»   » ಜಯಲಕ್ಷ್ಮಿಯನ್ನು ಹೂವಿನಂತೆ ಮೇಲೆತ್ತಿದ ರೋಹನ್

ಜಯಲಕ್ಷ್ಮಿಯನ್ನು ಹೂವಿನಂತೆ ಮೇಲೆತ್ತಿದ ರೋಹನ್

Posted By:
Subscribe to Filmibeat Kannada

ಕರ್ನಾಟಕದ ರಾಜಕೀಯದ ಚಿತ್ರಣ ಬದಲಾಗಿದೆ. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದಿದ್ದು ಸರ್ಕಾರ ರಚನೆಗೆ ಮುಂದಾಗಿದೆ. ಈಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ರಾಜಕೀಯ ಜೋರಾಗಿದೆ. ನಲವತ್ತೈದನೇ ದಿನದ ಹೈಲೈಟ್ಸ್ ಇಲ್ಲಿವೆ ನೋಡಿ.

ನಟಿ ರಿಷಿಕಾ ಸಿಂಗ್ ಮನೆಗೆ ಪ್ರವೇಶ ಪಡೆದ ಬಳಿಕ ಎಲ್ಲರೂ ಸೈಲೆಂಟ್ ಆಗಿದ್ದಾರೆ. ಎಲ್ಲೆಲ್ಲೂ ರಿಷಿಕಾ ಅವರದೇ ಸೌಂಡ್ ಜಾಸ್ತಿಯಾಗಿದೆ. ಇದರಿಂದ ಮನೆಯಲ್ಲಿ ಮುಸುಕಿನ ಗುದ್ದಾಟ ನಡೆದಿದೆ. ರಿಷಿಕಾ ವಿರುದ್ಧ ಎಲ್ಲರೂ ಮಾತಿನ ಯುದ್ಧ ಶುರು ಮಾಡಿದ್ದಾರೆ.

ನಲವತ್ತೈದನೇ ದಿನದ ಆರಂಭ ವ್ಯಾಯಾಮದ ಮೂಲಕ ಆರಂಭವಾಯಿತು. ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರು ದಾಕ್ಷಿಣ್ಯ ಬಿಟ್ಟು ಮೈ ಬೆವರಿಳಿಸಿದರು. ಎಲ್ಲರೂ ಬಳ್ಳಿಯಂತ ಸೊಂಟ ಬಗ್ಗಿಸಿ, ತಿರುಗಿಸಿ ವ್ಯಾಯಾಮ ಮಾಡಿದರೆ. ಶರ್ಮಾ ಅವರು ಹರಸಾಹಸ ಪಟ್ಟು ಒಂದೆರಡು ಸುತ್ತು ತಮ್ಮ ಸೊಂಟ ತಿರುಗಿಸಿದರು.

ಜಯಲಕ್ಷ್ಮಿಯನ್ನು ಹೂವಿನಂತೆ ಮೇಲೆತ್ತಿದ

ಇನ್ನೊಂದು ಕಡೆ ರೋಹನ್ ಗೌಡ ಅವರು ನರ್ಸ್ ಜಯಲಕ್ಷ್ಮಿ ಅವರನ್ನು ತಮ್ಮ ಎರಡೂ ಕೈಗಳಲ್ಲಿ ಹಿಡಿದು ಹೂವಿನಂತೆ ಸರಾಗವಾಗಿ ಮೇಲೆತ್ತಿದ್ದರು. ಎಷ್ಟೇ ಆಗಲಿ ಅವರು ಕ್ರೀಡಾಪಟು ಅಲ್ಲವೇ? ನರ್ಸ್ ಜಯಲಕ್ಷ್ಮಿ ಯಾವ ಲೆಕ್ಕ. ಅಯ್ಯೋ ಅವನು ಬಿಡ್ರಿ ನೂರು, ನೂರೈವತ್ತು ಕೆ.ಜಿ ಭಾರ ಎತ್ತಿದವನು ಎಂದು ಮನೆಯಲ್ಲಿ ಎಲ್ಲರೂ ಮಾತನಾಡಿಕೊಂಡರು.

ಎಲ್ಲರನ್ನೂ ರಂಜಿಸಿದ ಒಲಂಪಿಕ್ಸ್ ಟಾಸ್ಕ್

ಇನ್ನೊಂದು ಕಡೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಲಂಪಿಕ್ಸ್ ಟಾಸ್ಕ್ ನಲ್ಲಿ ವಿವಿಧ ಆಟಗಳನ್ನು ಆಡಿಸಿದರು. ಇದಕ್ಕೆಲ್ಲಾ ರಿಷಿಕಾ ಅವರೇ ಅಂಪೈರ್. ಸ್ಪಂಜಿನ ದಿರಿಸು ಕೊಟ್ಟು ವಿಭಿನ್ನ ಟಾಸ್ಕ್ ಮಾಡಿಸಲಾಯಿತು. ಇದರಲ್ಲಿ ಶರ್ಮಾ, ಜಯಲಕ್ಷ್ಮಿ ಪಾಲ್ಗೊಂದು ಎಲ್ಲರನ್ನೂ ರಂಜಿಸಿದರು.

ನನ್ನ ಪಾಲಿಗೆ ಬಿಗ್ ಬಾಸ್ ಗಾಡ್ ಎಂದ ರಿಷಿಕಾ

ರೂಲ್ಸು ರೆಗ್ಯುಲೇಷನ್ ಎಂದು ರಿಷಿಕಾ ಸಿಂಗ್ ಎಲ್ಲರನ್ನೂ ತಲೆತಿನ್ನುತ್ತಿದ್ದರು. ನನ್ನ ಪಾಲಿಗೆ ಬಿಗ್ ಬಾಸ್ ಅವರೇ ಗಾಡ್ ಎಂದು ಹೊಗಳಿದರು. ಆದರೆ ಅವರ ಹೊಗಳಿಕೆಯಲ್ಲಿ ಯಾವುದೇ ನಾಟಕೀಯತೆ ಇರಲಿಲ್ಲ. ಎಲ್ಲ ಟಾಸ್ಕ್ ಗಳನ್ನು ಅವರು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ರೂಲ್ಸ್ ಬ್ರೇಕ್ ಮಾಡುತ್ತಿರುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿರುವ ರಿಷಿಕಾ

ಆದರೆ ಅವರಿಗೇ ಗೊತ್ತಿಲ್ಲದಂತೆ ಮನೆಯಲ್ಲಿ ಕನ್ನಡಕ್ಕೆ ಬದಲಾಗಿ ಇಂಗ್ಲಿಷ್ ಭಾಷೆಯನ್ನೇ ರಿಷಿಕಾ ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಬಗ್ಗೆ ಮನೆಯ ಕೆಲ ಸದಸ್ಯರು ಎಚ್ಚರಿಸಿದರೂ ಕ್ಯಾರೆ ಮಾಡುತ್ತಿಲ್ಲ. ತಮ್ಮ ಮೂಗಿನ ನೇರಕ್ಕೆ ಮಾತ್ರ ರಿಷಿಕಾ ಮಾತನಾಡುತ್ತಿದ್ದಾರೆ.

ಲೈಫಲ್ಲಿ ಸಿಕ್ಕಾಪಟ್ಟೆ ಅನುಭವಿಸಿದ್ದೇನೆ, ರಿಷಿಕಾ

ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಲೈಫಲ್ಲಿ ಸಿಕ್ಕಾಪಟ್ಟೆ ಅನುಭವಿಸಿ ಬಿಟ್ಟಿದ್ದೇನೆ. ನನ್ನ ಜೀವನ ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಹಾಗೆ ಹೀಗೆ ಎಂದು ವೇದಾಂತ ಹೇಳುತ್ತಾ ಮನೆಯ ಸದಸ್ಯರಿಗೆ ಹೊಸ ತಲೆನೋವಾಗಿಯೂ ರಿಷಿಕಾ ಪರಿಣಮಿಸಿದ್ದಾರೆ.

ಜಯಲಕ್ಷ್ಮಿ, ರಿಷಿಕಾ ನಡುವೆ ಮಾತಿನ ಮಲ್ಲಯುದ್ಧ

ಮಾತಿಗೆ ಮಾತು ಬೆಳೆದು ರಿಷಿಕಾ ಮತ್ತು ನರ್ಸ್ ಜಯಲಕ್ಷ್ಮಿ ನಡುವೆ ಮಾತಿನ ಮಲ್ಲಯುದ್ಧವೇ ನಡೆಯುತ್ತಿದೆ. ಇದೇ ವಿಚಾರಕ್ಕೆ ಬೇಸರದಿಂದ ರಿಷಿಕಾ ಮನೆಯ ಸದಸ್ಯರಿಂದ ದೂರ ಸರಿದ ಘಟನೆಯೂ ನಡೆಯಿತು. ಕ್ಯಾಮೆರಾ ಮುಂದೆ ಅಳಲು ನನಗಿಷ್ಟವಿಲ್ಲ ಎಂದು ಕೊಠಡಿಯೊಂದರಲ್ಲಿ ಕಣ್ಣೀರಿಟ್ಟರು.

ಎಲ್ಲ ಆಟಗಳಲ್ಲೂ ಗೆದ್ದ ರೋಹನ್ ತಂಡ

ಆದರೆ ಅಲ್ಲೂ ಕ್ಯಾಮೆರಾ ಇದ್ದದ್ದು ಅವರ ಗಮನಕ್ಕೆ ಬರಲಿಲ್ಲ. ರಿಷಿಕಾ ಅವರನ್ನು ಸಮಾಧಾನಪಡಿಸಲು ನಿಖಿತಾ ಮುಂದಾದರಾದರೂ. ಆಕೆಯನ್ನೂ ಹತ್ತಿರ ಸೇರಿಸಿಕೊಳ್ಳಲು ರಿಷಿಕಾ ಮನಸ್ಸು ಮಾಡಲಿಲ್ಲ. ಉಳಿದಂತೆ ಎಲ್ಲಾ ಆಟಗಳಲ್ಲೂ ರೋಹನ್ ತಂಡ ಮುಂದಿದೆ. ವಿಜಯ್ ರಾಘವೇಂದ್ರ ತಂಡ ರನ್ನರ್ ಅಪ್ ಸ್ಥಾನದಲ್ಲಿದೆ.

ಲೇಡಿಸ್ ರೂಮಲ್ಲಿ ಮಲಗಲು ಮನಸ್ಸು ಮಾಡಿದ ಶರ್ಮಾ

ತಮ್ಮದೇ ಕೊಠಡಿಯಲ್ಲಿ ಕಾಲತಳ್ಳುತ್ತಿರುವ ನರೇಂದ್ರ ಬಾಬು ಶರ್ಮಾ ಅವರನ್ನು ಲೇಡಿಸ್ ರೂಮಿನಲ್ಲಿ ಮಲಗುವಂತೆ ಮನವೊಲಿಸಲು ವಿಜಯ್ ಹಾಗೂ ಅನುಶ್ರೀ ಶ್ರಮಿಸಿದರು. ಅವರ ಮನವೊಲಿಕೆಗೆ ಶರ್ಮಾ ಅವರು ಓಕೆ ಎಂದಿದ್ದಾರೆ. ಮುಂದೇನಾಗುತ್ತದೋ ಏನೋ.

English summary
Etv Kannada's reality show Bigg Boss day 45th highlights. Olympic task continues on the day. In all games Rohan team is winner. Actress Rishika Singh talks about much on rules and regulations.
Please Wait while comments are loading...