»   » ಹಳೇ ಬಾಯ್ ಫ್ರೆಂಡ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ.!

ಹಳೇ ಬಾಯ್ ಫ್ರೆಂಡ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ.!

Posted By:
Subscribe to Filmibeat Kannada

ಒಂದಾನೊಂದು ಕಾಲದಲ್ಲಿ ಅನುಪಮಾ ಗೌಡ ಹಾಗೂ ಜಗನ್ನಾಥ್ ಚಂದ್ರಶೇಖರ್ ಲವರ್ಸ್ ಇರಬಹುದು. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಇವರಿಬ್ಬರು ಹಾಗಿಲ್ಲ. ಹಾಗ್ನೋಡಿದ್ರೆ, ಅನುಪಮಾ ಹಾಗೂ ಜಗನ್ 'ದೊಡ್ಮನೆ'ಯಲ್ಲಿ ಪರಸ್ಪರ ಮಾತನಾಡುವುದೇ ಕಮ್ಮಿ.

'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಕೂಡಲೆ, ''ಅನುಪಮಾ ಗೌಡ'' ಅಂತ ಜಗನ್ ಪೂರ್ತಿ ಹೆಸರಿಡಿದು ಕರೆದಿದ್ದು, ಅನುಪಮಾಗೆ ಇಷ್ಟ ಆಗಿರಲಿಲ್ಲ.

ಇದೀಗ ಎಲ್ಲರ ಮುಂದೆ ಮತ್ತೊಮ್ಮೆ ''ಅನುಪಮಾ ಗೌಡ'' ಅಂತ ಜಗನ್ ಪೂರ್ತಿ ಹೆಸರಿಡಿದು ಕರೆದಿದ್ದಕ್ಕೆ ಅನುಪಮಾ ಕೋಪೋದ್ರೇಕಗೊಂಡರು. ಜೊತೆಗೆ ಖಡಕ್ ವಾರ್ನಿಂಗ್ ಕೂಡ ಕೊಟ್ಟರು. ಮುಂದೆ ಓದಿರಿ....

ಗರಂ ಆಗಿದ್ದ ಅನುಪಮಾ ಗೌಡ

'ಜ್ಯೂಸ್ ಬೇಕು' ಟಾಸ್ಕ್ ನಲ್ಲಿ ರಿಯಾಝ್ ಆಡಿದ ಮಾತುಗಳನ್ನು ಕೇಳಿಸಿಕೊಳ್ಳದೆ, ಜ್ಯೂಸ್ ಕುಡಿದ ಅಷ್ಟೂ ಲೋಟಗಳನ್ನು ಜಗನ್ ಡಿಸ್ ಅಪ್ರೂವ್ ಮಾಡಿದರು. ಇದರಿಂದ ಸಹಜವಾಗಿ ಜಗನ್ ವಿರುದ್ಧ ರಿಯಾಝ್ ತಂಡದ ಕೃಷಿ ಹಾಗೂ ಅನುಪಮಾ ಗರಂ ಆದರು.

ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

ಜಗನ್-ಅನುಪಮಾ ನಡುವೆ ವಾಕ್ಸಮರ

ಜಗನ್ ವಿರುದ್ಧ ಕೃಷಿ ಹಾಗೂ ಅನುಪಮಾ ಗೌಡ ದನಿ ಎತ್ತಿದಾಗ, ''ನಿಮ್ಮ ಟೀಮ್ ಜೊತೆ ಮೊದಲು ಮಾತನಾಡಿಕೊಳ್ಳಿ, ಮೊದಲು ನಾವು ತುಂಬಾ ಫೇರ್ ಗೇಮ್ ಅಡಿದ್ವಿ'' ಅಂತ ಜಗನ್ ಹೇಳಿದರು. ಅದಕ್ಕೆ, ''ಎಲ್ಲವನ್ನ ತೆಗೆದು ಬಿಸಾಕಿ. ಕ್ಯಾಪ್ಟನ್ ಗಳ ಜಗಳಕ್ಕೆ ಎಲ್ಲರ ಮಧ್ಯದಲ್ಲೂ ಗಲಾಟೆ ಆಗುತ್ತಿದೆ. ನಾವು ನಮ್ಮ ಅಭಿಪ್ರಾಯವನ್ನು ಹೇಳುವ ಹಾಗೇ ಇಲ್ವಾ.?'' ಅಂತ ಅನುಪಮಾ ಜೋರು ಮಾಡುತ್ತಿದ್ದಂತೆಯೇ, ''ಕ್ಯಾಪ್ಟನ್ ಜಗಳ ಅಲ್ಲ, ನಮ್ಮ ಟೀಮ್ ಕೂಡ ಕಷ್ಟ ಪಟ್ಟಿದ್ದಾರೆ'' ಅಂತ ಕಣ್ಣು ಕೆಂಪಗೆ ಮಾಡಿಕೊಂಡು ಜಗನ್ ನುಡಿದರು.

ಹಳೇ ಬಾಯ್ ಫ್ರೆಂಡ್ ಜಗನ್ ಕಂಡ್ರೆ ಅನುಪಮಾಗೆ ಅಷ್ಟಕಷ್ಟೆ.! ಯಾಕೆ.?

ಮತ್ತೆ ಹಾಗೇ ಕರೆದ ಜಗನ್

ವಾದ-ವಿವಾದ-ವಾಕ್ಸಮರದ ನಡುವೆ ''ಅನುಪಮಾ ಗೌಡ ಅವರೇ..'' ಅಂತ ಜಗನ್ ಹೇಳಿಬಿಟ್ಟರು.

ಓಹೋ.! ಮಾಜಿ ಪ್ರೇಯಸಿ ಅನುಪಮಾ ರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್ನಾಥ್.!

ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ

''ಅನುಪಮಾ ಗೌಡ'' ಅಂತ ಜಗನ್ ಕರೆದಿದ್ದಕ್ಕೆ, ''ಆ ತರಹ ಮಾತನಾಡಬೇಡ. ನಾನು ಜಗ್ಗ ಅಂತಲೇ ನಿನ್ನ ಹತ್ತರ ಮಾತನಾಡುತ್ತೇನೆ. ನೀನು ನನ್ನ ಅನುಪಮಾ ಗೌಡ ಅಂತ ನನ್ನನ್ನ ಕರೆದರೆ, ನಾನು ನಿನ್ನನ್ನ ಜಗನ್ನಾಥ್ ಚಂದ್ರಶೇಖರ್ ಅಂತ ಕರೆಯಬೇಕಾಗುತ್ತೆ. ನಾನು ಎಲ್ಲರ ಪರ ಮಾತನಾಡಿದ್ದು. ನೀನು ಪರ್ಸನಲ್ ಆಗಿ ಮಾತನಾಡಬೇಡ. ನನ್ನನ್ನ ಅನುಪಮಾ ಗೌಡ ಅಂತ ಕರೆಯಬೇಡ'' ಅಂತ ಖಡಕ್ ಆಗಿ ವಾರ್ನಿಂಗ್ ಕೊಟ್ಟರು ಅನುಪಮಾ ಗೌಡ

English summary
Bigg Boss Kannada 5: Week 4: Anupama Gowda warns Jaganath Chandrashekar. ಎಲ್ಲರ ಮುಂದೆ ಮತ್ತೊಮ್ಮೆ ''ಅನುಪಮಾ ಗೌಡ'' ಅಂತ ಜಗನ್ ಪೂರ್ತಿ ಹೆಸರಿಡಿದು ಕರೆದಿದ್ದಕ್ಕೆ ಅನುಪಮಾ ಕೋಪೋದ್ರೇಕಗೊಂಡರು. ಜೊತೆಗೆ ಖಡಕ್ ವಾರ್ನಿಂಗ್ ಕೂಡ ಕೊಟ್ಟರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada