»   » 50 ದಿನ ಆಯ್ತು: 'ಬಿಗ್ ಬಾಸ್' ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಇಲ್ವಾ?

50 ದಿನ ಆಯ್ತು: 'ಬಿಗ್ ಬಾಸ್' ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಇಲ್ವಾ?

Posted By:
Subscribe to Filmibeat Kannada

ಕಿರುತೆರೆಯ ಜನಪ್ರಿಯ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಯಶಸ್ವಿಯಾಗಿ 50 ಸಂಚಿಕೆಗಳನ್ನು ಪೂರೈಸಿದೆ. ಈ 50 ದಿನಗಳಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಬಿಟ್ಟರೆ ಬೇರೆ ಯಾವ ಹೊಸ ಸ್ಪರ್ಧಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿಲ್ಲ. ನ್ಯೂಸ್ ಆಂಕರ್ ಶೀತಲ್ ಶೆಟ್ಟಿಗೆ ಸೆಕೆಂಡ್ ಚಾನ್ಸ್ ಸಿಕ್ಕಿದೆ ಅಷ್ಟೆ.

'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಇನ್ನೂ 50 ದಿನಗಳ ಜರ್ನಿ ಬಾಕಿ ಇದೆ. ಹೀಗಿರುವಾಗಲೇ ಎಲ್ಲೆಡೆ 'ವೈಲ್ಡ್ ಕಾರ್ಡ್ ಎಂಟ್ರಿ' ಬಗ್ಗೆ ಚರ್ಚೆ ಶುರು ಆಗಿದೆ.

ಸದಸ್ಯರ ಸಂಖ್ಯೆ 10

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಏಳನೇ ವಾರ ಓಂ ಪ್ರಕಾಶ್ ರಾವ್ ಎಲಿಮಿನೇಟ್ ಆದರು. ಹೀಗಾಗಿ ಸದ್ಯ 'ಬಿಗ್ ಬಾಸ್' ಮನೆ ಸದಸ್ಯರ ಸಂಖ್ಯೆ 10ಕ್ಕೆ ಕುಸಿದಿದೆ.

ಶೀತಲ್ ಶೆಟ್ಟಿಗೆ ಸೆಕೆಂಡ್ ಚಾನ್ಸ್

ಈಗಾಗಲೇ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ನ್ಯೂಸ್ ಆಂಕರ್ ಶೀತಲ್ ಶೆಟ್ಟಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟು ಸೆಕೆಂಡ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ['ಬಿಗ್ ಬಾಸ್' ಮನೆಗೆ ನಟಿ ಶಾಲಿನಿ, ಶೀತಲ್ ಶೆಟ್ಟಿ ರೀಎಂಟ್ರಿ.!]

ವಾಣಿಶ್ರೀ ರವರಿಗೂ ಚಾನ್ಸ್ ಸಿಗಲಿ

ಶೀತಲ್ ಶೆಟ್ಟಿ ರವರಂತೆ ನಟಿ ವಾಣಿಶ್ರೀ ರವರಿಗೂ ಸೆಕೆಂಡ್ ಚಾನ್ಸ್ ಸಿಗಲಿ ಎಂಬುದು ಕೆಲವರ ವಾದ. ['ಬಿಗ್ ಬಾಸ್ ಕನ್ನಡ-4': ಮೊದಲ ವಾರವೇ ನಟಿ ವಾಣಿಶ್ರೀ ಔಟ್.!]

ದೊಡ್ಡ ಗಣೇಶ್ ಗೂ ಅವಕಾಶ ಕೊಡಿ

ಕರ್ನಾಟಕದ ಹೆಮ್ಮೆಯ ಕ್ರಿಕೆಟರ್ ದೊಡ್ಡ ಗಣೇಶ್ ಎರಡನೇ ವಾರವೇ ಔಟ್ ಆಗ್ಬಿಟ್ಟರು. ಎರಡನೇ ವಾರ ಔಟ್ ಆಗುವ ಸ್ಪರ್ಧಿ ದೊಡ್ಡ ಗಣೇಶ್ ಅಲ್ಲ. ಹೀಗಾಗಿ 'ಪ್ಲೇಯರ್' ವಾಪಸ್ ಬರಲಿ ಎನ್ನುವುದು ಕ್ರಿಕೆಟ್ ಪ್ರಿಯರ ಆಸೆ.

ಬೇಸರ ಮಾಡಿಕೊಂಡಿದ್ದರು ಕಾರುಣ್ಯ ರಾಮ್

ಮೊದಲನೇ ಬಾರಿ ನಾಮಿನೇಟ್ ಆದಾಗ ಎಲಿಮಿನೇಟ್ ಆಗಿದ್ದಕ್ಕೆ ನಟಿ ಕಾರುಣ್ಯ ರಾಮ್ ಸಿಕ್ಕಾಪಟ್ಟೆ ಬೇಸರಗೊಂಡಿದ್ದರು. 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ಅವರನ್ನ ಮನವೊಲಿಸುವ ಕೆಲಸ ಮಾಡಬಹುದಾ 'ಬಿಗ್ ಬಾಸ್'?

ಹೊಸಬರಿಗೆ ಆದ್ಯತೆ ಕೊಟ್ಟರೆ ಒಳಿತು

ಈಗಾಗಲೇ ಹೊರಹೋಗಿರುವವರನ್ನ 'ಬಿಗ್ ಬಾಸ್' ಮನೆಯೊಳಗೆ ಪುನಃ ಕರೆತಂದರೆ ಪ್ರಯೋಜನ ಇಲ್ಲ. ಹೊಸಬರನ್ನ ಅಖಾಡಕ್ಕೆ ಇಳಿಸಲಿ ಎನ್ನುವುದು 'ಬಿಗ್ ಬಾಸ್' ವೀಕ್ಷಕರ ಆಗ್ರಹ.

ಸುಳಿವು ಕೊಟ್ಟಿಲ್ಲ.!

'ವೈಲ್ಡ್ ಕಾರ್ಡ್ ಎಂಟ್ರಿ' ಬಗ್ಗೆ ಸದ್ಯ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ 'ವೈಲ್ಡ್ ಕಾರ್ಡ್ ಎಂಟ್ರಿ' ಇದ್ಯೋ ಇಲ್ವೋ ಎಂಬ ಡೌಟು ಕೂಡ ಅನೇಕರಿಗೆ ಕಾಡುತ್ತಿರುವುದು ಸುಳ್ಳಲ್ಲ.

English summary
Bigg Boss Kannada 4, Week 7 : Can viewers expect Wild Card Entry in the show.?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada