»   » 'ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಗೆ ಉಳಿಗಾಲ ಇಲ್ಲ.!

'ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಗೆ ಉಳಿಗಾಲ ಇಲ್ಲ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಶುರು ಆಗಿ ಐದು ವಾರಗಳು ಕಳೆಯಿತು. ಐದು ವಾರವೂ ಮಿಸ್ ಇಲ್ಲದೇ, ಸತತವಾಗಿ ನಾಮಿನೇಟ್ ಆದ ಕು'ಖ್ಯಾತಿ' ನಿರ್ದೇಶಕ 'ಒಳ್ಳೆ ಹುಡುಗ' ಪ್ರಥಮ್ ಗೆ ಸಲ್ಲಬೇಕು.

'ಬಿಗ್ ಬಾಸ್' ಮನೆಯಿಂದ ಪ್ರಥಮ್ ರನ್ನ ಹೊರಗೆ ಹಾಕಬೇಕು ಅಂತ ಒಂದಲ್ಲಾ ಒಂದು ಕಾರಣ ಕೊಟ್ಟು ಇಲ್ಲಿಯವರೆಗೂ 'ಬಿಗ್ ಬಾಸ್' ಮನೆಯ ಇತರೆ ಸದಸ್ಯರು ನಾಮಿನೇಟ್ ಮಾಡಿದ್ದರು. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

Bigg Boss Kannada 4: Week 6 - Pratham in danger zone again

ಪ್ರತಿ ವಾರ ಪ್ರತಿಭಟನೆ, ಗಲಾಟೆಯಿಂದಲೇ ಸದ್ದು ಮಾಡುತ್ತಿದ್ದ ಪ್ರಥಮ್ ಕಳೆದ ವಾರ 'ಒಳ್ಳೆ ಹುಡುಗ'ನಂತಿದ್ದರು. ಕಾಲು ಕೆರೆದುಕೊಂಡು ಯಾರ ಬಳಿಯೂ ಕಿರಿಕ್ ಮಾಡಿಕೊಳ್ಳಲಿಲ್ಲ. ಬೇಡದ ವಿಷಯಕ್ಕೆ 'ಖಂಡಿಸಲಿಲ್ಲ'. ಪ್ರಥಮ್ ರವರ 'ಒಳ್ಳೆ'ತನ ನೋಡಿ 'ಬಿಗ್ ಬಾಸ್' ಮನೆಯ ಸದಸ್ಯರು ಈ ವಾರ ಪ್ರಥಮ್ ರನ್ನ ನಾಮಿನೇಟ್ ಮಾಡಲಿಲ್ಲ. ['ಒಳ್ಳೆ ಹುಡುಗ' ಪ್ರಥಮ್ ಗೆ ಬೆಂಡೆತ್ತಿ ಬ್ರೇಕ್ ಹಾಕಿದ ಕಿಚ್ಚ ಸುದೀಪ್.!]

ಆದ್ರೆ, 'ಬಿಗ್ ಬಾಸ್' ಮನೆಯ ಈ ವಾರದ ಕ್ಯಾಪ್ಟನ್ ಆಗಿರುವ ನಿರಂಜನ್ ದೇಶಪಾಂಡೆ ಮಾತ್ರ ಪ್ರಥಮ್ ಹೆಸರನ್ನ ಸೂಚಿಸಿದ ಕಾರಣ, ಪ್ರಥಮ್ ನೇರವಾಗಿ ನಾಮಿನೇಟ್ ಆದರು. ಹೀಗಾಗಿ, ಈ ವಾರವೂ ಪ್ರಥಮ್ ಗೆ 'ಎಲಿಮಿನೇಷನ್ ಭಯ' ತಪ್ಪಿದ್ದಲ್ಲ. [ಕಡೆಗೂ ಕ್ಯಾಪ್ಟನ್ ಆದ 'ಆರ್.ಜೆ' ನಿರಂಜನ್ ದೇಶಪಾಂಡೆ.!]

ಸತತ ಆರನೇ ಬಾರಿ ನಾಮಿನೇಟ್ ಆಗಿರುವ ಪ್ರಥಮ್ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಮುಂದುವರೆಯಲು ನಿಮ್ಮ ಎಸ್.ಎಂ.ಎಸ್ ಅತ್ಯಗತ್ಯ.

English summary
Bigg Boss Kannada 4, Week 6 : Kannada Director 'Olle Huduga' Pratham is in Danger Zone again. 'Bigg Boss' House's this week's captain Niranjan Deshpande nominated Pratham for Elimination.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X