»   » ಪ್ರಥಮ್ ನ ಇಷ್ಟ ಪಡುವ ಅಭಿಮಾನಿಗಳು ಇದ್ದಾರೆ ಸ್ವಾಮಿ.!

ಪ್ರಥಮ್ ನ ಇಷ್ಟ ಪಡುವ ಅಭಿಮಾನಿಗಳು ಇದ್ದಾರೆ ಸ್ವಾಮಿ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಪ್ರಥಮ್ ರವರ ರಂಪ-ರಾಮಾಯಣ ನೋಡಿ... 'ಇವರಿಗೆ ವೋಟ್ ಹಾಕ್ತಿರೋರು ಯಾರಪ್ಪಾ?' ಅಂತ ಮೂಗು ಮುರಿದ ಮಂದಿ ಸಾಕಷ್ಟು.

ಆದ್ರೆ, ದಿನ ಕಳೆದಂತೆ... ವಾರಗಳು ಉರುಳಿದಂತೆ ಪ್ರಥಮ್ ಗೆ ಫ್ಯಾನ್ ಫಾಲೋವಿಂಗ್ ಹೆಚ್ಚಾಗುತ್ತಾ ಹೋಯ್ತು. ಬರೀ ಪಡ್ಡೆ ಹುಡುಗರು ಮಾತ್ರ ಪ್ರಥಮ್ ಗೆ ಸಪೋರ್ಟ್ ಮಾಡ್ತಿರಬಹುದು ಅಂದುಕೊಳ್ಳಬೇಡಿ.. ರಿಷಿಕಾ ಸಿಂಗ್ ನಂತಹ ಹರೆಯದ ಹುಡುಗಿಯರು, ಸುನಾಮಿ ಕಿಟ್ಟಿಯಂತಹ ಹಳ್ಳಿ ಹೈಕ್ಳು, ಅಂಕಲ್-ಆಂಟಿ, ಅಜ್ಜಿ-ತಾತ.. ಹೀಗೆ ಎಲ್ಲ ವಯೋಮಾನದವರೂ ಪ್ರಥಮ್ ಗೆ ಫ್ಯಾನ್ಸ್ ಆಗ್ಬಿಟ್ಟಿದ್ದಾರೆ. ಅದಕ್ಕೆ ನಿನ್ನೆ 'ಬಿಗ್ ಬಾಸ್' ಮನೆಗೆ ಕರೆ ಮಾಡಿದ್ದ ಕಾಸರಗೋಡು ನಿವಾಸಿ ಮಹಾಬಲ ರೈ ಸಾಕ್ಷಿ.

'ಲಾರ್ಡ್ ಪ್ರಥಮ್ ಸರ್' ಜೊತೆ ಮಾತನಾಡಿದ ಕಾಲರ್

'ಬಿಗ್ ಬಾಸ್' ಮನೆಗೆ ಕಾಸರಗೋಡಿನಿಂದ ಕರೆ ಮಾಡಿದ ಮಹಾಬಲ ರೈ, '''ಬಿಗ್ ಬಾಸ್' ಮನೆಯಲ್ಲಿ 100 ದಿನ ಪೂರೈಸಿದ ಎಲ್ಲರಿಗೂ ಶುಭಾಶಯಗಳು'' ಅಂತ್ಹೇಳಿ ಲಾರ್ಡ್ ಪ್ರಥಮ್ ಸರ್ ಜೊತೆ ಮಾತನಾಡಲು ಶುರು ಮಾಡಿದರು.['ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟ 'ಒಳ್ಳೆ ಹುಡುಗ' ಪ್ರಥಮ್]

ಪ್ರಥಮ್ ಅಂದ್ರೆ ತುಂಬಾ ಇಷ್ಟ ಅಂತೆ.!

''ಲಾರ್ಡ್ ಪ್ರಥಮ್ ಸರ್... ನೀವು ತುಂಬಾ ಚೆನ್ನಾಗಿ ಆಟಾಡ್ತಿದ್ದೀರಾ. ನನಗೆ ತುಂಬ ಇಷ್ಟ ನೀವು. 'ಬಿಗ್ ಬಾಸ್' ಶುರು ಆದಾಗ ನೀವು ಯಾರು ಅಂತಲೇ ನಮಗೆ ಗೊತ್ತಿರಲಿಲ್ಲ. ನಿಮ್ಮ ಬಗ್ಗೆ ಕೇಳಿರಲಿಲ್ಲ. ನೀವು ತುಂಬ ಚೆನ್ನಾಗಿ ಮನರಂಜನೆ ಕೊಡ್ತೀರಾ ನಮಗೆ'' ಎಂದು ಕರೆ ಮಾಡಿದ್ದ ಮಹಾಬಲ ರೈ ಹೇಳಿದರು.[ಜಿದ್ದಿಗೆ ಬಿದ್ದು ಬರೋಬ್ಬರಿ 45 ಹಸಿ ಮೆಣಸಿನಕಾಯಿ ತಿಂದ ಪ್ರಥಮ್.!]

ಪ್ರಾಣ ಕೊಡ್ತಾರಂತೆ ಪ್ರಥಮ್

ಮಹಾಬಲ ರೈ ತೋರಿಸಿದ ಅಭಿಮಾನಕ್ಕೆ ತಲೆಬಾಗಿ, ''ಸೂಪರ್ ಸರ್. ನಿಮಗೋಸ್ಕರ ನಾನು ಪ್ರಾಣ ಕೊಡ್ತೀನಿ ಸರ್'' ಎಂದರು ಪ್ರಥಮ್.

'ತರ್ಲೆ' ಪ್ರಥಮ್ ಇಷ್ಟ

''ನೀವು ವಿಚಿತ್ರವಾಗಿ ಸುದೀಪ್ ಅವರಿಗೆ ಮಾವ ಅಂತ ಹೇಳಿದ್ರಿ. ನೀವು ಮಾಡುವ ತರ್ಲೆ ನಮಗೆ ಇಷ್ಟ ಆಗ್ತದೆ'' ಎಂಬುದು ಕಾಲರ್ ಅಭಿಪ್ರಾಯ

ಇದೊಂದು ಮಾತ್ರ ಕಷ್ಟ

''ಆದರೆ ಮನೆಯವರೆಲ್ಲರ ಜೊತೆ ಜಗಳ ಆಡ್ತೀರಾ. ಅದು ನಮಗೆ ಇಷ್ಟ ಆಗುವುದಿಲ್ಲ'' ಅಂತ ಮಹಾಬಲ ರೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಥಮ್ ಕೊಟ್ಟ ವಿವರಣೆ

''ಆಟದ ವೈಖರಿಯಲ್ಲಿ ಕಿರಿಕಿರಿ ಆದಾಗ ನಾನು ಜಗಳ ಮಾಡಿದ್ದೇನೆ. ಯಾಕಂದ್ರೆ ಅದನ್ನ ನೋಡಿಕೊಂಡು ನನಗೆ ಸುಮ್ಮನೆ ಕೂರೋಕೆ ಆಗಲ್ಲ. ಇಷ್ಟು ಸಲ ಜಗಳ ಆಡಿದ್ದೇನೆ. ಎಲ್ಲರ ಮುಂದೆ ಮಾತನಾಡಿದ್ದೇನೆ ಹೊರತು ಹಿಂದೆ ಕುಳಿತು, ಅವಿತುಕೊಂಡು ಮಾತನಾಡಿಲ್ಲ'' ಅಂತ ಪ್ರಥಮ್ ಸ್ಪಷ್ಟನೆ ನೀಡಿದರು.

ಪ್ರಥಮ್ ಗೆ ಕಾಲರ್ ಕೊಟ್ಟ ಸಲಹೆ

''ನೀವು ಹೇಳಿದ್ದು ಸರಿ. ಆದರೆ ಹೇಳುವ ರೀತಿಯನ್ನು ಸ್ವಲ್ಪ ತಿದ್ದಿಕೊಳ್ಳಿ.. ಯಾಕಂದ್ರೆ ನೀವು ನಮಗೆ ಇಷ್ಟ ಅಲ್ವಾ. ಇನ್ನು ಸ್ವಲ್ಪ ದಿನ ಇರೋದು ಗಲಾಟೆ ಮಾಡಬೇಡಿ, ಮನರಂಜಿಸಿ..'' ಅಂತ ಕಾಲರ್ ಒಬ್ಬರು ಸಲಹೆ ನೀಡಿದರು.

ಪ್ರಥಮ್ ಫುಲ್ ಖುಷ್

''ನೀವು ಇಷ್ಟು ಹೇಳಿದ್ಮೇಲೆ ಮುಗಿತು. ಇನ್ಮೇಲೆ ನಿಮ್ಮನ್ನ ರಂಜಿಸುವುದಷ್ಟೇ ನನ್ನ ಗುರಿ. ಅದನ್ನ ತಲೆಯಲ್ಲಿ ಇಟ್ಟುಕೊಳ್ತೀನಿ. ನಿಮ್ಮ ಅಭಿಮಾನಕ್ಕೆ ನಾನು ಬೆಲೆ ಕಟ್ಟೋಕೆ ಆಗಲ್ಲ'' ಎಂದು ಹೇಳುತ್ತಾ ಪ್ರಥಮ್ ಫುಲ್ ಖುಷಿಯಾಗ್ಬಿಟ್ರು.

English summary
Bigg Boss Kannada 4: Week 15 - Take a look at the conversation between Pratham and Caller Mahabala Rai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada