»   » ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಯಾವ ಸಿನಿಮಾ ಲವ್ ಸ್ಟೋರಿಗಳಿಗೂ ಕಮ್ಮಿ ಇಲ್ಲ.

ಒಂದ್ಕಡೆ, ಶ್ರುತಿ ಪ್ರಕಾಶ್ ಮೇಲೆ ಚಂದನ್ ಶೆಟ್ಟಿ ಕಣ್ಣಿದ್ದರೆ, ಇನ್ಕೊಂದ್ಕಡೆ ಶ್ರುತಿ ಪ್ರಕಾಶ್ ಗೆ ಜೆಕೆ ಮೇಲೆ ಮನಸ್ಸು. ಅತ್ತ ತಮ್ಮ ಲವ್ ಫ್ಲ್ಯಾಶ್ ಬ್ಯಾಕ್ ನೆನಪಿಸಿಕೊಂಡು ಅನುಪಮಾ ಗೌಡ ಗೊಳೋ ಎಂದು ಅಳುತ್ತಿದ್ದರೆ, ಇತ್ತ ಜಗನ್-ಆಶಿತಾಗೆ ಲೈಟ್ ಆಗಿ ಲವ್ ಆಗಿರುವ ಹಾಗೆ ಕಾಣುತ್ತಿದೆ.

ಅಷ್ಟಕ್ಕೂ, ಜಗನ್... ಅನುಪಮಾ ಮಾಜಿ ಪ್ರಿಯಕರ ಅನ್ನೋ ಸತ್ಯ ಆಶಿತಾಗೆ ಗೊತ್ತು. ಆದರೂ, ಜಗನ್ ಹಿಂದೆ-ಮುಂದೆ, ಅಕ್ಕ-ಪಕ್ಕದಲ್ಲೇ ಇರುವ ಆಶಿತಾ ನಿನ್ನೆ ಜಗನ್ ಕೆನ್ನೆಗೆ ಸಿಹಿ ಮುತ್ತು ನೀಡಿದರು. ತಮ್ಮ ಕೆನ್ನೆಗೆ ಆಶಿತಾ ತುಟಿ ಒತ್ತಿದ ಖುಷಿಯಲ್ಲಿ ಜಗನ್ ಕೆನ್ನೆ ಕೆಂಪು ಕೆಂಪಾಯ್ತು.! ಮುಂದೆ ಓದಿರಿ....

ಮೊದಲ ದಿನದಿಂದಲೂ ಜಗನ್-ಆಶಿತಾ ತುಂಬಾ ಕ್ಲೋಸ್

'ಬಿಗ್ ಬಾಸ್' ಮನೆಗೆ ಕಾಲಿಟ್ಟ ದಿನದಿಂದಲೂ, ಜಗನ್ನಾಥ್ ಚಂದ್ರಶೇಖರ್ ಹಾಗೂ ಆಶಿತಾ ಸ್ವಲ್ಪ ಕ್ಲೋಸ್ ಆಗಿದ್ದಾರೆ. ಮೊದಮೊದಲು ಸ್ನೇಹಿತರಂತೆ ಕಾಣಿಸಿಕೊಳ್ಳುತ್ತಿದ್ದ ಜಗನ್-ಆಶಿತಾ ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಹಾಗೆ ಕಾಣುತ್ತಿದೆ.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಜಗನ್-ಆಶಿತಾ ಮಧ್ಯೆ ಸಂಥಿಂಗ್ ಸಂಥಿಂಗ್.?

ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಜಗನ್-ಅನುಪಮಾ ಲವ್ ಬ್ರೇಕಪ್ ಬಗ್ಗೆ ಜಗನ್ ಬಳಿ ಮೊದಲು ಮಾತನಾಡಿದ್ದೇ ಆಶಿತಾ. ಈಗ ಅದೇ ಆಶಿತಾ ಹಾಗೂ ಜಗನ್ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿರುವ ಹಾಗಿದೆ.

ಹಳೇ ಬಾಯ್ ಫ್ರೆಂಡ್ ಜಗನ್ ಕಂಡ್ರೆ ಅನುಪಮಾಗೆ ಅಷ್ಟಕಷ್ಟೆ.! ಯಾಕೆ.?

ಜಗನ್ ಗೆ ಆಶಿತಾ ಅಪ್ಪುಗೆ

ಜಗನ್ ಮುನಿಸಿಕೊಂಡಾಗ, ಜಗನ್ ಗೆ ಮೂಡ್ ಔಟ್ ಆದಾಗೆಲ್ಲಾ ಸಮಾಧಾನ ಮಾಡಲು ಮೊದಲು ಮುಂದಾಗುವವರೇ ಆಶಿತಾ.

ಓಹೋ.! ಮಾಜಿ ಪ್ರೇಯಸಿ ಅನುಪಮಾ ರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್ನಾಥ್.!

ಇದೇ ಫಸ್ಟ್ ಟೈಮ್.!

ಜಗನ್-ಆಶಿತಾ ನಡುವಿನ ಸ್ನೇಹ ಎಕ್ಸ್ ಟ್ರಾ ಸ್ಪೆಷಲ್ ಅಂತ ಅನಿಸಲು ಶುರು ಆಗಿದ್ದು ಮೊನ್ನೆಯಿಂದ. ''ನಿನ್ನ ಲೈಫ್ ನಲ್ಲಿ ನನ್ನ ತರಹ ಹುಡುಗಿ ಬಂದಿರೋದು ಫಸ್ಟ್ ಟೈಮ್. ನಾನು ಯಾರಿಗೂ ಅಷ್ಟು ಸ್ಪೇಸ್ ಕೊಡಲ್ಲ'' ಅಂತ ಆಶಿತಾ, ಜಗನ್ ಬಳಿ ಹೇಳುತ್ತಿದ್ದರು.

ಆಶಿತಾ ರ ಈ ಮಾತಿನ ಅರ್ಥ ಏನು.?

''ಎಂಡ್ ಮಾಡಬೇಕಾಗಿರೋದು ನಿನಗೆ ಗೊತ್ತಿದೆ. ಯಾವುದು ಬೆಟರ್ ಅಂತ. ಎಕ್ಸ್ ಕ್ಲಮೇಟರಿ ಮಾರ್ಕ್ ಹಾಕ್ತಿಯೋ, ಫುಲ್ ಸ್ಟಾಪ್ ಇಡ್ತಿಯೋ ಅಥವಾ ಹೊಸ ಚಾಪ್ಟರ್ ತರಹ ಶುರು ಮಾಡ್ತಿಯೋ ನನಗೆ ಗೊತ್ತಿಲ್ಲ'' ಅಂತ ಜಗನ್ ಗೆ ಹೇಳುತ್ತಿದ್ದರು ಆಶಿತಾ. ಅಷ್ಟಕ್ಕೂ, ಈ ಮಾತಿನ ಒಳಾರ್ಥ ಏನು.?

ಜಗನ್ ಬಾಯಿ ಬಿಟ್ಟ ಮೇಲೆ....

''ನನಗೆ ಗರ್ಲ್ ಫ್ರೆಂಡ್ ಇದ್ದಾಳೆ. ಐ ಆಮ್ ಕಮಿಟೆಡ್'' ಅಂತ ಜಗನ್ ಹೇಳಿದ್ಮೇಲೆ ಆಶಿತಾ, ಜಗನ್ ಬಳಿ ಮಾತನಾಡುತ್ತಿರಲಿಲ್ಲ.

ಒಂದೇ ತಟ್ಟೆಯಲ್ಲಿ ತಿಂಡಿ

ಮಾರನೇ ದಿನ ಟಾಸ್ಕ್ ನ ಒಂದು ಭಾಗ ಆಗಿದ್ದರೂ, ಒಂದೇ ತಟ್ಟೆಯಲ್ಲಿ ಆಶಿತಾ ಹಾಗೂ ಜಗನ್ ತಿಂಡಿ ತಿನ್ನುತ್ತಿದ್ದರು.

ಜಗನ್ ಕೆನ್ನೆಗೆ ಮುತ್ತಿಟ್ಟ ಆಶಿತಾ

ಆಶಿತಾ ಗೆ ಆಪಲ್ ತಿನ್ನಿಸಲು ಜಗನ್ ಬಂದಾಗ, ಜಗನ್ ಕೈಗೆ ಏನೋ ಕೊಟ್ಟು, ಕೆನ್ನೆಗೆ ಮುತ್ತಿಟ್ಟರು ಆಶಿತಾ.

ಜಗನ್ ಕೆನ್ನೆ ಕೆಂಪಾದವೋ...

ಆಶಿತಾ ಸಿಹಿ ಮುತ್ತು ಕೊಟ್ಟ ಖುಷಿಯಲ್ಲಿ ಜಗನ್ ಕೆನ್ನೆ ಕೆಂಪು ಕೆಂಪಾಗಿತ್ತು.

ಹಳೇ ಗೆಳತಿಗೆ ಗೊತ್ತಿಲ್ಲ

ಜಗನ್ ಗೆ ಆಶಿತಾ ಕೊಟ್ಟ ಮುತ್ತಿನ ವಿಷಯ ಪಾಪಾ... ಅನುಪಮಾ ಗೌಡಗೆ ಗೊತ್ತಿಲ್ಲ.! ಒಟ್ನಿಲ್ಲಿ, 'ಬಿಗ್ ಬಾಸ್' ಮನೆಯಲ್ಲಿ ಒಂದು ಹೊಸ ಮುತ್ತಿನ ಅಧ್ಯಾಯ ಶುರು ಆಗಿದೆ.

English summary
Bigg Boss Kannada 5: Week 4: Ashita Kisses Jaganath Chandrashekar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X