»   » ಹೊಸ ಪಟ್ಟಿ: ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಹೋಗೋರು 'ಇವರೇ'!?

ಹೊಸ ಪಟ್ಟಿ: ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಹೋಗೋರು 'ಇವರೇ'!?

Posted By:
Subscribe to Filmibeat Kannada
Bigg boss Kannada 5 contestants new tentative list | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 15 ರಂದು ಸಂಜೆ 6 ಗಂಟೆಗೆ 'ಬಿಗ್ ಬಾಸ್ ಕನ್ನಡ-5' ರಿಯಾಲಿಟಿ ಶೋ ಪ್ರಾರಂಭ ಆಗಲಿದೆ.

ಈ ಬಾರಿ 'ದೊಡ್ಮನೆ'ಯೊಳಗೆ ಯಾರನ್ನ ಕಳುಹಿಸಬೇಕು ಎಂಬುದರ ಬಗ್ಗೆ ಸ್ವತಃ ಕಲರ್ಸ್ ಕನ್ನಡ ವಾಹಿನಿ ಅಷ್ಟೊಂದು ತಲೆ ಕೆಡಿಸಿಕೊಂಡಿದ್ಯೋ, ಇಲ್ವೋ. ಆದ್ರೆ, ಜನರು ಮಾತ್ರ 'ಬಿಗ್ ಬಾಸ್' ಸ್ಪರ್ಧಿಗಳ ಲೆಕ್ಕಾಚಾರದ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ.

'ಇವರೆಲ್ಲ' ಇದ್ದರೆ 'ಬಿಗ್ ಬಾಸ್ ಕನ್ನಡ-5' ಚೆಂದ: ವೀಕ್ಷಕರ ಒತ್ತಾಯದ ಪಟ್ಟಿ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಂತೂ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳ ಬಗ್ಗೆ ದಿನಕ್ಕೊಂದು ಪಟ್ಟಿ ಹರಿದಾಡುತ್ತಲೇ ಇದೆ. ಇಂದೂ ಕೂಡ ಒಂದು ಹೊಸ ಪಟ್ಟಿ ವೈರಲ್ ಆಗಿದ್ದು, 'ಇವರುಗಳೇ' ಈ ಬಾರಿ 'ದೊಡ್ಮನೆ'ಯೊಳಗೆ ಹೋಗೋರು ಅಂತ ಹೇಳಲಾಗಿದೆ. 'ಅವರುಗಳು' ಯಾರು ಅಂತ ನೀವೇ ನೋಡಿ...

ನಟಿ ವಿಜಯಲಕ್ಷ್ಮಿ

ಕಲರ್ಸ್ ಕನ್ನಡ ವಾಹಿನಿ ಸಿದ್ಧಪಡಿಸಿರುವ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳ ಆಯ್ಕೆ ಪಟ್ಟಿಯಲ್ಲಿ 'ನಾಗಮಂಡಲ' ಸಿನಿಮಾ ಖ್ಯಾತಿಯ ವಿಜಯಲಕ್ಷ್ಮಿ ಹೆಸರು ಇದ್ಯಂತೆ. ವರ್ಷಗಳಿಂದ ಗಾಂಧಿನಗರದಲ್ಲಿ ಪತ್ತೆ ಆಗದ ನಟಿ ವಿಜಯಲಕ್ಷ್ಮಿ, 'ದೊಡ್ಮನೆ'ಯೊಳಗೆ ಪ್ರತ್ಯಕ್ಷ ಆಗ್ತಾರಾ.? ಕಾದು ನೋಡೋಣ.

'ಬಿಗ್ ಬಾಸ್ ಕನ್ನಡ-5': ಸ್ಪರ್ಧಿಗಳ ಪಟ್ಟಿಯಲ್ಲಿ 'ಇವರುಗಳ' ಹೆಸರು ಇದ್ಯಂತೆ.!

ಚಂದನ್ ಶೆಟ್ಟಿ

'ಮೂರೇ ಮೂರು ಪೆಗ್ ಗೆ' ಹಾಡಿನ ಮೂಲಕ ಜನಪ್ರಿಯತೆ ಗಳಿಸಿದ ರ್ಯಾಪರ್ ಚಂದನ್ ಶೆಟ್ಟಿ ಕೂಡ ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರಂತೆ.

ಸಿಹಿಕಹಿ ಚಂದ್ರು

ಬೊಂಬಾಟ್ ಭೋಜನ ಮಾಡುವುದರಲ್ಲಿ ಪರ್ಫೆಕ್ಟ್ ಆಗಿರುವ ಸಿಹಿ ಕಹಿ ಚಂದ್ರು 'ಬಿಗ್ ಬಾಸ್' ಮನೆಯೊಳಗೆ ಹೋದರೆ ಉಪ್ಪು, ಹುಳಿ, ಖಾರ ಹದವಾಗಿ ಬೆರೆಯುವುದು ಪಕ್ಕಾ ಅಂತ ಕಲರ್ಸ್ ವಾಹಿನಿ ಅಭಿಪ್ರಾಯ ಪಟ್ಟಿದ್ಯಂತೆ.

ರಾಜೇಶ್ ನಟರಂಗ

ಜನಪ್ರಿಯ ನಟ ರಾಜೇಶ್ ನಟರಂಗ ರವರನ್ನ 'ಬಿಗ್ ಬಾಸ್' ಸ್ಪರ್ಧಿಯನ್ನಾಗಿಸಲು ಕಲರ್ಸ್ ವಾಹಿನಿ ನಿರ್ಧರಿಸಿದ್ಯಂತೆ.

ಕವಿತಾ ಗೌಡ

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ಕವಿತಾ ಗೌಡ ಹೆಸರೂ ಸ್ಪರ್ಧಿಗಳ ಆಯ್ಕೆ ಪಟ್ಟಿಯಲ್ಲಿದ್ಯಂತೆ.

ಗಾಯಕಿಯರು

ಇನ್ನೂ ಗಾಯಕಿಯರಾದ ಸುಪ್ರಿಯಾ ಲೋಹಿತ್, ಅನುರಾಧಾ ಭಟ್ ಕೂಡ ಈ ಬಾರಿ ಸ್ಪರ್ಧಿಯಾಗುವ ಸಾಧ್ಯತೆ ಇದ್ಯಂತೆ.

ಸಾಮಾನ್ಯ ಜನರೂ ಇರ್ತಾರೆ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ಜೊತೆಗೆ ಕಾಮನ್ ಮ್ಯಾನ್ ಕೂಡ ಇರ್ತಾರೆ.

ನಿಮ್ಮ ಅಭಿಪ್ರಾಯವನ್ನೂ ತಿಳಿಸಿ...

'ಬಿಗ್ ಬಾಸ್ ಕನ್ನಡ-5'ನಲ್ಲಿ ನೀವು ಯಾರನ್ನ ನೋಡಲು ಇಚ್ಛಿಸುತ್ತೀರಾ ಅಂತ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Bigg Boss is back in Kannada. According to latest Grapevine, Kannada Actress Vijayalakshmi, Rapper Chandan Shetty, Sihi Kahi Chandru, Rajesh Nataranga are considered in the Bigg Boss Kannada 5 contestants list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada