Bigg Boss Season 05 : ದೊಡ್ಡ ರಾದ್ಧಾಂತ ಆಗಲು, ಸಮೀರಾಚಾರ್ಯ ಸಿಟ್ಟಾಗಲು ನೇರ ಕಾರಣ ಅನುಪಮಾ | Filmibeat Kannada
ಕಳೆದ ವಾರ (ನಾಲ್ಕನೇ ವಾರ) 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ರಂಪ, ರಾಮಾಯಣವೇ ನಡೆದು ಹೋಯ್ತು. ಮೂರು ವಾರಗಳ ಕಾಲ ಸೈಲೆಂಟ್ ಆಗಿದ್ದ ಸಮೀರಾಚಾರ್ಯ, ಇದ್ದಕ್ಕಿದ್ದಂತೆ ವೈಲೆಂಟ್ ಆಗಿದ್ದು ತಮ್ಮ ಶರ್ಟ್ ನ ಜಗನ್ನಾಥ್ ಚಂದ್ರಶೇಖರ್ ಹರಿದು ಹಾಕಿದ್ಮೇಲೆ.!
ಅಷ್ಟಕ್ಕೂ, ಸಮೀರಾಚಾರ್ಯ ಅವರ ಶರ್ಟ್ ನ ಜಗನ್ ಹರಿಯಲು ಕಾರಣ ಏನಪ್ಪಾ ಅಂದ್ರೆ....
'ಜ್ಯೂಸ್ ಬೇಕು' ಟಾಸ್ಕ್ ನಲ್ಲಿ ಜ್ಯೂಸ್ ಸಾಮಗ್ರಿಗಳನ್ನ ಎದುರಾಳಿ ತಂಡದಿಂದ ರಕ್ಷಿಸಿಕೊಳ್ಳುವ ಜವಾಬ್ದಾರಿ ಆಯಾ ತಂಡಕ್ಕಿತ್ತು. ಎದುರಾಳಿ ತಂಡದಿಂದ ಕಬ್ಬನ್ನ ಎತ್ತಿಕೊಳ್ಳಲು ಸಮೀರಾಚಾರ್ಯ ಪ್ರಯತ್ನಿಸಿದಾಗ, ಅವರ ಶರ್ಟ್ ನ ಹಿಡಿದು ಎಳೆದು ಹರಿದು ಹಾಕಿದರು ಜಗನ್ನಾಥ್ ಚಂದ್ರಶೇಖರ್. ಇದರಿಂದ ಸಮೀರಾಚಾರ್ಯ ಸಿಟ್ಟಾದರು. ತಮ್ಮ ಸಿಟ್ಟನ್ನ ಇಡೀ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಹೊರ ಹಾಕಿದರು. ಏನೇ ಆದರೂ, ತಮ್ಮ ತಂಡವನ್ನು ಗೆಲ್ಲಿಸಬೇಕು ಎಂಬ ಛಲದಿಂದ ಆಕ್ರಮಣಕಾರಿ ಆಗಿ ಕ್ಯಾಪ್ಟನ್ ಮಾತು ಕೇಳದೆ 'ಕಳಪೆ' ಬೋರ್ಡ್ ಪಡೆದರು.
ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!
ಅಸಲಿಗೆ, ಎದುರಾಳಿ ತಂಡದಿಂದ ಕಬ್ಬನ್ನ ಕದಿಯುವ ಐಡಿಯಾ ಸಮೀರಾಚಾರ್ಯ ಅವರಿಗೆ ನೀಡಿದ್ದು ಯಾರು ಗೊತ್ತಾ.? ಬೇರಾರೂ ಅಲ್ಲ, ಸಮೀರಾಚಾರ್ಯ ತಂಡದಲ್ಲೇ ಇದ್ದ 'ಅಕ್ಕ' ಅನುಪಮಾ ಗೌಡ.
ಕಬ್ಬನ್ನ ಎತ್ತುವ ಪ್ಲಾನ್ ಕೊಟ್ಟು, ನಂತರ ಅದರಿಂದ ಜಗನ್-ಸಮೀರಾಚಾರ್ಯ ನಡುವೆ ನಡೆದ ರಾದ್ಧಾಂತಕ್ಕೆ ಅನುಪಮಾ ಗೌಡ ಮೂಕ ಪ್ರೇಕ್ಷಕರಾಗಿದ್ದರೇ, ಹೊರತು ಸಮೀರಾಚಾರ್ಯಗೆ ಐಡಿಯಾ ಕೊಟ್ಟಿದ್ದೇ ತಾವು ಎಂದು ಅನುಪಮಾ ಗೌಡ ಬಾಯಿ ಬಿಡಲಿಲ್ಲ.
ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.!
ಟಾಸ್ಕ್ ಮುಗಿಯುವವರೆಗೂ ಈ ಸತ್ಯ ಜಗನ್ನಾಥ್ ಚಂದ್ರಶೇಖರ್ ಅವರಿಗೂ ಗೊತ್ತಿರಲಿಲ್ಲ. ಸತ್ಯ ಬಯಲಾದ ಮೇಲೆ, ಅನುಪಮಾ ಗೌಡ ಮೇಲೆ ಜಗನ್ ಕೋಪಿಸಿಕೊಂಡರು.
ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!
''ಕಬ್ಬು ಎಳೆಯಿರಿ ಅಂತ ಹೇಳಿ, ಅದರಿಂದ ಗಲಾಟೆ ಆದ್ಮೇಲೆ, ನನ್ನ ಬಳಿ ಬಂದು ಹೇಳಬಹುದಿತ್ತು. ನೀನು ಹೇಳಿದ್ರೆ, ನನಗೆ ಅವರ ಮೇಲೆ ಆ ರಿಯಾಕ್ಷನ್ ಬರುತ್ತಿರಲಿಲ್ಲ'' ಅಂತ ಅನುಪಮಾ ಗೌಡ ಬಳಿ ಜಗನ್ ಹೇಳಿದರು.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.