»   » 'ಬಿಗ್ ಬಾಸ್ ಕನ್ನಡ-4': ಅಚ್ಚರಿ ಮೂಡಿಸಿದ ಈ ವಾರದ ನಾಮಿನೇಷನ್.!

'ಬಿಗ್ ಬಾಸ್ ಕನ್ನಡ-4': ಅಚ್ಚರಿ ಮೂಡಿಸಿದ ಈ ವಾರದ ನಾಮಿನೇಷನ್.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಯಾರು ಯಾವಾಗ ಯಾರಿಗೆ ಸ್ನೇಹಿತರಾಗುತ್ತಾರೋ, ಶತ್ರುಗಳಾಗಿ ಬದಲಾಗುತ್ತಾರೋ... ಊಹಿಸುವುದು ಅಸಾಧ್ಯ. ಯಾಕಂದ್ರೆ, 'ಬಿಗ್ ಬಾಸ್' ಆಡಿಸುವ ಆಟವೇ ಅಂಥದ್ದು.

'ಬಿಗ್ ಬಾಸ್' ಮನೆಯಲ್ಲಿ ಯಾವಾಗ ಏನ್ ಬೇಕಾದರೂ ಆಗುತ್ತೆ ಎನ್ನುವುದಕ್ಕೆ ನಿನ್ನೆ ನಡೆದ ನಾಮಿನೇಷನ್ ಪ್ರಕ್ರಿಯೆ ಸಾಕ್ಷಿ. ನಾಮಿನೇಷನ್ ಬಗ್ಗೆ ಮಾತನಾಡುವ ಮುನ್ನ, ಒಂದು ವಾರದ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋಗ್ಬರೋಣ ಬನ್ನಿ.

ಕಾವ್ಯ ಶಾಸ್ತ್ರಿ ಮತ್ತು ಶೀತಲ್ ಶೆಟ್ಟಿ ಜೊತೆ ನಟಿ ರೇಖಾ ಎಷ್ಟು ಕ್ಲೋಸ್ ಆಗಿದ್ದರು ಅಂತ ನೀವೇ ನಿಮ್ಮ ಕಣ್ಣಾರೆ ನೋಡಿದ್ದೀರಾ. ಮೂರು ಜನ ಕೂತ್ಕೊಂಡು ಕ್ರಿಕೆಟರ್ ದೊಡ್ಡ ಗಣೇಶ್ ಮತ್ತು ಸಂಜನಾ ಬಗ್ಗೆ ಗುಸುಗುಸು ಮಾತಾಡಿದ್ದನ್ನ ಇಡೀ ಕರ್ನಾಟಕವೇ ಕಣ್ತುಂಬಿಕೊಂಡಿದೆ. ಸುದೀಪ್ ಕೂಡ ಈ ಬಗ್ಗೆ ಬೆಂಡೆತ್ತಿದ್ದೂ ಆಗಿದೆ. ಅದರ ಪರಿಣಾಮವೋ, ಏನೋ....ನಟಿ ರೇಖಾ ಈ ಬಾರಿ ಶೀತಲ್ ಶೆಟ್ಟಿಯನ್ನ ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಮಾಡಿದ್ದಾರೆ. ಮುಂದೆ ಓದಿ....

ನೇರವಾಗಿ ನಾಮಿನೇಟ್ ಆದ ಶೀತಲ್ ಶೆಟ್ಟಿ.!

ವಾರದ ಹಿಂದೆ ಶೀತಲ್ ಶೆಟ್ಟಿಗೆ ಗೆಳತಿ ಆಗಿದ್ದ ನಟಿ ರೇಖಾ, ಈ ವಾರ ಅದೇ ಶೀತಲ್ ಶೆಟ್ಟಿಯನ್ನ ನೇರವಾಗಿ 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ಇಚ್ಛಿಸಿರುವುದು ಅಚ್ಚರಿ ಮೂಡಿಸಿದೆ. 'ಬಿಗ್ ಬಾಸ್' ಮನೆಯ ಎರಡನೇ ವಾರದ ಕ್ಯಾಪ್ಟನ್ ಆಗಿರುವ ನಟಿ ರೇಖಾಗೆ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಇತ್ತು. [ಬಿಗ್ ಬಾಸ್ 4: ಅಬ್ಬಬ್ಬಾ..ಹೆಣ್ಣು ಹೈಕಳ ಹಿಂದೆ ಇಷ್ಟೊಂದು ಸೀಕ್ರೆಟ್ಸಾ?]

ಕಾರಣ ಏನು?

ಶೀತಲ್ ಶೆಟ್ಟಿಗೆ ಮುಂಗೋಪ ಜಾಸ್ತಿ. ಹೀಗಾಗಿ ನಾಮಿನೇಟ್ ಮಾಡಿರುವುದಾಗಿ ನಟಿ ರೇಖಾ ತಿಳಿಸಿದ್ದಾರೆ. [ಕಿಚ್ಚ ಸುದೀಪ್ ಮುಂದೆ ಎರಡು ಬಾರಿ ಕ್ಷಮೆ ಕೇಳಿದ ದೊಡ್ಡ ಗಣೇಶ್.!]

ಈ ಬಾರಿ ಕೂಡ ಪ್ರಥಮ್ ಮಿಸ್ ಇಲ್ಲ.!

'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರಿಗೂ ಕ್ವಾಟ್ಲೆ ನೀಡುತ್ತಿರುವ ಪ್ರಥಮ್ ಈ ಬಾರಿ ಕೂಡ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ['ಒಳ್ಳೆ ಹುಡುಗ' ಪ್ರಥಮ್ ಬಗ್ಗೆ ದೊಡ್ಡ ಗಣೇಶ್ ಮಾಡಿದ ಕಾಮೆಂಟ್ ಏನು.?]

ಪ್ರಥಮ್ ಗೆ ಅತ್ಯಧಿಕ ವೋಟ್ಸ್.!

'ಒಳ್ಳೆ ಹುಡುಗ' ಪ್ರಥಮ್ ಗೆ ಬರೋಬ್ಬರಿ 11 ವೋಟ್ ಗಳು ಬಿದ್ದಿವೆ ಅಂದ್ರೆ ನೀವೇ ಊಹಿಸಿ, 'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಪಿರಿಪಿರಿ ಎಷ್ಟಿದೆ ಅಂತ.

ವೋಟ್ ಮಾಡಿದವರು ಯಾರ್ಯಾರು.?

ಕೀರ್ತಿ ಕುಮಾರ್, ಶೀತಲ್ ಶೆಟ್ಟಿ, ಭುವನ್ ಪೊನ್ನಣ್ಣ, ಸಂಜನಾ, ಮೋಹನ್, ಕಾವ್ಯ ಶಾಸ್ತ್ರಿ, ಮಾಳವಿಕಾ, ದೊಡ್ಡ ಗಣೇಶ್, ಶಾಲಿನಿ, ಚೈತ್ರ ಮತ್ತು ನಿರಂಜನ್, ಪ್ರಥಮ್ ವಿರುದ್ಧ ಮತ ಚಲಾವಣೆ ಮಾಡಿದ್ದಾರೆ.

ನಾಮಿನೇಷನ್ ಲಿಸ್ಟ್ ನಲ್ಲಿದ್ದಾರೆ ದೊಡ್ಡ ಗಣೇಶ್.!

ಕೀರ್ತಿ, ಶೀತಲ್ ಶೆಟ್ಟಿ, ಸಂಜನಾ, ಪ್ರಥಮ್, ಮಾಳವಿಕಾ ಅವಿನಾಶ್ ಸೇರಿದಂತೆ ಒಟ್ಟು ಆರು ಮಂದಿ ದೊಡ್ಡ ಗಣೇಶ್ ವಿರುದ್ಧ ವೋಟ್ ಮಾಡಿದ್ದರಿಂದ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಕ್ರಿಕೆಟರ್ ದೊಡ್ಡ ಗಣೇಶ್ ಕೂಡ ನಾಮಿನೇಟ್ ಆಗಿದ್ದಾರೆ.

ಕಾವ್ಯ ಶಾಸ್ತ್ರಿ ಹೆಸರು ಬಂತು.!

'ವಾಪಸ್ ಮನೆಗೆ ಹೋಗ್ಬೇಕು' ಅಂತ ಕಣ್ಣೀರ ಧಾರೆ ಸುರಿಸಿದ ಕಾವ್ಯ ಶಾಸ್ತ್ರಿ ಕೂಡ ಈ ಬಾರಿಯ ನಾಮಿನೇಷನ್ ಲಿಸ್ಟ್ ನಲ್ಲಿದ್ದಾರೆ.

ಮನೆಯಲ್ಲಿ ಸಂಜನಾ ಅಷ್ಟಕಷ್ಟೆ.!

ಮೊದಲ ವಾರ ನಾಮಿನೇಟ್ ಆಗಿದ್ದರೂ, ಇನ್ನೂ ಹುಡುಗಾಟ ಆಡುತ್ತಿರುವ ಕಿರುತೆರೆ ನಟಿ ಸಂಜನಾ ಎರಡನೇ ವಾರವೂ ನಿಮ್ಮ ಮತಗಳ ನಿರೀಕ್ಷೆಯಲ್ಲಿದ್ದಾರೆ.

ಒಂದು ವೋಟ್ ನಲ್ಲಿ ಬಚಾವ್ ಆದ ಚೈತ್ರ

ಗಾಯಕಿ ಚೈತ್ರ ವಿರುದ್ಧ ಭುವನ್ ಪೊನ್ನಣ್ಣ ಮತ್ತು ಕಾರುಣ್ಯ ರಾಮ್ ಮತ ಚಲಾಯಿಸಿದ್ದರು. ಇನ್ನೊಂದು ಎಕ್ಸ್ ಟ್ರಾ ವೋಟ್ ಬಿದ್ದಿದ್ದರೂ, ಚೈತ್ರ ಕೂಡ ನಾಮಿನೇಟ್ ಆಗುತ್ತಿದ್ದರು.

ಒಂದು ವೋಟ್ ಪಡೆದವರು...

ನಟಿ ಮಾಳವಿಕಾ ಅವಿನಾಶ್, ಮೋಹನ್ ಮತ್ತು ಕಾರುಣ್ಯ ರಾಮ್ ವಿರುದ್ಧ ಒಂದೊಂದೇ ವೋಟ್ ಬಿದ್ದ ಕಾರಣ 'ನಾಮಿನೇಟ್' ಆಗ್ಲಿಲ್ಲ.

ಮೂವರು ಸೇಫ್ ಆಗಿದ್ದರು.!

'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಕಾರಣ ನಟಿ ರೇಖಾ, ಹೊಸ ಎಂಟ್ರಿ ಪಡೆದುಕೊಂಡ ಪರಿಣಾಮ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತು 'ಬಾಲ್ ಬ್ಯಾಲೆನ್ಸ್' ಟಾಸ್ಕ್ ಗೆದ್ದು ಇಮ್ಯೂನಿಟಿ ಪಡೆದಿದ್ರಿಂದ ಭುವನ್ ಪೊನ್ನಣ್ಣ 'ನಾಮಿನೇಷನ್ ಪ್ರಕ್ರಿಯೆ' ಇಂದ ಸೇಫ್ ಆಗಿದ್ದರು.

ಈ ಐವರ ಭವಿಷ್ಯ ನಿಮ್ಮ ಕೈಯಲ್ಲಿದೆ.!

ಪ್ರಥಮ್, ದೊಡ್ಡ ಗಣೇಶ್, ಸಂಜನಾ, ಕಾವ್ಯ ಶಾಸ್ತ್ರಿ ಮತ್ತು ಶೀತಲ್ ಶೆಟ್ಟಿ....ಈ ಐವರ ಭವಿಷ್ಯ ಈಗ ನೀವು ಮಾಡುವ ಎಸ್.ಎಂ.ಎಸ್ ಮೇಲೆ ಅವಲಂಬಿತವಾಗಿದೆ.

ಯಾರು ಹೊರ ಹೋಗಬೇಕು?

ಪ್ರಥಮ್, ದೊಡ್ಡ ಗಣೇಶ್, ಸಂಜನಾ, ಕಾವ್ಯ ಶಾಸ್ತ್ರಿ ಮತ್ತು ಶೀತಲ್ ಶೆಟ್ಟಿ....ಈ ಐವರ ಪೈಕಿ 'ಬಿಗ್ ಬಾಸ್' ಮನೆಯಿಂದ ಯಾರು ಹೋಗಬೇಕು ಅಂತ ನೀವು ಬಯಸುತ್ತೀರಾ? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 4, Week 2 : Former Indian Fast Bowler Dodda Ganesh, Director Pratham, Sanjana, Kavya Shastry and Sheetal Shetty are nominated for this week's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada