»   » 'ಬಿಗ್ ಬಾಸ್' ಮನೆಯಲ್ಲಿ ಸಕಲ ಇಷ್ಟಾರ್ಥ ನೆರವೇರಿಸಿಕೊಂಡ ಪ್ರಥಮ್!

'ಬಿಗ್ ಬಾಸ್' ಮನೆಯಲ್ಲಿ ಸಕಲ ಇಷ್ಟಾರ್ಥ ನೆರವೇರಿಸಿಕೊಂಡ ಪ್ರಥಮ್!

Posted By:
Subscribe to Filmibeat Kannada

ಕೇವಲ ಮೂರು ತಿಂಗಳ ಹಿಂದೆ ಪ್ರಥಮ್ ಯಾರು ಅನ್ನೋದೇ ಕನ್ನಡ ಜನತೆಗೆ ಗೊತ್ತಿರಲಿಲ್ಲ. ಈಗ ಕರ್ನಾಟಕದ ಯಾವ ಮೂಲೆಗೆ ಹೋದರೂ, ಪ್ರಥಮ್ ಮುಖ ಗೊತ್ತಿಲ್ಲ ಎನ್ನುವವರಿಲ್ಲ. ಅಲ್ಲಿಗೆ, ''ನನ್ನ ಮುಸುಡಿ ಜನಪ್ರಿಯ ಆಗಬೇಕು'' ಎಂಬ ಪ್ರಥಮ್ ರವರ ಬಹುದೊಡ್ಡ ಕನಸು ನನಸಾದಂತಾಗಿದೆ.

ಇಷ್ಟು ಮಾತ್ರ ಅಲ್ಲ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ತಮ್ಮ ಜರ್ನಿಯಲ್ಲಿ ಪ್ರಥಮ್ ರವರ ಸಕಲ ಇಷ್ಟಾರ್ಥಗಳು ನೆರವೇರಿದ್ಯಂತೆ.

ಪ್ರಥಮ್ ಮನದಾಳದ ಮಾತು

''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನನಗಿದ್ದ ಎಲ್ಲ ಆಸೆಗಳು ಈಡೇರಿದೆ. ಫೈನಲ್ ಸ್ಟೇಜ್ ವರೆಗೂ ಬಂದಿದ್ದೇನೆ'' ಎನ್ನುತ್ತಾರೆ ಪ್ರಥಮ್.['ಬಿಗ್ ಬಾಸ್' ಮನೆಯಿಂದ ಹೊರಬರುವ ಮುನ್ನ 3 'ವರ' ಕೇಳಿದ ಪ್ರಥಮ್.!]

ಡಿಕ್ಟೇಟರ್, ಕ್ಯಾಪ್ಟನ್

''ಬೇಡವೇ ಬೇಡ ಅಂತ ಇದ್ದಾಗ ಡಿಕ್ಟೇಟರ್ ಟಾಸ್ಕ್ ಕೊಟ್ಟರು. ಬಹಳ ದೊಡ್ಡ ಟಾಸ್ಕ್ ಅದು. ಕ್ಯಾಪ್ಟನ್ ಆಗಬೇಕು ಅಂತಿದ್ದೆ. ಅದು ಕೂಡ ಆಯ್ತು'' - ಪ್ರಥಮ್

ಬೆಸ್ಟ್ ಪರ್ಫಾಮರ್

''ಆಟದ ಪ್ರಕಾರ ಕಳಪೆ ಅಂತ ಬೋರ್ಡ್ ಬಂತು. ಹೋಗುವ ಮುನ್ನ ಬೆಸ್ಟ್ ಪರ್ಫಾಮರ್ ಆಗಿದ್ದೇನೆ'' - ಪ್ರಥಮ್

ಅಪ್ಪ ಮಾತನಾಡಿದರು!

''ನನ್ನ ಅಪ್ಪನನ್ನ ಮಾತಾಡಿಸಬೇಕು ಅಂತಿದ್ದೆ. ಅದು 'ಬಿಗ್ ಬಾಸ್' ಮನೆಯಲ್ಲಿ ಆಯ್ತು'' - ಪ್ರಥಮ್

ಲಕ್ಷುರಿ ಬಜೆಟ್

''ನನ್ನ ಶ್ರಮದಿಂದ ಲಕ್ಷುರಿ ಬಜೆಟ್ ಕೂಡ ಪಡೆದುಕೊಂಡಿದ್ದೇನೆ'' - ಪ್ರಥಮ್

ಸುದೀಪ್ ರಿಂದ ಭೇಷ್

''ಸುದೀಪ್ ಸರ್ ರವರಿಂದ ಕಿವಿ ಹಿಂಡಿಸಿಕೊಂಡಿದ್ದೂ ಆಯ್ತು. ಅವರಿಂದಲೇ ಬೆಸ್ಟ್ ಅಂತ ಅನಿಸಿಕೊಂಡಿದ್ದೂ ಆಯ್ತು'' - ಪ್ರಥಮ್ [ಪಿರಿ ಪಿರಿ ಪ್ರಥಮ್ ಗೆ ಭೇಷ್ ಎಂದ ಕಿಚ್ಚ ಸುದೀಪ್.!]

ಇದಕ್ಕಿಂತ ಇನ್ನೇನು ಬೇಕು.?

''ಸತತವಾಗಿ ಹತ್ತು ವಾರಗಳ ಕಾಲ ಜನಾದೇಶ ಬಂದಿದ್ದೂ ಆಯ್ತು. ಇದಕ್ಕಿಂತ ಇನ್ನೇನು ಬೇಕು'' - ಪ್ರಥಮ್

ವಿಕ್ಟರಿ ಎಂಬ ಪದ...

''ಕಡೆಗೆ ವಿಕ್ಟರಿ ಎಂಬ ಪದ. ಅದರ ಹೊರತಾಗಿ ಎಲ್ಲ ಗೆಲುವುಗಳು ನನಗೆ ಬಂದುಬಿಟ್ಟಿದೆ'' - ಪ್ರಥಮ್

English summary
Bigg Boss Kannada 4: Week 13, 'Olle Huduga' Pratham wishes turned true in the show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada