»   » 'ಬಿಗ್ ಬಾಸ್ ಕನ್ನಡ-4': ಯಾರು ಉತ್ತಮರು ಈ ನಾಲ್ವರಲ್ಲಿ.?

'ಬಿಗ್ ಬಾಸ್ ಕನ್ನಡ-4': ಯಾರು ಉತ್ತಮರು ಈ ನಾಲ್ವರಲ್ಲಿ.?

Posted By:
Subscribe to Filmibeat Kannada

''ಬಿಗ್ ಬಾಸ್' ಸಪ್ಪೆ'' ಅಂತ ಯಾರು ಎಷ್ಟೇ ಗೊಣಗಿದರೂ, ಕಾರ್ಯಕ್ರಮವನ್ನು ನೋಡುವವರ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ. ನೋಡನೋಡುತ್ತಲೇ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಸೆಮಿಫೈನಲ್ ಹಂತ ತಲುಪಿದೆ.

ಸೆಮಿಫೈನಲ್ ನಲ್ಲಿ ಸೇಫ್ ಆದವರು ಗ್ರ್ಯಾಂಡ್ ಫಿನಾಲೆ ಹಂತ ತಲುಪಬಹುದು. ಸದ್ಯಕ್ಕೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ, ಸೆಮಿಫೈನಲ್ ನಲ್ಲಿ ಡೇಂಜರ್ ಝೋನ್ ನಲ್ಲಿರುವುದು ನಾಲ್ವರು ಸ್ಪರ್ಧಿಗಳು.!

ಈ ವಾರ ಯಾರೂ ಕ್ಯಾಪ್ಟನ್ ಆಗಲಿಲ್ಲ!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಸೆಮಿಫೈನಲ್ ಹಂತ ತಲುಪಿರುವುದರಿಂದ ಈ ವಾರ ಮನೆಯ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ. ['ಬಿಗ್ ಬಾಸ್' ಮನೆಯ ಡೇಂಜರಸ್ ಲೇಡಿ ಯಾರು ಗೊತ್ತಾ.?]

ನೇರವಾಗಿ ನಾಮಿನೇಟ್ ಆಗಿರುವ ಮಾಳವಿಕಾ

'ಬಿಗ್ ಬಾಸ್' ನೀಡಿದ ವಿಶೇಷ ಅಧಿಕಾರದ ಅನ್ವಯ ಕಳೆದ ವಾರ ಎಲಿಮಿನೇಟ್ ಆದ ಶೀತಲ್ ಶೆಟ್ಟಿ, ಮಾಳವಿಕಾ ಅವಿನಾಶ್ ರವರನ್ನ ನೇರವಾಗಿ ನಾಮಿನೇಟ್ ಮಾಡಿದ್ದರು. ಹೀಗಾಗಿ ಮಾಳವಿಕಾ ಅವಿನಾಶ್ ಈ ವಾರ ಡೇಂಜರ್ ಝೋನ್ ನಲ್ಲಿದ್ದಾರೆ. [ಫೈನಲ್ ತಲುಪಲು ಮಾಳವಿಕಾ ಮತ್ತೊಂದು ಅಗ್ನಿಪರೀಕ್ಷೆ ಎದುರಿಸ್ಲೇಬೇಕು.!]

ಟಾರ್ಗೆಟ್ ಆದ ಪ್ರಥಮ್

ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ವಾರ ಇರುವುದರಿಂದ 'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಮತ್ತೊಮ್ಮೆ ಟಾರ್ಗೆಟ್ ಆಗಿದ್ದಾರೆ. [ನಾಗತಿಹಳ್ಳಿ ಕೊಟ್ಟ ಏಟಿಗೆ ತಿರುಗೇಟು ನೀಡಿದ 'ಬಿಗ್ ಬಾಸ್' ಸುದೀಪ್]

ಪ್ರಥಮ್ ವಿರುದ್ಧ ನಾಲ್ಕು ಮತಗಳು

ಇರುವ ಏಳು ಮಂದಿಯಲ್ಲಿ ನಾಲ್ಕು ಜನ ಪ್ರಥಮ್ ವಿರುದ್ಧ ವೋಟ್ ಮಾಡಿದರು. ಹೀಗಾಗಿ ಪ್ರಥಮ್ ಕೂಡ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

ಪ್ರಥಮ್ ವಿರುದ್ಧ ವೋಟ್ ಮಾಡಿದವರ್ಯಾರು.?

ಭುವನ್, ಮಾಳವಿಕಾ, ಶಾಲಿನಿ ಮತ್ತು ಕೀರ್ತಿ... ಪ್ರಥಮ್ ವಿರುದ್ಧ ವೋಟ್ ಮಾಡಿದರು.

ಇವರಿಗೆಲ್ಲ ಭುವನ್ ಅಂದ್ರೆ ಆಗಲ್ಲ

ಶಾಲಿನಿ, ಪ್ರಥಮ್ ಹಾಗೂ ರೇಖಾ... ಭುವನ್ ವಿರುದ್ಧ ಮತ ಚಲಾಯಿಸಿದರು.

ಕೀರ್ತಿ ಆಟ ನಡೆಯುತ್ತಾ.?

ಮಾಳವಿಕಾ, ಮೋಹನ್ ಮತ್ತು ರೇಖಾ... ಕೀರ್ತಿ ಹೆಸರನ್ನ ಸೂಚಿಸಿದರು. ಹೀಗಾಗಿ ಕೀರ್ತಿ ಕೂಡ ಈ ವಾರ ನಾಮಿನೇಟ್ ಆಗಿದ್ದಾರೆ.

ಒಂದು ವೋಟ್ ನಲ್ಲಿ ಮಿಸ್ ಆದವರು

ಮೋಹನ್ ಮತ್ತು ಶಾಲಿನಿಗೆ ಎರಡು ವೋಟ್ ಗಳು ಬಿದ್ದಿದ್ದವು. ಇನ್ನೊಂದು ವೋಟ್ ಬಿದ್ದಿದ್ದರೆ, ಇಬ್ಬರೂ ಡೇಂಜರ್ ಝೋನಲ್ಲಿ ಇರ್ಬೇಕಾಗಿತ್ತು.!

ಯಾರ ಬಾಯಲ್ಲೂ ರೇಖಾ ಹೆಸರು ಬರಲಿಲ್ಲ.!

'ಬಿಗ್ ಬಾಸ್' ಮನೆಯ ಯಾವ ಸ್ಪರ್ಧಿ ಬಾಯಲ್ಲೂ ರೇಖಾ ಹೆಸರು ಬರಲಿಲ್ಲ.

ಈ ನಾಲ್ವರಲ್ಲಿ ಉತ್ತಮರು ಯಾರು.?

ಮಾಳವಿಕಾ, ಪ್ರಥಮ್, ಕೀರ್ತಿ ಮತ್ತು ಭುವನ್ ಪೈಕಿ ಯಾರು 'ಬಿಗ್ ಬಾಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಹಂತ ತಲುಪಬೇಕು.? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Bigg Boss Kannada 4, Week 13 : 'Kirik' Keerthi, Malavika Avinash, Pratham and Bhuvan are nominated for this week's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada