»   » ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ದಿವಾಕರ್ ನ ಟಾರ್ಗೆಟ್ ಮಾಡಿದ ಸೆಲೆಬ್ರಿಟಿಗಳು

'ಬಿಗ್ ಬಾಸ್' ಮನೆಯೊಳಗೆ ಸೇರಿರುವ ಸೆಲೆಬ್ರಿಟಿಗಳಷ್ಟು ಓದದೆ ಇರಬಹುದು. ಲೋಕ ಜ್ಞಾನ ಸ್ವಲ್ಪ ಕಡಿಮೆ ಇರಬಹುದು. ಮಾತಲ್ಲಿ ಕೊಂಚ ಜಾಸ್ತಿ ಒರಟು ಎನಿಸಬಹುದು. ಆಡುವ ಮಾತುಗಳು ಕೆಲವೊಮ್ಮೆ ಕಿರಿಕಿರಿ ತರಬಹುದು. ಇಷ್ಟಕ್ಕೆ, ದಿವಾಕರ್ ಅಂದ್ರೆ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಅಲರ್ಜಿ.!

ಮೊದಲ ದಿನವೇ ನಾಮಿನೇಟ್ ಆದ 'ಸೇಲ್ಸ್ ಮ್ಯಾನ್' ದಿವಾಕರ್ ಬದುಕಿನ ಕಥೆ-ವ್ಯಥೆ

ದಿವಾಕರ್ ಬಾಯಿ ತೆಗೆದರೆ ಸಾಕು, ಕೆಲವರಿಗೆ ತಲೆ ಬಿಸಿ ಆಗುತ್ತೆ. ನಟಿ ತೇಜಸ್ವಿನಿ, ನಿರ್ದೇಶಕ ದಯಾಳ್ ಪದ್ಮನಾಭನ್ ಹಾಗೂ ಸಿಹಿ ಕಹಿ ಚಂದ್ರು ತಾಳ್ಮೆ ಕಳೆದುಕೊಂಡು ಕೂಗಾಡಿದ್ದು ಇದೇ ದಿವಾಕರ್ ಮೇಲೆಯೇ.! ಮುಂದೆ ಓದಿರಿ....

ಮೇಘ ಪರ ಮಾತಾಡಿದ್ದಕ್ಕೆ ದಿವಾಕರ್ ಮೇಲೆ ತೇಜಸ್ವಿನಿ ಜಗಳ

ಆಕೆಯ ಪಾಲಿನ ಆಪಲ್ ನ ಮೇಘ ಎತ್ತಿಕೊಂಡು ತಿಂದಿದ್ದಕ್ಕೆ, ''ನಿನಗೆ ಹೇಳಿದ್ರಾ ಆಪಲ್ ಎತ್ತುಕೊಂಡು ತಿನ್ನಲು'' ಎಂದು ತೇಜಸ್ವಿನಿ ಕೇಳಿದರು. ಮೇಘ ಪರ ದಿವಾಕರ್ ಮೂಗು ತೂರಿಸಿ ಮಾತಾಡಿದಕ್ಕೆ, ದಿವಾಕರ್ ಹಾಗೂ ತೇಜಸ್ವಿನಿ ಮಧ್ಯೆ 'ಏಕವಚನ'ದಲ್ಲಿ ಜಗಳ ಆಯ್ತು.

'ಶಾಂತಿ ನಿವಾಸ'ವಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಬೀಸಿದೆ ಅಶಾಂತಿಯ ಬಿರುಗಾಳಿ!

ಸಿಹಿ ಕಹಿ ಚಂದ್ರು ವರ್ಸಸ್ ದಿವಾಕರ್

''ಡೈನಿಂಗ್ ಟೇಬಲ್ ಮೇಲೆ ತರಕಾರಿ ಕಟ್ ಮಾಡಬಾರದು ಅಂತ ಬಾಯಿ ಬಿಟ್ಟು ಹೇಳಿದರೆ ಮಾಡಲ್ಲ'' ಎಂದು ಸಮೀರಾಚಾರ್ಯ ಪರ ದಯಾಳ್ ಪದ್ಮನಾಭನ್ ಬಳಿ ದಿವಾಕರ್ ಬ್ಯಾಟಿಂಗ್ ಮಾಡಿದ್ದಕ್ಕೆ ಸಿಹಿ ಕಹಿ ಚಂದ್ರು ಸಿಡಿದೆದ್ದರು.

ದಯಾಳ್ ಮತ್ತು ದಿವಾಕರ್ ನಡುವೆ ಮಾತಿನ ಚಕಮಕಿ

ಕೆಲಸ ಮಾಡುವ ವಿಚಾರವಾಗಿ ಸಿಹಿ ಕಹಿ ಚಂದ್ರು ಹಾಗೂ ದಿವಾಕರ್ ಮಧ್ಯೆ ವಾಗ್ವಾದ ನಡೆಯಿತು. ಇದೇ ಗ್ಯಾಪ್ ನಲ್ಲಿ ದಯಾಳ್ ಪದ್ಮನಾಭನ್ ಹಾಗೂ ದಿವಾಕರ್ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು.

ಮಾತುಕತೆ ಅಷ್ಟಕಷ್ಟೆ

ಎಲ್ಲರೊಂದಿಗೆ ಬೆರೆಯಲು ದಿವಾಕರ್ ಪ್ರಯತ್ನ ಪಟ್ಟರೂ, ದಿವಾಕರ್ ಜೊತೆಗೆ ಸೆಲೆಬ್ರಿಟಿಗಳ ಮಾತುಕತೆ ಅಷ್ಟಕಷ್ಟೆ.

ಎರಡು ವಾರ ನಾಮಿನೇಟೆಡ್

ದಿವಾಕರ್ ಕಂಡ್ರೆ ಸೆಲೆಬ್ರಿಟಿ ಸ್ಪರ್ಧಿಗಳು ಕಿಡಿಕಾರುವುದರಿಂದ ಎರಡೂ ವಾರ ನಾಮಿನೇಟ್ ಆಗಿದ್ದಾರೆ.

ಸೆಲೆಬ್ರಿಟಿಗಳ ಕೆಂಗಣ್ಣಿಗೆ ಗುರಿಯಾಗಲು ಕಾರಣ.?

'ಬಿಗ್ ಬಾಸ್' ಮನೆಯಲ್ಲಿ ಸೆಲೆಬ್ರಿಟಿಗಳೇ ಒಂದು ಗುಂಪಾಗಿದ್ದರೆ, ಜನಸಾಮಾನ್ಯರೇ ಮತ್ತೊಂದು ಗುಂಪಾಗಿದ್ದಾರೆ. ಜನಸಾಮಾನ್ಯರನ್ನು ಕಂಡರೆ ಸೆಲೆಬ್ರಿಟಿಗಳಿಗೆ ಅಸಡ್ಡೆ, ನಿರ್ಲಕ್ಷ್ಯ ಎಂಬ ಭಾವ ದಿವಾಕರ್ ಮನಸ್ಸಲ್ಲಿ ಮೂಡಿದೆ. ಜನಸಾಮಾನ್ಯರ ಜೊತೆ ಸೆಲೆಬ್ರಿಟಿ ಸ್ಪರ್ಧಿಗಳು ನಡೆದುಕೊಳ್ಳುವ ರೀತಿ ದಿವಾಕರ್ ಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಜನಸಾಮಾನ್ಯ ಸ್ಪರ್ಧಿಗಳಾದ ಸಮೀರಾಚಾರ್ಯ, ಮೇಘ, ರಿಯಾಝ್ ಪರ ದಿವಾಕರ್ ದನಿ ಎತ್ತಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ನಡವಳಿಕೆ ಸರಿ ಇದೆ ಅಂತ ನಿಮಗೆ ಅನ್ಸುತ್ತಾ.? ಸೆಲೆಬ್ರಿಟಿ ಸ್ಪರ್ಧಿಗಳ ವರ್ತನೆ ಬಗ್ಗೆ ನಿಮಗೆ ಅಭಿಪ್ರಾಯ ಏನು ಎಂಬುದನ್ನು ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

English summary
Bigg Boss Kannada 5: Celebrity contestants targets Common Man Divakar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X