»   » ಆಟದಲ್ಲಿ ಕಿತ್ತಾಡಿಕೊಂಡು ಟೀ-ಶರ್ಟ್ ಹರಿದುಕೊಂಡ ಆತ್ಮೀಯ ಗೆಳೆಯರು.!

ಆಟದಲ್ಲಿ ಕಿತ್ತಾಡಿಕೊಂಡು ಟೀ-ಶರ್ಟ್ ಹರಿದುಕೊಂಡ ಆತ್ಮೀಯ ಗೆಳೆಯರು.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಟಿ ಶರ್ಟ್ ಹರಿದು ಹಾಕೊಂಡು ಜಗಳವಾಡಿದ ಗೆಳೆಯರು | FIlmibeat Kannada

'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಗೆ ಚಂದನ್ ಶೆಟ್ಟಿ ಅತ್ಯಂತ ಆತ್ಮೀಯ ಗೆಳೆಯ. 'ದೊಡ್ಮನೆ'ಯಲ್ಲಿ ಕುಚಿಕು ಗೆಳೆಯರಂತೆ ಇರುವ ಇವರಿಬ್ಬರು ನಿನ್ನೆಯ 'ಬಲೂನ್' ಟಾಸ್ಕ್ ನಲ್ಲಿ ಕಿತ್ತಾಡಿಕೊಂಡಿದ್ದಾರೆ.

ಎದುರಾಳಿ ತಂಡದಲ್ಲಿ ಇದ್ದ ದಿವಾಕರ್ ರವರ ಬಲೂನ್ ನಾಶ ಮಾಡುವ ಭರದಲ್ಲಿ, ದಿವಾಕರ್ ಟಿ-ಶರ್ಟ್ ನ ಹಿಡಿದು ಎಳೆದು ಹರಿದರು ಚಂದನ್ ಶೆಟ್ಟಿ. ತಮ್ಮ ಟಿ-ಶರ್ಟ್ ನ ಹರಿದ ಸಿಟ್ಟಿಗೆ ಚಂದನ್ ಶೆಟ್ಟಿ ಟಿ-ಶರ್ಟ್ ನ ದಿವಾಕರ್ ಹರಿದು ಹಾಕಿದರು.

ಅಲ್ಲಿಗೆ, ಇಬ್ಬರ ನಡುವಿನ ಗೆಳೆತನಕ್ಕೆ ತಿಲಾಂಜಲಿ ಬಿತ್ತು ಎಂದುಕೊಳ್ಳುವಾಗಲೇ, ದಿವಾಕರ್ ಹಾಗೂ ಚಂದನ್ ಶೆಟ್ಟಿ ಶಾಂತವಾದರು. ಒಬ್ಬರನ್ನೊಬ್ಬರು ಕ್ಷಮಿಸಿದರು. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ ಏನು.?

ಮನೆಯ ಸದಸ್ಯರಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದರ ಅನುಸಾರ, ಸದಸ್ಯರನ್ನ ಎರಡು ತಂಡಗಳಾಗಿ ವಿಭಜಿಸಲಾಗಿತ್ತು. ತಮ್ಮ ತಂಡದ ಸದಸ್ಯರು ಬಲೂನ್ ಗಳನ್ನು ಊದಿ ಎದುರಾಳಿ ತಂಡದ ಬೋರ್ಡ್ ಮೇಲೆ ಅಂಟಿಸಬೇಕಿತ್ತು. ಜೊತೆಗೆ ತಮ್ಮ ತಂಡದ ಬಲೂನ್ ಗಳನ್ನ ಎದುರಾಳಿ ತಂಡದಿಂದ ಕಾಪಾಡಿಕೊಳ್ಳಬೇಕಿತ್ತು. ಯಾವ ತಂಡ ಅತಿ ಹೆಚ್ಚು ಬಲೂನ್ ಊದಿ ಬೋರ್ಡ್ ಮೇಲೆ ಅಂಟಿಸುತ್ತಾರೋ, ಆ ತಂಡ ವಿಜಯಶಾಲಿ ಆಗುತ್ತಿತ್ತು.

ದಿವಾಕರ್ ಶರ್ಟ್ ಹರಿದ ಚಂದನ್ ಶೆಟ್ಟಿ

ಆಟದಲ್ಲಿ ಬಲೂನ್ ನಾಶ ಮಾಡುವ ಭರದಲ್ಲಿ, ದಿವಾಕರ್ ಟಿ-ಶರ್ಟ್ ನ ಹಿಡಿದು ಎಳೆದು ಹರಿದರು ಚಂದನ್ ಶೆಟ್ಟಿ.

ಚಂದನ್ ಶೆಟ್ಟಿ ಲೆಕ್ಕಾಚಾರ ಮಾಡಿ ಆಡ್ತಿದ್ದಾರಾ? ಸುದೀಪ್ ಆಡಿದ ಮಾತಿನ ಅರ್ಥವೇನು?

ರೊಚ್ಚಿಗೆದ್ದ ದಿವಾಕರ್.!

ತಮ್ಮ ಟೀ-ಶರ್ಟ್ ಹರಿದು ಹೋಯ್ತಲ್ಲ ಎಂಬ ಸಿಟ್ಟಿಗೆ, ಚಂದನ್ ಶೆಟ್ಟಿ ಟೀ-ಶರ್ಟ್ ನ ದಿವಾಕರ್ ಹರಿದು ಹಾಕಿದರು.

'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಗೆ ಆಪ್ತ ಗೆಳೆಯ ಯಾರು ಅಂತೀರಾ.?

ಒಂದೇ ನಿಮಿಷ ಜಗಳ

ಟಾಸ್ಕ್ ನಲ್ಲಿ ಟಿ-ಶರ್ಟ್ ಹರಿದು ಹಾಕಿ ಕಿತ್ತಾಡಿದ್ದ ಇವರಿಬ್ಬರು, ಬ್ರೇಕ್ ಟೈಮ್ ನಲ್ಲಿ ತಬ್ಬಿಕೊಂಡು ಒಬ್ಬರನ್ನೊಬ್ಬರು ಕ್ಷಮೆ ಕೇಳಿದರು.

ಹೊಚ್ಚ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ 'ಸೇಲ್ಸ್ ಮ್ಯಾನ್' ದಿವಾಕರ್.!

ಶರ್ಟ್ ಹಿಂದಿನ ಸೆಂಟಿಮೆಂಟ್

ಚಂದನ್ ಶೆಟ್ಟಿ ಪಾಲಿಗೆ ಅದು ಫೇವರಿಟ್ ಟಿ-ಶರ್ಟ್ ಆಗಿದ್ದರೆ, ದಿವಾಕರ್ ರವರ ಬಳಿ ಇರುವ ಅತ್ಯಂತ ಕಾಸ್ಟ್ಲಿ ಟಿ-ಶರ್ಟ್ ಅದು. ಅಷ್ಟಕ್ಕೂ, ಅದನ್ನ ದಿವಾಕರ್ ಗೆ ಕೊಡಿಸಿದ್ದು, ಅವರ ಪತ್ನಿ ಮಮತಾ.

ದೇವ್ರಾಣೆ ಸುಮ್ನೆ ಇರ್ತಿರ್ಲಿಲ್ಲ.!

ಇರುವುದರಲ್ಲಿ ಕಾಸ್ಟ್ಲಿ ಟಿ-ಶರ್ಟ್ ನ ಹರಿದು ಹಾಕಿದ್ದಕ್ಕೆ ದಿವಾಕರ್ ಗೆ ಕೋಪ ಬಂದಿದೆ. ಆ ಕೋಪವನ್ನ ಚಂದನ್ ಶೆಟ್ಟಿ ಟಿ-ಶರ್ಟ್ ಮೇಲೆ ದಿವಾಕರ್ ತೋರಿಸಿದ್ದಾರೆ. ''ಜೊತೆಗೆ ಯಾರೇ ಈ ಕೆಲಸ ಮಾಡಿದ್ರೂ, ದೇವ್ರಾಣೆ ಸುಮ್ಮನೆ ಇರ್ತಿಲಿಲ್ಲ'' ಎಂದು ದಿವಾಕರ್ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಟಿ-ಶರ್ಟ್ ಬಿಸಾಕುವುದಿಲ್ಲ.!

ತಮ್ಮ ತಪ್ಪಿನ ಅರಿವಾದ ಮೇಲೆ, ''ಒಳ್ಳೆಯ ಟೀ ಶರ್ಟ್ ಕೊಡಿಸುತ್ತೇನೆ'' ಎಂದು ಚಂದನ್ ಶೆಟ್ಟಿಗೆ ದಿವಾಕರ್ ಹೇಳುತ್ತಿದ್ದರು. ಆದ್ರೆ, ದಿವಾಕರ್ ಹರಿದು ಹಾಕಿದ ಟಿ-ಶರ್ಟ್ ನ ಯಾವುದೇ ಕಾರಣಕ್ಕೂ ಚಂದನ್ ಶೆಟ್ಟಿ ಬಿಸಾಕುವುದಿಲ್ಲವಂತೆ. ಬದಲಾಗಿ ನೆನಪಿಗೆ ಇಟ್ಟುಕೊಳ್ಳುತ್ತಾರಂತೆ.

ದೊಡ್ಡ ಜಗಳ ಆಗುತ್ತಿತ್ತು

''ನನಗೆ ಹರಿದ ಹಾಗೆ ಬೇರೆಯವರಿಗೆ ಹರಿದಿದ್ರೆ, ದೊಡ್ಡ ಜಗಳ ಆಗುತ್ತಿತ್ತು. ನಾನು ಸಮಾಧಾನ ಆದೆ. ಬೇರೆಯವರು ಆಗುತ್ತಿರಲಿಲ್ಲ'' ಅಂತ ಚಂದನ್ ಶೆಟ್ಟಿ ಹೇಳಿದರು.

ದಿವಾಕರ್-ಚಂದನ್ ಆಟದ ವೈಖರಿ ಹೇಗಿದೆ.?

ದಿವಾಕರ್ ಹಾಗೂ ಚಂದನ್ ಶೆಟ್ಟಿ ಅವರ ಆಟದ ವೈಖರಿ ಹೇಗಿದೆ.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ, 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

English summary
Bigg Boss Kannada 5: Week 7: Chandan Shetty rips Diwakar's t-shirt

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada