»   » ಯಾರೂ ಹಾರ ಹಾಕಲಿಲ್ಲ ಅಂತ ದೇವರ ಹಾರ ಹಾಕೊಂಡ ಪ್ರಥಮ್.!

ಯಾರೂ ಹಾರ ಹಾಕಲಿಲ್ಲ ಅಂತ ದೇವರ ಹಾರ ಹಾಕೊಂಡ ಪ್ರಥಮ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಕೆಲವೇ ವಾರಗಳ ಹಿಂದೆ ನಡೆದ 'ಮಸಿ-ಹಾರ' ಟಾಸ್ಕ್ ನೆನಪಿದ್ಯಾ.? ಅದರಲ್ಲಿ ಪ್ರಥಮ್ ಗೆ ಯಾರೊಬ್ಬರೂ 'ಹಾರ' ಹಾಕಿರ್ಲಿಲ್ಲ. ಬದಲಾಗಿ, ಪ್ರಥಮ್ ಮುಖಕ್ಕೆ ಆಲ್ಮೋಸ್ಟ್ ಎಲ್ಲರೂ ಮಸಿ ಬಳಿದು ಅವಮಾನಿಸಿದ್ದು ನಿಮಗೆ ಗೊತ್ತಿರಲೇಬೇಕು.

ಈಗ ಪ್ರಥಮ್.. ಹಾರ.. ಮಸಿ ಬಗ್ಗೆ ನಾವು ಫ್ಲ್ಯಾಶ್ ಬ್ಯಾಕ್ ಗೆ ಹೋಗಲು ಕಾರಣ ಸ್ವತಃ ಪ್ರಥಮ್.![ಮುಖಕ್ಕೆ ಮಸಿ ಬಳಿದು ಅವಮಾನ: ಭಾವುಕರಾದ ಪ್ರಥಮ್]

ತಮಗೆ ಯಾರೂ ಹಾರ ಹಾಕಲಿಲ್ಲ ಎಂಬ ಕಾರಣಕ್ಕೆ ದೇವರಿಗೆ ಹಾಕಿದ್ದ ಹಾರವನ್ನ ಹಾಕೊಂಡು ಇಡೀ ಮನೆಯ ಸದಸ್ಯರ ಕೆಂಗಣ್ಣಿಗೆ ಪ್ರಥಮ್ ನಿನ್ನೆ ಗುರಿಯಾಗಿದ್ದರು.

ದೇವರ ಹಾರ ಧರಿಸಿದ ಪ್ರಥಮ್

''ಎಲ್ಲಾ ಹಾರ ಹಾಕಿಸಿಕೊಳ್ಳುವ ಅರ್ಹತೆ ಇದ್ದರೂ, ನಮಗೆ ಹಾಕಲಿಲ್ಲ. ಅದಕ್ಕೆ ನಾವೇ ಹಾಕೊಂಡ್ವಿ. ನಾವು ಯಾರಿಗೆ ಕಡಿಮೆ.? ದೇವರಿಗೆ ಈ ಹಾರವನ್ನ ಹಾಕಿದ್ದರು. ದೇವರ ಅನುಗ್ರಹ ನಮ್ಮ ಮೇಲೆ ಇರಲಿ ಅಂತ ಈ ಹಾರವನ್ನ ಹಾಕೊಂಡಿದ್ದೇನೆ. ನನಗೆ ನಿಮ್ಮ ಆಶೀರ್ವಾದ ಹೀಗೆ ಇರಲಿ'' ಅಂತ ಕನ್ನಡಾಭಿಮಾನಿಗಳಿಗೆ ಕ್ಯಾಮರಾ ಮೂಲಕ ಪ್ರಥಮ್ ಕೇಳಿಕೊಂಡರು.[ಪ್ರಥಮ್ ಮುಖಕ್ಕೆ ಮಸಿ: ಶಾಲಿನಿ, ಕೀರ್ತಿ, ಮಾಳವಿಕಾ ವಿರುದ್ಧ ವೀಕ್ಷಕರು ಸಿಡಿಮಿಡಿ]

ದೇವರಿಗೆ ಹಾಕಿದ್ದ ಹಾರವನ್ನ ಹಾಕೊಳ್ತಾರಾ ಯಾರಾದರೂ.?

ದೇವರ ಹಾರ ಧರಿಸಿದ್ದ ಪ್ರಥಮ್ ರವರನ್ನ ನೋಡಿ, ''ದೇವರಿಗೆ ಹಾಕಿದ್ದ ಹಾರವನ್ನ ಹಾಕೊಳ್ತಾರಾ ಯಾರಾದರೂ'' ಅಂತ ಕೀರ್ತಿ ಮತ್ತು ಮೋಹನ್ ಚರ್ಚೆ ಆರಂಭಿಸಿದರು.[ಪಿರಿ ಪಿರಿ ಪ್ರಥಮ್ ಗೆ ಭೇಷ್ ಎಂದ ಕಿಚ್ಚ ಸುದೀಪ್.!]

ಪ್ರಥಮ್ ಕೊಟ್ಟ ಸಮರ್ಥನೆ

ಎಲ್ಲರ ಚರ್ಚೆ ಕೇಳಿಸಿಕೊಂಡ್ಮೇಲೆ, ''ದೇವರಿಗೆ ಹಾಕಿದ್ದ ಹಾರವನ್ನ ಕಿವಿ ಮೇಲೆ ಇಟ್ಟುಕೊಳ್ಳಲ್ವಾ? ಕತ್ತು ಮೇಲೆ ಹಾಕಲ್ವಾ? ಹಾಗೇ ನಾನು ಹಾಕೊಂಡಿದ್ದೀನಿ. ನಮ್ಮ ಕಡೆ ಹೀಗೆ ಹಾಕೊಳ್ಳೋದು'' ಅಂತ ಪ್ರಥಮ್ ಸಮರ್ಥಿಸಿಕೊಂಡರು.

ರೇಖಾ ವಾದ

''ದೇವರಿಗೆ ಹಾಕಿದ್ದ ಹಾರವನ್ನ ಹಾಕೊಳ್ಬಾರ್ದು'' ಅಂತ ಪ್ರಥಮ್ ಬಳಿ ರೇಖಾ ವಾದಕ್ಕಿಳಿದರು.

ವಾದಕ್ಕೆ ಮಣಿದ ಪ್ರಥಮ್

''ಹಾಕ್ಬಾರ್ದು ಅಂದ್ರೆ ಹಾಕೊಳ್ಳೋದು ಬೇಡ'' ಅಂತ ಹಾರವನ್ನ ತೆಗೆದು ಕುತ್ತಿಗೆ ಮೇಲೆ ಪ್ರಥಮ್ ಹಾಕೊಂಡರು.

ಭಾವನೆಗಳಿಗೆ ಬೇಸರ ಬೇಡ

ನಂತರ ಏನು ಅನಿಸ್ತೋ ಏನೋ... ''ಭಾವನೆಗಳಿಗೆ ಬೇಸರ ಮಾಡುವುದು ಬೇಡ'' ಅಂತ ಹಾರವನ್ನ ತೆಗೆದು ಮರಕ್ಕೆ ಹಾಕಿದರು ಪ್ರಥಮ್.

English summary
Bigg Boss Kannada 4, Week 15: Day 100 Highlights - Pratham's another controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada