For Quick Alerts
  ALLOW NOTIFICATIONS  
  For Daily Alerts

  ಖುಷಿಯಿಂದ ಪ್ರಥಮ್ ಕುಣಿದಾಡಿದ್ದಕ್ಕೆ ಗರಂ ಆದ ಕಿಚ್ಚ ಸುದೀಪ್.!

  By Harshitha
  |

  'ಪ್ರಥಮ್ ಹೇಗೆ' ಅಂತ ಕೇಳಿದರೆ, ಯಾರು ಬೇಕಾದರೂ ಹೇಳ್ತಾರೆ 'ಸ್ವಲ್ಪ ಉಪ್ಪು-ಹುಳಿ-ಖಾರ ಜಾಸ್ತಿ ಆಗಿರುವ ತಿಂಡಿ' ಇದ್ಹಾಗೆ ಅಂತ.!

  ಏನೇ ಮಾಡಿದರೂ, ಸ್ವಲ್ಪ ಅತಿಯಾಗಿ ಮಾಡುವ ಪ್ರಥಮ್, ಪ್ರತಿ ಬಾರಿ ತಾವು ಎಲಿಮಿನೇಷನ್ ನಿಂದ ಸೇಫ್ ಅಂತ ಗೊತ್ತಾಗ್ತಿದ್ದ ಹಾಗೆ ತಮ್ಮದೇ ಶೈಲಿಯಲ್ಲಿ, ತಮಗೆ ವೋಟ್ ಮಾಡಿರುವ ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತಾರೆ. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಹಾಗೇ, ನಿನ್ನೆ (ನವೆಂಬರ್ 5) ಕೂಡ ಸತತ ನಾಲ್ಕನೇ ಬಾರಿ ಸೇಫ್ ಆಗ್ತಿದ್ದಂತೆ ಪ್ರಥಮ್ ಸ್ವಲ್ಪ ಜಾಸ್ತಿ ಎಕ್ಸೈಟ್ ಆಗ್ಬಿಟ್ಟರು. ಇದರ ಪರಿಣಾಮ ಸುದೀಪ್ ಕೆಂಗಣ್ಣಿಗೆ ಪ್ರಥಮ್ ಗುರಿಯಾದರು. ಮುಂದೆ ಓದಿ....

  ಐವರ ಪೈಕಿ ಎರಡನೇಯವರಾಗಿ ಸೇಫ್ ಆದ ಪ್ರಥಮ್

  ಐವರ ಪೈಕಿ ಎರಡನೇಯವರಾಗಿ ಸೇಫ್ ಆದ ಪ್ರಥಮ್

  ನಟಿ ಶಾಲಿನಿ, ಶೀತಲ್ ಶೆಟ್ಟಿ, ರೇಖಾ, ಪ್ರಥಮ್ ಮತ್ತು ಸಂಜನಾ ಈ ವಾರ ನಾಮಿನೇಟ್ ಆಗಿದ್ದರು. ಅದರಲ್ಲಿ ಮೊದಲು ನಟಿ ರೇಖಾ ಸೇಫ್ ಆದ ಬಳಿಕ 'ಪ್ರಥಮ್ ಸೇಫ್' ಅಂತ ಸುದೀಪ್ ಅನೌನ್ಸ್ ಮಾಡಿದರು. [BBK4: ಪ್ರಥಮ್ ಮೇಲೆ ಮನೆಯವರ ಕಂಪ್ಲೈಂಟ್, ಕ್ಲಾಸ್ ತೆಗೆದುಕೊಂಡ ಕಿಚ್ಚ]

  ಪ್ರಥಮ್ ಪ್ರತಿಕ್ರಿಯೆ ಹೇಗಿತ್ತು.?

  ಪ್ರಥಮ್ ಪ್ರತಿಕ್ರಿಯೆ ಹೇಗಿತ್ತು.?

  'ಪ್ರಥಮ್ ಸೇಫ್' ಅಂತ ಕಿಚ್ಚ ಸುದೀಪ್ ಹೇಳ್ತಿದ್ದ ಹಾಗೆ, ''ನಾನಾ ಸರ್, ಸೂಪರ್ ಸರ್, ಥ್ಯಾಂಕ್ಯು ಸರ್. ಒಂದು ವಿಷಯ ಹೇಳ್ಬಿಡ್ತೀನಿ ಈ ಸಂದರ್ಭದಲ್ಲಿ... ನನಗೆ ವೋಟ್ ಮಾಡಿರುವ ಎಲ್ಲರಿಗೂ ನಾನು ಮಾಡಿದ್ದೇ ಒಂದು ಡ್ಯಾನ್ಸ್ ಮಾಡಿಬಿಡ್ತೀನಿ'' ಅಂತ ನಿಂತ್ಕೊಂಡು, ಮಲ್ಕೊಂಡು ಪ್ರಥಮ್ ಸ್ಟೆಪ್ ಹಾಕಿದರು. ಹಾಗೇ, ''ಕನ್ನಡಿಗರಿಗೆ ಜೈ...ನನಗೆ ವೋಟ್ ಹಾಕಿದ ಎಲ್ಲರಿಗೂ ಜೈ'' ಅಂದರು.

  ಗರಂ ಆದ ಕಿಚ್ಚ ಸುದೀಪ್

  ಗರಂ ಆದ ಕಿಚ್ಚ ಸುದೀಪ್

  ''ಪ್ರಥಮ್ ರವರೇ...ನೀವು ಧನ್ಯವಾದ ಹೇಳುವುದರಿಂದ ಅವರು ನಿಮಗೆ ವೋಟ್ ಹಾಕಲ್ಲ. ಅಷ್ಟು ಮುಠಾಳರಲ್ಲ ಕನ್ನಡಿಗರು. ನಿಮ್ಮ ಯೋಗ್ಯತೆ ಮೇಲೆ ವೋಟ್ ಹಾಕುವುದು'' ಅಂತ ಕಿಚ್ಚ ಸುದೀಪ್ ಹೇಳಿದರು. [ಕೆಂಪು ಸ್ಕರ್ಟ್ ತೊಟ್ಟು 'ಕನ್ನಡ ರಾಜ್ಯೋತ್ಸವ' ಆಚರಿಸಿದ 'ಪಿರಿ ಪಿರಿ' ಪ್ರಥಮ್.!]

  ಪ್ರಥಮ್-ಸುದೀಪ್ ನಡುವಿನ ಸಂಭಾಷಣೆ

  ಪ್ರಥಮ್-ಸುದೀಪ್ ನಡುವಿನ ಸಂಭಾಷಣೆ

  ಸುದೀಪ್ - ''ಸೇಫ್ ಆದ ತಕ್ಷಣ ತುಂಬಾ ಲೌಡ್ ಆಗಬೇಡಿ. ಅಲ್ಲಿ ಇನ್ನೂ ಮೂರು ಜನ ನೋವಲ್ಲಿ ಕೂತಿದ್ದಾರೆ''

  ಪ್ರಥಮ್ - ''ಕ್ಷಮಿಸಿ ಸಾರ್, ತಪ್ಪಾಯ್ತು''

  ಸುದೀಪ್ - ''ನೀವು ನಿಮ್ಮದನ್ನು ಬಿಟ್ಟು, ಬೇರೆಯವರದನ್ನೂ ನೋಡಿ..''

  ಪ್ರಥಮ್ - ''ಸಾರಿ ಸರ್''

  ನಮಗೂ ಖುಷಿ ಇದೆ.!

  ನಮಗೂ ಖುಷಿ ಇದೆ.!

  ಸುದೀಪ್ - ''ನಮಗೂ ಖುಷಿ ಇದೆ, ನೀವು ಸೇಫ್ ಆಗಿರುವುದರ ಬಗ್ಗೆ. ಮಿಕ್ಕಿರುವ ಮೂವರು ನೋವಲ್ಲಿ ಕೂತಿದ್ದಾರೆ, ಅದಕ್ಕೆ ಸ್ಪಂದಿಸಿ''

  ಪ್ರಥಮ್ - ''ಯೆಸ್ ಸರ್''

  ಸುದೀಪ್ - ''ಯಾಕಂದ್ರೆ, ನಿಮಗೆ ಊಟ ಹಾಕಿ, ನಿಮಗೆ ಚಾಕರಿ ಮಾಡಿರುವವರ ಪೈಕಿ ಒಬ್ಬರು ಇವತ್ತು ಹೋಗ್ತಿದ್ದಾರೆ. ನಮಗೆ ಇಷ್ಟೊಂದು ನೋವಾಗುತ್ತೆ. ಒಬ್ಬೊಬ್ಬರ ಹೆಸರು ಹೇಳಬೇಕಾದರೆ. ಅದ್ಹೇಗೆ ನೀವು....ಎನಿವೇ...ಕಂಗ್ರ್ಯಾಕ್ಟ್ಸ್. ಸೇಫ್ ಆಗಿದ್ದಕ್ಕೆ''

  ಔಟ್ ಆದ ಶೀತಲ್ ಶೆಟ್ಟಿ ಮತ್ತು ಶಾಲಿನಿ

  ಔಟ್ ಆದ ಶೀತಲ್ ಶೆಟ್ಟಿ ಮತ್ತು ಶಾಲಿನಿ

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಈ ವಾರ ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಮತ್ತು ಶಾಲಿನಿ ಔಟ್ ಆಗಿದ್ದಾರೆ.

  English summary
  Bigg Boss Kannada 4, Week 4 : Kannada Actor Kiccha Sudeep gets annoyed with Director Pratham during 'Varada Kathe Kicchana Jothe' show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X