»   » 'ಮಾತಿನ ಮಲ್ಲ' ರಿಯಾಜ್ ಬಾಷಾ ಬಿಗ್ ಬಾಸ್ ಗೆ ಬರೋದಕ್ಕೆ ಮುಂಚೆ ಏನ್ಮಾಡ್ತಿದ್ರು?

'ಮಾತಿನ ಮಲ್ಲ' ರಿಯಾಜ್ ಬಾಷಾ ಬಿಗ್ ಬಾಸ್ ಗೆ ಬರೋದಕ್ಕೆ ಮುಂಚೆ ಏನ್ಮಾಡ್ತಿದ್ರು?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 5'ನೇ ಆವೃತ್ತಿಯಲ್ಲಿ ಕಾಮನ್ ಮ್ಯಾನ್ ವಿಭಾಗದಲ್ಲಿ ಮನೆ ಪ್ರವೇಶ ಮಾಡಿದ ಸ್ಪರ್ಧಿ ರಿಯಾಜ್ ಬಾಷಾ. ಆದ್ರೆ, ಭಾಷಾ ಅವರು ಸಂಪೂರ್ಣವಾಗಿ ಕಾಮನ್ ಮ್ಯಾನ್ ಎಂದು ಹೇಳಲು ಸಾಧ್ಯವಿಲ್ಲ.

ಯಾಕಂದ್ರೆ, ರಿಯಾಜ್ ಭಾಷಾ ತಮ್ಮ ವೃತ್ತಿ ಮೂಲಕ ರಾಜ್ಯದ ಹೊರಗಡೆಯೂ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ, ಕಾಮನ್ ಮ್ಯಾನ್ ವಿಭಾಗದಲ್ಲಿ 'ಬಿಗ್' ಮನೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಹಾಗಿದ್ರೆ, 'ಮಾತಿನ ಮಲ್ಲ' ರಿಯಾಜ್ ಬಾಷಾ ಬಿಗ್ ಬಾಸ್ ಗೆ ಬರೋದಕ್ಕೆ ಮುಂಚೆ ಏನ್ಮಾಡ್ತಿದ್ರು? ಮುಂದೆ ಓದಿ.....

ನಿರೂಪಕ-ಕಂಠದಾನ ಕಲಾವಿದ

ಕಾರ್ಪೋರೆಟ್ ಕಂಪನಿಗಳ ಕಾರ್ಯಕ್ರಮ ನಡೆಸುಕೊಡುವ ರಿಯಾಜ್ ಬಾಷಾ ವೃತ್ತಿಯಲ್ಲಿ ನಿರೂಪಕ. ಹಾಗೂ ಕಂಠದಾನ ಕಲಾವಿದ. ಕಾರ್ಪೋರೆಟ್ ಕಂಪನಿ ಸೇರಿದಂತೆ ಇತರೆ ಪತ್ರಿಕಾ ಸುದ್ದಿಗೋಷ್ಠಿಗಳಲ್ಲೂ ನಿರೂಪಕರಾಗಿ ಕೆಲಸ ಮಾಡಿದ್ದಾರೆ.

ವಿಶೇಷ ಏನಪ್ಪಾ ಅಂದ್ರೆ

'ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮೊದಲ ಆವೃತ್ತಿ ಸುದ್ದಿಗೋಷ್ಠಿಯನ್ನ ಕೂಡ ಇದೇ ರಿಯಾಜ್ ಬಾಷಾ ನಿರೂಪಣೆ ಮಾಡಿದ್ದರು.

15 ವರ್ಷದ ವೃತ್ತಿ

ಅಂದ್ಹಾಗೆ, ರಿಯಾಜ್ ಅವರು ಸುಮಾರು 15 ವರ್ಷದಿಂದ ನಿರೂಪಕರಾಗಿದ್ದು, ದೇಶ-ವಿದೇಶಗಳಲ್ಲೂ ಕೂಡ ಕೆಲಸ ಮಾಡಿದ್ದಾರೆ. 2 ಸಾವಿರಕ್ಕೂ ಅಧಿಕ ಶೋಗಳನ್ನ, ಸುಮಾರು 13 ದೇಶಗಳಲ್ಲಿ ನಡೆಸಿಕೊಟ್ಟಿದ್ದಾರೆ.

ಮೂಲತಃ ಬೆಂಗಳೂರು

ರಿಯಾಜ್ ಬಾಷಾ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಆದ್ರೆ, ಸುಮಾರು 9 ವರ್ಷಗಳ ಕಾಲ ಮುಂಬೈನಲ್ಲಿ ವಾಸವಾಗಿದ್ದರು. ಮದುವೆ ಆಗಿದೆ. ತಂದೆ-ತಾಯಿ, ಪತ್ನಿ ಜೊತೆ ನೆಲೆಸಿದ್ದಾರೆ.

ಬಿಗ್ ಬಾಸ್ ಯಾಕೆ?

ತಂದೆ-ತಾಯಿ ಅವರಿಗೆ ಒಂದು ಸಣ್ಣ ಮನೆ ಕಟ್ಟಬೇಕೆಂಬ ಬಹುದೊಡ್ಡ ಆಸೆ. ಆದ್ರೆ ಹಣಕಾಸಿನ ಸಮಸ್ಯೆಯಿಂದ ಅದು ನೆರವೇರುತ್ತಲೇ ಇಲ್ಲ. ಹೀಗಾಗಿ, ಬಿಗ್ ಬಾಸ್ ಗೆದ್ದು ಮನೆ ಕಟ್ಟಬೇಕೆಂಬ ಆಸೆ ರಿಯಾಜ್ ಅವರದ್ದು.

English summary
Who is Riyaz Bhasha.? Read the article to know more about Bigg Boss Kannada 5 Contestant Riyaz Bhasha and his background.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X