»   » 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಇಪ್ಪತ್ತು ಸಾವಿರ ಗೆದ್ದ ಕೀರ್ತಿ ಕುಮಾರ್

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಇಪ್ಪತ್ತು ಸಾವಿರ ಗೆದ್ದ ಕೀರ್ತಿ ಕುಮಾರ್

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋನಲ್ಲಿ 'ಕಿರಿಕ್' ಕೀರ್ತಿ ಅಲಿಯಾಸ್ ಕೀರ್ತಿ ಕುಮಾರ್ ಇಪ್ಪತ್ತು ಸಾವಿರ ರೂಪಾಯಿ ನಗದು ಬಹುಮಾನ ಗೆದ್ದಿದ್ದಾರೆ.

ಹೌದು, 'ಬಿಗ್ ಬಾಸ್' ನೀಡಿದ್ದ 'ದುಡ್ಡು ದುಡ್ಡು' ಟಾಸ್ಕ್ ನ 'ಆಡಿಸಿ ನೋಡಿ, ಬೀಳಿಸಿ ನೋಡಿ' ಚಟುವಟಿಕೆಯ ಐದು ಹಂತಗಳಲ್ಲಿ ಯಶಸ್ವಿ ಆಗಿ, ಇಪ್ಪತ್ತು ಸಾವಿರ ರೂಪಾಯಿಯನ್ನು ಕೀರ್ತಿ ಕುಮಾರ್ ಗಳಿಸಿದ್ದಾರೆ.[ಕೀರ್ತಿ ವಿರುದ್ಧ ರೊಚ್ಚಿಗೆದ್ದ ಪ್ರಥಮ್, ತುಟಿಕ್ ಪಿಟಿಕ್ ಎನ್ನದ ಸದಸ್ಯರು!]

Bigg Boss Kannada 4, Week 15: Keerthi wins Rs.20000 cash prize

'ಆಡಿಸಿ ನೋಡಿ, ಬೀಳಿಸಿ ನೋಡಿ' ಚಟುವಟಿಕೆ ಅನ್ವಯ ಟೋಪಿ, ಟವಲ್, ಮೊಟ್ಟೆ, ಫೀಡಿಂಗ್ ಬಾಟಲ್, ಕುಂಬಳಕಾಯಿ ಮತ್ತು ನೀರಿನ ಬೌಲ್ ನ ಸ್ಪರ್ಧಿಗಳು ಕಾಪಾಡಿಕೊಳ್ಳಬೇಕಿತ್ತು.

ಈ ಪೈಕಿ ಎಲ್ಲಾ ಸಾಮಾಗ್ರಿಗಳನ್ನು ಅತಿ ಹೆಚ್ಚು ಕಾಲ ಕಾಪಾಡಿಕೊಂಡು, ಮಾಳವಿಕಾ ರವರ ಸಾಮಾಗ್ರಿಯನ್ನೂ ಬೀಳಿಸಿದ್ದಕ್ಕಾಗಿ 'ಕಿರಿಕ್' ಕೀರ್ತಿ ಗೆ ಇಪ್ಪತ್ತು ಸಾವಿರ ರೂಪಾಯಿ ಬಹುಮಾನ ಘೋಷಣೆ ಆಗಿದೆ.

ಅಂದ್ಹಾಗೆ, ಈ 'ದುಡ್ಡು ದುಡ್ಡು' ಟಾಸ್ಕ್ ನಲ್ಲಿ ಮೊದಲು ಹಣ ಗಳಿಸಿರುವುದೇ ಕೀರ್ತಿ. ಉಳಿದ ಯಾರೂ ಇನ್ನೂ ಅಕೌಂಟ್ ಓಪನ್ ಮಾಡಿಲ್ಲ.

English summary
Bigg Boss Kannada 4, Week 15: 'Kirik' Keerthi wins Rs.20,000 cash prize

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada