»   » 'ಬಿಗ್ ಬಾಸ್' ಮನೆಯಿಂದ 'RJ ನಿರಂಜನ್' ಔಟ್

'ಬಿಗ್ ಬಾಸ್' ಮನೆಯಿಂದ 'RJ ನಿರಂಜನ್' ಔಟ್

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಆಟದಿಂದ ಆರ್ ಜೆ ನಿರಂಜನ್ ದೇಶಪಾಂಡೆ ಹೊರ ಬಿದ್ದಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಎಂಟನೇ ವಾರ ಯಾರು ಹೊರಗೆ ಹೋಗುತ್ತಾರೆ ಎಂಬ ಕುತೂಹಲ ವೀಕ್ಷಕರನ್ನ ಕಾಡಿತ್ತು.

ವೀಕ್ಷಕರ ಈ ಕುತೂಹಲಕ್ಕೆ ತೆರೆ ಎಳೆದ ಕಿಚ್ಚ ಸುದೀಪ್, ''ಕಿಚ್ಚನ ಜೊತೆ ವಾರದ ಕಥೆ'' ಎಪಿಸೋಡ್ ನಲ್ಲಿ ನಿರಂಜನ್ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ ಎಂದು ಘೋಷಿಸಿದರು.['ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಆಹುತಿಯಾದ ಅತಿಹೆಚ್ಚು ಮುಖಗಳಿವು.!]

ಈ ವಾರ 6 ಮಂದಿ ನಾಮೀನೇಟ್ ಆಗಿದ್ದರು?

'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಈ ವಾರ 6 ಮಂದಿ ನಾಮೀನೇಟ್ ಆಗಿದ್ದರು.

ಯಾರು ಯಾರು?

ಭುವನ್ ಪೊನ್ನಣ್ಣ, ನಿರಂಜನ್ ದೇಶಪಾಂಡೆ, ಮಾಳವಿಕಾ, ಮೋಹನ್, ಶೀತಲ್ ಶೆಟ್ಟಿ ಮತ್ತು ಪ್ರಥಮ್ ಈ ವಾರ ನಾಮಿನೇಟ್ ಆಗಿದ್ದರು.

ನಿರಂಜನ್ ಗೆ ಗೇಟ್ ಪಾಸ್

ವೀಕ್ಷರಿಂದ ಕಡಿಮೆ ಎಸ್ ಎಂ ಎಸ್ ಹಾಗೂ ಈ ವಾರದ ಟಾಸ್ಕ್ ಫರ್ಫಾಮೆನ್ಸ್ ನಲ್ಲಿ ಆದ ಹಿನ್ನಡೆಯಿಂದ ಆರ್ ಜೆ ನಿರಂಜನ್ ದೇಶಪಾಂಡೆ 'ಬಿಗ್ ಬಾಸ್' ಮನೆಯಿಂದ ಹೊರ ಬಿದ್ದಿದ್ದಾರೆ.['ಬಿಗ್ ಬಾಸ್' ಮನೆಯಲ್ಲಿ ಒಮ್ಮೆಲೆ 3 ವೈಲ್ಡ್ ಕಾರ್ಡ್ ಎಂಟ್ರಿ.!]

'ಮಸ್ತಾನ್'ಗೆ ಶಿಕ್ಷೆ ಕೊಟ್ಟು ಹೋದ ನಿರಂಜನ್

ಮನೆಯಿಂದ ಹೋರ ಹೋದ ನಿರಂಜನ್ ಗೆ 'ಬಿಗ್ ಬಾಸ್' ಅಧಿಕಾರವೊಂದನ್ನ ನೀಡಿದ್ದರು. ಇದರ ಅನುಸಾರ, ಮನೆಯ ಸದಸ್ಯರೊಬ್ಬರು ದ್ವಾರಪಾಲಕರಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ದ್ವಾರಪಾಲಕ ಕೆಲಸಕ್ಕೆ ನಿರಂಜನ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ 'ಮಸ್ತಾನ್' ಅವರನ್ನ ಸೂಚಿಸಿದರು.

ನಿರಂಜನ್ ಗೆ ಮದುವೆ

ಎಂಟನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಆರ್ ಜೆ ನಿರಂಜನ್ ದೇಶಪಾಂಡೆ ಅವರು ಸದ್ಯ, ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮದುವೆ ದಿನಾಂಕ ನಿಗದಿಯಾಗಿದ್ದು, ಆದಷ್ಟೂ ಬೇಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ.

English summary
BBK4, WEEK 8: Popular Rj Niranjan Deshpande has been eliminated from big boss 4. This week Malavika Avinash, Mohan, Sheetal, Bhuvan were the other nominated contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada