»   » ಅಂತೂ ದಿವಾಕರ್ ಬಳಿ ಕ್ಷಮೆ ಕೇಳಿದ ಸೆಲೆಬ್ರಿಟಿ ಸ್ಪರ್ಧಿಗಳು.!

ಅಂತೂ ದಿವಾಕರ್ ಬಳಿ ಕ್ಷಮೆ ಕೇಳಿದ ಸೆಲೆಬ್ರಿಟಿ ಸ್ಪರ್ಧಿಗಳು.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆ ಸೇರಿರುವ 'ಸೇಲ್ಸ್ ಮ್ಯಾನ್' ದಿವಾಕರ್ ಮೊದಲ ದಿನದಿಂದಲೂ ಟಾರ್ಗೆಟ್ ಆಗಿದ್ದಾರೆ. ಸ್ವಲ್ಪ ರಫ್ ಅಂಡ್ ಟಫ್ ಆಗಿ ಕಾಣುವ ದಿವಾಕರ್ ಅಂದ್ರೆ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಅಷ್ಟಕಷ್ಟೆ. ಹೀಗಾಗಿ, ಒಂದಲ್ಲ ಒಂದು ಕಾರಣಕ್ಕೆ ದಿವಾಕರ್ ಜೊತೆಗೆ ಸೆಲೆಬ್ರಿಟಿ ಸ್ಪರ್ಧಿಗಳ ಕಿತ್ತಾಟ ನಡೆಯುತ್ತಲೇ ಇದೆ.

ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

'ಕಳಪೆ' ಬೋರ್ಡ್ ಗೂ ಪಾತ್ರರಾದ ದಿವಾಕರ್ 'ಬಿಗ್ ಬಾಸ್' ಮನೆಯಲ್ಲಿ ದಂಗೆ ಎದ್ದಮೇಲೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಯ್ತು. ಇಷ್ಟೆಲ್ಲ ಆದ್ಮೇಲೆ, ಅವರವರ ತಪ್ಪಿನ ಜ್ಞಾನೋದಯ ಅವರವರಿಗೆ ಆಗಿರಬೇಕು. ಹೀಗಾಗಿ, ಸುದೀಪ್ ಮುಂದೆ ಸೆಲೆಬ್ರಿಟಿ ಸ್ಪರ್ಧಿಗಳು ಒಬ್ಬೊಬ್ಬರಾಗಿ 'ಕಾಮನ್ ಮ್ಯಾನ್' ದಿವಾಕರ್ ಬಳಿ ಕ್ಷಮೆ ಕೇಳಲು ಆರಂಭಿಸಿದರು. ಮುಂದೆ ಓದಿರಿ....

ವಾರದ ಕಥೆ ಕಿಚ್ಚನ ಜೊತೆ...

ಇಡೀ ವಾರದಲ್ಲಿ ನಡೆದ ಗದ್ದಲ-ಗಲಾಟೆ, ವಾದ-ವಿವಾದ-ವಾಕ್ಸಮರ ಬಗ್ಗೆ ಪಂಚಾಯತಿ ನಡೆಸಲು ಸುದೀಪ್ ಆರಂಭಿಸಿದರು. ''ನೀವು ಯಾರಿಗಾದರೂ ಕ್ಷಮೆ ಕೇಳಲು, ಯಾರಿಂದ ಕ್ಷಮೆ ಕೇಳಿಸಿಕೊಳ್ಳಲು ಇಚ್ಛಿಸುತ್ತೀರಾ.?'' ಎಂದು 'ಬಿಗ್ ಬಾಸ್' ಮನೆ ಸದಸ್ಯರಲ್ಲಿ ಸುದೀಪ್ ಕೇಳಿದರು. ಆಗ ಕೆಲ ಸೆಲೆಬ್ರಿಟಿ ಸ್ಪರ್ಧಿಗಳು ದಿವಾಕರ್ ಬಳಿ ಕ್ಷಮೆಯಾಚಿಸಿದರು.

ದಿವಾಕರ್ ಗೆ 'ಕಳಪೆ ಬೋರ್ಡ್' ಕೊಟ್ಟಿದ್ದಕ್ಕೆ ಮನೆಯಲ್ಲಿ ಅಲ್ಲೋಲ-ಕಲ್ಲೋಲ.!

ಕ್ಷಮೆ ಕೇಳಿದ ಶ್ರುತಿ ಪ್ರಕಾಶ್

ಚೆನ್ನಾಗಿ ಪರ್ಫಾಮ್ ಮಾಡಿದರೂ, 'ಕಳಪೆ' ಬೋರ್ಡ್ ನೀಡಲು ನಿರ್ಧರಿಸಿದ ಶ್ರುತಿ ಪ್ರಕಾಶ್, ದಿವಾಕರ್ ಗೆ ಕ್ಷಮೆ ಕೇಳಿದರು. ಹಾಗೆ, ತಮಗೆ ಗೌರವ ಕೊಡದ ದಿವಾಕರ್ ರಿಂದ ಕ್ಷಮೆ ಕೇಳಲು ಇಚ್ಛೆಸುತ್ತೇನೆ ಎಂದರು ಶ್ರುತಿ ಪ್ರಕಾಶ್.

ಶ್ರುತಿ ಪ್ರಕಾಶ್ ಮೇಲಿದ್ದ ಅಭಿಮಾನ ಇನ್ಮುಂದೆ ವೀಕ್ಷಕರಲ್ಲಿ ಕಮ್ಮಿಯಾದ್ರೆ ಅಚ್ಚರಿ ಇಲ್ಲ.!

'ಸಾರಿ' ಎಂದ ಜೆಕೆ

''ನಾನು ದಿವಾಕರ್ ಗೆ ಸಾರಿ ಕೇಳಲು ಇಷ್ಟ ಪಡುತ್ತೇನೆ. ಯಾಕಂದ್ರೆ, ಕೋಪದಲ್ಲಿ 'ಯಾವ್ಯಾವನೋ, ನನ್ನ ಬಗ್ಗೆ ಮಾತನಾಡುವುದು ನನಗೆ ಇಷ್ಟ ಇಲ್ಲ'' ಅಂತ ಹೇಳಿದ್ದೆ. ಆ ಮಾತು ಹೇಳಬಾರದಿತ್ತು. ಅದಕ್ಕೆ ಕ್ಷಮೆ ಕೇಳುತ್ತೇನೆ'' ಎಂದು ಜೆ.ಕೆ (ಕಾರ್ತಿಕ್)

'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!

ಕ್ಷಮೆ ಕೋರಿದ ಜಯಶ್ರೀನಿವಾಸನ್

''ದಿವಾಕರ್ ಬಳಿ ನಾನು ಕ್ಷಮೆ ಕೇಳಬೇಕು. ಯಾಕಂದ್ರೆ, 'ಕಳಪೆ' ಬೋರ್ಡ್ ಹಾಕಿಕೊಳ್ಳುವ ವಿಷಯ ಬಂದಾಗ, ಅವರ ಬಗ್ಗೆ ನಾನು ದನಿ ಎತ್ತಬೇಕಿತ್ತು. ಸ್ವಲ್ಪ ಲೇಟ್ ಆಗಿ ದನಿ ಎತ್ತಿದೆ'' ಎಂದರು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್.

ಯಾರು ಏನೇ ಹೇಳಿದರೂ, ಜನರ ಬೆಂಬಲ ಮಾತ್ರ ಜನಸಾಮಾನ್ಯರಿಗೆ.!

ಹಾಗೆ ಮಾತನಾಡಬಾರದಿತ್ತು ಎಂದ ಅನುಪಮ

''ದಿವಾಕರ್ ಬಳಿ ಕ್ಷಮೆ ಕೇಳುತ್ತೇನೆ. ಯಾಕಂದ್ರೆ, ಕಳಪೆ ಬೋರ್ಡ್ ವಿಚಾರದಲ್ಲಿ ಮಾತು ನಡೆದಾಗ 'ಲಕ್ಷುರಿ ಬಜೆಟ್ ಮುಟ್ಟುವ ಹಾಗಿಲ್ಲ' ಅಂತ ಹೇಳಿಬಿಟ್ಟೆ. ತಿನ್ನುವ ವಿಷಯದಲ್ಲಿ ನಾನು ಹಾಗೆ ಮಾತನಾಡಬಾರದಿತ್ತು. ಹೀಗಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆ'' ಎಂದರು ನಟಿ ಅನುಪಮಾ ಗೌಡ.

ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಒರಟ ಅಂತ ಹೇಳಬಾರದಿತ್ತು

''ದಿವಾಕರ್ ಗೆ ಒರಟ ಅಂತ ಹೇಳಿಬಿಟ್ಟೆ. ಅದರಿಂದ ಅವರ ಮನಸ್ಸಿಗೆ ನೋವಾಯ್ತು. ಹೀಗಾಗಿ ದಿವಾಕರ್ ಗೆ ಕ್ಷಮೆ ಕೇಳುತ್ತೇನೆ'' ಎಂದರು ಸಿಹಿ ಕಹಿ ಚಂದ್ರು.

'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

ಕ್ಷಮೆ ಹೇಳಲ್ಲ, ಕೇಳಿಸಿಕೊಳ್ಳಲ್ಲ ಎಂದ ದಿವಾಕರ್

ತಮ್ಮ ಪ್ರಕಾರ ''ಬಿಗ್ ಬಾಸ್' ಅಂದ್ರೆ ದೇವರು'' ಎನ್ನುವ ದಿವಾಕರ್, ''ನಾನು ಯಾರಿಗೂ ಸಾರಿ ಕೇಳಲ್ಲ, ಯಾರ ಹತ್ತಿರವೂ ಸಾರಿ ಕೇಳಿಸಿಕೊಳ್ಳುವುದಿಲ್ಲ. ಯಾಕಂದ್ರೆ, ಸಾರಿ ಕೇಳಿದರೆ ಮತ್ತದೇ ತಪ್ಪು ಮಾಡುತ್ತೇವೆ. ಅದೇ ತಪ್ಪು ಪುನರಾವರ್ತನೆ ಆಗಬಾರದು. ಅರ್ಥ ಮಾಡಿಕೊಂಡು ಹೋಗಬೇಕು. ಹೀಗಾಗಿ, ಯಾರ ಬಳಿಯೂ ಸಾರಿ ಕೇಳುವುದು ಬೇಡ, ಕೇಳಿಸಿಕೊಳ್ಳುವುದೂ ಬೇಡ ಅಂತ ನಿರ್ಧಾರ ಮಾಡಿದ್ದೇನೆ'' ಎಂದರು ದಿವಾಕರ್.

English summary
Bigg Boss Kannada 5: Celebrity contestants apologize Divakar in front of Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X