For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಪ್ರಥಮ್ 'ಇತಿಹಾಸ' ಪುರುಷ.!

  By Harshitha
  |

  ಕೇವಲ 50 ದಿನಗಳ ಹಿಂದೆ ಈ ಪ್ರಥಮ್ ಯಾರು ಅನ್ನೋದೇ ಕರ್ನಾಟಕ ಜನತೆಗೆ ಗೊತ್ತಿರ್ಲಿಲ್ಲ. ಈಗ ಕರ್ನಾಟಕದ ಯಾವುದೇ ಮೂಲೆಗೆ ಹೋಗಿ ಕೇಳಿ... ಪ್ರಥಮ್ ಹೆಸರು ಎತ್ತಿದ ತಕ್ಷಣ 'ಖಂಡಿಸ್ತೀನಿ' ಅಂತ ಜನ ಹೇಳ್ತಾರೆ. ಅಷ್ಟರಮಟ್ಟಿಗೆ 'ಒಳ್ಳೆ ಹುಡುಗ' ಪ್ರಥಮ್ ಯದ್ವಾತದ್ವಾ ಫೇಮಸ್.! [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗಿನಿಂದಲೂ ಪ್ರತಿಭಟನೆ ಹಾಗೂ ಕಿರಿಕ್ ಗಳಿಂದಲೇ ಗುರುತಿಸಿಕೊಂಡಿರುವ ಪ್ರಥಮ್, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.!

  ರೆಕಾರ್ಡ್ ಕ್ರಿಯೇಟ್ ಮಾಡಿರುವ ಪ್ರಥಮ್

  ರೆಕಾರ್ಡ್ ಕ್ರಿಯೇಟ್ ಮಾಡಿರುವ ಪ್ರಥಮ್

  'ಬಿಗ್ ಬಾಸ್' ಕಾರ್ಯಕ್ರಮದ ಇತಿಹಾಸದಲ್ಲಿಯೇ ಕನ್ನಡ ನಿರ್ದೇಶಕ ಪ್ರಥಮ್ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ. ಅದೇನಪ್ಪಾ ಅಂತಹ ರೆಕಾರ್ಡ್ ಅಂದ್ರೆ....

  ಸತತ ಏಳು ಬಾರಿ ಸೇಫ್

  ಸತತ ಏಳು ಬಾರಿ ಸೇಫ್

  'ಬಿಗ್ ಬಾಸ್' ಕಾರ್ಯಕ್ರಮದ ಇತಿಹಾಸದಲ್ಲಿಯೇ ಸತತ ಏಳು ಬಾರಿ ನಾಮಿನೇಟ್ ಆಗಿ, ಸೇಫ್ ಆಗಿರುವ ಮೊದಲ ವ್ಯಕ್ತಿ 'ಒಳ್ಳೆ ಹುಡುಗ' ಪ್ರಥಮ್.! [ಅವರಿಗೆ ಆಗಲ್ಲ, ಇವರು ಹೋಗಲ್ಲ.. ಈ ವಾರವೂ ಪ್ರಥಮ್ ಮಿಸ್ ಇಲ್ಲ.!]

  ಹೊಸ ಇತಿಹಾಸ ಸೃಷ್ಟಿ.!

  ಹೊಸ ಇತಿಹಾಸ ಸೃಷ್ಟಿ.!

  ಇದುವರೆಗೂ 'ಬಿಗ್ ಬಾಸ್' ಕಾರ್ಯಕ್ರಮ ಹಲವು ದೇಶಗಳಲ್ಲಿ, ಹಲವು ಭಾಷೆಗಳಲ್ಲಿ, ಹಲವು ವರ್ಷಗಳಿಂದ ಪ್ರಸಾರವಾಗುತ್ತಿದೆ. ಎಲ್ಲಾ ಭಾಷೆಗಳಲ್ಲಿ, ಎಲ್ಲಾ ಸೀಸನ್ ಗಳಲ್ಲಿ ಏಳು ಬಾರಿ ಸತತವಾಗಿ ಯಾರೂ ನಾಮಿನೇಟ್ ಆಗಿಲ್ಲ. ಹಾಗೇ, ಸತತ ಏಳನೇ ಬಾರಿ ಯಾರೂ ಕೂಡ ಸೇಫ್ ಆಗಿಲ್ಲ. ಅಂತಹ ಕು'ಖ್ಯಾತಿ'ಗೆ ಪ್ರಥಮ್ ಪಾತ್ರರಾಗಿದ್ದಾರೆ. ['ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಗೆ ಉಳಿಗಾಲ ಇಲ್ಲ.!]

  ಸುನಾಮಿ ಕಿಟ್ಟಿ ಕೂಡ ದಾಖಲೆ ಮಾಡಿದ್ರು.!

  ಸುನಾಮಿ ಕಿಟ್ಟಿ ಕೂಡ ದಾಖಲೆ ಮಾಡಿದ್ರು.!

  'ಬಿಗ್ ಬಾಸ್ ಕನ್ನಡ-3' ಕಾರ್ಯಕ್ರಮದಲ್ಲಿ ಸತತ ಆರು ಬಾರಿ ನಾಮಿನೇಟ್ ಆಗಿ ಸುನಾಮಿ ಕಿಟ್ಟಿ ಮೊದಲು ದಾಖಲೆ ನಿರ್ಮಿಸಿದ್ರು. ['ಬಿಗ್ ಬಾಸ್' ಮನೆಯಲ್ಲಿ ಸುನಾಮಿ ಕಿಟ್ಟಿ ಹೊಸ ರೆಕಾರ್ಡ್!]

  ಸುನಾಮಿ ಕಿಟ್ಟಿ ದಾಖಲೆ ಮುರಿದ ಪ್ರಥಮ್.!

  ಸುನಾಮಿ ಕಿಟ್ಟಿ ದಾಖಲೆ ಮುರಿದ ಪ್ರಥಮ್.!

  ಸುನಾಮಿ ಕಿಟ್ಟಿ ಮಾಡಿದ್ದ ರೆಕಾರ್ಡ್ ಮುರಿದು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ 'ಒಳ್ಳೆ ಹುಡುಗ' ಪ್ರಥಮ್. [ಅಂದು ಸುನಾಮಿ ಕಿಟ್ಟಿ, ಇಂದು ಪ್ರಥಮ್: 'ಬಿಗ್ ಬಾಸ್' ಮನೆಯಲ್ಲಿ ದಾಖಲೆ.!]

  ಪ್ರಥಮ್ ಗಿದೆ ವೀಕ್ಷಕರ ಬೆಂಬಲ

  ಪ್ರಥಮ್ ಗಿದೆ ವೀಕ್ಷಕರ ಬೆಂಬಲ

  ಪ್ರಥಮ್ ಗೆ 'ಬಿಗ್ ಬಾಸ್' ಮನೆ ಸದಸ್ಯರಿಂದ ಬೆಂಬಲ ಸಿಗ್ಲಿಲ್ಲ ಅಂದ್ರೇನಂತೆ, ಕನ್ನಡಿಗರು ಪ್ರಥಮ್ ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ವೀಕ್ಷಕರ ಕೃಪೆಯಿಂದ ಏಳು ಬಾರಿ ಪ್ರಥಮ್ ಸೇಫ್ ಆಗಿರುವುದು ಖಂಡಿತ ಸುಲಭದ ಮಾತಲ್ಲ.

  ಇಂದು ಮತ್ತದೇ ನಾಮಿನೇಷನ್ ಹಬ್ಬ.!

  ಇಂದು ಮತ್ತದೇ ನಾಮಿನೇಷನ್ ಹಬ್ಬ.!

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಎಂಟನೇ ವಾರದ ನಾಮಿನೇಷನ್ ಪ್ರಕ್ರಿಯೆ ಇಂದು ನಡೆಯಲಿದೆ. ಎಂದಿನಂತೆ ಈ ವಾರವೂ ಪ್ರಥಮ್ ನಾಮಿನೇಟ್ ಆಗ್ತಾರಾ.? ನೋಡೋಣ.

  English summary
  BBK4, Week 7: Kannada Director Pratham creates History by being safe from Eviction 7th time consecutively.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X