»   » ಅವರಿಗೆ ಆಗಲ್ಲ, ಇವರು ಹೋಗಲ್ಲ.. ಈ ವಾರವೂ ಪ್ರಥಮ್ ಮಿಸ್ ಇಲ್ಲ.!

ಅವರಿಗೆ ಆಗಲ್ಲ, ಇವರು ಹೋಗಲ್ಲ.. ಈ ವಾರವೂ ಪ್ರಥಮ್ ಮಿಸ್ ಇಲ್ಲ.!

Posted By:
Subscribe to Filmibeat Kannada

ನಾಮಿನೇಷನ್ ಪ್ರಕ್ರಿಯೆ ಶುರು ಆದರೆ, ಪ್ರಥಮ್ ಹೆಸರು ಕಂಪಲ್ಸರಿ ಎಂಬಂತಾಗಿದೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ.!

ಗದ್ದಲ, ಗಲಾಟೆ, ಕಿರಿಕಿರಿ, ಕಿರಿಕ್ ಗಳಿಂದಲೇ ಫೇಮಸ್ ಆಗಿರುವ ನಿರ್ದೇಶಕ ಪ್ರಥಮ್ ರನ್ನ 'ಬಿಗ್ ಬಾಸ್' ಮನೆಯಿಂದ ಹೊರಗೆ ಹಾಕಬೇಕು ಅಂತ ಮೊದಲ ವಾರದಿಂದಲೂ ಮನೆಯ ಇತರೆ ಸದಸ್ಯರು ಪ್ರಯತ್ನ ಪಡುತ್ತಿದ್ದಾರೆ.['ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಗೆ ಉಳಿಗಾಲ ಇಲ್ಲ.!]

Bigg Boss Kannada 4: Week 7 - Pratham nominated for 7th time consecutively

ನಾಮಿನೇಷನ್ ಪ್ರಕ್ರಿಯೆ ಶುರು ಆದರೆ, ಅರ್ಧಕರ್ಧ ಮನೆಯ ಸದಸ್ಯರ ಬಾಯಲ್ಲಿ ಪ್ರಥಮ್ ಹೆಸರು ಇದ್ದೇ ಇರುತ್ತೆ. ಆದ್ರೆ, ವೀಕ್ಷಕರ ಕೃಪಾಕಟಾಕ್ಷದಿಂದ ಸತತ ಆರು ವಾರಗಳ ಕಾಲ ಪ್ರಥಮ್ ಸೇಫ್ ಆಗಿದ್ದಾರೆ.[ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಈ ವಾರವೂ ಪ್ರಥಮ್ ರನ್ನ ಸೇಫ್ ಮಾಡುವ ಜವಾಬ್ದಾರಿ ವೀಕ್ಷಕರ ಮೇಲಿದೆ. ಕಾರಣ, ಸತತ ಏಳನೇ ವಾರವೂ ಪ್ರಥಮ್ ನಾಮಿನೇಟ್ ಆಗಿದ್ದಾರೆ. 'ಕಿರಿಕ್' ಕೀರ್ತಿ, ನಿರಂಜನ್ ದೇಶಪಾಂಡೆ ಮತ್ತು ಶೀತಲ್ ಶೆಟ್ಟಿ ...ಪ್ರಥಮ್ ಹೆಸರನ್ನ ಸೂಚಿಸಿದ ಪರಿಣಾಮ, ಈ ಶನಿವಾರ ಕೂಡ ಪ್ರಥಮ್ 'ಎಲಿಮಿನೇಷನ್ ಭಯ' ಎದುರಿಸುವಂತಾಗಿದೆ.[ಕಿಚ್ಚ ಸುದೀಪ್ ಮುಂದೆ ಅಳಲು ತೋಡಿಕೊಂಡ 'ಪ್ರಕೃತಿ ವಿಕೋಪ' ಪ್ರಥಮ್.!]

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಪ್ರಥಮ್ ಉಳಿಯಬೇಕು ಎಂದರೆ ನಿಮ್ಮ ಎಸ್.ಎಂ.ಎಸ್ ಬೇಕೇಬೇಕು.

English summary
Bigg Boss Kannada 4, Week 7 : Kannada Director 'Olle Huduga' Pratham is nominated for 7th time consecutively.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada