»   » 'ಬಿಗ್ ಬಾಸ್ ಕನ್ನಡ-4' : ಈ ವಾರ ಗೇಟ್ ಪಾಸ್ ಯಾರಿಗೆ?

'ಬಿಗ್ ಬಾಸ್ ಕನ್ನಡ-4' : ಈ ವಾರ ಗೇಟ್ ಪಾಸ್ ಯಾರಿಗೆ?

Posted By:
Subscribe to Filmibeat Kannada

ಒಂದೇ ಒಂದು ಆಟ ಇಡೀ 'ಬಿಗ್ ಬಾಸ್' ಮನೆಯ ಲೆಕ್ಕಾಚಾರ ಉಲ್ಪಾ-ಪಲ್ಟಾ ಮಾಡಿದ ಪರಿಣಾಮ ಈ ವಾರ ಡೇಂಜರ್ ಝೋನ್ ನಲ್ಲಿದ್ದಾರೆ ನಟಿ ಶಾಲಿನಿ ಹಾಗೂ 'ಸ್ಪರ್ಶ' ರೇಖಾ.

ಇಷ್ಟು ದಿನ 'ನಾವು ಸೇಫ್' ಅಂತ ತಮ್ಮ ಗುಂಪಿನ ಜೊತೆ ಜಾಲಿ ಆಗಿದ್ದ ನಟಿ ಶಾಲಿನಿಗೆ ಈ ವಾರ ಎಲಿಮಿನೇಷನ್ ಬಿಸಿ ತಟ್ಟಿದೆ. ಇನ್ನೂ, 'ಚಾಲಾಕಿ' ಆಗಿದ್ದರೂ ಯಾರ ತಂಟೆಗೂ ಹೋಗದೆ, ಸೈಲೆಂಟ್ ಆಗಿ ಆಟ ಆಡುತ್ತಿದ್ದ ನಟಿ ರೇಖಾ ಕೂಡ ಈ ವಾರ ನಾಮಿನೇಟ್ ಆಗಿದ್ದಾರೆ. ಪ್ರಥಮ್ ಬಿಟ್ಟರೆ ಈ ವಾರ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಹೊರ ಹೋಗಲು ನಾಮ ನಿರ್ದೇಶನಗೊಂಡಿರುವವರ ಪೈಕಿ 'ಹೆಣ್ಮಕ್ಳೇ ಮೇಲುಗೈ ಗುರು'! [ಬಿಗ್ ಬಾಸ್ ಮನೆಯಲ್ಲಿ ದಾಖಲೆ: ಪ್ರಥಮ್ ಫಸ್ಟ್, ಸಂಜನಾ ನೆಕ್ಸ್ಟ್]

ನಾಲ್ಕನೇ ವಾರ 'ಬಿಗ್ ಬಾಸ್' ಮನೆಯಲ್ಲಿ ಆದ ನಾಮಿನೇಷನ್ ಪ್ರಕ್ರಿಯೆ ಕುರಿತು ಸಂಪೂರ್ಣ ವರದಿ ಇಲ್ಲಿದೆ ನೋಡಿರಿ...

ಕ್ಯಾಪ್ಟನ್ ಆದ ನಟಿ ಮಾಳವಿಕಾ ಅವಿನಾಶ್

ಈ ವಾರ ಮನೆಯ ಕ್ಯಾಪ್ಟನ್ ಆಗಿ ನಟಿ ಮಾಳವಿಕಾ ಅವಿನಾಶ್ ಆಯ್ಕೆ ಆಗಿದ್ದಾರೆ. ಹೀಗಾಗಿ, ಎಲಿಮಿನೇಷನ್ ನಿಂದ ಮಾಳವಿಕಾ ಅವಿನಾಶ್ ಸೇಫ್.

ಮಾಳವಿಕಾ ರವರ ಟಾರ್ಗೆಟ್ ಶಾಲಿನಿ.!

ಕಳೆದ ವಾರದ 'ನಮ್ ಏರಿಯಾದಲ್ಲಿ ಒಂದಿನ' ಟಾಸ್ಕ್ ನಲ್ಲಿ ಗೊಂದಲ ಉಂಟಾಗಲು ನಟಿ ಶಾಲಿನಿ ಕಾರಣ ಅಂತ ಹೇಳುತ್ತಾ, ಶಾಲಿನಿ ಹೆಸರನ್ನ ಕ್ಯಾಪ್ಟನ್ ಮಾಳವಿಕಾ ಸೂಚಿಸಿದರು. ಹೀಗಾಗಿ, ಶಾಲಿನಿ ನೇರವಾಗಿ ನಾಮಿನೇಟ್ ಆದರು.

ಮೊದಲ ಬಾರಿ ನಟಿ ರೇಖಾ ವಿರುದ್ಧ ಮತಗಳು

ಮೂರು ವಾರ ಯಾವುದೇ ವಿವಾದಗಳಿಗೆ ಸಿಲುಕದ ನಟಿ ರೇಖಾ ಈ ವಾರ ನಾಮಿನೇಟ್ ಆಗಿದ್ದಾರೆ.

ರೇಖಾ ವಿರುದ್ಧ ಮತ ಹಾಕಿದವರು ಯಾರು?

ನಟಿ ರೇಖಾ ವಿರುದ್ಧ ನಟ ಮೋಹನ್, ಕಾವ್ಯ ಮತ್ತು ಭುವನ್ ಮತ ಹಾಕಿದರು.

ಎರಡನೇ ಬಾರಿ ನಾಮಿನೇಟ್ ಆಗಿರುವ ಶೀತಲ್ ಶೆಟ್ಟಿ

ಮೂರು ವಾರಗಳಲ್ಲಿ ಎರಡನೇ ಬಾರಿ ನಾಮಿನೇಟ್ ಆಗಿರುವವರು ನ್ಯೂಸ್ ಆಂಕರ್ ಶೀತಲ್ ಶೆಟ್ಟಿ. ನಟ ಮೋಹನ್, ಸಂಜನಾ ಮತ್ತು ಭುವನ್ ಪೊನ್ನಣ್ಣ...ಶೀತಲ್ ವಿರುದ್ಧ ವೋಟ್ ಮಾಡಿದ್ದಾರೆ.

ಪ್ರಥಮ್ ಮಿಸ್ ಇಲ್ಲ.!

ಪ್ರಥಮ್ ಏನೇ ಮಾಡಿದರೂ, 'ಬಿಗ್ ಬಾಸ್' ಮನೆ ಸದಸ್ಯರಿಗೆ ತೃಪ್ತಿ ಇಲ್ಲ. ಇದೇ ಕಾರಣಕ್ಕೋ ಏನೋ, ಈ ಬಾರಿ ಕೂಡ ಪ್ರಥಮ್ ನಾಮಿನೇಟ್ ಆಗಿದ್ದಾರೆ.

ಸಂಜನಾ ರದ್ದು ಅದೇ ಕಥೆ.!

ಮೂರು ವಾರಗಳಲ್ಲಿ ನಟಿ ಸಂಜನಾ ರಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂಬ ಕಾರಣಕ್ಕೆ ಈ ವಾರವೂ ನಟಿ ಸಂಜನಾ ರನ್ನ 'ಬಿಗ್ ಬಾಸ್' ಮನೆಯ ಇತರೆ ಸದಸ್ಯರು ನಾಮಿನೇಟ್ ಮಾಡಿದ್ದಾರೆ.

ಪ್ರಥಮ್ ಹೆಸರು ಹೇಳಿದವರು ಯಾರ್ಯಾರು?

ಕೀರ್ತಿ, ನಿರಂಜನ್, ಶೀತಲ್ ಶೆಟ್ಟಿ, ಶಾಲಿನಿ ಮತ್ತು ಕಾವ್ಯ... ಪ್ರಥಮ್ ಹೆಸರನ್ನು ಹೇಳಿದರು.

ಸಂಜನಾ ರನ್ನ ನಾಮಿನೇಟ್ ಮಾಡಿದವರು ಯಾರು?

ಸಂಜನಾ ರವರನ್ನ ಪ್ರಥಮ್, ಕೀರ್ತಿ ಮತ್ತು ಶೀತಲ್ ಶೆಟ್ಟಿ ನಾಮಿನೇಟ್ ಮಾಡಿದರು.

ಹ್ಯಾಟ್ರಿಕ್ ಬಾರಿಸಿದ ಪ್ರಥಮ್, ಸಂಜನಾ

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಮೂರು ವಾರಗಳು ಸತತವಾಗಿ ನಾಮಿನೇಟ್ ಆಗಿ ಪ್ರಥಮ್ ಹಾಗೂ ಸಂಜನಾ ಹ್ಯಾಟ್ರಿಕ್ ಬಾರಿಸಿದ್ದಾರೆ.

ಒಂದು ವೋಟ್ ಇಂದ ಬಚಾವ್ ಆದವರು.!

ನಟ ಮೋಹನ್, ಕಾವ್ಯ ಶಾಸ್ತ್ರಿ, ಕಾರುಣ್ಯ ರಾಮ್ ಹಾಗೂ ನಿರಂಜನ್ ದೇಶಪಾಂಡೆ ವಿರುದ್ಧ ತಲಾ ಎರಡು ವೋಟ್ ಗಳು ಬಿದ್ದಿದ್ದವು. ಯಾರಿಗಾದರೂ ಇನ್ನೊಂದು ವೋಟ್ ಬಿದ್ದಿದ್ದರೆ, ಎಲಿಮಿನೇಷನ್ ಭೀತಿ ಎದುರಿಸಬೇಕಿತ್ತು. ಕೇವಲ ಒಂದೇ ಒಂದು ವೋಟ್ ನಿಂದ ಇವರೆಲ್ಲಾ ಈ ವಾರ ಬಚಾವ್ ಆಗಿದ್ದಾರೆ.

ಒಂದು ವೋಟ್ ಪಡೆದುಕೊಂಡವರು...

ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಭುವನ್ ಪೊನ್ನಣ್ಣ ಒಂದು ವೋಟ್ ಪಡೆದುಕೊಂಡಿದ್ದರಿಂದ ನಾಮಿನೇಟ್ ಆಗಲಿಲ್ಲ.

ಈ ಐವರ ಭವಿಷ್ಯ ನಿಮ್ಮ ಕೈಯಲ್ಲಿ

ಪ್ರಥಮ್, ಸಂಜನಾ, ಶೀತಲ್ ಶೆಟ್ಟಿ, ರೇಖಾ ಹಾಗೂ ಶಾಲಿನಿ...ಈ ಐವರ ಭವಿಷ್ಯ ನೀವು ಮಾಡುವ ಎಸ್.ಎಂ.ಎಸ್ ಮೇಲೆ ಅವಲಂಬಿತವಾಗಿದೆ.

ಯಾರು ಔಟ್ ಆಗಬೇಕು?

ಪ್ರಥಮ್, ಸಂಜನಾ, ಶೀತಲ್ ಶೆಟ್ಟಿ, ರೇಖಾ ಹಾಗೂ ಶಾಲಿನಿ...ಈ ಐವರ ಪೈಕಿ ನಿಮ್ಮ ಪ್ರಕಾರ ಯಾರು ಔಟ್ ಆಗಬೇಕು? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 4, Week 4 : Director Pratham, Sanjana, Sheetal Shetty, Shalini and Rekha are nominated for this week's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada