»   » 25 ದಿನದ 'ಬಿಗ್ ಬಾಸ್'ನಲ್ಲಿ ಲವ್, ಕಿಸ್, ಕಿತ್ತಾಟ ಏನೆಲ್ಲಾ ಆಗೋಯ್ತು.!

25 ದಿನದ 'ಬಿಗ್ ಬಾಸ್'ನಲ್ಲಿ ಲವ್, ಕಿಸ್, ಕಿತ್ತಾಟ ಏನೆಲ್ಲಾ ಆಗೋಯ್ತು.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : 25 ದಿನಗಳನ್ನ ಪೂರೈಸಿದೆ | FIlmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ 25 ದಿನಗಳ ಪೂರೈಸಿದೆ. ಈ ಇಪ್ಪತ್ತೈದು ದಿನದಲ್ಲಿ ಬಿಗ್ ಮನೆಯೊಳಗೆ ಹತ್ತು ಹಲವು ಘಟನೆಗಳು ನಡೆದಿದೆ.

ಇಲ್ಲಿಯವರೆಗೂ ಮೂರು ಜನ ಎಲಿಮಿನೇಟ್ ಆಗಿದ್ದಾರೆ. ಒಬ್ಬರು ತುರ್ತು ಕಾರಣದಿಂದ ಹೊರ ಹೋಗಿದ್ದಾರೆ. ಮೂರ್ನಾಲ್ಕು ಲವ್ ಸ್ಟೋರಿಗಳು ನಡೆಯುತ್ತಿದೆ. ಗ್ರೂಪಿಸಂ ನಡೆಯುತ್ತಿದೆ. ಕೆಲವು ಸ್ಪರ್ಧಿಗಳ ನಡುವೆ ದೊಡ್ಡ ಯುದ್ಧವೇ ಆಗೋಗಿದೆ. ಇನ್ನು ಈ ಬಾರಿ ಮುತ್ತಿನ ಸುರಿಮಳೆಯೇ ಆಗುತ್ತಿದೆ. 'ಡೈಲಾಗ್ ಕಿಂಗ್' ಒಬ್ಬರು ಹುಟ್ಟಿಕೊಂಡಿದ್ದಾರೆ. ಸಂಗೀತ ಸುಧೆ ಸದಾ ಹರಿಯುತ್ತಿದೆ.

ಮೊದಲ 25 ದಿನದಲ್ಲಿ ಇಷ್ಟೆಲ್ಲಾ ಆಗಿದ್ಯಾ? ಎಂದು ಯೋಚನೆ ಮಾಡ್ಬೇಡಿ. ಏನು ಗಲಾಟೆ, ಯಾರಿಗೆ ಲವ್, ಯಾರದು ಗ್ರೂಪ್, ಯಾರು ಹೊರಗೆ ಹೋಗಿದ್ದಾರೆ ಎಂಬ ವಿವರವನ್ನ ಮುಂದೆ ನೀಡಲಾಗಿದೆ.

ಮೂರು ಜನ ಎಲಿಮಿನೇಟ್

ಇದುವರೆಗೂ ಬಿಗ್ ಬಾಸ್ ಮನೆಯಿಂದ ಮೂರು ಜನ ಎಲಿಮಿನೇಟ್ ಆಗಿದ್ದಾರೆ. ಕಾಮನ್ ಮ್ಯಾನ್ ಸ್ಪರ್ಧಿ ಸುಮ ರಾಜ್ ಕುಮಾರ್, ಮೇಘ ಬಿಗ್ ಮನೆಯಿಂದ ಹೊರ ಬಂದಿದ್ದರೇ, ಮೊದಲ ಸೆಲೆಬ್ರಿಟಿ ಸ್ಪರ್ಧಿಯಾಗಿ ನಿರ್ದೇಶಕ ದಯಾಳ್ ಪದ್ಮನಾಭನ್ ಎಲಿಮಿನೇಟ್ ಆಗಿದ್ದಾರೆ.

ಸಂದರ್ಶನ: ಸಿಹಿಕಹಿ ಚಂದ್ರು ಡಬಲ್ ಗೇಮ್ ಆಡ್ತಿದ್ದಾರೆ ಎಂದ ದಯಾಳ್.!

ತುರ್ತು ಕಾರಣದಿಂದ ತೇಜಸ್ವಿನಿ ಔಟ್

ಇನ್ನು ಮೂರನೇ ವಾರದಲ್ಲಿ ನಟಿ ತೇಜಸ್ವಿನಿ ತುರ್ತು ಕಾರಣದಿಂದ ಮನೆಯಿಂದ ಹೊರಗೆ ಬಂದಿದ್ದಾರೆ. ತೇಜಸ್ವಿನಿ ಅವರ ತಂದೆಯ ಅನಾರೋಗ್ಯದ ಹಿನ್ನೆಲೆ ತೇಜಸ್ವಿನಿ ಬಿಗ್ ಬಾಸ್ ಮನೆಯಿಂದ ಹೊರ ಬರಬೇಕಾಯಿತು.

'ಬಿಗ್ ಬಾಸ್' ಆಟವನ್ನ ಅರ್ಧಕ್ಕೆ ಮೊಟಕು ಗೊಳಿಸಿದ ತೇಜಸ್ವಿನಿ.!

ಬಿಗ್ ಬಾಸ್ ಮನೆಯಲ್ಲಿ ಮೊದಲ ಬಿರುಗಾಳಿ

ಮೊದಲ ವಾರ ಬಿಗ್ ಬಾಸ್ ಶಾಂತಿ ನಿವಾಸವಾಗಿತ್ತು. ಆದ್ರೆ. ನಟಿ ತೇಜಸ್ವಿನಿ ಮತ್ತು ದಿವಾಕರ್ ನಡುವಿನ ಹಣ್ಣಿನ ಗಲಾಟೆಯಿಂದ ಬಿಗ್ ಮನೆಯಲ್ಲಿ ಬಿರುಗಾಳಿ ಆರಂಭವಾಯಿತು. ಇಲ್ಲಿಂದ ಆರಂಭವಾದ ಗಲಾಟೆ, ಮನಸ್ಥಾಪ ಇಡೀ ಮನೆಯನ್ನೇ ಬದಲಾಯಿಸಿತು.

'ಶಾಂತಿ ನಿವಾಸ'ವಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಬೀಸಿದೆ ಅಶಾಂತಿಯ ಬಿರುಗಾಳಿ!

ಜನಸಾಮಾನ್ಯರ ಮೇಲೆ ಸೆಲೆಬ್ರಿಟಿಗಳ ದಬ್ಬಾಳಿಕೆ

ಕಾಮನ್ ಮ್ಯಾನ್ ಮತ್ತು ಸೆಲೆಬ್ರೆಟಿಗಳನ್ನ ಈ ಬಾರಿ ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. ಜನಸಾಮಾನ್ಯರ ಮೇಲೆ ಸೆಲೆಬ್ರಿಟಿಗಳ ದಬ್ಬಾಳಿಕೆ ನಡೆಸಿದ್ದಾರೆ. ದಿವಾಕರ್, ರಿಯಾಜ್ ಬಾಷಾ, ಸಮೀರಾಚಾರ್ಯ, ಸಂಖ್ಯಾ ಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರುಗಳ ಮೇಲೆ ಸೆಲೆಬ್ರಿಟಿಗಳು ಅಧಿಕಾರ ಚಲಾಯಿಸಿದ್ದರು. ಇದೂ ಈಗಲೂ ಬಿಗ್ ಮನೆಯಲ್ಲಿ ಮುಂದುವರೆದಿದೆ.

'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

ಬಿಗ್ ಬಾಸ್ ಮನೆಯಲ್ಲಿ ಪ್ರೇಮಕಥೆ

ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮಕಥೆ ನಡೆಯುತ್ತಿದೆ. ಜೆಕೆ, ಶ್ರುತಿ, ಮತ್ತು ಚಂದನ್ ಶೆಟ್ಟಿ ನಡುವೆ ಟ್ರಯಾಂಗಲ್ ಲವ್ ಸ್ಟೋರಿ ನಡೆಯುತ್ತಿದೆ. ಚಂದನ್ ಗೆ ಶ್ರುತಿ ಅಂದ್ರೆ ಇಷ್ಟ. ಆದ್ರೆ, ಶ್ರುತಿಗೆ ಜೆಕೆ ಅಂದ್ರೆ ಇಷ್ಟ. ಮತ್ತೊಂದೆಡೆ ಮಾಜಿ ಪ್ರೇಮಿಗಳಾದ ಅನುಪಮಾ ಗೌಡ ಮತ್ತು ಜಗನ್ ಮಧ್ಯೆ ಕೂಡ ಲವ್ ಸ್ಟೋರಿ ಇದೆ. ಈ ಗ್ಯಾಪ್ ನಲ್ಲಿ ನಟಿ ಆಶಿತಾ, ಜಗನ್ ಅವರ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಿದ್ದಾರೆ. ಇದು ಇನ್ನೊಂದು ಲವ್ ಸ್ಟೋರಿ ಆಗಿದೆ.

'ಬಿಗ್ ಬಾಸ್' ಮನೆಯಲ್ಲಿ ಯಾರಿಗೆ ಯಾರ ಮೇಲೆ ಲವ್ ಆಗಿದೆ.?

ಮುತ್ತಿನ ಸುರಿಮಳೆ

ಈ ಸಲ 'ಬಿಗ್ ಬಾಸ್'ನಲ್ಲಿ ಮುತ್ತಿನ ಸುರಿಮಳೆ ಆಗ್ತಿದೆ. ಆರಂಭದಲ್ಲಿ ಸಹಿ ಕಹಿ ಚಂದ್ರು ಅವರು ಅನುಪಮಾ ಗೌಡ ಅವರಿಗೆ ಮುತ್ತು ಕೊಟ್ಟಿದ್ದರು. ನಂತರ ಅನುಪಮಾಗೆ ಜಗನ್ ತಬ್ಬಿಕೊಂಡು ಕಿಸ್ ಮಾಡಿದರು. ಇದಾದ ಬಳಿಕ ಆಶಿತಾ, ಜಗನ್ ಕೆನ್ನೆಗೆ ಕಿಸ್ ಮಾಡಿದ್ದರು.

ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

'ಕಳಪೆ' ಕಿತ್ತಾಟ

ಇದುವರೆಗೂ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಗಲಾಟೆ ಸೃಷ್ಟಿಸಿರುವುದು ಅಂದ್ರೆ ಶ್ರುತಿ ಮತ್ತು ದಿವಾಕರ್ ನಡುವಿನ 'ಕಳಪೆ ಕಿತ್ತಾಟ'. ವಾರದ ಕ್ಯಾಪ್ಟನ್ ಆಗಿದ್ದ ಶ್ರುತಿ ದಿವಾಕರ್ ಅವರಿಗೆ ಕಳಪೆ ಪ್ರದರ್ಶಕ ಎಂದು ಬೋರ್ಡ್ ನೀಡಿದರು. ಆದ್ರೆ, ದಿವಾಕರ್ ಅದನ್ನ ಒಪ್ಪಲಿಲ್ಲ. ಇದರಿಂದ ಇಡೀ ಮನೆಯಲ್ಲಿ ಗೊಂದಲ ಉಂಟಾಯಿತು. ಅದರ ಪರಿಣಾಮ ಶ್ರುತಿ ಮತ್ತು ದಿವಾಕರ್ ಇಬ್ಬರು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆದರು.

'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!

ಹಾಲು ಮುಚ್ಚಿಟ್ಟ ಕಥೆ

ಕಿಚ್ಚನ್ ಡಿಪಾರ್ಟ್ ಮೆಂಟ್ ನಲ್ಲಿದ್ದ ಸಿಹಿ ಕಹಿ ಚಂದ್ರು, ಅನುಪಮಾ, ದಯಾಳ್ ಅವರು ಹಾಲನ್ನ ಯಾರಿಗೂ ಗೊತ್ತಾಗಾದಾಗೆ ಮುಚ್ಚಿಟ್ಟಿದ್ದರು. ಈ ವೇಳೆ ಸಮೀರಾಚಾರ್ಯ ಅವರು ಒಂದು ಲೋಟ ಹಾಲು ಕೇಳಿದ್ದಕ್ಕೆ ಅರ್ಧ ಲೋಟ ಕುಡಿಯಿರಿ ಎಂದಿದ್ದರು. ಆದ್ರೆ, ಸಮೀರಾಚಾರ್ಯ ಹಾಲು ತಗೊಂಡಿಲ್ಲ. ಇದರಿಂದ ದಿವಾಕರ್, ಜಯಶ್ರೀನಿವಾಸನ್ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದರು. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಹಾಲು ಮುಚ್ಚಿಟ್ಟದಕ್ಕೆ ಛೀಮಾರಿ ಹಾಕಿದರು.

ಹಾಲಿಗಾಗಿ ಕೋಲಾಹಲ: ಹಾಲು ಮುಚ್ಚಿಟ್ಟ ಮಹಾನುಭಾವರಿಗೆ ಸುದೀಪ್ ಚಾಟಿಯೇಟು.!

'ವಡ್ಡ' ಜನಾಂಗದ ವಿರೋಧಕ್ಕೆ ಗುರಿಯಾದ ಸಿಹಿ ಕಹಿ ಚಂದ್ರು

ಸೆಲ್ಸ್ ಮ್ಯಾನ್ ದಿವಾಕರ್ ಅವರಿಗೆ ಸಿಹಿ ಕಹಿ ಚಂದ್ರು ಅವರು 'ವಡ್ಡ' ಎಂದಿದ್ದರು. ಇದಕ್ಕೆ 'ಅಖಿಲ ಕರ್ನಾಟಕ (ಭೋವಿ) ವಡ್ಡರ ಯುವ ವೇದಿಕೆ' ಕಾರ್ಯಕರ್ತರು 'ಇನ್ನೋವೇಟಿವ್ ಫಿಲ್ಮ್ ಸಿಟಿ' ಎದುರು ಪ್ರತಿಭಟನೆ ನಡೆಸಿದ್ದರು. ನಂತರ ಈ ವಿಷ್ಯವನ್ನ ಬಿಗ್ ಬಾಸ್ ಚಂದ್ರು ಅವರಿಗೆ ತಿಳಿಸಿತು. ಸಹಿ ಕಹಿ ಚಂದ್ರು ಅವರು ಕ್ಷಮೆ ಕೇಳಿದರು.

'ಬಿಗ್ ಬಾಸ್' ಮನೆಯಲ್ಲಿ ಆದ ಎಡವಟ್ಟಿಗೆ ಕ್ಷಮೆ ಕೇಳಿದ ಸಿಹಿ ಕಹಿ ಚಂದ್ರು

ಚಂದನ್ ಶೆಟ್ಟಿ ನಾಮಿನೇಟ್ ಆಗಿಲ್ಲ

ವಿಶೇಷ ಅಂದ್ರೆ ಬಿಗ್ ಬಾಸ್ ಮನೆಯಲ್ಲಿರುವ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದಾರೆ. ಆದ್ರೆ, Rap ಸಿಂಗರ್ ಚಂದನ್ ಶೆಟ್ಟಿ ಕಡಿಮೆ ವೋಟ್ ಪಡೆದು ಪರಿಣಾಮ ಒಂದು ವಾರವೂ ನಾಮಿನೇಟ್ ಆಗಿಲ್ಲ. ಇದು ಮೊದಲ 25 ದಿನದ ವಿಶೇಷ.

ಅಷ್ಟರಲ್ಲೇ ಜಸ್ಟ್ ಮಿಸ್ ಆದ ಚಂದನ್: ಈ ವಾರವೂ ಶೆಟ್ರಿಗೆ ತಲೆನೋವಿಲ್ಲ.!

ಜೆ.ಎಸ್ ಡೈಲಾಗ್, ಚಂದನ್ ಶೆಟ್ಟಿ ಮ್ಯೂಸಿಕ್

ಇನ್ನು ಮನರಂಜನೆ ವಿಚಾರಕ್ಕೆ ಬಂದ್ರೆ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರು ತಮ್ಮ ಪಂಚಿಂಗ್ ಡೈಲಾಗ್ ಗಳ ಮೂಲಕ ಎಲ್ಲರನ್ನ ರಂಜಿಸುತ್ತಿದ್ದಾರೆ. ಅದೇ ರೀತಿ Rap ಸಿಂಗರ್ ಚಂದನ್ ಶೆಟ್ಟಿ ತಮ್ಮ ಹಾಡುಗಳ ಮೂಲಕ ಎಂಟರ್ ಟೈನ್ ಮಾಡುತ್ತಿದ್ದಾರೆ.

'ದೊಡ್ಮನೆ'ಯ 'ಹೆಬ್ಬುಲಿ' ಜಯಶ್ರೀನಿವಾಸನ್ ಡೈಲಾಗ್ ಗಳು ಒಂದಾ ಎರಡಾ.. ಅಬ್ಬಬ್ಬಾ.!

English summary
Bigg boss kannada season 5 completes First 25 days. Here is the Interesting Fact of First Quarter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada