»   » 'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರೂ ರಿಯಾಝ್ ನ ಟಾರ್ಗೆಟ್ ಮಾಡ್ತಿದ್ದಾರಾ.?

'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರೂ ರಿಯಾಝ್ ನ ಟಾರ್ಗೆಟ್ ಮಾಡ್ತಿದ್ದಾರಾ.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗಿನಿಂದಲೂ, ರಿಯಾಝ್ 'ಚರ್ಚೆ'ಯ ಕೇಂದ್ರಬಿಂದು ಆಗಿದ್ದಾರೆ. ದಿವಾಕರ್ ವಿರುದ್ಧ ಇಡೀ 'ದೊಡ್ಮನೆ' ತಿರುಗಿ ಬಿದ್ದಿದ್ದಾಗ, ದಿವಾಕರ್ ಪರ ದನಿ ಎತ್ತಿದ ರಿಯಾಝ್ ಕೆಲವರ ವಿರೋಧ ಕಟ್ಟಿಕೊಂಡರು. ಅಂದಿನಿಂದ ಇಲ್ಲಿಯವರೆಗೂ ರಿಯಾಝ್ ಕಂಡ್ರೆ ಕೆಲವರಿಗೆ ಆಗಲ್ಲ.!

ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವ ರಿಯಾಝ್ ಕಂಡ್ರೆ ಕೆಲವರಿಗೆ ಅಷ್ಟಕಷ್ಟೆ. ಮೊದಲು ಅಣ್ಣ-ತಮ್ಮನಂತೆ ಇದ್ದ ರಿಯಾಝ್-ದಿವಾಕರ್ ಮಧ್ಯೆ ಸದ್ಯ ಭಿನ್ನಾಭಿಪ್ರಾಯ ಮೂಡಿದೆ. ಇನ್ನೂ ಚಂದನ್ ಶೆಟ್ಟಿ ಕೂಡ ರಿಯಾಝ್ ಕಂಡ್ರೆ ಉರಿದು ಬೀಳ್ತಿದ್ದಾರೆ.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ವೀಕ್ಷಕರೊಬ್ಬರು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ರಿಯಾಝ್ ಗೆ ಪ್ರಶ್ನಿಸಿದರು. ಮುಂದೆ ಓದಿರಿ...

ರಿಯಾಝ್ ಗೆ ಪ್ರಶ್ನೆ ಕೇಳಿದ 'ಕಾಲರ್ ಆಫ್ ದಿ ವೀಕ್'

''ನಿಮ್ಮನ್ನ ಎಲ್ಲರೂ ಮನೆಯಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ. ನಿಮಗೆ ಗೊತ್ತಿದ್ಯಾ ಅದಕ್ಕೆ ಕಾರಣ ಏನು ಅಂತ.?'' ಎಂದು 'ಕಾಲರ್ ಆಫ್ ದಿ ವೀಕ್' ಆಗಿದ್ದ ಐಶ್ವರ್ಯ ಎಂಬುವರು ರಿಯಾಝ್ ಗೆ ಪ್ರಶ್ನಿಸಿದರು.

ರಿಯಾಝ್ ಕೊಟ್ಟ ಉತ್ತರ ಏನು.?

''ನನ್ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ನಾಮಿನೇಷನ್ ದಿನ ಮಾತ್ರ ಅನ್ಸುತ್ತೆ. ಬೇರೆ ಟೈಮ್ ನಲ್ಲಿ ಕಂಡುಹಿಡಿಯಲು ಹೋಗಲ್ಲ. ಯಾರು ನನ್ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ವೈಯುಕ್ತಿಕವಾಗಿ ಗೊತ್ತಿಲ್ಲ. ಗೊತ್ತಿದ್ರೆ, ನಾನು ಹೋಗಿ ಮಾತನಾಡುತ್ತೇನೆ. ಇಲ್ಲ ಅಂದ್ರೆ ನಾಮಿನೇಷನ್ ಟೈಮ್ ನಲ್ಲಿ ಅವರ ಹೆಸರು ತೆಗೆದುಕೊಳ್ಳುತ್ತೇನೆ. ಟಾರ್ಗೆಟ್ ಯಾರು ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಾಗುತ್ತಿಲ್ಲ'' ಎಂದು ರಿಯಾಝ್ ಉತ್ತರಿಸಿದರು.

ಕಿವಿಯೋಲೆ ಕೊಡಿಸಿದ ರಿಯಾಝ್: ಭಾವುಕರಾದ ಹೆಣ್ಮಕ್ಕಳು

ಸುದೀಪ್ ಕೇಳಿದ್ದೇನು.?

''ತಾವು ರೂಲ್ಸ್ ಇಂದ ಎಲ್ಲರ ವಿರೋಧ ಕಟ್ಟಿಕೊಳ್ಳುತ್ತಿದ್ದೀರಾ ಅಂತ ಅನುಪಮಾ ಹೇಳಿದರು. ಅದು ಒಳ್ಳೆಯ ಮಾತು ಅನ್ಸುತ್ತಾ.?'' ಎಂದು ರಿಯಾಝ್ ಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ, ''ಹೌದು, ರೂಲ್ಸ್ ಫಾಲೋ ಮಾಡ್ತೀನಿ. ಆದ್ರೆ, ಸ್ಮೈಲ್ ಇಟ್ಟುಕೊಂಡು ಮಾಡಬೇಕು ಅಂತ ಅನ್ಸುತ್ತೆ'' ಎಂದು ರಿಯಾಝ್ ಉತ್ತರಿಸಿದರು.

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ನಿಮಗೆ ಏನು ಅನ್ಸುತ್ತೆ.?

ರಿಯಾಝ್ ರನ್ನ ಸುಖಾಸುಮ್ಮನೆ ಟಾರ್ಗೆಟ್ ಮಾಡ್ತಿದ್ದಾರೆ ಅಂತ ನಿಮಗೆ ಅನ್ಸುತ್ತಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ನಿಮ್ಮ ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ, ಕಾಮೆಂಟ್ ಮಾಡಿ...

English summary
Bigg Boss Kannada 5: Week 4: Caller of the week questions Riyaz Basha
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada