»   » ಪ್ರಥಮ್ ಸೇಫ್ ಆದ್ರು, ಶೀತಲ್-ಶಾಲಿನಿ ಎಲ್ರ ಕೆಂಗಣ್ಣಿಗೆ ಗುರಿಯಾದ್ರು.!

ಪ್ರಥಮ್ ಸೇಫ್ ಆದ್ರು, ಶೀತಲ್-ಶಾಲಿನಿ ಎಲ್ರ ಕೆಂಗಣ್ಣಿಗೆ ಗುರಿಯಾದ್ರು.!

Posted By:
Subscribe to Filmibeat Kannada

ಅಂತೂ ಇಂತೂ 'ಎಮರ್ಜೆನ್ಸಿ' ಟಾಸ್ಕ್ ನಲ್ಲಿ ಇಮ್ಯೂನಿಟಿ ಗೆದ್ದು, ಈ ವಾರ ನಾಮಿನೇಷನ್ ನಿಂದ 'ಒಳ್ಳೆ ಹುಡುಗ' ಪ್ರಥಮ್ ಸೇಫ್ ಆಗ್ಬಿಟ್ರು. ಹೀಗಾಗಿ ಈ ಬಾರಿ ಪ್ರಥಮ್ ಬಗ್ಗೆ ಯಾರೂ ಕೆಮ್ಮಂಗಿರಲಿಲ್ಲ. [ಪ್ರಪ್ರಥಮ ಬಾರಿಗೆ ಪ್ರಥಮ್ ಸೇಫ್ ಝೋನ್ ನಲ್ಲಿ.!]

ಸೀಕ್ರೆಟ್ ರೂಮ್ ನಿಂದ ವಾಪಸ್ ಬಂದ್ಮೇಲೆ 'ಸೇಫ್ ಗೇಮ್' ಆಡುತ್ತಿರುವ ಶಾಲಿನಿ ಈ ವಾರ ಇತರೆ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಾಲಿನಿ ಜೊತೆಗೆ 'ಬೆಸ್ಟ್ ಫ್ರೆಂಡ್' ಶೀತಲ್ ಶೆಟ್ಟಿ ಕೂಡ ನಾಮಿನೇಟ್ ಆಗಿದ್ದಾರೆ.

ಬಚಾವ್ ಆದ 'ಕಿರಿಕ್' ಕೀರ್ತಿ

'ಬಿಗ್ ಬಾಸ್' ನೀಡಿದ್ದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಪರ್ಫಾರ್ಮ್ ಮಾಡಿ 'ಕಿರಿಕ್' ಕೀರ್ತಿ ಎರಡನೇ ಬಾರಿಗೆ ಮನೆಯ ಕ್ಯಾಪ್ಟನ್ ಆದರು. ಹೀಗಾಗಿ, ನಾಮಿನೇಷನ್ ನಿಂದ ಕೀರ್ತಿ ಬಚಾವ್ ಆಗ್ಬಿಟ್ರು. [ಎರಡನೇ ಬಾರಿ 'ಕಿರಿಕ್' ಕೀರ್ತಿಗೆ ಕ್ಯಾಪ್ಟನ್ ಪಟ್ಟ.!]

ಮತ್ತೆ ಡೇಂಜರ್ ಝೋನ್ ನಲ್ಲಿ ಕಾರುಣ್ಯ ರಾಮ್

ಒಂದು ಬಾರಿ ಎಲಿಮಿನೇಟ್ ಆಗಿ ವೈಲ್ಡ್ ಕಾರ್ಡ್ ಮೂಲಕ ಸೆಕೆಂಡ್ ಚಾನ್ಸ್ ಗಿಟ್ಟಿಸಿಕೊಂಡಿರುವ ಕಾರುಣ್ಯ ರಾಮ್ ರವರನ್ನ ಕ್ಯಾಪ್ಟನ್ ಕೀರ್ತಿ ನಾಮಿನೇಟ್ ಮಾಡಿದರು. ['ಕಿರಿಕ್' ಕೀರ್ತಿ ಗೇಮ್ ಪ್ಲಾನ್ ಬಟಾಬಯಲು ಮಾಡಿದ ನಟ ಮೋಹನ್]

ಶೀತಲ್ ಶೆಟ್ಟಿ ಅಂದ್ರೆ ಇವರಿಗೆಲ್ಲ ಆಗಲ್ಲ.!

ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಹೆಸರನ್ನು ನಟಿ ಕಾರುಣ್ಯ ರಾಮ್, ಸುಕೃತಾ ವಾಗ್ಲೆ, ಸಂಜನಾ, ಮಾಳವಿಕಾ ಮತ್ತು ಮಸ್ತಾನ್ ಸೂಚಿಸಿದರು. ['ದಂಡನಾಯಕ' ಪ್ರಥಮ್ ವಿರುದ್ಧ ದಂಗೆ ಎದ್ದ ಕೀರ್ತಿ-ಮೋಹನ್ ಗ್ಯಾಂಗ್.!]

ಸಂಜನಾ ಮನೆಗೆ ಹೋಗಲಿ.!

'ನಟಿ ಸಂಜನಾ ಮನೆಗೆ ಹೋಗುವುದೇ ವಾಸಿ' ಅಂತ ಮಸ್ತಾನ್, ಶೀತಲ್ ಶೆಟ್ಟಿ, ರೇಖಾ, ಮೋಹನ್ ಮತ್ತು ಶಾಲಿನಿ ನಾಮಿನೇಟ್ ಮಾಡಿದರು.

ಟಾರ್ಗೆಟ್ ಆದ ಶಾಲಿನಿ

ಕಾರುಣ್ಯ ರಾಮ್, ಸುಕೃತಾ, ಮಾಳವಿಕಾ ಮತ್ತು ಸಂಜನಾ... ನಟಿ ಶಾಲಿನಿ ರವರನ್ನ 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ಇಚ್ಛಿಸಿದರು.

ಭುವನ್ ಗೆ ಈ ವಾರ ಕೂಡ 'ಎಲಿಮಿನೇಷನ್' ಭಯ

ಭುವನ್ ಪೊನ್ನಣ್ಣ ಹೆಸರನ್ನ ಪ್ರಥಮ್, ರೇಖಾ ಮತ್ತು ಶಾಲಿನಿ ಹೇಳಿದ್ದರಿಂದ, ಭುವನ್ ನಾಮಿನೇಷನ್ ನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

ಮಸ್ತಾನ್ ಬಗ್ಗೆ ಒಳ್ಳೆ ಅಭಿಪ್ರಾಯ ಇಲ್ಲ.!

'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟ ಮೊದಲ ವಾರವೇ ಮಸ್ತಾನ್ ಮೂರು ವೋಟ್ ಪಡೆದು ನಾಮಿನೇಟ್ ಆಗಿದ್ದಾರೆ.

ಜಸ್ಟ್ ಮಿಸ್ ಆದ ಸುಕೃತಾ

ಮೋಹನ್ ಮತ್ತು ಭುವನ್ ಮಾತ್ರ ಸುಕೃತಾ ವಾಗ್ಲೆ ರವರನ್ನ ನಾಮಿನೇಟ್ ಮಾಡಿದರು. ಇನ್ನೊಂದು ವೋಟ್ ಬಿದಿದ್ದಿದ್ರೆ ಸುಕೃತಾ ವಾಗ್ಲೆ ಕೂಡ ನಾಮಿನೇಟ್ ಆಗ್ತಿದ್ರು.

ಪ್ರಪ್ರಥಮ ಬಾರಿಗೆ ಪ್ರಥಮ್ ಸೇಫ್

'ಎಮರ್ಜೆನ್ಸಿ' ಟಾಸ್ಕ್ ನಲ್ಲಿ ಪ್ರಥಮ್ ಯಶಸ್ವಿ ಆದ್ರಿಂದ, ಈ ವಾರ ನಾಮಿನೇಷನ್ ನಿಂದ ಪ್ರಥಮ್ ಸೇಫ್ ಆಗಿದ್ದಾರೆ.

ಇವರಲ್ಲಿ ನಿಮ್ಮ ಎಸ್.ಎಂ.ಎಸ್ ಯಾರಿಗೆ?

ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ಸಂಜನಾ, ಶಾಲಿನಿ, ಭುವನ್ ಪೊನ್ನಣ್ಣ ಮತ್ತು ಮಸ್ತಾನ್... ಇವರ ಪೈಕಿ ನೀವು ಯಾರ ಪರ ಎಸ್.ಎಂ.ಎಸ್ ಕಳುಹಿಸ್ತೀರಾ?

ಯಾರು ಔಟ್ ಆಗಬೇಕು?

ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ಸಂಜನಾ, ಶಾಲಿನಿ, ಭುವನ್ ಪೊನ್ನಣ್ಣ ಮತ್ತು ಮಸ್ತಾನ್... ಇವರ ಪೈಕಿ ಈ ವಾರ ಯಾರು ಔಟ್ ಆಗ್ಬೇಕು? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 4, Week 9 : Small Screen Actress Sanjana, Sheetal Shetty, Shalini, Karunya Ram, Bhuvan and Masthan are nominated for this week's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada