»   » ಪ್ರಪ್ರಥಮ ಬಾರಿಗೆ ಪ್ರಥಮ್ ಸೇಫ್ ಝೋನ್ ನಲ್ಲಿ.!

ಪ್ರಪ್ರಥಮ ಬಾರಿಗೆ ಪ್ರಥಮ್ ಸೇಫ್ ಝೋನ್ ನಲ್ಲಿ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸತತ ಎಂಟು ವಾರಗಳ ಕಾಲ ನಾಮಿನೇಟ್ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದ 'ಒಳ್ಳೆ ಹುಡುಗ' ಪ್ರಥಮ್ ಒಂಬತ್ತನೇ ವಾರ ಸೇಫ್ ಝೋನ್ ನಲ್ಲಿದ್ದಾರೆ.! [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಬ್ಯಾಕ್ ಟು ಬ್ಯಾಕ್ ಎಂಟು ಬಾರಿ ಡೇಂಜರ್ ಝೋನ್ ನಲ್ಲಿದ್ದ ಪ್ರಥಮ್ ಗೆ ಈ ವಾರ ಪ್ರಪ್ರಥಮ ಬಾರಿಗೆ 'ಎಲಿಮಿನೇಷನ್ ಟೆನ್ಷನ್' ಇಲ್ಲ.

ಯಾರೂ ವೋಟ್ ಮಾಡಲಿಲ್ಲ ಅಂದುಕೊಳ್ಳಬೇಡಿ.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ನಿರ್ದೇಶಕ ಪ್ರಥಮ್ ವಿರುದ್ಧ ಯಾರೂ ವೋಟ್ ಮಾಡಲಿಲ್ಲವೇನೋ ಅಂತ ಲೆಕ್ಕಚಾರ ಹಾಕಬೇಡಿ. ಪ್ರಥಮ್ ಕೈಯಲ್ಲಿ ಇಮ್ಯೂನಿಟಿ ಇರಲಿಲ್ಲ ಅಂದಿದ್ರೆ, ಈ ವಾರ ಕೂಡ ನಾಮಿನೇಟ್ ಆಗ್ತಿದ್ರೋ, ಏನೋ...

[ಸತತ ಎಂಟನೇ ಬಾರಿ ಪುಟ್ಟೇಗೌಡ ಅಲಿಯಾಸ್ ಪ್ರಥಮ್ ಟಾರ್ಗೆಟ್.!]

ಎಲ್ಲಾ ಇಮ್ಯೂನಿಟಿ ಕೃಪೆ.!

ಕಳೆದ ವಾರದ 'ಎಮರ್ಜೆನ್ಸಿ' ಟಾಸ್ಕ್ ನಲ್ಲಿ, 'ಬಿಗ್ ಬಾಸ್' ನೀಡಿದ್ದ ಸವಾಲುಗಳನ್ನ ಸಮರ್ಥವಾಗಿ ನಿಭಾಯಿಸಿದ ಕಾರಣಕ್ಕೆ ಈ ವಾರ ನಾಮಿನೇಷನ್ ನಿಂದ ಪ್ರಥಮ್ ಇಮ್ಯೂನಿಟಿ ಪಡೆದರು. [ಪ್ರಥಮ್ ಇಮ್ಯೂನಿಟಿ ಪಡೆಯಲು 'ಬಿಗ್ ಬಾಸ್' ನೀಡಿದ ವಿಚಿತ್ರ ಸವಾಲು]

ಎಲ್ಲರ ತೂಕ ಕಡಿಮೆ ಆಯ್ತು.!

ಸರ್ವಾಧಿಕಾರಿ ಆಗಿದ್ದ ಪ್ರಥಮ್, 'ಬಿಗ್ ಬಾಸ್' ಮನೆಯ ಸದಸ್ಯರ ತೂಕ ಕಡಿಮೆ ಆಗುವಂತೆ ನೋಡಿಕೊಳ್ಳಬೇಕಿತ್ತು. ಅದರಲ್ಲಿ ಪ್ರಥಮ್ ಯಶಸ್ವಿ ಆದರು. ['ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಪ್ರಥಮ್ 'ಇತಿಹಾಸ' ಪುರುಷ.!]

ಕಡೆಗೂ ಪ್ರಥಮ್ ಸೇಫ್

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಪ್ರಥಮ್ ಸೇಫ್ ಆಗಿದ್ದಾರೆ.

ಡೇಂಜರ್ ಝೋನ್ ನಲ್ಲಿ ಆರು ಮಂದಿ

ನಟಿ ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ಸಂಜನಾ, ಶಾಲಿನಿ, ಭುವನ್ ಮತ್ತು ಮಸ್ತಾನ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.

English summary
BBK4, Week 9: For the first time, Kannada Director Pratham is safe from Eviction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada