»   » 'ಬಿಗ್ ಬಾಸ್' ಮನೆಯಲ್ಲಿ 'ಜೂನಿಯರ್ಸ್'ನ ಬಗ್ಗು ಬಡಿದ ಸೀನಿಯರ್ಸ್.!

'ಬಿಗ್ ಬಾಸ್' ಮನೆಯಲ್ಲಿ 'ಜೂನಿಯರ್ಸ್'ನ ಬಗ್ಗು ಬಡಿದ ಸೀನಿಯರ್ಸ್.!

Posted By:
Subscribe to Filmibeat Kannada

ಕಳೆದ ಮೂರು ಸೀಸನ್ ಗಳಲ್ಲಿ ನಡೆಯದ ವಿಭಿನ್ನ ಪ್ರಯತ್ನವೊಂದಕ್ಕೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಸಾಕ್ಷಿಯಾಗಿದೆ.

ಕಳೆದ ಮೂರು ಆವೃತ್ತಿಗಳಲ್ಲಿ ಭಾಗವಹಿಸಿದ್ದ ಕೆಲ ಸ್ಪರ್ಧಿಗಳು ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದಾರೆ. ರಿಯಾಲಿಟಿ ಶೋ ಇನ್ನೆರಡು ವಾರ ಎಕ್ಸ್ ಟೆಂಡ್ ಆಗಿರುವ ಹಿನ್ನಲೆಯಲ್ಲಿ... 'ಬಿಗ್ ಬಾಸ್' ಮನೆಯಲ್ಲಿ ಸೀನಿಯರ್ಸ್ ಪ್ರತ್ಯಕ್ಷವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.[ಮತ್ತೆ ಬಂದ ಮಾಳವಿಕಾ; ಮೋಹನ್ ಮೂಕ ಪ್ರೇಕ್ಷಕ, ಶಾಲಿನಿ ಸ್ತಬ್ಧ.!]

ಈ ನಡುವೆ 'ಬಿಗ್ ಬಾಸ್' ಮನೆಯಲ್ಲಿ ಸೀನಿಯರ್ಸ್ ಮತ್ತು ಜೂನಿಯರ್ಸ್ ನಡುವೆ ಟಾಸ್ಕ್ ಕೂಡ ನಡೆದಿದ್ದು, ಸದ್ಯದ ಸ್ಪರ್ಧಿಗಳನ್ನ ಸೀನಿಯರ್ ಗಳು ಬಗ್ಗು ಬಡಿದಿದ್ದಾರೆ. ಮುಂದೆ ಓದಿ....

ಮೊದಲು ಬಂದಿದ್ದು ಸುನಾಮಿ ಕಿಟ್ಟಿ.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕೆ 'ಸೀನಿಯರ್' ಆಗಿ ಮೊದಲು 'ರಂಗಪ್ರವೇಶ' ಮಾಡಿದ್ದು ಸುನಾಮಿ ಕಿಟ್ಟಿ.[ಸದ್ದಿಲ್ಲದೇ ರೀ ಎಂಟ್ರಿ ಕೊಟ್ಟ ಪ್ರಥಮ್: ಅಸಲಿ ಆಟ ಈಗ ಶುರು.!]

'ರೋಮ್ಯಾನ್ಸ್ ಕಿಂಗ್' ಅಯ್ಯಪ್ಪ

'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ 'ರೋಮ್ಯಾನ್ಸ್ ಕಿಂಗ್' ಅಂತಲೇ ಖ್ಯಾತಿ ಪಡೆದಿದ್ದ ಅಯ್ಯಪ್ಪ ಕೂಡ ಸದ್ಯ 'ದೊಡ್ಮನೆ'ಯೊಳಗಿದ್ದಾರೆ.

ನಟಿ ನೀತು ಮತ್ತು ರಿಶಿಕಾ

'ಬಿಗ್ ಬಾಸ್ ಕನ್ನಡ-1' ಆವೃತ್ತಿಯಿಂದ ರಿಶಿಕಾ ಸಿಂಗ್ ಹಾಗೂ 'ಬಿಗ್ ಬಾಸ್ ಕನ್ನಡ-2' ಆವೃತ್ತಿಯಿಂದ ನಟಿ ನೀತು ಕೂಡ 'ವಿಶೇಷ ಅತಿಥಿ'ಗಳಾಗಿ ಬಂದಿದ್ದಾರೆ.

'ಬಿಗ್ ಬಾಸ್-3' ವಿನ್ನರ್ ಶ್ರುತಿ

'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದ್ದ ನಟಿ ಶ್ರುತಿ ಈ ಬಾರಿ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದಾರೆ.

ಸ್ಪರ್ಧಿಗಳಿಗೆ ಟಿಪ್ಸ್ ಕೊಟ್ಟ ಶ್ರುತಿ

'ಬಿಗ್ ಬಾಸ್' ಕಾರ್ಯಕ್ರಮ ಹಾಗೂ ನಂತರದ ಜೀವನದ ಬಗ್ಗೆ ಸ್ಪರ್ಧಿಗಳಿಗೆ ನಟಿ ಶ್ರುತಿ ಕೆಲವು ಟಿಪ್ಸ್ ಗಳನ್ನೂ ನೀಡಿದರು.

ಸೀನಿಯರ್ಸ್ ವರ್ಸಸ್ ಜೂನಿಯರ್ಸ್

ಇದೆಲ್ಲದರ ಮಧ್ಯೆ ಸೀನಿಯರ್ಸ್ ಮತ್ತು ಜೂನಿಯರ್ಸ್ ನಡುವೆ 'ಟೈಯರ್ ಮಂಗಣ್ಣ' ಟಾಸ್ಕ್ ಕೂಡ ನಡೆಯಿತು. ಅದರಲ್ಲಿ ಸೀನಿಯರ್ ಗಳೇ ವಿಜೇತರಾದರು.

English summary
Bigg Boss Kannada 4: Week 14, Its time of Seniors versus Juniors in the house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada