»   » 'ಒಳ್ಳೆ ಹುಡುಗ' ಪ್ರಥಮ್ ಹೀಗೆ ಮಾಡಿದ್ದು ಸರಿನಾ.? ನೀವೇ ಹೇಳಿ..

'ಒಳ್ಳೆ ಹುಡುಗ' ಪ್ರಥಮ್ ಹೀಗೆ ಮಾಡಿದ್ದು ಸರಿನಾ.? ನೀವೇ ಹೇಳಿ..

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ನಿಮಗೆ ಗೊತ್ತಿರುವ ಹಾಗೆ 'ದುಡ್ಡು ದುಡ್ಡು' ಟಾಸ್ಕ್ ಚಾಲ್ತಿಯಲ್ಲಿದೆ. ಈ ಟಾಸ್ಕ್ ನ ಭಾಗವಾಗಿ ನೀಡಿರುವ 'ಆನೆ ಪಟಾಕಿ' ಚಟುವಟಿಕೆಯಲ್ಲಿ ಮನೆಯ ಸದಸ್ಯರು 'ಬಾಂಬ್' ಎಸೆಯುತ್ತಿದ್ದಾರೆ.[ದುಡ್ಡಿಗಾಗಿ 'ಬಾಂಬ್' ಎಸೆಯುತ್ತಿರುವ 'ಬಿಗ್ ಬಾಸ್' ಸ್ಪರ್ಧಿಗಳು.!]

ಹಾಗೆ 'ಒಳ್ಳೆ ಹುಡುಗ' ಪ್ರಥಮ್ ಮೇಲೆ ಪ್ರಯೋಗವಾದ 'ಬಾಂಬ್'ನಿಂದಾಗಿ ಕೀರ್ತಿ ಗಳಿಸಿದ್ದ ಮೆಡಲ್ ನಾಶವಾಯ್ತು.

ಮೋಹನ್ ಗೆ ಸಿಕ್ಕ 'ಬಾಂಬ್' ಪ್ರಥಮ್ ಮೇಲೆ ಪ್ರಯೋಗ

''ಬಿಗ್ ಬಾಸ್' ಮನೆಯ ನೆನಪಿಗಾಗಿ ಕೀರ್ತಿ ತಮ್ಮ ಬಳಿ ಇರಿಸಿಕೊಂಡಿರುವ ಒಂದು ಮೆಡಲ್ ನ ನಾಶ ಪಡಿಸಬೇಕು'' ಎಂಬ ಸಂದೇಶ ಹೊತ್ತ 'ಬಾಂಬ್'ನ ತೆಗೆದು ಪ್ರಥಮ್ ಮೇಲೆ ಮೋಹನ್ ಪ್ರಯೋಗಿಸಿದರು.['ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟ 'ಒಳ್ಳೆ ಹುಡುಗ' ಪ್ರಥಮ್]

ಟಾಸ್ಕ್ ಅಂತ ಒಪ್ಪಿಕೊಂಡ ಕೀರ್ತಿ.!

''ಇದು 'ಬಿಗ್ ಬಾಸ್' ನೀಡಿರುವ ಟಾಸ್ಕ್. ಓಕೆ. ಆಗಲಿ..'' ಅಂತ ಮೆಡಲ್ ಕೊಡಲು ಕೀರ್ತಿ ಒಪ್ಪಿಕೊಂಡರು.[ಯಾರೂ ಹಾರ ಹಾಕಲಿಲ್ಲ ಅಂತ ದೇವರ ಹಾರ ಹಾಕೊಂಡ ಪ್ರಥಮ್.!]

ಫೋಟೋಗೆ ಪೋಸ್ ಕೊಟ್ಟ ಕೀರ್ತಿ

ಪ್ರಥಮ್ ಕೈಗೆ ಮೆಡಲ್ ಕೊಡುವ ಮುನ್ನ, ಮೆಡಲ್ ಧರಿಸಿ ಕ್ಯಾಮರಾ ಮುಂದೆ ನಿಂತು ಒಂದು ಫೋಟೋಗಾಗಿ ಕೀರ್ತಿ ಪೋಸ್ ನೀಡಿದರು.[ಜಿದ್ದಿಗೆ ಬಿದ್ದು ಬರೋಬ್ಬರಿ 45 ಹಸಿ ಮೆಣಸಿನಕಾಯಿ ತಿಂದ ಪ್ರಥಮ್.!]

ಮಡೆಲ್ ಒಡೆಯುವ ಮುನ್ನ ಪ್ರಥಮ್ ಕೊಟ್ಟ ವಿವರಣೆ...

''68ನೇ ದಿನ 'ಬಿಗ್ ಬಾಸ್ ಪ್ರೈಮರಿ ಸ್ಕೂಲ್ ಟಾಸ್ಕ್'ನಲ್ಲಿ ನಾನು ಕೀರ್ತಿ ಗೆ ಈ ಪ್ಲಾಸ್ಟಿಕ್ ಮೆಡಲ್ ಹಾಕಿದ್ದೆ. ಕಪ್ಪೆ ರೇಸ್ ನಲ್ಲಿ ಕೀರ್ತಿ ಗೆದ್ದಿದ್ದಕ್ಕೆ... ಈಗ ಇದನ್ನ ಮುರಿಯುವುದಕ್ಕೆ ಟಾಸ್ಕ್ ಕೊಟ್ಟಿದ್ದೀರಾ'' ಅಂತ 'ಬಿಗ್ ಬಾಸ್'ಗೆ ಕ್ಯಾಮರಾ ಮೂಲಕ ಪ್ರಥಮ್ ವಿವರಣೆ ನೀಡಲು ಆರಂಭಿಸಿದರು.

'ಬಿಗ್ ಬಾಸ್' ಆದೇಶ ಪಾಲನೆ

''ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ನಾನು ಒಂದು ಪ್ರಾಮಿಸ್ ಮಾಡಿದ್ದೆ. ಏನಂದರೆ, ಬಿಗ್ ಬಾಸ್ ಆದೇಶಕ್ಕೆ ಬದ್ಧನಾಗಿರುತ್ತೇನೆ ಅಂತ. ನಿಮ್ಮ ಆದೇಶಕ್ಕೆ ಬದ್ಧವಾಗಿ ನಾನು ಇದನ್ನ ಮುರಿಯುತ್ತಿದ್ದೇನೆ'' ಎಂದು ಹೇಳುತ್ತಾ ಮೆಡಲ್ ನ ಪ್ರಥಮ್ ಒಡೆದು ಹಾಕಿದರು.

ಕೀರ್ತಿ ಶ್ರಮ ದೊಡ್ಡದು

''ಈ ಒಂದು ಲೋಹದ ಮೆಡಲ್ ಕೀರ್ತಿ ರವರ ಶ್ರಮಕ್ಕಿಂತ ದೊಡ್ಡದಲ್ಲ. ಬೆಂಡಿಂಗ್/ಕಪ್ಪೆ ರೇಸ್ ನಲ್ಲಿ ಗೆದ್ದದಿಕ್ಕಿಂತ ದೊಡ್ಡದಲ್ಲ ಅಂತ ನಾನು ಭಾವಿಸುತ್ತೇನೆ. ಇದಕ್ಕಿಂತ ಯಶಸ್ವಿ ಆಗಿರುವುದನ್ನು ಅವರು ಮಾಡಿದ್ದಾರೆ ಅಂತ ಅಂದುಕೊಂಡು ನಾನು ನಿಮ್ಮ ಅದೇಶವನ್ನು ಪಾಲಿಸಿದ್ದೇನೆ'' ಎಂದು ಸ್ಪಷ್ಟನೆ ಕೊಟ್ಟರು ಪ್ರಥಮ್.

ಮಾಳವಿಕಾ ಸೀರೆ ಕತ್ತರಿಸಿದ ಕೀರ್ತಿ.!

ಇತ್ತ ಕೀರ್ತಿ ಗಳಿಸಿದ್ದ ಮೆಡಲ್ ಒಡೆದು ಹೋಗುವುದಕ್ಕೂ ಮುನ್ನ, ಇದೇ 'ಆನೆ ಪಟಾಕಿ' ಟಾಸ್ಕ್ ಅನುಸಾರ ಮಾಳವಿಕಾ ರವರ ಸೀರೆಯನ್ನ ಕೀರ್ತಿ ಕತ್ತರಿಸಿದ್ರು.

ಟಾಸ್ಕ್ ಮಾಡಲ್ಲ ಎಂದ ಮೋಹನ್.!

''ರೇಖಾ ಅವರ ಹುಟ್ಟುಹಬ್ಬಕ್ಕೆಂದು ಮನೆಯ ಸದಸ್ಯರು ತಯಾರಿಸಿದ್ದ ಮೂರು ಗ್ರೀಟಿಂಗ್ ಕಾರ್ಡ್ ಗಳನ್ನು ಹರಿಯಬೇಕು'' ಎಂಬ ಸವಾಲನ್ನು ಮೋಹನ್ ಸ್ವೀಕರಿಸಲಿಲ್ಲ.

ಕಾರಣ ಏನು.?

''ಹುಟ್ಟುಹಬ್ಬ ವರ್ಷಕ್ಕೆ ಒಮ್ಮೆ ಬರುತ್ತೆ. ಆದ್ರೆ, 'ಬಿಗ್ ಬಾಸ್' ನಲ್ಲಿ ಹುಟ್ಟುಹಬ್ಬ ಮಾಡಿಕೊಳ್ಳುವ ಅವಕಾಶ ಎಷ್ಟು ಜನಕ್ಕೆ ಸಿಗುತ್ತೆ? ರೇಖಾ ಅವರಿಗೆ ಆ ಅವಕಾಶ ಸಿಕ್ತು. ಹೀಗಾಗಿ ನಾನು ಈ ಟಾಸ್ಕ್ ಮಾಡಲ್ಲ. ಕ್ಷಮಿಸಿ'' ಅಂತ ಟಾಸ್ಕ್ ನ ಮೋಹನ್ ನಿರಾಕರಿಸಿಬಿಟ್ಟರು.

ಯಾರು ಮಾಡಿದ್ದು ಸರಿ.?

ಈ ಮೂರು ಟಾಸ್ಕ್ ಗಳ ಪೈಕಿ ನಿಮ್ಮ ಪ್ರಕಾರ ಯಾರು ಮಾಡಿದ್ದು ಸರಿ.? ವಿವರಣೆ ನೀಡಿ, 'ಬಿಗ್ ಬಾಸ್' ಆದೇಶ ಪಾಲನೆ ಮಾಡಿದ ಪ್ರಥಮ್ ನಡೆ ಸರಿ ಅಂತ ನಿಮಗೆ ಅನ್ಸುತ್ತಾ.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 4: Week 15 - Kannada Director Pratham broke Keerthi's Medal as part of 'Aane Pataki' task.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada