»   » 'ಬಿಗ್ ಬಾಸ್' ಗೆದ್ದ ಪ್ರಥಮ್: ವೀಕ್ಷಕರ ಸಂಭ್ರಮಕ್ಕೆ ಪಾರವೇ ಇಲ್ಲ.!

'ಬಿಗ್ ಬಾಸ್' ಗೆದ್ದ ಪ್ರಥಮ್: ವೀಕ್ಷಕರ ಸಂಭ್ರಮಕ್ಕೆ ಪಾರವೇ ಇಲ್ಲ.!

Posted By:
Subscribe to Filmibeat Kannada

''ಪ್ರಥಮ್ ಗೆ ಮೂಗಿನ ತುದಿಯಲ್ಲೇ ಕೋಪ... ಏರುಧ್ವನಿಯೇ ಆತನ ಅಸ್ತ್ರ... ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದೇ ಆತನ ಜಾಯಮಾನ... ಇರಿಟೇಷನ್ ಎನ್ನುವ ಪದಕ್ಕೆ ಇರಿಟೇಷನ್ ಹುಟ್ಟಿಸುವ ವ್ಯಕ್ತಿ ಆತ'' ಅಂತ ಅನೇಕರು ಮೂಗು ಮುರಿಯಬಹುದು.

ಆದ್ರೆ, ಪ್ರಥಮ್ 'ಬಿಗ್ ಬಾಸ್ ಕನ್ನಡ-4' ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿರುವುದು ವಾಸ್ತವ. ಹಾಗೇ, ಪ್ರಥಮ್ ಗೆದ್ದಿರುವುದಕ್ಕೆ ಬಹುತೇಕ ಕನ್ನಡಿಗರು ಖುಷಿ ಪಟ್ಟಿರುವುದು ಕೂಡ ಅಷ್ಟೇ ಸತ್ಯ. ಇದಕ್ಕೆ ಸಾಕ್ಷಿ... ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿಯೇ ವ್ಯಕ್ತವಾಗಿರುವ ವೀಕ್ಷಕರ ಅಭಿಪ್ರಾಯ.

'ಒಳ್ಳೆ ಹುಡುಗ' ಪ್ರಥಮ್ 'ಬಿಗ್ ಬಾಸ್' ಗೆದ್ದಿರುವ ಬಗ್ಗೆ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ ಲಭ್ಯವಾಗಿರುವ ವೀಕ್ಷಕರ ಕೆಲ ಕಾಮೆಂಟ್ಸ್ ಇಲ್ಲಿದೆ ನೋಡಿ....

ವೀಕ್ಷಕರ ಕಣ್ಣಲ್ಲಿ ಆನಂದಬಾಷ್ಪ.!

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಪ್ರಥಮ್ ಗೆಲುವು ಸಾಧಿಸಿದಾಗ ವೀಕ್ಷಕರ ಕಣ್ಣಲ್ಲಿ ಆನಂದಬಾಷ್ಪ ಮೂಡಿತಂತೆ. ಅದಕ್ಕೆ ಸಾಕ್ಷಿ ಈ ಕಾಮೆಂಟ್.!['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಪ್ರಥಮ್ ನಿಜವಾದ ಹೀರೋ

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಗೆದ್ದ ಹಣವನ್ನ ಮೃತ ರೈತರ ಕುಟುಂಬಕ್ಕೆ ಹಾಗೂ ಯೋಧರಿಗೆ ನೀಡುವುದಾಗಿ ಪ್ರಥಮ್ ಘೋಷಿಸಿದ್ದು ವೀಕ್ಷಕರಿಗೆ ಸಂತಸ ತಂದಿದೆ.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

'ಬಿಗ್ ಬಾಸ್' ಗೆ ಜೈ

'ಬಿಗ್ ಬಾಸ್' ಹಾಗೂ ಪ್ರಥಮ್ ರವರನ್ನ ವೀಕ್ಷಕರು ಕೊಂಡಾಡುತ್ತಿರುವ ಪರಿ ಇದು.[ಟ್ವಿಟ್ಟರ್ ನಲ್ಲಿ ಸೂಪರ್ ಸ್ಟಾರ್ ಆದ 'ಬಿಗ್ ಬಾಸ್' ವಿನ್ನರ್ ಪ್ರಥಮ್]

ಕನ್ನಡಿಗರಿಗೆ ಹೆಮ್ಮೆ

ಗೆದ್ದ ಹಣವನ್ನು ಕನ್ನಡಿಗರಿಗೆ ನೀಡಲು ಮುಂದಾದ ಪ್ರಥಮ್ ಗೆ ವೋಟ್ ಮಾಡಿದ್ದಕ್ಕೆ ವೀಕ್ಷಕರು ಹೆಮ್ಮೆ ಪಡುತ್ತಿದ್ದಾರೆ.['ಲಾರ್ಡ್' ಪ್ರಥಮ್ ಸರ್ ಮಾಡಿರುವ ದಾಖಲೆ ಅಂತಿಂಥದ್ದಲ್ಲ.!]

ಸಾಮಾನ್ಯ ಅಲ್ಲ.!

''ವಿರೋಧಿಗಳ ಮಧ್ಯೆ ಇದ್ದು ಗೆದ್ದು ಬರೋದು ಅಂದ್ರೆ ಸಾಮಾನ್ಯದ ಮಾತಲ್ಲ'' ಹೀಗಾಗಿ ಪ್ರಥಮ್ ಗೆ ಹ್ಯಾಟ್ಸ್ ಆಫ್ ಹೇಳ್ತಿದ್ದಾರೆ ವೀಕ್ಷಕರು.['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]

ಕನ್ನಡಿಗರ ಗೆಲುವು

ಇಲ್ಲಿಯವರೆಗೂ ಯಾವ ಸ್ಪರ್ಧಿಗಳು ಕೂಡ ಗೆದ್ದ ಹಣವನ್ನು ಬಡವರಿಗೆ ನೀಡಿಲ್ಲ. ಈ ವಿಷಯದಲ್ಲಿ ಪ್ರಥಮ್ ಗ್ರೇಟ್ ಎಂಬ ಭಾವನೆ ವೀಕ್ಷಕರಲ್ಲಿ ಮೂಡಿದೆ.

ಸಾಲು ಸಾಲು ಕಾಮೆಂಟ್ಸ್.!

ಪ್ರಥಮ್ ಗೆದ್ದಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ವೀಕ್ಷಕರು ಮಾಡಿರುವ ಸಾಲು ಸಾಲು ಕಾಮೆಂಟ್ಸ್ ಇವು...

ಪ್ರಥಮ್ ಸಿಕ್ಕ ಸಲಹೆ

ಒಳ್ಳೆ ಹುಡುಗ ಪ್ರಥಮ್ ಗೆ ವೀಕ್ಷಕರ ಒಂದು ಸಲಹೆ ಕೂಡ ನೀಡಿದ್ದಾರೆ. ಅದೇನು ಅಂತ ನೀವೇ ನೋಡಿ....

ಹುಡುಗಾಟಿಕೆ ಅಲ್ಲ.!

ಪ್ರಥಮ್ ನಡವಳಿಕೆ ಹುಡುಗಾಟಿಕೆ ಇರಬಹುದು. ಆದ್ರೆ, ಅವನ ಬುದ್ಧಿವಂತಿಕೆ ,ವಿಚಾರ ಹುಡುಗಾಟಿಕೆ ಅಲ್ಲ ಎನ್ನುವುದಕ್ಕೆ ಬಹುಮಾನದ ಹಣವನ್ನ ದಾನವಾಗಿ ನೀಡಿರುವುದೇ ಸಾಕ್ಷಿ ಎಂಬುದು ವೀಕ್ಷಕರ ಅಭಿಪ್ರಾಯ.

ಲಾರ್ಡ್ ಪ್ರಥಮ್ ಗೆ ಜೈ

'ಲಾರ್ಡ್' ಪ್ರಥಮ್ ಸರ್ ಗೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ.

'ಬಿಗ್ ಬಾಸ್'ಗೆ ಥ್ಯಾಂಕ್ಸ್

''ನಮ್ಮ ವೋಟ್ ಗೆ ಮಾನ್ಯತೆ ಕೊಟ್ಟ 'ಬಿಗ್ ಬಾಸ್' ಹಾಗೂ ಕಲರ್ಸ್ ಗೆ ಥ್ಯಾಂಕ್ಸ್'' ಹೇಳ್ತಿದ್ದಾರೆ ವೀಕ್ಷಕರು.

ಸ್ಫೂರ್ತಿ ತುಂಬಿದ ಪ್ರಥಮ್

'ಬಿಗ್ ಬಾಸ್' ಗೆದ್ದ ಪ್ರಥಮ್, ಪೂರ್ತಿ ಹಣವನ್ನು ಸಮಾಜದ ಒಳಿತಿಗಾಗಿ ನೀಡಿ ಇತರರಿಗೆ ಸ್ಫೂರ್ತಿ ನೀಡಿದ್ದಾರಂತೆ.

ಬಿಗ್ ಬಾಸ್ ನಿರಾಶೆ ಮಾಡಲಿಲ್ಲ.!

'ಬಿಗ್ ಬಾಸ್' ಈ ಬಾರಿ ನಿರಾಶೆ ಮಾಡಲಿಲ್ಲ ಅಂತ ಕೂಡ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ.

ಕಾಮನ್ ಮ್ಯಾನ್ ಗೆದ್ದರು

ಒಬ್ಬ ಕಾಮನ್ ಮ್ಯಾನ್ ನ ಗೆಲ್ಲಿಸಿದ್ದಕ್ಕೆ ವೀಕ್ಷಕರು 'ಬಿಗ್ ಬಾಸ್'ಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

ಇತರೆ ಸ್ಪರ್ಧಿಗಳಿಗೆ ಓಪನ್ ಚಾಲೆಂಜ್.!

''ಪ್ರಥಮ್ ಬಿಟ್ಟು ಬೇರೆ ಯಾರೇ ಗೆದ್ದಿದ್ದರೂ, ಹಣವನ್ನ ಜನರಿಗೆ ವಾಪಸ್ ನೀಡುತ್ತಿರಲಿಲ್ಲ. ಇದು ಸತ್ಯ'' ಎಂಬುದು ವೀಕ್ಷಕರ ವಾದ

ಆಡಿದ ಮಾತನ್ನ ಉಳಿಸಿಕೊಂಡ ಪ್ರಥಮ್.!

ಕನ್ನಡಿಗರ ಸೇವೆ ಮಾಡ್ತೀನಿ ಅಂತ ಹೇಳಿದ್ದ ಪ್ರಥಮ್, ತಮ್ಮ ಮಾತನ್ನ ಉಳಿಸಿಕೊಂಡಿದ್ದಾರೆ ಎಂಬ ಕಾಮೆಂಟ್ ಗಳೇ ಹೆಚ್ಚು.

ಮಾದರಿ ಆದ ಪ್ರಥಮ್.!

ವೀಕ್ಷಕರು ಸಂಭ್ರಮ ಪಡುತ್ತಿರುವುದಕ್ಕೆ ಕಾರಣ ಇದೇ...

ಪ್ರಥಮ್ ಗ್ರೇಟ್

ಪ್ರಥಮ್ ನಿಜವಾಗಲೂ ಗ್ರೇಟ್ ಎನ್ನುವ ಅಭಿಪ್ರಾಯವೇ ಹೆಚ್ಚು ವ್ಯಕ್ತವಾಗಿದೆ.

ಮನ ಮುಟ್ಟುವ ಶೋ.!

'ಇದು ಪ್ರಥಮ್ ಗೆಲುವಲ್ಲ, ಕನ್ನಡಿಗರ ಗೆಲುವು' ಅಂತ ವೀಕ್ಷಕರೇ ಸಂಭ್ರಮ ಪಡುತ್ತಿದ್ದಾರೆ

ನಿಮ್ಮ ಅಭಿಪ್ರಾಯ ಏನು.?

'ಬಿಗ್ ಬಾಸ್ ಕನ್ನಡ-4' ವಿನ್ನರ್ ಪ್ರಥಮ್ ಬಗ್ಗೆ ನಿಮ್ಮ ಅಭಿಪ್ರಾಯ ಏನು.? ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ....

English summary
Bigg Boss Kannada 4 Viewers have taken 'Colors Kannada/Colors Super' Facebook page to express their opinion upon Pratham being Winner of the show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada