»   » ರಿಯಾಝ್ ಮಾಡಿದ್ದು ಚೀಪ್ ಎಂದ ಆಶಿತಾಗೆ ಬಿಸಿ ಮುಟ್ಟಿಸಿದ ಸುದೀಪ್.!

ರಿಯಾಝ್ ಮಾಡಿದ್ದು ಚೀಪ್ ಎಂದ ಆಶಿತಾಗೆ ಬಿಸಿ ಮುಟ್ಟಿಸಿದ ಸುದೀಪ್.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಸುದೀಪ್ ಬಳಿ ಕ್ಷಮೆ ಕೇಳಿದ ಆಶಿತಾ ಚಂದ್ರಪ್ಪ | FIlmibeat Kannada

ಅಷ್ಟಕ್ಕೂ, ಜನಸಾಮಾನ್ಯ ಸ್ಪರ್ಧಿ ರಿಯಾಝ್ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದೇ ಕೆಲವರಿಗೆ ಇಷ್ಟ ಆಗಲಿಲ್ಲ. ಹೀಗಾಗಿ ರಿಯಾಝ್ ತೆಗೆದುಕೊಂಡ ನಿರ್ಧಾರ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಕೂಡ ಕೆಲವರಿಗೆ ಆಕ್ಷೇಪ ಇತ್ತು.

ಕ್ಯಾಪ್ಟನ್ ಆದ್ಮೇಲೆ ಹಣ್ಣುಗಳನ್ನ ಎಣಿಸಿ ರಿಯಾಝ್ ಹಂಚಿದರು. ಒಬ್ಬೊಬ್ಬರಿಗೆ ಇಷ್ಟು ಹಣ್ಣು ಹೋಗಬೇಕು ಅಂತ ಭಾಗ ಮಾಡಿದರು. ಇದು ಸೆಲೆಬ್ರಿಟಿ ಸ್ಪರ್ಧಿಗಳಿಗೆ ಇಷ್ಟ ಆಗಲಿಲ್ಲ. ಅದರಲ್ಲೂ, ನಟಿ ಆಶಿತಾಗಂತೂ ಇದು ಚೀಪ್ ಎಂದೆನಿಸಿದೆ.

ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

ರಿಯಾಝ್ ಮಾಡಿದ್ದನ್ನ ಚೀಪ್ ಅಂತ ಹೇಳುವ ಆಶಿತಾಗೆ, ಕ್ಯಾಪ್ಟನ್ ರಿಯಾಝ್ ಮಾತನ್ನ ಕೇಳಿಸಿಕೊಳ್ಳುವ ವ್ಯವಧಾನ ಕೂಡ ಇರಲಿಲ್ಲ. ಆಶಿತಾ ರವರ ಈ ಅಸಡ್ಡೆ ವರ್ತನೆ ಬಗ್ಗೆ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಬಿಸಿ ಮುಟ್ಟಿಸಿದರು. ಮುಂದೆ ಓದಿರಿ....

ಆಶಿತಾಗೆ ಸುದೀಪ್ ಹಾಕಿದ ಪ್ರಶ್ನೆ ಏನು.?

''ರೇಷನ್ ಬಂದಾಗ ಹಣ್ಣುಗಳನ್ನು ಎಣಿಸಿ, ಹಂಚಿಕೊಂಡಿದ್ದು ಒಂಥರಾ ವಿಚಿತ್ರ ಅಂತ ಅನಿಸ್ತು. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?'' ಎಂದು ಸುದೀಪ್ ಆಶಿತಾ ಅವರಿಗೆ ಕೇಳಿದರು.

ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ತುಂಬಾ ಚೀಪ್ ಎಂದ ಆಶಿತಾ

''ಒಂದು ಹಣ್ಣು ಬರೀ ನಮಗೆ ಅಂತ ಮಾತ್ರ ತಿನ್ನಲ್ಲ. ಎಲ್ಲರೂ ಹಂಚಿಕೊಂಡು ತಿನ್ನುತ್ತೇವೆ. ಇಲ್ಲಿ ಎಲ್ಲರೂ ಕ್ಲಾಲಿಟಿಗಿಂತ ಕ್ವಾಂಟಿಟಿ ನೋಡ್ತಾರೆ. ಎಲ್ಲರಿಗೂ ಇಷ್ಟಿಟ್ಟು ಪಾಲು ಬೇಕು ಅಂತಾರೆ. ಪಾಲು ಯಾಕೆ ಅಂತ ನನಗೆ ಅರ್ಥ ಆಗಲ್ಲ. ಯಾಕಂದ್ರೆ, ಎಲ್ಲರೂ ತಿನ್ನುವುದು ಕಮ್ಮಿನೇ. ಇದು ತುಂಬಾ ಚೀಪ್. ಥಿಂಕಿಂಗ್ ಕೂಡ ತುಂಬಾ ಚೀಪ್'' ಅಂತ ಸುದೀಪ್ ಗೆ ಆಶಿತಾ ಹೇಳಿದರು.

'ಬೇಬಿ ಡಾಲ್' ನಿವೇದಿತಾ ಗೌಡ ಕನ್ನಿಂಗ್ (ಕುತಂತ್ರಿ) ಅಂತೆ.!

ಹಾಲು ಮುಚ್ಚಿಟ್ಟಿದ್ದಕ್ಕೆ, ಹಣ್ಣು ಭಾಗ ಆಯ್ತು.!?

''ಕಳೆದ ವಾರ ಒಂದೇ ಒಂದು ಚಿಕ್ಕ ವಿಚಾರ (ಹಾಲನ್ನ ಮುಚ್ಚಿಟ್ಟಿದ್ದು) ನಡೆದಿರುವುದರಿಂದ ಕ್ಯಾಪ್ಟನ್ ಆಗಿ ರಿಯಾಝ್ ಅಂಥದ್ದೊಂದು ಕ್ರಮ ಕೈಗೊಂಡರು ಅಂತ ಅನಿಸಲಿಲ್ವಾ.?'' ಎಂದು ಸುದೀಪ್, ಆಶಿತಾಗೆ ಮರು ಪ್ರಶ್ನೆ ಮಾಡಿದರು. ಅದಕ್ಕೆ, ''ಅವರು ಐದು ಜನ ಮಾತ್ರ ಹಣ್ಣನ್ನ ಭಾಗ ಮಾಡಿಕೊಂಡಿದ್ದು'' ಎಂದು ಸಂಬಂಧ ಇಲ್ಲದ ಉತ್ತರವನ್ನ ಆಶಿತಾ ಕೊಡಲು ಬಂದಾಗ....

ನೇರ ಬಾಣ ಬಿಟ್ಟ ಸುದೀಪ್

''ಕ್ಯಾಪ್ಟನ್ ಆಗಿ ರಿಯಾಝ್ ಅಧಿಕಾರ ವಹಿಸಿಕೊಂಡಾಗ, ಸ್ಟಾಕ್ ಚೆಕ್ಕಿಂಗ್ ಮಾಡುತ್ತಾರೆ. ಮೀಟಿಂಗ್ ಇನ್ನೂ ನಡೆಯುವಾಗಲೇ... ನೀವು ಎದ್ದು ಸೀದಾ ಹೊರಟು ಹೋಗ್ತೀರಾ. ವಿಷಯ ಏನೇ ಇರಲಿ, ಒಬ್ಬ ಕ್ಯಾಪ್ಟನ್ ಆಗಿ ಅವರು ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ ಆಗಿ ಅವರು ಮಾತನಾಡುವಾಗ, ನೀವು ಮಾಡಿದ್ದು ಸರಿ ಅಲ್ಲ'' ಅಂತ ಸುದೀಪ್ ನೇರವಾಗಿ ಪ್ರಶ್ನೆ ಕೇಳಿದರು.

ಸಂಬಂಧ ಪಡದ ವಿಷಯ ಆಗಿದ್ದರಿಂದ...

''ನಾನು ಬೇಕು ಅಂತ ಹಾಗೆ ಮಾಡಲಿಲ್ಲ'' ಅಂತ ಆಶಿತಾ ಹೇಳಿದಾಗ ''ಬೇಕು ಅಂತಲೇ ಮಾಡಿದ್ದು'' ಅಂತ ಸುದೀಪ್ ಬಾಣ ಬಿಟ್ಟರು. ''ನನಗೆ ಅರ್ಥ ಆಯ್ತು. ಆದ್ರೆ, ನಾನು ಬೇಕು ಅಂತ ಹಾಗೆ ಮಾಡಲಿಲ್ಲ. ಆ ಡಿಪಾರ್ಟ್ಮೆಂಟ್ ನಲ್ಲಿ ನಾನು ಇಲ್ಲ. ಹೀಗಾಗಿ ನಾನು ಎದ್ದು ಹೋದೆ'' ಅಂತ ಆಶಿತಾ ಸಬೂಬು ನೀಡಿದರು.

ಕ್ಷಮೆ ಕೇಳಿದ ಆಶಿತಾ

''ಹೊರಗಡೆ ಇಂದ ನೀವು ಹೇಗೆ ಕಾಣಿಸುತ್ತಿದ್ದೀರಾ ಅಂತ ನಿಮ್ಮ ಗಮನಕ್ಕೆ ನಾನು ತರುತ್ತಿದ್ದೇನೆ ಅಷ್ಟೆ. ಮಿಕ್ಕಿದ್ದು ನೀವು ಹಾಗೂ ನಿಮ್ಮ ಕ್ಯಾಪ್ಟನ್'' ಅಂತ ಹೇಳಿ ಆಶಿತಾಗೆ ಸುದೀಪ್ ಬಿಸಿ ಮುಟ್ಟಿಸಿದರು. ತಮ್ಮ ವರ್ತನೆ ಬಗ್ಗೆ ಅರಿತುಕೊಂಡ ಆಶಿತಾ ಈ ವೇಳೆ ಕ್ಷಮೆ ಕೂಡ ಕೇಳಿದರು.

English summary
Bigg Boss Kannada 5: Week 4: Ashita apologizes to Sudeep

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X