»   » 'ಬಿಗ್ ಬಾಸ್' ಮನೆಯಿಂದ ಹೊರ ಹೋಗ್ತಾರಂತೆ ನಟಿ ಅನುಪಮಾ ಗೌಡ.!

'ಬಿಗ್ ಬಾಸ್' ಮನೆಯಿಂದ ಹೊರ ಹೋಗ್ತಾರಂತೆ ನಟಿ ಅನುಪಮಾ ಗೌಡ.!

Posted By:
Subscribe to Filmibeat Kannada
Bigg Boss Kannada Season 5 :ಅನುಪಮಾ ಗೌಡ ಮನೆಯಿಂದ ಹೊರಗೆ ಹೋಗಬೇಕಂತೆ | Filmibeat Kannada

'ಅಕ್ಕ' ಧಾರಾವಾಹಿ ಖ್ಯಾತಿಯ ನಟಿ ಅನುಪಮಾ ಗೌಡಗೆ 'ಬಿಗ್ ಬಾಸ್' ಮನೆ ಸಾಕಾಗಿ ಹೋಗಿದ್ಯಂತೆ. 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಟಿ ಅನುಪಮಾ ಗೌಡ ಮನಸ್ಸು ಮಾಡಿದ್ದಾರೆ.

ಹಾಲಿನ ಪ್ಯಾಕೆಟ್ ಗಳನ್ನು ಮುಚ್ಚಿಟ್ಟು, ಸಮೀರಾಚಾರ್ಯ ಅವರಿಗೆ ಒಂದು ಲೋಟ ಹಾಲು ಕೊಡದೆ ದೊಡ್ಡ ರಾದ್ದಾಂತಕ್ಕೆ ಪರೋಕ್ಷವಾಗಿ ಕಾರಣವಾಗಿದ್ದ ಅನುಪಮಾ... ಜೆಕೆಗೆ ಮಾತ್ರ ಸೀಮಿತವಾಗಿದ್ದ ಚಾಕಲೇಟ್ ನ ಕದ್ದು ತಿಂದು ಶಿಕ್ಷೆ ಅನುಭವಿಸಿದ್ದ ಅನುಪಮಾಗೆ ಈಗ 'ಬಿಸ್ಕತ್ತು ಲೆಕ್ಕ'ದ ಬಗ್ಗೆ ಕಿರಿಕಿರಿ ಉಂಟಾಗಿದೆ.

ಐಸ್ ಕ್ರೀಮ್, ಬಿಸ್ಕತ್ತುಗಳಿಗಾಗಿ 'ಬಿಗ್ ಬಾಸ್' ಮನೆಯಲ್ಲಿ ನಡೆದಿದೆ ಮಹಾಯುದ್ಧ.!

'ಬಿಗ್ ಬಾಸ್' ಮನೆಯಲ್ಲಿ ಬಿಸ್ಕತ್ತುಗಳನ್ನೂ ಲೆಕ್ಕ ಮಾಡಿ ತಿನ್ನುವ ಪರಿಸ್ಥಿತಿ ಬಂದಿರುವುದು ಅನುಪಮಾ ಗೌಡಗೆ ಇಷ್ಟ ಆಗುತ್ತಿಲ್ಲವಂತೆ. ಹೀಗಾಗಿ ಅವರಿಗೆ ವಾಪಸ್ ಮನೆಗೆ ಹೋಗುವ ಇಚ್ಛೆಯಾಗಿದೆ. ಮುಂದೆ ಓದಿರಿ....

'ಬಿಗ್ ಬಾಸ್' ಮನೆ ಸಾಕಾಗಿ ಹೋಗಿದೆ.!

''ಇಲ್ಲಿ ಜನರ ಮೆಂಟಾಲಿಟಿ ನನಗೆ ಇಷ್ಟ ಆಗುತ್ತಿಲ್ಲ. ನನಗೆ ಮನೆಗೆ ಹೋಗಬೇಕು ಅಂತ ಅನಿಸುತ್ತಿದೆ'' ಎಂದು ಶ್ರುತಿ ಪ್ರಕಾಶ್ ಬಳಿ ಅನುಪಮಾ ಗೌಡ ಹೇಳಿಕೊಂಡಿದ್ದಾರೆ.

ಚಾಕಲೇಟ್ ಕಳ್ಳರು, ಇವರೆಂಥಾ ಸೆಲೆಬ್ರಿಟಿಗಳು.! 'ಚೀಪ್' ಅವರೋ.. ಇವರೋ..?

ಇದ್ಯಾವುದೂ ಇಷ್ಟ ಆಗಲ್ಲ.!

''ಹಾಲಿಗಾಗಿ ಕಿತ್ತಾಡುವುದು, ಬಿಸ್ಕತ್ತುಗಳನ್ನೂ ಕೌಂಟ್ ಮಾಡುವುದು ನನಗೆ ಇಷ್ಟ ಆಗುತ್ತಿಲ್ಲ. ನೋಡುವವರಿಗೆ ಇದೆಲ್ಲ ಹೇಗೆ ಅನಿಸುವುದಿಲ್ಲ.?'' ಎಂದಿದ್ದಾರೆ ಅನುಪಮಾ ಗೌಡ.

'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

ಗಾಸಿಪ್ ಮಾಡ್ತಿದ್ದಾರಾ.?

ಸಿಹಿ ಕಹಿ ಚಂದ್ರು ಹಾಗೂ ಅನುಪಮಾ ಗೌಡ ಆತ್ಮೀಯತೆ ಬಗ್ಗೆಯೂ 'ಬಿಗ್ ಬಾಸ್' ಮನೆಯಲ್ಲಿ ಕೆಲವರು ಮಾತನಾಡುತ್ತಿದ್ದಾರಂತೆ. ಹೀಗಾಗಿ, ''ಧೈರ್ಯ ಇದ್ದರೆ ಎದುರಿಗೆ ಬಂದು ಮಾತನಾಡಬೇಕು'' ಎಂದು ತಮ್ಮ ಅಸಮಾಧಾನವನ್ನ ಅನುಪಮಾ ಗೌಡ ಹೊರಹಾಕಿದರು.

ರಿಯಾಝ್ ಮಾಡಿದ್ದು ತಪ್ಪು.! ಆದ್ರೆ, ಅನುಪಮಾ ಮಾಡಿದ್ದು ಸರಿಯೇ.? ನೀವೇ ಹೇಳಿ...

ತಂಗಳು ಅನ್ನ ತಿಂದಿದ್ದಾರಂತೆ.!

'ಬಿಗ್ ಬಾಸ್' ಮನೆಯಲ್ಲಿ ಅನುಪಮಾ ಗೌಡ ಎಷ್ಟೋ ಬಾರಿ ತಂಗಳು ಅನ್ನ ತಿಂದಿದ್ದಾರಂತೆ.! ಹಾಗಂತ ಅವರೇ ಹೇಳಿಕೊಂಡಿದ್ದಾರೆ.

ಗುಟ್ಟಾಗಿ ಮದುವೆ ಆಗಿದ್ದಾರಂತೆ ನಟಿ ಅನುಪಮಾ ಗೌಡ.! ಹೌದಾ.?

ಕಿರಿಕಿರಿ ಆಗಿದೆ

ಪಾತ್ರೆ ತೊಳೆದಿಲ್ಲ ಅಂದ್ರೆ ಅದನ್ನೂ ಲೆಕ್ಕ ಇಡುವ ಕಾರಣ ಅನುಪಮಾಗೆ ಕಿರಿಕಿರಿ ಆಗಿದ್ಯಂತೆ.

ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!

ಹಿಂದೆ ಒಂದು ಮುಂದೆ ಇನ್ನೊಂದು ಇಷ್ಟ ಆಗಲ್ಲ.!

ಹಿಂದೆ ಒಂದು ತರಹ ಮಾತನಾಡುವುದು, ಮುಂದೆ ಬಂದು ಸ್ವೀಟ್ ಆಗಿ ಮಾತನಾಡುವುದು ಅನುಪಮಾ ಗೌಡಗೆ ಇಷ್ಟ ಆಗಲ್ವಂತೆ. 'ಬಿಗ್ ಬಾಸ್' ಮನೆಯಲ್ಲಿ ಕಿರಿಕಿರಿ ಆದರೂ ಎಲ್ಲರೂ ಒಟ್ಟಿಗೆ ಇರಬೇಕಾಗಿರುವುದರಿಂದ ಅನುಪಮಾಗೆ ಸಾಕಾಗಿ ಹೋಗಿದ್ಯಂತೆ.

English summary
Bigg Boss Kannada 5: Week 6: Anupama Gowda wants to quit and get back home.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada