»   » ಡಬಲ್ ಶಾಕ್: 'ಬಿಗ್ ಬಾಸ್' ಮನೆಯಿಂದ ಶಾಲಿನಿ, ಶೀತಲ್ ಔಟ್.!

ಡಬಲ್ ಶಾಕ್: 'ಬಿಗ್ ಬಾಸ್' ಮನೆಯಿಂದ ಶಾಲಿನಿ, ಶೀತಲ್ ಔಟ್.!

Posted By:
Subscribe to Filmibeat Kannada

ಯಾರೂ ಊಹಿಸದ ಟ್ವಿಸ್ಟ್ ಒಂದನ್ನ ನಿನ್ನೆ (ನವೆಂಬರ್ 5) 'ಬಿಗ್ ಬಾಸ್' ನೀಡಿದ್ದಾರೆ. ಕಳೆದ ಮೂರು ವಾರಗಳಂತೆ, ಈ ವಾರ ಕೂಡ ಒಬ್ಬರು ಸ್ಪರ್ಧಿ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಔಟ್ ಆಗುತ್ತಾರೆ ಅಂತಲೇ ಎಲ್ಲರೂ ಭಾವಿಸಿದ್ದರು. 'ಬಿಗ್ ಬಾಸ್' ಮನೆಯ ಸದಸ್ಯರು ಕೂಡ ಇದೇ ಲೆಕ್ಕಾಚಾರದಲ್ಲಿ ಇದ್ದರು. ಈ ಲೆಕ್ಕಾಚಾರವನ್ನ ಸುದೀಪ್ ಉಲ್ಪಾ-ಪಲ್ಟಾ ಮಾಡಿದ್ದಾರೆ.

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ 'ಡಬಲ್ ಎಲಿಮಿನೇಷನ್' ಅಂತ್ಹೇಳಿ ಎಲ್ಲಾ ಸ್ಪರ್ಧಿಗಳಿಗೆ ನಟ ಸುದೀಪ್ ಶಾಕ್ ಕೊಟ್ಟು, ಇಬ್ಬರಿಗೆ ಗೇಟ್ ಪಾಸ್ ನೀಡಿದ್ದಾರೆ. ಮುಂದೆ ಓದಿ....

'ಬಿಗ್ ಬಾಸ್' ಮನೆಯಿಂದ ಹೊರಬಂದ ನಟಿ ಶಾಲಿನಿ, ಶೀತಲ್ ಶೆಟ್ಟಿ.!

ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದು ನಟಿ ಶಾಲಿನಿ ಹಾಗೂ ನ್ಯೂಸ್ ಆಂಕಲ್ ಶೀತಲ್ ಶೆಟ್ಟಿ 'ಬಿಗ್ ಬಾಸ್' ಕಾರ್ಯಕ್ರಮದಿಂದ ಹೊರಬಿದ್ದಿದ್ದಾರೆ. ['ಬಿಗ್ ಬಾಸ್ ಕನ್ನಡ-4' : ಈ ವಾರ ಗೇಟ್ ಪಾಸ್ ಯಾರಿಗೆ?]

ಮೊದಲ ಬಾರಿ ನಾಮಿನೇಟ್ ಆಗಿದ್ದ ಶಾಲಿನಿ.!

ನಾಲ್ಕು ವಾರಗಳಲ್ಲಿ ನಟಿ ಶಾಲಿನಿ 'ಬಿಗ್ ಬಾಸ್' ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದು ಈ ವಾರವೇ. 'ನಮ್ ಏರಿಯಾದಲ್ಲಿ ಒಂದಿನ' ಟಾಸ್ಕ್ ನಲ್ಲಿ ತುಟಿಗೆ ಪೆಟ್ಟು ಮಾಡಿಕೊಂಡು ದೊಡ್ಡ ರಂಪ ಮಾಡಿದ್ದ ನಟಿ ಶಾಲಿನಿ, 'ಬಿಗ್ ಬಾಸ್' ಮನೆಯ ಕೆಲ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು. ['ಬಿಗ್ ಬಾಸ್' ಶುರುವಾಗುವ ಮುನ್ನವೇ ನಡೆದಿತ್ತು 'ಬಿಗ್ ಡೀಲ್'? ಯಾರು ಆ ಮೂವರು?]

ಮಾಳವಿಕಾ ಕಾರಣ.!

ಕಳೆದ ವಾರದ 'ನಮ್ ಏರಿಯಾದಲ್ಲಿ ಒಂದಿನ' ಟಾಸ್ಕ್ ನಲ್ಲಿ ಗೊಂದಲ ಉಂಟಾಗಲು ನಟಿ ಶಾಲಿನಿ ಕಾರಣ ಅಂತ ಹೇಳುತ್ತಾ, ಶಾಲಿನಿ ಹೆಸರನ್ನ 'ವಾರದ ಕ್ಯಾಪ್ಟನ್' ಮಾಳವಿಕಾ ಸೂಚಿಸಿದರು. ಹೀಗಾಗಿ, ಶಾಲಿನಿ ನೇರವಾಗಿ ನಾಮಿನೇಟ್ ಆಗಿದ್ದರು. [ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ ಗ್ಯಾಂಗ್.!]

ಎರಡನೇ ಬಾರಿ ನಾಮಿನೇಟ್ ಆಗಿದ್ದ ಶೀತಲ್ ಶೆಟ್ಟಿ

ಮೂರು ವಾರಗಳಲ್ಲಿ ಎರಡನೇ ಬಾರಿ ನಾಮಿನೇಟ್ ಆಗಿದ್ದ ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಕೂಡ ಈ ವಾರ ಔಟ್ ಆಗಿದ್ದಾರೆ.

ಶೀತಲ್ ಶೆಟ್ಟಿ ರವರನ್ನ ನಾಮಿನೇಟ್ ಮಾಡಿದವರು....

ನಟ ಮೋಹನ್, ಸಂಜನಾ ಮತ್ತು ಭುವನ್ ಪೊನ್ನಣ್ಣ...ಶೀತಲ್ ಶೆಟ್ಟಿ ರವರನ್ನ ನಾಮಿನೇಟ್ ಮಾಡಿದ್ದರು.

ನಾಮಿನೇಷನ್ ಲಿಸ್ಟ್ ನಲ್ಲಿ ಇದ್ದವರು...

ಪ್ರಥಮ್, ಸಂಜನಾ, ಶೀತಲ್ ಶೆಟ್ಟಿ, ರೇಖಾ ಹಾಗೂ ಶಾಲಿನಿ...ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು.

ಡಬಲ್ ಶಾಕ್

ಐವರಲ್ಲಿ ಒಬ್ಬರು ಔಟ್ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ಎಲ್ಲರೂ ಇರುವಾಗಲೇ, ಡಬಲ್ ಎಲಿಮಿನೇಷನ್ ಶಾಕ್ ನೀಡಿದರು ನಟ ಸುದೀಪ್.

ಸೇಫ್ ಆದ ಮೂವರು.!

ವೀಕ್ಷಕರ ಎಸ್.ಎಂ.ಎಸ್ ನಿಂದಾಗಿ ಪ್ರಥಮ್, ಸಂಜನಾ ಮತ್ತು ರೇಖಾ ಸೇಫ್ ಆದರು.

ನಾಲ್ಕನೇ ಬಾರಿಯೂ ಸಂಜನಾ-ಪ್ರಥಮ್ ಸೇಫ್

ನಾಲ್ಕು ಬಾರಿ ಸತತವಾಗಿ ನಾಮಿನೇಟ್ ಆಗಿ, ನಾಲ್ಕನೇ ವಾರವೂ ಸಂಜನಾ ಮತ್ತು ಪ್ರಥಮ್ ಸೇಫ್ ಆಗಿರುವುದು ಮತ್ತೊಂದು ಅಚ್ಚರಿಯ ವಿಷಯ.

English summary
Bigg Boss Kannada 4, Week 4 : Actress Shalini and Sheetal Shetty are is eliminated from Bigg Boss Kannada 4 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada