»   » 'ದೊಡ್ಮನೆ'ಯಿಂದ ಈ ವಾರ ಯಾರೂ ಔಟ್ ಆಗಲ್ಲ.!

'ದೊಡ್ಮನೆ'ಯಿಂದ ಈ ವಾರ ಯಾರೂ ಔಟ್ ಆಗಲ್ಲ.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಿಂದ ಕಳೆದ ವಾರ ನಟ ಭುವನ್ ಪೊನ್ನಣ್ಣ ಔಟ್ ಆದರು. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿರುವಾಗಲೇ, ಈ ಶನಿವಾರ ಯಾರು ಎಲಿಮಿನೇಟ್ ಆಗಬಹುದು ಎಂಬ ಲೆಕ್ಕಾಚಾರ 'ದೊಡ್ಮನೆ'ಯಲ್ಲಿ ನಡೆಯುತ್ತಿದೆ.

ಆದ್ರೆ, ವಾಸ್ತವ ಬೇರೆ. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಈ ವಾರ ಯಾರೂ ಹೊರಹೋಗಲ್ಲ. ನಾಮಕಾವಸ್ತೆಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ ಹೊರತು ವೋಟಿಂಗ್ ಲೈನ್ ಗಳು ತೆರೆದಿಲ್ಲ.

ಶನಿವಾರ ಎಲಿಮಿನೇಷನ್ ಪ್ರಕ್ರಿಯೆ ಇಲ್ಲ

ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಒಟ್ಟು ಆರು ಸ್ಪರ್ಧಿಗಳಿದ್ದಾರೆ. ಅವರ ಪೈಕಿ ಪ್ರಥಮ್, ಶಾಲಿನಿ ಹಾಗೂ ಕೀರ್ತಿ ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಯಾರಿಗೂ ಈ ಶನಿವಾರ ಗೇಟ್ ಪಾಸ್ ಸಿಕ್ಕಲ್ಲ.[15ನೇ ವಾರದ ನಾಮಿನೇಷನ್: ಕೀರ್ತಿ-ಶಾಲಿನಿಗೆ ಅಗ್ನಿ ಪರೀಕ್ಷೆ!]

ಕಾರಣ ಏನು.?

ಮುಂದಿನ ವಾರ 'ಮಿಡ್ ವೀಕ್ ಎಲಿಮಿನೇಷನ್'... ಅಂದ್ರೆ 'ವಾರದ ಮಧ್ಯಂತರದಲ್ಲಿ ಎಲಿಮಿನೇಷನ್' ಪ್ರಕ್ರಿಯೆ ನಡೆಯುವುದರಿಂದ ಈ ವಾರ ಯಾರನ್ನೂ ಔಟ್ ಮಾಡದಿರಲು 'ಬಿಗ್ ಬಾಸ್' ನಿರ್ಧರಿಸಿದ್ದಾರೆ.

ನೀವು ಗಮನಿಸಿದ್ದೀರಾ.?

''ಮುಂದಿನ ವಾರ ಮಿಡ್ ವೀಕ್ ಎಲಿಮಿನೇಷನ್', ಹಾಗಾಗಿ ಈ ಶನಿವಾರ ಎಲಿಮಿನೇಷನ್ ಇಲ್ಲ'' ಎಂಬ ಸೂಚನೆ 'ಬಿಗ್ ಬಾಸ್' ಕಾರ್ಯಕ್ರಮ ಪ್ರಸಾರ ಆಗುವ ವೇಳೆ ವೀಕ್ಷಕರಿಗೆ ನೀಡಲಾಗಿದೆ.

ವೋಟಿಂಗ್ ಲೈನ್ ಕೂಡ ತೆರೆದಿಲ್ಲ.!

ಮುಂದಿನ ವಾರ ಎಲಿಮಿನೇಷನ್ ನಡೆಯುವುದರಿಂದ ಈ ವಾರದ ವೋಟಿಂಗ್ ಲೈನ್ ಗಳನ್ನೂ ಬಂದ್ ಮಾಡಲಾಗಿದೆ.

ಮೂವರು ಸುರಕ್ಷಿತ.?

ಈ ವಾರ ಎಲಿಮಿನೇಷನ್ ಇಲ್ಲದೇ ಇರುವುದರಿಂದ, ಸದ್ಯ ನಾಮಿನೇಟ್ ಆಗಿರುವ ಪ್ರಥಮ್, ಶಾಲಿನಿ ಮತ್ತು ಕೀರ್ತಿ ಈ ವಾರ ಸೇಫ್ ಆದ ಹಾಗೆ ಅಲ್ಲವೇ.?!

ಫಿನಾಲೆ ರೇಸ್ ಗೆ ಪೈಪೋಟಿ

ಸದ್ಯ ಫಿನಾಲೆಗೆ ಎಂಟ್ರಿ ಕೊಡಲು ಮೋಹನ್, ಮಾಳವಿಕಾ ಅವಿನಾಶ್, ಪ್ರಥಮ್, ಶಾಲಿನಿ, ಕೀರ್ತಿ ಮತ್ತು ರೇಖಾ ಪೈಪೋಟಿ ನಡೆಸುತ್ತಿದ್ದಾರೆ. ಇವರ ಪೈಕಿ ಯಾರು ಟಾಪ್ 3 ತಲುಪುತ್ತಾರೋ, ನೋಡೋಣ...

English summary
Bigg Boss Kannada 4, Week 15: Since there is Mid-Week elimination next week, Elimination for this weekend is cancelled.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada