»   » 'ಬಿಗ್ ಬಾಸ್ ಕನ್ನಡ-4': ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಔಟ್.!

'ಬಿಗ್ ಬಾಸ್ ಕನ್ನಡ-4': ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಔಟ್.!

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ 'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಿಂದ ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಹೊರಬಿದ್ದಿದ್ದಾರೆ. 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಒಮ್ಮೆ ಔಟ್ ಆಗಿ... ಸೆಕೆಂಡ್ ಚಾನ್ಸ್ ಪಡೆದು... ಸೀಕ್ರೆಟ್ ರೂಮ್ ನಲ್ಲಿದ್ದು... 'ದೊಡ್ಮನೆ' ಗೃಹಪ್ರವೇಶ ಮಾಡಿದ್ದ ಶೀತಲ್, ಈ ವಾರ ಗೇಟ್ ಪಾಸ್ ಪಡೆದಿದ್ದಾರೆ.

ಡೇಂಜರ್ ಝೋನ್ ನಲ್ಲಿದ್ದ ಇತರೆ ಆರು ಸ್ಪರ್ಧಿಗಳಿಗಿಂತ ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ಶೀತಲ್ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ.

ಎರಡನೇ ಬಾರಿ ಔಟ್ ಆದ ಶೀತಲ್ ಶೆಟ್ಟಿ

ಒಮ್ಮೆ ಔಟ್ ಆದರೂ, ಪುನಃ 'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಸಲು ನ್ಯೂಸ್ ಆಂಕರ್ ಶೀತಲ್ ಶೆಟ್ಟಿಗೆ ಅವಕಾಶ ದೊರಕಿತ್ತು. ಸೆಕೆಂಡ್ ಚಾನ್ಸ್ ಪಡೆದಿದ್ದ ಶೀತಲ್ ಶೆಟ್ಟಿ, ಗ್ರ್ಯಾಂಡ್ ಫಿನಾಲೆಗೆ ಎರಡು ವಾರ ಬಾಕಿ ಇರುವಾಗ ಎಲಿಮಿನೇಟ್ ಆಗಿದ್ದಾರೆ.

ಆರು ಜನ ನಾಮಿನೇಟ್ ಆಗಿದ್ದರು

ಮೋಹನ್, ಮಾಳವಿಕಾ, ಕೀರ್ತಿ, ರೇಖಾ, ಭುವನ್ ಹಾಗೂ ಶೀತಲ್ ಶೆಟ್ಟಿ... ಈ ವಾರ ನಾಮಿನೇಟ್ ಆಗಿದ್ದರು. ಇತರೆ ಸ್ಪರ್ಧಿಗಳಿಗಿಂತ ಶೀತಲ್ ಶೆಟ್ಟಿಗೆ ಸಿಕ್ಕ ವೀಕ್ಷಕರ ಬೆಂಬಲ ಕಡಿಮೆ! [12ನೇ ವಾರ 'ಬಿಗ್ ಬಾಸ್' ಮನೆಯಿಂದ ಗೇಟ್ ಪಾಸ್ ಯಾರಿಗೆ..?]

ಶೀತಲ್ ವಿರುದ್ಧ ಮತ ಹಾಕಿದವರು.?

ಕಳೆದ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋದ ಸಂಜನಾ ಅವರಿಂದ ಒಂದು ಮತ ಪಡೆದಿದ್ದ ಶೀತಲ್ ವಿರುದ್ಧ ಮೋಹನ್, ಮಾಳವಿಕಾ ಹಾಗೂ ಭುವನ್ ನಾಮಿನೇಟ್ ಮಾಡಿದರು. [ಪ್ರಥಮ್, ಶೀತಲ್ ಗೆ ಗುಂಡ್ ಪಿನ್ ಚುಚ್ಚಿ ಹೋದ ಸಂಜನಾ]

ಮಾಳವಿಕಾಗೆ ಶೀತಲ್ ಕೊಟ್ಟ ಶಿಕ್ಷೆ.!

'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಮುನ್ನ, 'ಬಿಗ್ ಬಾಸ್' ನೀಡಿದ ವಿಶೇಷ ಅಧಿಕಾರದ ಅನ್ವಯ, ಮುಂದಿನ ವಾರಕ್ಕೆ ನಟಿ ಮಾಳವಿಕಾ ಅವಿನಾಶ್ ರವರನ್ನ ಶೀತಲ್ ಶೆಟ್ಟಿ ನೇರವಾಗಿ ನಾಮಿನೇಟ್ ಮಾಡಿದ್ದಾರೆ.

English summary
Bigg Boss Kannada 4, Week 12 : News Anchor Sheethal Shetty is eliminated from Bigg Boss Kannada 4 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada