For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆ ಸೇರಿದ 'ಜೆ.ಕೆ'ಯ ಜರ್ನಿಯಲ್ಲಿ ಖುಷಿಗಿಂತ ನೋವು ಹೆಚ್ಚಿದೆ.!

  By Bharath Kumar
  |

  'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮದಲ್ಲಿ 'ಬಿಗ್' ಮನೆ ಸೇರಿರುವ ಹ್ಯಾಂಡ್ ಸಮ್ ಸ್ಪರ್ಧಿ ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಂ. 'ಅಶ್ವಿನಿ ನಕ್ಷತ್ರ' ಖ್ಯಾತಿಯ ಜೆ.ಕೆ, ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಮಿಂಚಿದ್ದಾರೆ.

  ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್ ನ ದೊಡ್ಡ ಧಾರಾವಾಹಿಯಲ್ಲಿ 'ರಾವಣ'ನ ಪಾತ್ರ ನಿರ್ವಹಿಸುವ ಮೂಲಕ ದೊಡ್ಡ ಯಶಸ್ಸು ಗಳಿಸಿಕೊಂಡಿರುವ ಖ್ಯಾತಿ ಅವರದ್ದು.

  ಆದ್ರೆ, 'ಜೆ.ಕೆ'ಯ ಈ ಯಶಸ್ಸಿನ ಜರ್ನಿ ಹೂವಿನ ಹಾಸಿಗೆಯಾಗಿರಲಿಲ್ಲ. ಮುಳ್ಳಿನ ಹಾದಿಯಾಗಿತ್ತು. ಹಾಗಿದ್ದರೆ, ಬಿಗ್ ಬಾಸ್ ಮನೆ ಸೇರಿದ 'ಜೆ.ಕೆ'ಯ ರೋಚಕ ಬದುಕು ಹೇಗಿತ್ತು ಎಂದು ಮುಂದೆ ಓದಿ.....

  ಜೆ.ಕೆ ವೃತ್ತಿಯಲ್ಲಿ ಇಂಜಿನಿಯರ್

  ಜೆ.ಕೆ ವೃತ್ತಿಯಲ್ಲಿ ಇಂಜಿನಿಯರ್

  ಕಿರುತೆರೆ ಸೂಪರ್ ಸ್ಟಾರ್ ಕಾರ್ತಿಕ್ ಜಯರಾಂ ಅವರು ವೃತ್ತಿಯಲ್ಲಿ ಇಂಜಿನಿಯರ್ (Structural engineer). ಆದ್ರೆ, ಸಿನಿಮಾದ ಮೇಲಿನ ಆಸಕ್ತಿಯಿಂದ ಚಿತ್ರರಂಗದಲ್ಲಿ ಏನಾದರೂ ಸಾಧಿಸಿಬೇಕು ಎಂಬ ಛಲದಿಂದ ಚಿತ್ರರಂಗಕ್ಕೆ ಕಾಲಿಟ್ಟರು.

  ನಟ 'ಜೆ.ಕೆ' ಹೇಳಿಕೆಗೆ ತೀವ್ರ ಖಂಡನೆ: 'ಜೆ.ಕೆ' ಹೇಳಿದ್ದೇ ಬೇರೆ, ಆಗಿದ್ದೇ ಬೇರೆ.!

  ಅವಕಾಶವಿಲ್ಲದೇ ನೋವು ಅನುಭವಿಸಿದ್ದರು

  ಅವಕಾಶವಿಲ್ಲದೇ ನೋವು ಅನುಭವಿಸಿದ್ದರು

  ಸಿನಿಮಾ ಮಾಡ್ಬೇಕು ಎಂಬ ಆಸೆಯಿಂದ ಬಂದ 'ಜೆ.ಕೆ'ಗೆ ಆರಂಭದಲ್ಲಿ ಅವಕಾಶ ಸಿಗಲಿಲ್ಲ. ಕಾದು ಕಾದು ಬೇಸರಗೊಂಡಿದ್ದ ಕಾರ್ತಿಕ್ ಜಯರಾಂ, ಸಿಕ್ಕ ಸಣ್ಣಪುಟ್ಟ ಪಾತ್ರಗಳನ್ನ ಮಾಡಿಕೊಂಡು ನೆಲೆ ಕಾಣಲು ಹರಸಾಹಸ ಪಡುತ್ತಿದ್ದರು. ಈ ವೇಳೆ ಸಾಕಷ್ಟು ಅವಮಾನಗಳನ್ನ ಎದುರಿಸಿದರು.

  ಮೊದಲ ದಿನವೇ ನಾಮಿನೇಟ್ ಆದ 'ಸೇಲ್ಸ್ ಮ್ಯಾನ್' ದಿವಾಕರ್ ಬದುಕಿನ ಕಥೆ-ವ್ಯಥೆ

  ಅವಮಾನಕ್ಕೆ ಉತ್ತರ ಕೊಟ್ಟ 'ಅಶ್ವಿನಿ ನಕ್ಷತ್ರ'

  ಅವಮಾನಕ್ಕೆ ಉತ್ತರ ಕೊಟ್ಟ 'ಅಶ್ವಿನಿ ನಕ್ಷತ್ರ'

  ಆರಂಭದಲ್ಲಿ ಕಾರ್ತಿಕ್ ಜಯರಾಂ ಅವರನ್ನ ''ನೀನು ಹೀರೋ ಆಗ್ಬೇಕಾ'' ಎಂದು ಹೀಯಾಳಿಸಿದ್ದರು. ಮತ್ತೊಂದೆಡೆ ಅವಕಾಶ ಸಿಗದೆ ಕಂಗಲಾಗಿದ್ದರು. ಇಂತಹ ಅವಮಾನಗಳಿಗೆ ಉತ್ತರ ನೀಡಬೇಕು ಎಂಬ ಕಾರಣಕ್ಕೆ ಮೊದಲ ಬಾರಿಗೆ ಧಾರಾವಾಹಿ ಮಾಡಲು ಒಪ್ಪಿಕೊಂಡರು. ಅದೇ 'ಅಶ್ವಿನಿ ನಕ್ಷತ್ರ'. ಈ ಧಾರಾವಾಹಿಯಲ್ಲಿ ಕಾರ್ತಿಕ್ ಜಯರಾಂ ಅವರದ್ದು ಸೂಪರ್ ಸ್ಟಾರ್ ನಟನ ಪಾತ್ರ. ಈ ಪಾತ್ರವನ್ನ ಚೆನ್ನಾಗಿ ಸದ್ಬಳಕೆ ಮಾಡಿಕೊಂಡ 'ಜೆ.ಕೆ'ಯ ಅದೃಷ್ಟ ಇಲ್ಲಿಂದ ಬದಲಾಯಿತು.

  'ಬಿಗ್ ಬಾಸ್' ಮನೆಯ ಹೊಸ 'ಅಮ್ಮ' ಸುಮಾ ರಾಜ್ ಕುಮಾರ್ ಜೀವನ ಹಿನ್ನೋಟ.!

  ಬಾಲಿವುಡ್ ನಲ್ಲಿ ಕಂಡ ಯಶಸ್ಸು

  ಬಾಲಿವುಡ್ ನಲ್ಲಿ ಕಂಡ ಯಶಸ್ಸು

  ಸತತ ಎರಡು ವರ್ಷ ಕಿರುತೆರೆಯಲ್ಲಿ ಮಿಂಚಿದ 'ಜೆ.ಕೆ' ಅಪಾರ ಅಭಿಮಾನಿಗಳನ್ನ ಗಳಿಸಿಕೊಂಡರು. ಇದರ ಜೊತೆಗೆ ಸಿನಿಮಾದಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರು. ಆದ್ರೆ, ಯಾವುದು ಖ್ಯಾತಿ ತಂದುಕೊಡಲಿಲ್ಲ. ಇಂತಹ ಸಂದರ್ಭದಲ್ಲೇ ಬಾಲಿವುಡ್ ನಿಂದ ದೊಡ್ಡ ಆಫರ್ ಬಂತು. 'ಸಿಯಾ ಕೇ ರಾಮ್' ಎಂಬ ಪೌರಾಣಿಕ ಧಾರಾವಾಹಿಯಲ್ಲಿ 'ರಾವಣ'ನ ಪಾತ್ರ ಸಿಕ್ತು. ಖುಷಿಯಿಂದ ಅಭಿನಯಿಸಿ, ಅಲ್ಲಿಯೂ ಗೆದ್ದರು.

  ಅಲ್ಲಿ ಗೆದ್ದರು, ಇಲ್ಲಿ ಬೆಲೆ ಸಿಕ್ಕಿಲ್ಲ.!

  ಅಲ್ಲಿ ಗೆದ್ದರು, ಇಲ್ಲಿ ಬೆಲೆ ಸಿಕ್ಕಿಲ್ಲ.!

  ಬಾಲಿವುಡ್ ಅಂತಹ ಇಂಡಸ್ಟ್ರಿಯಲ್ಲಿ ಅಭಿನಯಿಸಿ ಗೆದ್ದು ಬಂದ 'ಜೆ.ಕೆ'ಗೆ ಪುನಃ ಕನ್ನಡದಲ್ಲಿ ಅವಕಾಶಗಳು ಸಿಗಲೇ ಇಲ್ಲ. ಇದರಿಂದ ಬೇಸರಗೊಂಡ ಜೆಕೆ, ಎದೆಗುಂದದೆ ಸ್ನೇಹಿತರ ಜೊತೆಗೂಡಿ ಈಗ 'ಮೇ 1st' ಎಂಬ ಹೊಸ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

  ಸಿ.ಸಿ.ಎಲ್ ಕ್ರಿಕೆಟ್ ಆಟಗಾರ

  ಸಿ.ಸಿ.ಎಲ್ ಕ್ರಿಕೆಟ್ ಆಟಗಾರ

  ಅಭಿನಯ ಜೊತೆಗೆ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿರುವ ಜೆಕೆ, 'ಸೆಲೆಬ್ರೆಟಿ ಕ್ರಿಕೆಟ್ ಲೀಗ್'ನಲ್ಲಿ ಸುದೀಪ್ ನೇತೃತ್ವದ 'ಕರ್ನಾಟಕ ಬುಲ್ಡೋಜರ್ಸ್' ತಂಡದಲ್ಲಿ ಆಟಗಾರನಾಗಿ ಆಡುತ್ತಿದ್ದಾರೆ.

  'ಬಿಗ್ ಬಾಸ್' ವೇದಿಕೆ ಮೇಲೆ ಚಮಕ್ ಕೊಟ್ಟ ಚಂದ್ರು ಸಿಹಿಯೋ.? ಕಹಿಯೋ.?

  'ಬಿಗ್ ಬಾಸ್'ಗೆ ಎಂಟ್ರಿ

  'ಬಿಗ್ ಬಾಸ್'ಗೆ ಎಂಟ್ರಿ

  ಇಷ್ಟೆಲ್ಲಾ ಥ್ರಿಲ್ಲಿಂಗ್ ಜರ್ನಿಯ ಮಧ್ಯೆ ಈಗ 'ಬಿಗ್ ಬಾಸ್' ಮನೆಗೆ ಜೆಕೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಮನೆಯಲ್ಲಿ ಜರ್ನಿ ಅರಂಭಿಸಿರುವ ಜೆಕೆ ಮೊದಲ ವಾರದಲ್ಲಿ ಏಳು ಜನರ ಪೈಕಿ ನಾಮಿನೇಟ್ ಆಗಿದ್ದಾರೆ. ಜೆಕೆ ಈ ವಾರ ಸೇಫ್ ಆಗ್ತಾರಾ. ಕಾದು ನೋಡಬೇಕಿದೆ.

  ಜೆ.ಕೆ ಅಭಿನಯಿಸಿರುವ ಚಿತ್ರಗಳು

  ಜೆ.ಕೆ ಅಭಿನಯಿಸಿರುವ ಚಿತ್ರಗಳು

  ಕಿರುತೆರೆಯಲ್ಲಿ 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಅಭಿನಯಿಸಿರುವ ಜೆಕೆ, ಹಿಂದಿಯ 'ಸಿಯಾ ಕೇ ರಾಮ್' ಧಾರಾವಾಹಿಯಲ್ಲಿ ರಾವಣನ ಪಾತ್ರ ಮಾಡಿದ್ದಾರೆ. 'ಕೆಂಪೇಗೌಡ', 'ವಿಷ್ಣುವರ್ಧನ', 'ಈಗ', 'ವರದನಾಯಕ', 'ಕೇರ್ ಆಫ್ ಫುಟ್ ಪಾಟ್' ಅಂತಹ ಚಿತ್ರಗಳಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದಾರೆ. 'ಜಸ್ಟ್ ಲವ್' ಎಂಬ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ 'ಬೆಂಗಳೂರು 560023', 'ವಿಸ್ಮಯ' ಅಂತಹ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

  'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಯಾಳ್ ಪದ್ಮನಾಭನ್ ಕಿರು ಪರಿಚಯ

  English summary
  Who is JK.? Read the article to know more about Bigg Boss Kannada 5 Contestant JK and his background.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X