»   » ಸತತ ಎಂಟನೇ ಬಾರಿ ಪುಟ್ಟೇಗೌಡ ಅಲಿಯಾಸ್ ಪ್ರಥಮ್ ಟಾರ್ಗೆಟ್.!

ಸತತ ಎಂಟನೇ ಬಾರಿ ಪುಟ್ಟೇಗೌಡ ಅಲಿಯಾಸ್ ಪ್ರಥಮ್ ಟಾರ್ಗೆಟ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಶುರು ಆಗಿ ಎಳು ವಾರಗಳು ಕಳೆದು, ಎಂಟನೇ ವಾರ ಶುರು ಆಗಿದೆ. ಎಂಟು ವಾರಗಳಲ್ಲಿ ಸತತವಾಗಿ ಎಂಟನೇ ಬಾರಿಗೆ ಎಲಿಮಿನೇಷನ್ ಗೆ ನಾಮಿನೇಟ್ ಆಗಿರುವುದು ಒನ್ ಅಂಡ್ ಒನ್ಲಿ ಪುಟ್ಟೇಗೌಡ ಅಲಿಯಾಸ್ ಪ್ರಥಮ್. ಅಂದ್ಹಾಗೆ, ಪ್ರಥಮ್ ನಿಜನಾಮ ಪುಟ್ಟೇಗೌಡ ಅಂತ.!

ಪ್ರತಿಭಟನೆ, ಗಲಾಟೆಗಳಿಂದಲೇ ಜನಪ್ರಿಯತೆ ಗಳಿಸಿರುವ ಪ್ರಥಮ್, 'ಬಿಗ್ ಬಾಸ್' ಮನೆಯಲ್ಲಿ ಮೊದಲ ವಾರದಿಂದಲೂ ಟಾರ್ಗೆಟ್ ಆಗಿದ್ದಾರೆ. ಆದ್ರೆ, ವೀಕ್ಷಕರ ಕೃಪಾಕಟಾಕ್ಷದಿಂದ ಸತತ ಏಳು ವಾರಗಳ ಕಾಲ ಸೇಫ್ ಆಗಿ 'ಬಿಗ್ ಬಾಸ್' ಕಾರ್ಯಕ್ರಮದ ಇತಿಹಾಸದಲ್ಲಿಯೇ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಪ್ರಥಮ್. [ಅವರಿಗೆ ಆಗಲ್ಲ, ಇವರು ಹೋಗಲ್ಲ.. ಈ ವಾರವೂ ಪ್ರಥಮ್ ಮಿಸ್ ಇಲ್ಲ.!]

bigg-boss-kannada-4-week-8-pratham-nominated-8th-time-consecutively

ಏಳು ವಾರಗಳಂತೆ ಈ ವಾರ ಕೂಡ ಪ್ರಥಮ್ ಸೇಫ್ ಆಗುವುದು..ಬಿಡುವುದು ವೀಕ್ಷಕರ ವಿವೇಚನೆಗೆ ಬಿಟ್ಟಿದ್ದು. ಕಾರಣ, ಎಂಟನೇ ವಾರವೂ ಪ್ರಥಮ್ ನಾಮಿನೇಟ್ ಆಗಿದ್ದಾರೆ.[ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

'ಕಿರಿಕ್' ಕೀರ್ತಿ, ಶಾಲಿನಿ, ಶೀತಲ್ ಶೆಟ್ಟಿ, ನಿರಂಜನ್ ದೇಶಪಾಂಡೆ ಸೇರಿದಂತೆ 'ಬಿಗ್‌ ಬಾಸ್' ಮನೆಯ ಕೆಲ ಸದಸ್ಯರು ಪ್ರಥಮ್ ಹೆಸರನ್ನ ಸೂಚಿಸಿದ ಪರಿಣಾಮ, ಈ ಶನಿವಾರ ಕೂಡ ಪ್ರಥಮ್ ಗೆ 'ಎಲಿಮಿನೇಷನ್ ಭಯ' ತಪ್ಪಿದ್ದಲ್ಲ.['ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಪ್ರಥಮ್ 'ಇತಿಹಾಸ' ಪುರುಷ.!]

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಪ್ರಥಮ್ ಉಳಿಯಬೇಕು ಅಂದ್ರೆ ನಿಮ್ಮ ಅತ್ಯಮೂಲ್ಯ ಎಸ್.ಎಂ.ಎಸ್ ಕಡ್ಡಾಯ.

English summary
Bigg Boss Kannada 4, Week 8 : Kannada Director 'Olle Huduga' Pratham is nominated for 8th time consecutively.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada