Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಇವರೆಲ್ಲ' ಇದ್ದರೆ 'ಬಿಗ್ ಬಾಸ್ ಕನ್ನಡ-5' ಚೆಂದ: ವೀಕ್ಷಕರ ಒತ್ತಾಯದ ಪಟ್ಟಿ ಇಲ್ಲಿದೆ

''ಬಿಗ್ ಬಾಸ್ ಒಂದು ರಿಯಾಲಿಟಿ ಶೋ ಅಲ್ಲವೇ ಅಲ್ಲ, ಅದೊಂದು ಸ್ಕ್ರಿಪ್ಟೆಡ್ ಶೋ'' ಅಂತ ಯಾರು ಎಷ್ಟೇ ಮೂಗು ಮುರಿದರೂ, ಜನ ಮಾತ್ರ 'ಬಿಗ್ ಬಾಸ್' ಕಾರ್ಯಕ್ರಮವನ್ನ ಮಿಸ್ ಮಾಡುವುದೇ ಇಲ್ಲ.
ಯಶಸ್ವಿಯಾಗಿ ನಾಲ್ಕು ಆವೃತ್ತಿಗಳನ್ನು ಪೂರ್ಣಗೊಳಿಸಿರುವ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಐದನೇ ಆವೃತ್ತಿ ಶುರು ಆಗುವುದಕ್ಕೆ ದಿನಗಣನೆ ಆರಂಭವಾಗಿದೆ. 'ಬಿಗ್ ಬಾಸ್ ಕನ್ನಡ-5'ಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
'ಬಿಗ್ ಬಾಸ್ ಕನ್ನಡ-5': ಸ್ಪರ್ಧಿಗಳ ಪಟ್ಟಿಯಲ್ಲಿ 'ಇವರುಗಳ' ಹೆಸರು ಇದ್ಯಂತೆ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಯಾರೆಲ್ಲ ಸ್ಪರ್ಧಿಸುತ್ತಾರೆ ಅಂತ ಅಕ್ಟೋಬರ್ 15 ರಂದು ಗೊತ್ತಾಗಲಿದೆ. ಅದು ಕಲರ್ಸ್ ವಾಹಿನಿಯ ಆಯ್ಕೆ. ಆದರೆ, 'ಬಿಗ್ ಬಾಸ್' ಮನೆಯಲ್ಲಿ 'ಇವರೆಲ್ಲ' ಇರಲೇಬೇಕು... 'ಇವರೆಲ್ಲ' ಇದ್ದರೆ ಚೆಂದ ಅಂತ ಬಯಕೆ ವೀಕ್ಷಕರಿಗೆ ಇದ್ದೇ ಇದೆ. ಮುಂದೆ ಓದಿರಿ....

'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ'ಗೆ ಕಾಮೆಂಟ್ ಗಳ ಸುರಿಮಳೆ
''ಬಿಗ್ ಬಾಸ್ ಕನ್ನಡ-5' ರಿಯಾಲಿಟಿ ಶೋನಲ್ಲಿ ನೀವು ಯಾರನ್ನು ನೋಡಲು ಬಯಸುತ್ತೀರಾ?'' ಅಂತ ನಾವು ನಮ್ಮ ಓದುಗರಿಗೆ ಕೇಳಿದ ಪ್ರಶ್ನೆಗೆ ಅನೇಕ ಕಾಮೆಂಟ್ ಗಳು ಲಭ್ಯವಾಗಿವೆ. ಓದುಗರಿಂದ ಲಭ್ಯವಾಗಿರುವ ಕಾಮೆಂಟ್ ಗಳ ಪೈಕಿ, 'ಕೆಲವರು' ಎಲ್ಲರಿಗೂ ಫೇವರಿಟ್. ವೀಕ್ಷಕರು ಸೂಚಿಸಿರುವ ಪ್ರಕಾರ ಈ ಬಾರಿಯ 'ಬಿಗ್ ಬಾಸ್'ನಲ್ಲಿ 'ಇವರೆಲ್ಲ' ಇರಬೇಕು. ಆ 'ಒತ್ತಾಯ'ದ ಪಟ್ಟಿ ಇಲ್ಲಿದೆ ನೋಡಿ...

ವಾಟಾಳ್ ನಾಗರಾಜ್
ಮಾತ್ತೆತ್ತಿದರೆ 'ಬಂದ್.. ಬಂದ್.. ಬಂದ್' ಎನ್ನುವ ವಾಟಾಳ್ ನಾಗರಾಜ್ ರವರನ್ನ 'ಬಿಗ್ ಬಾಸ್' ಮನೆಯೊಳಗೆ ನೋಡಲು ವೀಕ್ಷಕರು ಇಷ್ಟಪಡುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ
ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರರಾಗಿ ಕಿರುತೆರೆಯಲ್ಲಿಯೂ ಮಿಂಚು ಹರಿಸಿರುವ ನಟಿ ರಾಧಿಕಾ ಕುಮಾರಸ್ವಾಮಿ 'ಬಿಗ್ ಬಾಸ್' ಸ್ಪರ್ಧಿಯಾಗಬೇಕು ಎಂಬುದು ವೀಕ್ಷಕರ ಇಚ್ಛೆ.

ಹಿತೇಶ್ - ಶಿವರಾಜ್.ಕೆ.ಆರ್.ಪೇಟೆ
'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಎಲ್ಲರನ್ನ ನಕ್ಕು-ನಲಿಸಿರುವ ಪ್ರತಿಭಾವಂತರಾದ ಹಿತೇಶ್ ಹಾಗೂ ಶಿವರಾಜ್.ಕೆ.ಆರ್.ಪೇಟೆ 'ಬಿಗ್ ಬಾಸ್' ಮನೆಯೊಳಗೆ ಬಂದರೆ ಮನರಂಜನೆಗೆ ಕೊರತೆ ಇಲ್ಲ ಅನ್ನೋದು ವೀಕ್ಷಕರ ಅಭಿಪ್ರಾಯ.

ಅನು ಪ್ರಭಾಕರ್
'ಬಿಗ್ ಬಾಸ್' ಮನೆಯೊಳಗೆ ಅನು ಪ್ರಭಾಕರ್ ಹೋಗ್ಬೇಕು ಅಂತ ಕಳೆದ ಆವೃತ್ತಿಯಿಂದಲೂ ವೀಕ್ಷಕರು ಅಪೇಕ್ಷಿಸುತ್ತಿದ್ದಾರೆ. ಆದರೆ ಆ ಕಾಲ ಇನ್ನೂ ಕೂಡಿ ಬಂದಿಲ್ಲ

ಅನೀಶ್ ತೇಜೇಶ್ವರ್
ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿರುವ ಅನೀಶ್ ತೇಜೇಶ್ವರ್ 'ದೊಡ್ಮನೆ'ಯೊಳಗೆ ಕಾಲಿಡಬೇಕು ಅನ್ನೋದು ಹರೆಯದ ಹುಡುಗಿಯರ ಬಯಕೆ.

ಗಾಂಧಾರಿ ಸೀರಿಯಲ್ ಕಾವ್ಯ ಗೌಡ
'ಗಾಂಧಾರಿ' ಸೀರಿಯಲ್ ಖ್ಯಾತಿಯ ಕಾವ್ಯ ಗೌಡ ಕೂಡ ವೀಕ್ಷಕರ ಒತ್ತಾಯದ ಪಟ್ಟಿಯಲ್ಲಿ ಇದ್ದಾರೆ.

ನಾರಾಯಣ ಗೌಡ
ಕನ್ನಡ ಪರ ಹೋರಾಟಗಾರ ನಾರಾಯಣ ಗೌಡ ಕೂಡ 'ಬಿಗ್ ಬಾಸ್' ಮನೆಯೊಳಗೆ ಹೋಗಿ ಕನ್ನಡ ಪ್ರೇಮ ಮೆರೆಯಲಿ ಅನ್ನೋದು ಕೆಲವರ ಆಶಯ.

ಶೋಭರಾಜ್
ಒಂದ್ಕಾಲದ ಖಡಕ್ ವಿಲನ್ ಶೋಭರಾಜ್ 'ದೊಡ್ಮನೆ'ಯೊಳಗೆ ಹೋಗಲಿ ಅಂತಾವ್ರೆ ವೀಕ್ಷಕರು.

ಜಗ್ಗೇಶ್ ಪುತ್ರ ಯತಿರಾಜ್
ನಟ ಜಗ್ಗೇಶ್ ರವರ ಎರಡನೇ ಪುತ್ರ ಯತಿರಾಜ್ ಕಾಮಿಡಿ ಮಾಡೋದ್ರಲ್ಲಿ ಎತ್ತಿದ ಕೈ ಅನ್ನೋದು ಎಲ್ಲರಿಗೂ ಗೊತ್ತು. ಹೀಗಾಗಿ ಯತಿರಾಜ್ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಯಾದ್ರೆ ನಗುವಿಗೆ ಮೋಸ ಇಲ್ಲ ಎಂಬುದು ವೀಕ್ಷಕರ ಲೆಕ್ಕಾಚಾರ.

ಸಾಮಾನ್ಯರಿಗೆ ಅವಕಾಶ ಕೊಡಿ
ಪ್ರತಿಬಾರಿಯೂ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಯಾಕೆ.? ಜನ ಸಾಮಾನ್ಯರಿಗೂ ಅವಕಾಶ ಕೊಡಿ ಎಂಬುದು ವೀಕ್ಷಕರ ಇಚ್ಛೆ. ವೀಕ್ಷಕರ ಅಭಿಲಾಷೆಗೆ ಬೆಲೆಕೊಟ್ಟಿರುವ ಕಲರ್ಸ್ ವಾಹಿನಿ ಈ ಬಾರಿ 'ಕಾಮನ್ ಮ್ಯಾನ್'ಗೂ ವೇದಿಕೆ ಕಲ್ಪಿಸಿದೆ.

ನಿಮ್ಮ ಅಭಿಪ್ರಾಯವನ್ನೂ ತಿಳಿಸಿ...
ಈವರೆಗೂ ಇಷ್ಟುದ್ದದ ಪಟ್ಟಿಯನ್ನ ನೋಡಿದ್ರಿ... 'ಬಿಗ್ ಬಾಸ್ ಕನ್ನಡ-5'ನಲ್ಲಿ ನೀವು ಯಾರನ್ನ ನೋಡಲು ಇಚ್ಛಿಸುತ್ತೀರಾ ಅಂತ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....