»   » 'ಬಿಗ್ ಬಾಸ್ ಕನ್ನಡ-4': ಫಿನಾಲೆ ಮುನ್ನ ಹೊರಬರುವ ಸ್ಪರ್ಧಿ ಯಾರು.?

'ಬಿಗ್ ಬಾಸ್ ಕನ್ನಡ-4': ಫಿನಾಲೆ ಮುನ್ನ ಹೊರಬರುವ ಸ್ಪರ್ಧಿ ಯಾರು.?

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಮುನ್ನ ನಟ ಭುವನ್ ಪೊನ್ನಣ್ಣ ರವರ ಆಯ್ಕೆಯ ಅನುಸಾರ ನಟ,ನಿರ್ದೇಶಕ ಮೋಹನ್ ಡೈರೆಕ್ಟ್ ಆಗಿ ಫಿನಾಲೆ ಹಂತ ತಲುಪಿದ್ದಾರೆ.

ಉಳಿದ ಸ್ಪರ್ಧಿಗಳು ಫಿನಾಲೆ ಹಂತ ತಲುಪಬೇಕು ಅಂದ್ರೆ ಇನ್ನೊಂದು 'ಪಬ್ಲಿಕ್ ಪರೀಕ್ಷೆ' ಪಾಸ್ ಆಗಲೇಬೇಕು.

ಜನರ ಆಯ್ಕೆಗೆ ಆದ್ಯತೆ

ಸ್ಪರ್ಧಿಗಳು ತಮ್ಮ ತಮ್ಮಲ್ಲೇ ನಾಮಿನೇಟ್ ಮಾಡಿಕೊಂಡು ಫಿನಾಲೆ ಹಂತ ತಲುಪುವ ಬದಲು, ವೀಕ್ಷಕರಿಗೆ ಯಾರು ಇಷ್ಟವೋ...ಅವರೇ ಫಿನಾಲೆ ಹಂತ ತಲುಪಲಿ ಎಂಬುದು 'ಬಿಗ್ ಬಾಸ್' ಆಯೋಜಕರು ಹಾಗೂ 'ಕಲರ್ಸ್ ಕನ್ನಡ' ವಾಹಿನಿಯ ಆಶಯ.[ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]

ಅದಕ್ಕೆ ಎಲಿಮಿನೇಷನ್ ನಡೆಯಲಿಲ್ಲ

ಇದೇ ಕಾರಣಕ್ಕೆ ಕಳೆದ ವಾರ ನಾಮಿನೇಷನ್ ಪ್ರಕ್ರಿಯೆ ನಡೆದರೂ, ವೋಟಿಂಗ್ ಗೆ ಅವಕಾಶ ನೀಡಲಾಗಿರಲಿಲ್ಲ. ಎಲಿಮಿನೇಷನ್ ಕೂಡ ನಡೆಯಲಿಲ್ಲ.['ಬಿಗ್ ಬಾಸ್' ಮನೆಯಲ್ಲಿ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಪ್ರತಿನಿಧಿ ಹರ್ಷಿತಾ!]

ಮೋಹನ್ ಮಾತ್ರ ಸೇಫ್

ಫಿನಾಲೆ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುವ ಬದಲು ಮೋಹನ್ ಒಬ್ಬರನ್ನು ಹೊರತು ಪಡಿಸಿ ಉಳಿದ ಎಲ್ಲ ಸ್ಪರ್ಧಿಗಳನ್ನ ಡೇಂಜರ್ ಝೋನ್ ನಲ್ಲಿ ಇರಿಸಲಾಗಿದೆ.[Exclusive: 'ಬಿಗ್ ಬಾಸ್' ಮನೆಯಲ್ಲಾದ ಡಿಢೀರ್ ಪ್ರೆಸ್ ಮೀಟ್ ಹೇಗಿತ್ತು ಗೊತ್ತಾ?]

ಯಾರು ಔಟ್ ಆಗ್ತಾರೆ.?

ವೀಕ್ಷಕರು ಮಾಡಿದ ಎಸ್.ಎಂ.ಎಸ್ ಗಳ ಆಧಾರದ ಮೇಲೆ 'ಒಳ್ಳೆ ಹುಡುಗ' ಪ್ರಥಮ್, ನಟಿ ಶಾಲಿನಿ, ರೇಖಾ, 'ಕಿರಿಕ್' ಕೀರ್ತಿ ಮತ್ತು ಮಾಳವಿಕಾ ಅವಿನಾಶ್ ರವರ ಪೈಕಿ ಈ ವಾರದ ಮಧ್ಯದಲ್ಲಿ ಯಾರಾದರೂ ಒಬ್ಬರ ಫಿನಾಲೆ ಕನಸು ನುಚ್ಚುನೂರಾಗಲಿದೆ.

ನಿಮ್ಮ ಆಯ್ಕೆ ಯಾರು.?

ನಿನ್ನೆ (ಭಾನುವಾರ) ಮಧ್ಯರಾತ್ರಿ 12 ಗಂಟೆಗೆ ವೋಟಿಂಗ್ ಲೈನ್ಸ್ ಕ್ಲೋಸ್ ಆಗಿದೆ. ಪ್ರಥಮ್, ನಟಿ ಶಾಲಿನಿ, ರೇಖಾ, 'ಕಿರಿಕ್' ಕೀರ್ತಿ ಮತ್ತು ಮಾಳವಿಕಾ ಅವಿನಾಶ್ ರವರ ಪೈಕಿ ನೀವು ಯಾರ ಪರವಾಗಿ ಎಸ್.ಎಂ.ಎಸ್ ಮಾಡಿದ್ದೀರಾ.? ನಿಮ್ಮ ಆಯ್ಕೆ ನಮಗೆ ತಿಳಿಸಿ...

English summary
Bigg Boss Kannada 4: Week 16 - Prior to Finale, Which Contestant will get evicted this Mid-Week?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada