳು ಜನ ನಾಮಿನೇಟ್ ಆಗಿದ್ದರು

ಶುಕ್ರವಾರ ಎರಡನೇ ಬಾರಿ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಥಮ್, ಮೋಹನ್, ಶಾಲಿನಿ, ಶೀತಲ್, ಭುವನ್, ಮಾಳವಿಕಾ ಮತ್ತು ಸಂಜನಾ ಶುಕ್ರವಾರದ (ಡಿಸೆಂಬರ್ 23) ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಆಗಿದ್ದರು.

ನೇರ ನಾಮಿನೇಟ್ ಆಗಿದ್ದ ಸಂಜನಾ

ಟಾಸ್ಕ್ ಗಳನ್ನ ಸರಿಯಾಗಿ ಮಾಡದೆ 5 ಹಳದಿ ಕಾರ್ಡ್ ಪಡೆದಿದ್ದ ಸಂಜನಾ ಅವರನ್ನ 'ಬಿಗ್ ಬಾಸ್' ನೇರ ನಾಮಿನೇಟ್ ಮಾಡಿದ್ದರು.

ಪ್ರಥಮ್-ಶೀತಲ್ ಗೆ ಶಿಕ್ಷೆ!

ಈ ವಾರ ಮನೆಯಿಂದ ಹೊರಹೋದ ಸಂಜನಾ ಅವರಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರವೊಂದನ್ನ ನೀಡಿದ್ದರು. ಈ ಅನುಸಾರ ಮುಂದಿನ ವಾರಕ್ಕೆ ಇಬ್ಬರು ಸದಸ್ಯರನ್ನ ನಾಮಿನೇಟ್ ಮಾಡಬೇಕಿತ್ತು. ಹೀಗಾಗಿ, ಸಂಜನಾ ಅವರು, ಪ್ರಥಮ್ ಹಾಗೂ ಶೀತಲ್ ಅವರ ಹೆಸರುಗಳನ್ನ ಸೂಚಿಸಿದರು. ಪ್ರಥಮ್ ಹಾಗೂ ಶೀತಲ್ ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ತಲಾ ಒಂದೊಂದು ಮತವನ್ನ ಪಡೆದುಕೊಂಡಿದ್ದಾರೆ.

English summary
Bigg Boss Kannada 4, Week 11 : Actress Sanjana is eliminated from Bigg Boss Kannada 4 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada